ಚಾಮರಾಜನಗರ

ತಮಿಳುನಾಡಿನ ದಿಂಬಂ ಬಳಿ ಪ್ರಪಾತಕ್ಕೆ ಬಿದ್ದ ಖಾಸಗಿ ಬಸ್
ಚಾಮರಾಜನಗರ

ತಮಿಳುನಾಡಿನ ದಿಂಬಂ ಬಳಿ ಪ್ರಪಾತಕ್ಕೆ ಬಿದ್ದ ಖಾಸಗಿ ಬಸ್

October 7, 2018

ಚಾಮರಾಜನಗರ: – ತಮಿಳುನಾಡಿನ ದಿಂಬಂ ಬಳಿ ಖಾಸಗಿ ಬಸ್‍ವೊಂದು ಪ್ರಪಾತಕ್ಕೆ ಬಿದ್ದು, ಇಬ್ಬರು ಸ್ಥಳ ದಲ್ಲಿಯೇ ಸಾವನ್ನಪ್ಪಿ, 21 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ತಮಿಳುನಾಡಿನ ಈರೋಡ್‍ನ ಗುರುಸ್ವಾಮಿ(56), ಮುತ್ತು(65) ಮೃತಪಟ್ಟವರು. ಘಟನೆಯ ವಿವರ: ಮೈಸೂರಿನಿಂದ ಮಧ್ಯಾಹ್ನ 3:30ಕ್ಕೆ ಸುಮಾರಿಗೆ ಚಾಮರಾಜನಗರ ಮಾರ್ಗವಾಗಿ ತಮಿಳುನಾಡಿನ ಈರೋಡ್‍ಗೆ ತೆರಳುತ್ತಿದ್ದ ಖಾಸಗಿ ಬಸ್(ಆರ್‍ಪಿಎನ್) ಶುಕ್ರವಾರ ರಾತ್ರಿ 8.30ರ ಸಮಯದಲ್ಲಿ ತಮಿಳುನಾಡಿನ ದಿಂಬಂ ಬಳಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು 80 ರಿಂದ 100 ಅಡಿಗಳ ಆಳದಷ್ಟು…

ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರರಿಬ್ಬರ ದುರ್ಮರಣ
ಚಾಮರಾಜನಗರ

ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರರಿಬ್ಬರ ದುರ್ಮರಣ

October 6, 2018

ಚಾಮರಾಜನಗರ: ಅಪರಿಚಿತ ವಾಹನವೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿ ಬ್ಬರು ದಾರುಣವಾಗಿ ಸ್ಥಳದಲ್ಲೇ ಸಾವನ್ನ ಪ್ಪಿದ ಘಟನೆ ಇಂದು ರಾತ್ರಿ ತಾಲೂಕಿನ ಬೆಂಡರವಾಡಿ ಗ್ರಾಮದ ಬಳಿ ನಡೆದಿದೆ. ಚಾಮರಾಜನಗರ ಪಟ್ಟಣ ಅಂಬೇ ಡ್ಕರ್ ಬಡಾವಣೆ ನಿವಾಸಿಗಳಾದ ರಾಜೇಂದ್ರ (28) ಹಾಗೂ ಇದೇ ಬಡಾವಣೆಯ ನಿವಾಸಿಯಾಗಿದ್ದು, ಹಾಲಿ ವೆಂಕಟಯ್ಯನ ಛತ್ರ ಗ್ರಾಮದಲ್ಲಿ ವಾಸವಿದ್ದ ಪುನೀತ್ (27) ಮೃತಪಟ್ಟ ಬೈಕ್ ಸವಾರರು. ಪುನೀತ್ ಹಾಗೂ ರಾಜೇಂದ್ರ ಅವರು ಇಂದು ಬೆಳಿಗ್ಗೆ ತಮ್ಮ ಪಲ್ಸರ್ ಬೈಕ್ (ಕೆಎ.10 ಎಕ್ಸ್.8629)ನಲ್ಲಿ…

