ಚಾಮರಾಜನಗರ

ಬರಗಿ ಬಳಿ ವಿದ್ಯುತ್ ಉಪ ಕೇಂದ್ರ ಲೋಕಾರ್ಪಣೆ
ಚಾಮರಾಜನಗರ

ಬರಗಿ ಬಳಿ ವಿದ್ಯುತ್ ಉಪ ಕೇಂದ್ರ ಲೋಕಾರ್ಪಣೆ

October 31, 2018

ಗುಂಡ್ಲುಪೇಟೆ: ನೂತನ ವಿದ್ಯುತ್ ಉಪಕೇಂದ್ರದಿಂದಾಗಿ ಕಾಡಂಚಿನ ಗ್ರಾಮಗಳ ವಿದ್ಯುತ್ ಕೊರತೆ ನೀಗಲಿದೆ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ತಿಳಿಸಿದರು. ತಾಲೂಕಿನ ಬರಗಿ ಗ್ರಾಮದ ಬಳಿ 5.5 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿ ಸಲಾಗಿರುವ ನೂತನ 66 ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಈ ಅತ್ಯಾಧುನಿಕ ಉಪಕೇಂದ್ರ ಸ್ಥಾಪನೆಯಿಂದ ಸುತ್ತಲಿನ ಕಾಡಂಚಿನ ಗ್ರಾಮಗಳಾದ ಭೀಮನಬೀಡು, ಕೂತನೂರು, ಬರಗಿ, ಹೊಂಗಹಳ್ಳಿ, ಮೂಖಹಳ್ಳಿ, ಮಂಚಹಳ್ಳಿ, ಮಣಗಳ್ಳಿ, ದೇಶೀಪುರ, ಆಲತ್ತೂರು, ಸಿದ್ದಯ್ಯನಪುರ ಕಾಲೋನಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಈವರೆಗೆ…

ಶಶಿ ಮಾರಮ್ಮನ ಜಾತ್ರೆ ಆರಂಭ
ಚಾಮರಾಜನಗರ

ಶಶಿ ಮಾರಮ್ಮನ ಜಾತ್ರೆ ಆರಂಭ

October 31, 2018

ಉಮ್ಮತ್ತೂರು: ಇಲ್ಲಿಗೆ ಸಮೀಪದ ಜೆನ್ನೂರು-ಹೊಸೂರು ಗ್ರಾಮದ ಅಧಿದೇವತೆ ಶಶಿ ಮಾರಮ್ಮ ಜಾತ್ರೆ ಇಂದಿನಿಂದ (ಅ.30)ಆರಂಭವಾಗಿದ್ದು, ನ.2ರವರೆಗೆ ನಡೆಯಲಿದೆ. ಜಾತ್ರೆಗೆ ಮಂಗಳವಾರ ಅಧಿಕೃತ ಚಾಲನೆ ದೊರೆತಿದ್ದು, ಗ್ರಾಮದಲ್ಲಿ ಸಂಜೆ ಪಂಜಿನ ಸೇವೆ ನಡೆಯಿತು. ಬುಧವಾರ ಬೆಳಿಗ್ಗೆ 11ಕ್ಕೆ ಶಶಿ ಮಾರಮ್ಮನ ಉತ್ಸವ ನಡೆಯಲಿದ್ದು, ಸಂಜೆ 4 ಗಂಟೆಗೆ ಮಡೆ ಉತ್ಸವ ನಡೆಯಲಿದೆ. ಗುರುವಾರ ದೇವತಾ ಕಾರ್ಯಗಳು ಹಾಗೂ ಶುಕ್ರವಾರ ಗೊರೆ ಹಬ್ಬದೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.

