ಕೊಳ್ಳೇಗಾಲ: ಮತದಾನದ ಗೌಪ್ಯತೆಯನ್ನು ಸಾಮಾ ಜಿಕ ಜಾಲತಾಣಗಳಲ್ಲಿ ಹಾಕಿ ವೈರಲ್ ಮಾಡಿದ್ದ ಯುವಕನ ವಿರುದ್ಧ ಕೊಳ್ಳೇ ಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘನೆ ಆರೋಪದಡಿ ಸೆಕ್ಷನ್ 145, 135, 66 ರಡಿ ಏಫ್‍ಐಆರ್ ದಾಖಲಾಗಿದೆ.
ಪಟ್ಟಣದ ಮಠದ ಬೀದಿಯ ಯುವಕ ನಿಖಿಲ್ ಅ.28ರಂದು ಪಟ್ಟಣದ 9ನೇ ವಾರ್ಡ್‍ನಲ್ಲಿ ನಡೆದ ನಗರಸಭೆ ಉಪ ಚುನಾವಣೆಯಲ್ಲಿ ತಾನು ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸುವುದನ್ನು ಮೊಬೈಲ್ ಮೂಲಕ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗೂ ವಾಟ್ಸ್‍ಪ್‍ಗಳಿಗೆ ಹಾಕಿ ವೈರಲ್ ಮಾಡಿದ್ದ ಎನ್ನಲಾಗಿದೆ. ಈ ವಿಚಾರ ವ್ಯಾಪಕ ಟೀಕೆಗೆ ಕಾರಣ ವಾಗಿತ್ತು. ಮಾತ್ರವಲ್ಲದೇ ಬಿಜೆಪಿ ಮುಖಂ ಡರು ಮತದಾನ ಗೌಪ್ಯತೆ ಬಹಿರಂಗ ಪಡಿಸಿದ ಯುವಕನ ಮೇಲೆ ಕ್ರಮಕೈ ಗೊಳ್ಳಬೇಕೆಂದು ಆಗ್ರಹಿಸಿ ಚುನಾವಣಾ ಧಿಕಾರಿಗಳಿಗೆ ದೂರು ನೀಡಿದ್ದರು.
ಈ ದೂರಿನ ಅನ್ವಯ ಅ.29ರ ರಾತ್ರಿ ಚುನಾವಣಾ ಪಿಆರ್‍ಓ ಆಗಿದ್ದ ಚನ್ನಾ ಲಿಂಗನಹಳ್ಳಿ ಮುಖ್ಯ ಶಿಕ್ಷಕ ಲೋಕೇಶ್ ಅವರು ಕೊಳ್ಳೇಗಾಲ ಪಟ್ಟಣ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯುವ ಕನ ವಿರುದ್ಧ ಪ್ರಕರಣ ದಾಖಲಾಗಿದೆ.