ಕೊಳ್ಳೇಗಾಲ: ತಾಲೂ ಕಿನ ಹೊಂಡರಬಾಳು ಗ್ರಾಮ ಸಮೀಪದ ಸಿದ್ದೇಶ್ವರ ಬೆಟ್ಟದ ತಪ್ಪಲಿನಲ್ಲಿ ಜೂಜಾಡು ತ್ತಿದ್ದ ಐವರನ್ನು ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆ ಸಿದ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಎಸ್‍ಐ ವನರಾಜು ಮತ್ತು ಸಿಬ್ಬಂದಿ, ಜೂಜಾಡುತ್ತಿದ್ದ ಮಹೇಶ್, ತಾತಶೆಟ್ಟಿ, ಅಲಿಯಾಜ್ ಪಾಷ, ನಾಸೀರ್ ಅಹಮದ್ ಹಾಗೂ ಪರಶಿವ ಮೂರ್ತಿಯನ್ನು ಬಂಧಿಸಿ, ಪಣಕ್ಕಿಟ್ಟಿದ್ದ 2800 ರೂ.ಗಳನ್ನು ವಶಪಡಿಸಿಕೊಂಡು ಬಳಿಕ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಿದ್ದಾರೆ.