ಹನೂರು: ತಾಲೂ ಕಿನ ಪಾಲಾರ್ ನದಿ ತೀರದಲ್ಲಿ ಜೂಜಾ ಡುತ್ತಿದ್ದ 12ಮಂದಿಯನ್ನು ಬಂಧಿಸಿ, ಅವರಿಂದ 1 ಲಕ್ಷ ರೂ. ಗಳನ್ನು ರಾಮಾಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಘಟನೆ ವಿವರ: ಜೂಜಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಸೋಮ ವಾರ ಸಂಜೆ ದಾಳಿ ನಡೆಸಿದ ರಾಮಾ ಪುರ ಪೊಲೀಸರು ಪಾಲಾರ್ ನದಿ ತೀರ ದಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಆಡುತ್ತಿದ್ದ 17 ಮಂದಿ ಜೂಜುಕೋರರ ಪೈಕಿ 12 ಮಂದಿಯನ್ನು ಬಂಧಿಸಿದ್ದಾರೆ. ಈ ವೇಳೆ ಐವರು ಸ್ಥಳದಿಂದ ಪರಾರಿ ಯಾಗಿದ್ದಾರೆ. ಬಂಧಿತರಿಂದ ಪಣಕ್ಕಿ ಟ್ಟಿದ್ದ 1 ಲಕ್ಷದ 4 ಸಾವಿರ ರೂ.ಗಳನ್ನು ವಶ ಪಡಿಸಿಕೊಂಡಿದ್ದಾರೆ.
ಬಳಿಕ ಚಾಮರಾಜನಗರ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಮಾರ್ಗದರ್ಶನದಲ್ಲಿ ಜೂಜುಕೋರ ರನ್ನು ವಿಚಾರಣೆಗೊಳ ಪಡಿಸಿದಾಗ ಹನೂರು, ರಾಮಾಪುರ, ಬಸಪ್ಪನ ದೊಡ್ಡಿ, ರಾಮಾಪುರ, ನೆಲ್ಲೂರು, ಪೆದ್ದನಪಾಳ್ಯ, ಹೂಗ್ಯಂ ಸೇರಿದಂತೆ ವಿವಿಧ ಗ್ರಾಮಗಳಿಂದ ಇಲ್ಲಿಗೆ ಬಂದು ಜೂಜಾ ಡುತ್ತಿದ್ದ ಬಗ್ಗೆ ತಿಳಿದು ಬಂದಿದೆ. ಈ ಸಂಬಂಧ ರಾಮಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾರ್ಯಚರಣೆಯಲ್ಲಿ ಇನ್ಸ್‍ಪೆಕ್ಟರ್ ಮನೋಜ್‍ಕುಮಾರ್, ಪೇದೆಗಳಾದ ನಾಗೇಂದ್ರ, ರಘು, ಶಿವಮಲ್ಲು, ಬೊಮ್ಮೇ ಗೌಡ, ನವೀನ್, ಶಿವಕುಮಾರ್, ಮನೋಹರ್ ಇನ್ನಿತರರಿದ್ದರು.