12ಮಂದಿ ಜೂಜುಕೋರರ ಬಂಧನ, ಲಕ್ಷ ರೂ. ವಶ
ಚಾಮರಾಜನಗರ

12ಮಂದಿ ಜೂಜುಕೋರರ ಬಂಧನ, ಲಕ್ಷ ರೂ. ವಶ

October 31, 2018

ಹನೂರು: ತಾಲೂ ಕಿನ ಪಾಲಾರ್ ನದಿ ತೀರದಲ್ಲಿ ಜೂಜಾ ಡುತ್ತಿದ್ದ 12ಮಂದಿಯನ್ನು ಬಂಧಿಸಿ, ಅವರಿಂದ 1 ಲಕ್ಷ ರೂ. ಗಳನ್ನು ರಾಮಾಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆ ವಿವರ: ಜೂಜಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಸೋಮ ವಾರ ಸಂಜೆ ದಾಳಿ ನಡೆಸಿದ ರಾಮಾ ಪುರ ಪೊಲೀಸರು ಪಾಲಾರ್ ನದಿ ತೀರ ದಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಆಡುತ್ತಿದ್ದ 17 ಮಂದಿ ಜೂಜುಕೋರರ ಪೈಕಿ 12 ಮಂದಿಯನ್ನು ಬಂಧಿಸಿದ್ದಾರೆ. ಈ ವೇಳೆ ಐವರು ಸ್ಥಳದಿಂದ ಪರಾರಿ ಯಾಗಿದ್ದಾರೆ….

ಮತದಾನ ಗೌಪ್ಯತೆ ಬಹಿರಂಗ: ಯುವಕನ ವಿರುದ್ಧ ಎಫ್‍ಐಆರ್!
ಚಾಮರಾಜನಗರ

ಮತದಾನ ಗೌಪ್ಯತೆ ಬಹಿರಂಗ: ಯುವಕನ ವಿರುದ್ಧ ಎಫ್‍ಐಆರ್!

October 31, 2018

ಕೊಳ್ಳೇಗಾಲ:  ಮತದಾನದ ಗೌಪ್ಯತೆಯನ್ನು ಸಾಮಾ ಜಿಕ ಜಾಲತಾಣಗಳಲ್ಲಿ ಹಾಕಿ ವೈರಲ್ ಮಾಡಿದ್ದ ಯುವಕನ ವಿರುದ್ಧ ಕೊಳ್ಳೇ ಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘನೆ ಆರೋಪದಡಿ ಸೆಕ್ಷನ್ 145, 135, 66 ರಡಿ ಏಫ್‍ಐಆರ್ ದಾಖಲಾಗಿದೆ. ಪಟ್ಟಣದ ಮಠದ ಬೀದಿಯ ಯುವಕ ನಿಖಿಲ್ ಅ.28ರಂದು ಪಟ್ಟಣದ 9ನೇ ವಾರ್ಡ್‍ನಲ್ಲಿ ನಡೆದ ನಗರಸಭೆ ಉಪ ಚುನಾವಣೆಯಲ್ಲಿ ತಾನು ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸುವುದನ್ನು ಮೊಬೈಲ್ ಮೂಲಕ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗೂ ವಾಟ್ಸ್‍ಪ್‍ಗಳಿಗೆ…

ಜೂಜಾಟ: ಐವರ ಬಂಧನ, ಬಿಡುಗಡೆ
ಚಾಮರಾಜನಗರ

ಜೂಜಾಟ: ಐವರ ಬಂಧನ, ಬಿಡುಗಡೆ

October 31, 2018

ಕೊಳ್ಳೇಗಾಲ:  ತಾಲೂ ಕಿನ ಹೊಂಡರಬಾಳು ಗ್ರಾಮ ಸಮೀಪದ ಸಿದ್ದೇಶ್ವರ ಬೆಟ್ಟದ ತಪ್ಪಲಿನಲ್ಲಿ ಜೂಜಾಡು ತ್ತಿದ್ದ ಐವರನ್ನು ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆ ಸಿದ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಎಸ್‍ಐ ವನರಾಜು ಮತ್ತು ಸಿಬ್ಬಂದಿ, ಜೂಜಾಡುತ್ತಿದ್ದ ಮಹೇಶ್, ತಾತಶೆಟ್ಟಿ, ಅಲಿಯಾಜ್ ಪಾಷ, ನಾಸೀರ್ ಅಹಮದ್ ಹಾಗೂ ಪರಶಿವ ಮೂರ್ತಿಯನ್ನು ಬಂಧಿಸಿ, ಪಣಕ್ಕಿಟ್ಟಿದ್ದ 2800 ರೂ.ಗಳನ್ನು ವಶಪಡಿಸಿಕೊಂಡು ಬಳಿಕ ಜಾಮೀನಿನ ಮೇಲೆ ಅವರನ್ನು ಬಿಡುಗಡೆ…