ಸಾಗುವಳಿ ಜಮೀನು ಬಿಟ್ಟುಕೊಡುವಂತೆ ಒತ್ತಡ: ಒಂದೇ ಕುಟುಂಬದ ಮೂವರಿಂದ ಆತ್ಮಹತ್ಯೆಗೆ ಯತ್ನಸಾರ್ವಜನಿಕರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ
ಚಾಮರಾಜನಗರ

ಸಾಗುವಳಿ ಜಮೀನು ಬಿಟ್ಟುಕೊಡುವಂತೆ ಒತ್ತಡ: ಒಂದೇ ಕುಟುಂಬದ ಮೂವರಿಂದ ಆತ್ಮಹತ್ಯೆಗೆ ಯತ್ನಸಾರ್ವಜನಿಕರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

October 6, 2018

ಚಾಮರಾಜನಗರ:  ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಜಮೀನನ್ನು ಬಿಟ್ಟುಕೊಡು ವಂತೆ ಒತ್ತಡ ಹೇರುತ್ತಿರುವುದರಿಂದ ಬೇಸತ್ತು ಒಂದೇ ಕುಟುಂಬದ ಮೂವರು ಮೈಮೇಲೆ ಡೀಸೆಲ್ ಸುರಿದುಕೊಂಡು ಆತ್ಮ ಹತ್ಯೆಗೆ ಯತ್ನಿಸಿದ ಘಟನೆ ನಗರದ ಜಿಲ್ಲಾಡ ಳಿತ ಭವನದ ಮುಂಭಾಗ ಶುಕ್ರವಾರ ನಡೆಯಿತು. ಚಾಮರಾಜನಗರ ತಾಲೂಕಿನ ಬೇಡರ ಪುರ ಗ್ರಾಮದ ಮಲ್ಲಯ್ಯ, ಅವರ ಪತ್ನಿ ದೊಡ್ಡಮ್ಮ, ಮಗ ಎಂ.ಕುಮಾರ ಆತ್ಮಹತ್ಯೆಗೆ ಯತ್ನಿಸಿದರು. ಸ್ಥಳದಲ್ಲಿದ್ದ ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಸಂಭವಿಸಬಹು ದಾದ ದೊಡ್ಡ ದುರಂತವೊಂದು ತಪ್ಪಿತು. ಘಟನೆ ವಿವರ: ಬೇಡರಪುರ ಗ್ರಾಮದ ಬಳಿ…

ಹನೂರು ಜನಸಂಪರ್ಕ ಸಭೆಯಲ್ಲಿ ಸಮಸ್ಯೆಗಳ ಸರಮಾಲೆ
ಚಾಮರಾಜನಗರ

ಹನೂರು ಜನಸಂಪರ್ಕ ಸಭೆಯಲ್ಲಿ ಸಮಸ್ಯೆಗಳ ಸರಮಾಲೆ

October 6, 2018

ಹನೂರು:ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅಧ್ಯಕ್ಷತೆಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಸಮಸ್ಯೆಗಳ ಸರಮಾಲೆಯೇ ಪ್ರತಿಧ್ವನಿಸಿತು. ಶಾಗ್ಯ ಗ್ರಾಮದ ಕೆಂಪಣ್ಣ ಮಾತನಾಡಿ, ರಸ್ತೆ ನಿರ್ಮಾಣ ಮಾಡಲು ಪಟ್ಟ ಜಮೀನನ್ನು ಸ್ವಾಧೀನಪಡಿಸಿಕೊಂಡು ಹಲವು ವರ್ಷಗಳೇ ಕಳೆದರೂ ಇದುವರೆಗೂ ಪರಿಹಾರ ವಿತರಿಸಿಲ್ಲ ಎಂದು ಆರೋಪಿಸಿದರು. ಚಂಗಡಿ ಕರಿಯಪ್ಪ ಮಾತನಾಡಿ, ಹನೂರು ತಾಲೂಕಿನಲ್ಲಿ ಮೂರು ಹೋಬಳಿ ಕೇಂದ್ರಗಳಿವೆ. ಪ್ರತಿ ಮೂರು ತಿಂಗಳಿಗೊಮ್ಮೆ ಅಲ್ಲಿ ಜನಸಂಪರ್ಕ ಸಭೆ ಮಾಡಿದರೆ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ. ಕಾಡುಪ್ರಾಣಿಗಳಿಂದ ಜಮೀನಿನಲ್ಲಿ ಬೆಳೆದಿರುವ ಫಸಲು ನಾಶಗೊಳ್ಳುತ್ತಿವೆ. ಸಂಬಂಧ…

