ಪುನರ್ ಮನನ ತರಗತಿ ನಂತರ SSLC ಪರೀಕ್ಷೆ
ಮೈಸೂರು

ಪುನರ್ ಮನನ ತರಗತಿ ನಂತರ SSLC ಪರೀಕ್ಷೆ

April 6, 2020

ಚಾಮರಾಜನಗರ,ಏ.5 (ಎಸ್‍ಎಸ್) -ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭಕ್ಕೂ ಮುನ್ನ ರಾಜ್ಯದ ಎಲ್ಲಾ ಶಾಲೆಗಳಲ್ಲೂ 1 ವಾರ ಪುನರ್ ಮನನ ತರಗತಿ ನಡೆಯಲಿದೆ ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ತಿಳಿಸಿದರು.

ತಾಲೂಕಿನ ಪುಣಜನೂರು ಚೆಕ್ ಪೋಸ್ಟ್‍ಗೆ ಭಾನುವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತ ನಾಡಿದರು. ಏ.14ರ ನಂತರ ಎಸ್‍ಎಸ್ ಎಲ್‍ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸ ಲಾಗುವುದು. ಕೊರೊನಾ ಹಿನ್ನೆಲೆಯಲ್ಲಿ ಪ್ರಸ್ತುತ ರಜೆ ಇರುವುದರಿಂದ ವಿದ್ಯಾರ್ಥಿ ಗಳನ್ನು ಪರೀಕ್ಷೆ ಮನಸ್ಥಿತಿಗೆ ಕರೆತರುವ ಸಲುವಾಗಿ ಪುನರ್ ಮನನ ತರಗತಿ ಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಈ ತರಗತಿಗಳು ರಾಜ್ಯದ ಪ್ರತಿ ಶಾಲೆ ಯಲ್ಲೂ ನಡೆಯಲಿವೆ ಎಂದರು.

ದೆಹಲಿಯ ನಿಜಾಮುದ್ದೀನ್ ಸಭೆ ಹಾಗೂ ನಂಜನಗೂಡಿನ ಜುಬಿಲೆಂಟ್ ಕಾರ್ಖಾನೆ ಪ್ರಕರಣದಿಂದ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ. ಈಗಾ ಗಲೇ ರಾಜ್ಯದಲ್ಲಿ ಕೊರೊನಾ ತಡೆಗ ಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಏ.14ರವರೆಗೆ ತಹಬದಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Translate »