ಚಿತ್ರದುರ್ಗ ಬಳಿ ಚಾ.ನಗರ ಜಿಪಂ ಅಧ್ಯಕ್ಷೆ ಕಾರು ಅಪಘಾತ
ಚಾಮರಾಜನಗರ

ಚಿತ್ರದುರ್ಗ ಬಳಿ ಚಾ.ನಗರ ಜಿಪಂ ಅಧ್ಯಕ್ಷೆ ಕಾರು ಅಪಘಾತ

October 30, 2018

ಚಾಮರಾಜನಗರ:  ಚಾಮರಾಜನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಕಾರು ಭಾನುವಾರ ಚಿತ್ರದುರ್ಗ ಬಳಿ ಬೈಕ್‍ಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಬೈಕ್ ಸವಾರನಿಗೆ ಕೈ-ಕಾಲು ಮುರಿದಿದ್ದು, ಕಾರಿನಲ್ಲಿದ್ದ ಜಿಪಂ ಅಧ್ಯಕ್ಷೆ ಶಿವಮ್ಮ, ಆಕೆಯ ಪತಿ ಕೃಷ್ಣ ಹಾಗೂ ಚಾಲಕ ಪಾರಾಗಿದ್ದಾರೆ. ಜಿಪಂ ಅಧ್ಯಕ್ಷೆ ಶಿವಮ್ಮ ಅವರು ತಮ್ಮ ಪತಿಯೊಂದಿಗೆ ಸರ್ಕಾರಿ ವಾಹನ ಇನ್ನೋವಾ (ಕೆಎ-10, ಜಿ.9000) ಕಾರಿನಲ್ಲಿ ತೆರಳು ತ್ತಿದ್ದರು. ಈ ವೇಳೆ ಹಿರಿಯೂರು ಬಳಿ ಎದುರಿನಿಂದ ಬಂದ ಬೈಕ್‍ಗೆ ಇವರ ಕಾರು ಡಿಕ್ಕಿ ಹೊಡೆಯಿತೆನ್ನಲಾಗಿದೆ. ಬೈಕ್ ಸವಾರನ ಕೈ-ಕಾಲು…

ಹಾಸ್ಟೆಲ್‍ಗಳ ಸುಧಾರಣೆಗೆ ಕ್ರಮ ವಹಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ
ಚಾಮರಾಜನಗರ

ಹಾಸ್ಟೆಲ್‍ಗಳ ಸುಧಾರಣೆಗೆ ಕ್ರಮ ವಹಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

October 30, 2018

ಚಾಮರಾಜನಗರ:  ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಗುಣಮಟ್ಟದ ಆಹಾರ ಮತ್ತು ಶಿಕ್ಷಣ ನೀಡುವ ಮೂಲಕ ಹಾಸ್ಟಲ್‍ಗಳ ಸುಧಾರಣೆಗೆ ಕ್ರಮ ವಹಿಸುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಠಾರಿಯಾ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾ ಪಂಚಾಯತ್ ಸಭಾಂಗಣ ದಲ್ಲಿಂದು ನಡೆದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪೂರಕ ವಾತಾ ವರಣ ಕಲ್ಪಿಸಲು ಸರ್ಕಾರ ಸಾಕಷ್ಟು ಅನುದಾನ ಒದಗಿಸಿದೆ….

ಅಪಘಾತದ ಹಿನ್ನೆಲೆ; ನ್ಯಾಯಾಲಯ ವಿಚಾರಣೆಗೆ ಹೆದರಿ ಮರಕ್ಕೆ ನೇಣುಹಾಕಿಕೊಂಡು ಯುವಕ ಆತ್ಮಹತ್ಯೆ
ಚಾಮರಾಜನಗರ