ಬೇಗೂರು ಸುತ್ತಮುತ್ತ ಗಾಳಿಮಳೆಗೆ ಬಾಳೆ ಬೆಳೆ ನಾಶ
ಚಾಮರಾಜನಗರ

ಬೇಗೂರು ಸುತ್ತಮುತ್ತ ಗಾಳಿಮಳೆಗೆ ಬಾಳೆ ಬೆಳೆ ನಾಶ

October 6, 2018

ಬೇಗೂರು:  ಬೇಗೂರು ಹೋಬಳಿಯ ಸುತ್ತ-ಮುತ್ತಲ ಗ್ರಾಮಗಳಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಗಾಳಿಮಳೆಗೆ ಬೇಗೂರು ಸಮೀಪದ ತಗ್ಗಲೂರು ಮತ್ತು ಕಮರಹಳ್ಳಿ ಗ್ರಾಮದ ರೈತರು ಬೆಳೆದಿದ್ದ ಬಾಳೆ ಗಿಡಗಳು ನೆಲ ಸಮವಾಗಿದ್ದು, ರೈತರು ನಷ್ಟಕ್ಕೆ ಸಿಲುಕಿದ್ದಾರೆ. ಬೇಗೂರು ಹೋಬಳಿಯ ತಗ್ಗಲೂರು ಗ್ರಾಮದ ಸುಬ್ಬಣ್ಣ ಎಂಬುವರ ಮಗ ವೀರ ಭದ್ರಪ್ಪ ಅವರಿಗೆ ಸೇರಿದ 3 ಎಕರೆ ನೇಂದ್ರ ಬಾಳೆ ಬೆಳೆ ನಾಶವಾಗಿದೆ. ಅದೇ ಗ್ರಾಮದ ಪುಟ್ಟಮ್ಮ ಎಂಬುವರ ಮನೆ ಗೋಡೆ ಕುಸಿ ದಿದ್ದು, ಬಡ ಮಹಿಳೆ ಸಂಕಷ್ಟಕ್ಕೆ ಸಿಲುಕಿ ದ್ದಾರೆ,…

ಇಂದು ರಥ ನಿರ್ಮಾಣಕ್ಕೆ ಆಗ್ರಹಿಸಿ ಧರಣಿ
ಚಾಮರಾಜನಗರ

ಇಂದು ರಥ ನಿರ್ಮಾಣಕ್ಕೆ ಆಗ್ರಹಿಸಿ ಧರಣಿ

October 6, 2018

ಚಾಮರಾಜನಗರ: ನಗರದ ಶ್ರೀ ಚಾಮ ರಾಜೇಶ್ವರಸ್ವಾಮಿ ಸೇವಾ ಸಮಿತಿಯ ಶ್ರೀ ಚಾಮ ರಾಜೇಶ್ವರಸ್ವಾಮಿ ಬ್ರಹ್ಮ ರಥೋತ್ಸವದ ಕಾಮಗಾರಿ ಯನ್ನು ತಕ್ಷಣ ಪ್ರಾರಂಭಿಸುವಂತೆ ಒತ್ತಾಯಿಸಿ ನಾಳೆ (ಅ.6) ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ. ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1ರವರೆಗೂ ಜಿಲ್ಲಾಡಳಿತ ಮತ್ತು ಮುಜಾರಾಯಿ ಇಲಾಖೆಯ ವಿರುದ್ಧ ಸಾಂಕೇತಿಕ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಭಕ್ತರು ಆಗಮಿಸುವಂತೆ ಸಮಿತಿ ಕೋರಿದೆ.

ಮಹದೇಶ್ವರ ಬೆಟ್ಟದಲ್ಲಿ ಮಹಾಲಯ, ದಸರಾ, ದೀಪಾವಳಿ ಜಾತ್ರಾ ಮಹೋತ್ಸವ
ಚಾಮರಾಜನಗರ

ಮಹದೇಶ್ವರ ಬೆಟ್ಟದಲ್ಲಿ ಮಹಾಲಯ, ದಸರಾ, ದೀಪಾವಳಿ ಜಾತ್ರಾ ಮಹೋತ್ಸವ

October 6, 2018

ಚಾಮರಾಜನಗರ:  ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದಲ್ಲಿ ಮಲೆಮಹದೇಶ್ವರ ಸ್ವಾಮಿಯ ಮಹಾಲಯ ಜಾತ್ರಾ ಮಹೋತ್ಸವವು ಅ.6 ರಿಂದ 9ರವರೆಗೆ, ದಸರಾ ಜಾತ್ರಾ ಮಹೋತ್ಸವವು ಅ.17 ರಿಂದ 19ರವರೆಗೆ ಹಾಗೂ ನವೆಂಬರ್ 5 ರಿಂದ 8ರವರೆಗೆ ದೀಪಾವಳಿ ಜಾತ್ರಾ ಮಹೋತ್ಸವವು ನಡೆಯಲಿದೆ. ಮೊದಲ ಕಾರ್ತೀಕ ಸೋಮವಾರ ಪೂಜೆಗಳು ನವೆಂಬರ್ 11, 12, ಎರಡನೇ ಕಾರ್ತೀಕ ಸೋಮವಾರ 18, 19, 3ನೇ ಕಾರ್ತೀಕ ಸೋಮವಾರ 25 ರಿಂದ 28, 4ನೇ ಕಾರ್ತೀಕ ಸೋಮವಾರವಾದ ಡಿಸೆಂಬರ್ 2 ಹಾಗೂ 3ರಂದು…

ಭಾರತೀಯ ಸೇನಾ ನೇಮಕಾತಿ ರ್ಯಾಲಿಗೆ ಹೆಸರು ನೋಂದಣಿ
ಚಾಮರಾಜನಗರ

ಭಾರತೀಯ ಸೇನಾ ನೇಮಕಾತಿ ರ್ಯಾಲಿಗೆ ಹೆಸರು ನೋಂದಣಿ

October 6, 2018

ಚಾಮರಾಜನಗರ:  ಭಾರತೀಯ ಸೇನೆಗೆ ಸೋಲ್ಜರ್ ಜಿಡಿ, ಸೋಲ್ಜರ್ ಟೆಕ್, ಸೋಲ್ಜರ್ ನರ್ಸಿಂಗ್, ಸೋಲ್ಜರ್ ಅಸಿಸ್ಟೆಂಟ್, ಸೋಲ್ಜರ್ ಟ್ರೇಡ್ಸ್‍ಮ್ಯಾನ್ ಮತ್ತು ಸೋಲ್ಜರ್ ಕ್ಲರ್ಕ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅ.13 ರಿಂದ 19ರವರೆಗೆ ಮಂಡ್ಯದ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನೇಮಕಾತಿ ರ್ಯಾಲಿ ನಡೆಯಲಿದೆ. ಅಭ್ಯರ್ಥಿಗಳು 17 1/2 ರಿಂದ 23 ವರ್ಷ ವಯೋಮಿತಿಯ ಒಳಗಿರಬೇಕು. ಎಸ್‍ಎಸ್ ಎಲ್‍ಸಿ, ಪಿಯುಸಿ (ಪಿಸಿಎಂ, ಪಿಸಿಬಿ ಮತ್ತು ಇಎನ್‍ಜಿ), ಡಿಪ್ಲೊಮಾ ಇನ್ ಎಂಜಿನಿ ಯರಿಂಗ್ (ಎಂಇ, ಇಎಲ್‍ಇ, ಎಯು, ಸಿಎಸ್, ಇ ಅಂಡ್…

