ಸಾಗುವಳಿ ಜಮೀನು ಬಿಟ್ಟುಕೊಡುವಂತೆ ಒತ್ತಡ: ಒಂದೇ ಕುಟುಂಬದ ಮೂವರಿಂದ ಆತ್ಮಹತ್ಯೆಗೆ ಯತ್ನಸಾರ್ವಜನಿಕರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ
ಚಾಮರಾಜನಗರ

ಸಾಗುವಳಿ ಜಮೀನು ಬಿಟ್ಟುಕೊಡುವಂತೆ ಒತ್ತಡ: ಒಂದೇ ಕುಟುಂಬದ ಮೂವರಿಂದ ಆತ್ಮಹತ್ಯೆಗೆ ಯತ್ನಸಾರ್ವಜನಿಕರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

October 6, 2018

ಚಾಮರಾಜನಗರ:  ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಜಮೀನನ್ನು ಬಿಟ್ಟುಕೊಡು ವಂತೆ ಒತ್ತಡ ಹೇರುತ್ತಿರುವುದರಿಂದ ಬೇಸತ್ತು ಒಂದೇ ಕುಟುಂಬದ ಮೂವರು ಮೈಮೇಲೆ ಡೀಸೆಲ್ ಸುರಿದುಕೊಂಡು ಆತ್ಮ ಹತ್ಯೆಗೆ ಯತ್ನಿಸಿದ ಘಟನೆ ನಗರದ ಜಿಲ್ಲಾಡ ಳಿತ ಭವನದ ಮುಂಭಾಗ ಶುಕ್ರವಾರ ನಡೆಯಿತು.

ಚಾಮರಾಜನಗರ ತಾಲೂಕಿನ ಬೇಡರ ಪುರ ಗ್ರಾಮದ ಮಲ್ಲಯ್ಯ, ಅವರ ಪತ್ನಿ ದೊಡ್ಡಮ್ಮ, ಮಗ ಎಂ.ಕುಮಾರ ಆತ್ಮಹತ್ಯೆಗೆ ಯತ್ನಿಸಿದರು. ಸ್ಥಳದಲ್ಲಿದ್ದ ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಸಂಭವಿಸಬಹು ದಾದ ದೊಡ್ಡ ದುರಂತವೊಂದು ತಪ್ಪಿತು.

ಘಟನೆ ವಿವರ: ಬೇಡರಪುರ ಗ್ರಾಮದ ಬಳಿ ಇರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮುಂಭಾಗ ಸರ್ವೇ ನಂಬರ್ 248ರಲ್ಲಿ ಮಲ್ಲಯ್ಯ ಅವರಿಗೆ 1 ಎಕರೆ ಸ್ವಂತ ಜಮೀನು ಇದೆ. ಇದಕ್ಕೆ ಹೊಂದಿಕೊಂಡಂತೆ ಸರ್ವೇ ನಂ.33ರಲ್ಲಿ ಸುಮಾರು  ಮೂರು ವರೆ ಎಕರೆ ಸರ್ಕಾರಿ ಜಾಗ ಇದೆ. ಈ ಎಲ್ಲಾ ನಾಲ್ಕುವರೆ ಎಕರೆ ಪ್ರದೇಶದಲ್ಲಿ ನಾವು ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದೇವೆ. ಈಗಲೂ ಸಹ ಹುರಳಿ ಹಾಗೂ ಜೋಳ ಬಿತ್ತಿದ್ದೇವೆ. ಆದರೆ ಇತ್ತೀ ಚೆಗೆ ಗ್ರಾಮದ ಶಿವಪ್ಪ, ಚಾಮರಾಜನಗ ರದ ನಗರಸಭೆಯ ಮಾಜಿ ಅಧ್ಯಕ್ಷ ನಂಜುಂಡ ಸ್ವಾಮಿ ಅವರ ಅಕ್ಕನ ಮಕ್ಕಳಾದ ಶ್ರೀನಿ ವಾಸ್, ಮಹದೇವಸ್ವಾಮಿ, ಚಿನ್ನಸ್ವಾಮಿ ಅವರು ಸಾಗುವಳಿ ಜಮೀನನ್ನು ಬಿಟ್ಟು ಕೊಡದಿದ್ದರೆ ಗ್ರಾಮದಲ್ಲಿ ವಾಸ ಮಾಡಲು ಬಿಡುವುದಿಲ್ಲ. ನಿನಗೆ ತೊಂದರೆ ಆಗು ವುದು ಗ್ಯಾರಂಟಿ ಎಂದು ಬೆದರಿಕೆ ಹಾಕು ತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೆ ನಿಮ್ಮನ್ನು ಸುಮ್ಮನೆ ಬಿಡೋಲ್ಲ ಎಂದು ಜೀವ ಬೆದರಿಕೆ ಹಾಕಲಾಗುತ್ತಿದೆ. ಇದ ರಿಂದ ನಾವು ಇರುವುದಕ್ಕಿಂತ ಸಾಯುವುದೇ ಲೇಸು ಎಂದು ಭಾವಿಸಿ ಕುಟುಂಬದ ಎಲ್ಲಾ ಮೂವರು ಡೀಸೆಲ್ ಸುರಿದುಕೊಂಡು ಆತ್ಮ ಹತ್ಯೆಗೆ ಯತ್ನಿಸಿದೆವು ಎಂದು ಎಂ.ಕುಮಾರ್ ಸುದ್ದಿಗಾರರೊಂದಿಗೆ ಕಣ್ಣೀರಿಟ್ಟರು.

ನನ್ನ ತಾಯಿ ದೊಡ್ಡಮ್ಮ ವಿರುದ್ಧ ಗ್ರಾಮದ ಶಿವಪ್ಪ ಎಂಬುವವರು ಪೊಲೀ ಸರಿಗೆ ಕೊಲೆ ಬೆದರಿಕೆ ಹಾಕಿದ ದೂರು ದಾಖಲಿಸಿದ್ದಾರೆ. ನನ್ನ ತಾಯಿ ಇಂತಹ ಬೆದರಿಕೆ ಹಾಕಲು ಸಾಧ್ಯವೆ? ಎಂದು ಪ್ರಶ್ನಿಸಿದ ಕುಮಾರ್, ನಮ್ಮ ಕುಟುಂಬಕ್ಕೆ ನ್ಯಾಯ ದೊರೆಯಬೇಕು ಎಂದರು.

ಗ್ರಾಮದ ಶಿವಪ್ಪ, ಮಹದೇವಸ್ವಾಮಿ, ಶ್ರೀನಿವಾಸ್, ಚಿನ್ನಸ್ವಾಮಿ ನೀಡುತ್ತಿದ್ದ ಕಿರು ಕುಳ ಸಹಿಸಲು ಸಾಧ್ಯವಾಗದೆ ಸಾಯ ಬೇಕು ಎಂದು ತೀರ್ಮಾನಿಸಿ ತಂದೆ, ತಾಯಿ ಜೊತೆ, ಇಲ್ಲಿಗೆ ಆಗಮಿಸಿ ತಾವೇ ತಂದಿದ್ದ ಡೀಸೆಲ್‍ನ್ನು ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವಾಗ ಯಾರೋ ಬಂದು ಬೆಂಕಿ ಪಟ್ಟಣ ಕಿತ್ತುಕೊಂಡರು ