ಶಶಿ ಮಾರಮ್ಮನ ಜಾತ್ರೆ ಆರಂಭ
ಚಾಮರಾಜನಗರ

ಶಶಿ ಮಾರಮ್ಮನ ಜಾತ್ರೆ ಆರಂಭ

October 31, 2018

ಉಮ್ಮತ್ತೂರು: ಇಲ್ಲಿಗೆ ಸಮೀಪದ ಜೆನ್ನೂರು-ಹೊಸೂರು ಗ್ರಾಮದ ಅಧಿದೇವತೆ ಶಶಿ ಮಾರಮ್ಮ ಜಾತ್ರೆ ಇಂದಿನಿಂದ (ಅ.30)ಆರಂಭವಾಗಿದ್ದು, ನ.2ರವರೆಗೆ ನಡೆಯಲಿದೆ.

ಜಾತ್ರೆಗೆ ಮಂಗಳವಾರ ಅಧಿಕೃತ ಚಾಲನೆ ದೊರೆತಿದ್ದು, ಗ್ರಾಮದಲ್ಲಿ ಸಂಜೆ ಪಂಜಿನ ಸೇವೆ ನಡೆಯಿತು. ಬುಧವಾರ ಬೆಳಿಗ್ಗೆ 11ಕ್ಕೆ ಶಶಿ ಮಾರಮ್ಮನ ಉತ್ಸವ ನಡೆಯಲಿದ್ದು, ಸಂಜೆ 4 ಗಂಟೆಗೆ ಮಡೆ ಉತ್ಸವ ನಡೆಯಲಿದೆ. ಗುರುವಾರ ದೇವತಾ ಕಾರ್ಯಗಳು ಹಾಗೂ ಶುಕ್ರವಾರ ಗೊರೆ ಹಬ್ಬದೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.

Translate »