ಅಕ್ರಮ ಗಣಿಗಾರಿಕೆ ವಿರುದ್ಧ ಪ್ರತಿಭಟನೆ
ಚಾಮರಾಜನಗರ

ಅಕ್ರಮ ಗಣಿಗಾರಿಕೆ ವಿರುದ್ಧ ಪ್ರತಿಭಟನೆ

October 5, 2018

ಚಾಮರಾಜನಗರ:  ಅಕ್ರಮ ಗಣಿಗಾರಿಕೆ ಚಟುವಟಿಕೆ ಹಾಗೂ ಪರ ವಾನಗಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ, ರೈತ ಕೂಲಿ ಸಂಗ್ರಾಮ ಸಮಿತಿ ಜಿಲ್ಲಾ ಘಟಕ ದಿಂದ ಚಾ.ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಜಿಲ್ಲಾಡಳಿತ ಭವನದ ಮುಂಭಾಗ ಸೇರಿದ ಪ್ರತಿಭಟನಾಕಾರರು ಧರಣಿ ನಡೆಸಿ, ಹೆಚ್ಚುವರಿ ಜಿಲ್ಲಾಧಿಕಾರಿ ಗಾಯತ್ರಿ ಅವ ರಿಗೆ ಮನವಿ ಸಲ್ಲಿಸಿದರು.ಅಕ್ರಮ ಗಣಿಗಾರಿಕೆ ಸಮಾಜಘಾತುಕ ಚಟುವಟಿಕೆಯಿಂದ ರೈತರಿಗೆ ಹಾಗೂ ಪರಿ ಸರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಗಣಿಗಾರಿಕೆಯನ್ನು ನಿಷೇಧಿಸಬೇಕು…

ಕಮರವಾಡಿ ಕಬಿನಿ ನಾಲೆಯಲ್ಲಿ ಯುವಕನ ಶವ ಪತ್ತೆ
ಚಾಮರಾಜನಗರ

ಕಮರವಾಡಿ ಕಬಿನಿ ನಾಲೆಯಲ್ಲಿ ಯುವಕನ ಶವ ಪತ್ತೆ

October 5, 2018

ಚಾಮರಾಜನಗರ: ಅವಿವಾಹಿತ ಯುವಕನೊಬ್ಬನ ಶವ ಸಂತೇಮರಹಳ್ಳಿ ಸಮೀಪದ ಕಮರವಾಡಿ ಬಳಿಯ ಕಬಿನಿ ನಾಲೆಯಲ್ಲಿ ಗುರುವಾರ ಪತ್ತೆಯಾಗಿದೆ. ನಂಜನಗೂಡು ತಾಲೂಕಿನ ತಗಡೂರು ಸಮೀಪದ ಕೊಂತ್ತಯ್ಯನಹುಂಡಿ ಗ್ರಾಮದ ಕೆ.ಸಿ.ರಾಜಪ್ಪ ಎಂಬುವರ ಪುತ್ರ ಆರ್.ಮಧುಕರ್ (27) ಸಾವನ್ನಪ್ಪಿದವನು. ವಿವರ: ಕೊಂತ್ತಯ್ಯನಹುಂಡಿಯ ಆರ್.ಮಧುಕರ್ ಅ.2ರಂದು ತನ್ನ ಸ್ನೇಹಿತನೊಂದಿಗೆ ಅಳಗಂಚಿ ಸಮೀಪ ಇರುವ ಬೆಂಡಗಳ್ಳಿ ಬಳಿಯ ಕಬಿನಿ ನಾಲೆಗೆ ತೆರಳಿದ್ದಾನೆ. ಚಪ್ಪಲಿ, ಬಟ್ಟೆಯನ್ನು ನಾಲೆಯ ದಡದಲ್ಲಿ ಇಟ್ಟು ನೀರಿಗೆ ಇಳಿದಿದ್ದಾರೆ ಎನ್ನಲಾಗಿದೆ. ಈ ವೇಳೆ ಮಧುಕರ ನೀರಿನಲ್ಲಿ ಕೊಚ್ಚಿ ಹೋದ. ಆತನ ಸ್ನೇಹಿತ ಬೈಕ್‍ನೊಂದಿಗೆ…

1 69 70 71 72 73 141
Translate »