ಚಿತ್ರದುರ್ಗ ಬಳಿ ಚಾ.ನಗರ ಜಿಪಂ ಅಧ್ಯಕ್ಷೆ ಕಾರು ಅಪಘಾತ
ಚಾಮರಾಜನಗರ

ಚಿತ್ರದುರ್ಗ ಬಳಿ ಚಾ.ನಗರ ಜಿಪಂ ಅಧ್ಯಕ್ಷೆ ಕಾರು ಅಪಘಾತ

October 30, 2018

ಚಾಮರಾಜನಗರ:  ಚಾಮರಾಜನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಕಾರು ಭಾನುವಾರ ಚಿತ್ರದುರ್ಗ ಬಳಿ ಬೈಕ್‍ಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಬೈಕ್ ಸವಾರನಿಗೆ ಕೈ-ಕಾಲು ಮುರಿದಿದ್ದು, ಕಾರಿನಲ್ಲಿದ್ದ ಜಿಪಂ ಅಧ್ಯಕ್ಷೆ ಶಿವಮ್ಮ, ಆಕೆಯ ಪತಿ ಕೃಷ್ಣ ಹಾಗೂ ಚಾಲಕ ಪಾರಾಗಿದ್ದಾರೆ.

ಜಿಪಂ ಅಧ್ಯಕ್ಷೆ ಶಿವಮ್ಮ ಅವರು ತಮ್ಮ ಪತಿಯೊಂದಿಗೆ ಸರ್ಕಾರಿ ವಾಹನ ಇನ್ನೋವಾ (ಕೆಎ-10, ಜಿ.9000) ಕಾರಿನಲ್ಲಿ ತೆರಳು ತ್ತಿದ್ದರು. ಈ ವೇಳೆ ಹಿರಿಯೂರು ಬಳಿ ಎದುರಿನಿಂದ ಬಂದ ಬೈಕ್‍ಗೆ ಇವರ ಕಾರು ಡಿಕ್ಕಿ ಹೊಡೆಯಿತೆನ್ನಲಾಗಿದೆ. ಬೈಕ್ ಸವಾರನ ಕೈ-ಕಾಲು ಮುರಿದಿದ್ದು, ಕಾರಿ ನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಈ ಮಧ್ಯೆ ಜಿಪಂ ಅಧ್ಯಕ್ಷೆ ಶಿವಮ್ಮ, ಸರ್ಕಾರಿ ವಾಹನದಲ್ಲಿ ಖಾಸಗಿ ಕಾರ್ಯ ಕ್ರಮವೊಂದಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಸರ್ಕಾರಿ ವಾಹನವನ್ನು ಅನಧಿಕೃತವಾಗಿ ಬಳಸಿದ ಆರೋಪ ಈಗ ಕೇಳಿಬಂದಿದೆ.

ಈ ಮಧ್ಯೆ ಅಪಘಾತದ ವೇಳೆ ತಮ್ಮನ್ನು ಸಂಪರ್ಕಿಸಿದ ಪತ್ರಕರ್ತರೊಂದಿಗೆ ಮಾತ ನಾಡಿದ ಜಿಪಂ ಅಧ್ಯಕ್ಷೆ ಶಿವಮ್ಮ ಅವರ ಪತಿ ಕೃಷ್ಣ ಅವರು ತಾವು ಮದುವೆಗೆ ಬಂದಿದ್ದೆವು ಎಂದು ಹೇಳಿದ್ದಾರೆ.

Translate »