ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕನ ಬಂಧನ
ಚಾಮರಾಜನಗರ

ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕನ ಬಂಧನ

April 6, 2020

ಕೊಳ್ಳೇಗಾಲ, ಏ.5(ಎನ್.ನಾಗೇಂದ್ರ)- ತಾಲೂಕಿನ ಪಾಳ್ಯ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕನೊಬ್ಬನನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿರುವ ಘಟನೆ ಭಾನುವಾರ ನಡೆದಿದೆ.

ಬೆಂಗಳೂರಿನ ನಲ್ಲಸಂದ್ರ ನಿವಾಸಿ ಸಲ್ಲಾವುದ್ದೀನ್(24) ಬಂಧಿತ ಯುವಕ. ಈತ ಗ್ರಾಮದ ಬಸ್ ನಿಲ್ದಾಣದಲ್ಲಿ ಅನವಶ್ಯಕವಾಗಿ ಓಡಾಡುತ್ತಿದ್ದ. ಅಲ್ಲದೆ, ಬಾಯಲ್ಲಿ ನೀರು ತುಂಬಿಕೊಂಡು ಕಂಡ ಕಂಡವರ ಮೇಲೆ ಹಾಗೂ ಕೆಲ ಅಂಗಡಿ ಮಳಿಗೆಗಳ ಮೇಲೂ ಉಗುಳುವ ಮೂಲಕ ವಿಚಿತ್ರವಾಗಿ ವರ್ತಿಸುತ್ತಿದ್ದ. ಈ ಹಿನ್ನೆಲೆ ಆತಂಕಗೊಂಡ ಸ್ಥಳೀಯರು ಪೆÇಲೀಸ್ ಹಾಗೂ ಆರೋಗ್ಯ ಇಲಾಖೆಗೆ ದೂರವಾಣಿ ಮೂಲಕ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ನಾನು ದೊಡ್ಡಬಳ್ಳಾಪುರ ಗ್ರಾಮದವನು ಎಂತಲೂ, ಮತ್ತೊಮ್ಮೆ ಬೆಂಗಳೂರಿನವ ಎಂದು ಹೇಳಿಕೊಂಡಿದ್ದಾನೆ ಎಂದು ಪೆÇಲೀಸರು ತಿಳಿಸಿದ್ದಾರೆ. ಸದ್ಯ ಆತನನ್ನು ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈತ ಮಾನಸಿಕ ಅಸ್ಪಸ್ಥನೆ ಇಲ್ಲ, ಕೊರೊನಾ ಪೀಡಿತನೆ ಎಂಬುದು ವೈದ್ಯಾಧಿಕಾರಿಗಳ ದೃಢೀಕರಣದ ಬಳಿಕ ತಿಳಿಯಬೇಕಿದೆ. ಈಗ ಈತನನ್ನು ಚಾಮರಾಜನಗರದ ಐಸೋಲೇಷನ್ ವಾರ್ಡ್‍ಗೆ ಹಸ್ತಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

Translate »