ಅಪಘಾತದ ಹಿನ್ನೆಲೆ; ನ್ಯಾಯಾಲಯ ವಿಚಾರಣೆಗೆ ಹೆದರಿ ಮರಕ್ಕೆ ನೇಣುಹಾಕಿಕೊಂಡು ಯುವಕ ಆತ್ಮಹತ್ಯೆ

October 30, 2018

ಚಾಮರಾಜನಗರ: ಯುವಕನೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ತಾಲೂಕಿನ ಗೂಳೀಪುರ ಗ್ರಾಮದಿಂದ ಸೋಮವಾರ ವರದಿಯಾಗಿದೆ. ಗ್ರಾಮದ ಶಂಕರಪ್ಪ ಎಂಬುವರ ಪುತ್ರ ಮಹೇಶ್ ಉ. ಮಹದೇವಸ್ವಾಮಿ (25) ಆತ್ಮಹತ್ಯೆ ಮಾಡಿ ಕೊಂಡ ಯುವಕ. ಮೃತ ಮಹೇಶ್ ಮೂರು ವರ್ಷದ ಹಿಂದೆ ಆಟೋ ಅಪಘಾತ ನಡೆಸಿದ್ದ ಎನ್ನಲಾಗಿದೆ. ಇದರ ಪ್ರಕರಣ ಯಳಂದೂರು ನ್ಯಾಯಾ ಲಯದಲ್ಲಿ ಸೋಮವಾರ ಇತ್ತು. ಇದರಿಂದ ಭಯಭೀತನಾಗಿ ಗ್ರಾಮದ ಮನೆಯ ಹಿಂಭಾಗ ಇದ್ದ ಹುಣಸೆಮರಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರಾಮಸಮುದ್ರ ಠಾಣೆಯ…

ಮದ್ಯದಂಗಡಿ ತೆರವಿಗೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ
ಚಾಮರಾಜನಗರ

ಮದ್ಯದಂಗಡಿ ತೆರವಿಗೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ

October 30, 2018

ಗುಂಡ್ಲುಪೇಟೆ:  ಗ್ರಾಮದಲ್ಲಿರುವ ಮದ್ಯದಂಗಡಿಯಿಂದಾಗಿ ಕುಡುಕರ ಹಾವಳಿ ಹೆಚ್ಚಾಗಿ ಗ್ರಾಮದಲ್ಲಿ ಅಶಾಂತಿಯ ವಾತಾವರಣ ಸೃಷ್ಠಿಯಾಗಿದ್ದು, ಈ ಮದ್ಯದಂಗಡಿಯನ್ನು ಸ್ಥಳಾಂತರಿ ಸುವಂತೆ ನೂರಾರು ಮಹಿಳೆಯರು ಮದ್ಯದಂಗಡಿ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಬೊಮ್ಮಲಾ ಪುರದಲ್ಲಿ ನಡೆದಿದೆ. ಗ್ರಾಮದ ಮುಖ್ಯರಸ್ತೆಯಲ್ಲಿರುವ ಮದ್ಯ ದಂಗಡಿ ಮುಂಭಾಗ ಸಮಾವೇಶಗೊಂಡ ನೂರಾರು ಮಹಿಳೆಯರು ಮತ್ತು ಗ್ರಾಮಸ್ಥರು ಗ್ರಾಮದ ಮಧ್ಯಭಾಗದಲ್ಲಿರುವ ಮದ್ಯದಂಗಡಿ ಯಿಂದ ಕುಡುಕರ ಹಾವಳಿ ಮಿತಿಮೀರಿ ಅಶಾಂತಿ ವಾತಾವರಣ ಸೃಷ್ಠಿಯಾಗಿದೆ. ತುರ್ತಾಗಿ ಈ ಮದ್ಯದಂಗಡಿಯನ್ನು ಗ್ರಾಮದ ಹೊರವಲಯಕ್ಕೆ ಸ್ಥಳಾಂತರಿಸಿ ಎಂದು ಒತ್ತಾಯಿಸಿದರು. ಹಾಲಿ ಇರುವ…

ಆರೋಪ ಸಾಬೀತಾಗುವವರೆಗೆ ಅಪರಾಧಿ ಎನ್ನಲಾಗದು
ಚಾಮರಾಜನಗರ

ಆರೋಪ ಸಾಬೀತಾಗುವವರೆಗೆ ಅಪರಾಧಿ ಎನ್ನಲಾಗದು

October 30, 2018

ಚಾಮರಾಜನಗರ: ನಮ್ಮ ಸಂವಿಧಾನದಲ್ಲಿ ಯಾವುದೇ ಆರೋಪಿ ಯನ್ನು ಆತನ ಆರೋಪ ಸಾಬೀತಾಗು ವವರೆಗೆ ನ್ಯಾಯಾಲಯ ಆತನನ್ನು ಆರೋಪಿ ಎಂದೇ ಪರಿಗಣಿಸಬೇಕೆ ಹೊರತು, ಆತನನ್ನು ಅಪರಾಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಿ.ಬಸವರಾಜ ತಿಳಿಸಿದರು. ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕಾರಾಗೃಹ ಸಂಯುಕ್ತ ಆಶ್ರಯದಲ್ಲಿ “ವಿಚಾರಣಾ ಧೀನ ಖೈದಿಗಳಿಗೆ ಕಾನೂನು ಸೇವೆಗಳ…

1 60 61 62 63 64 141
Translate »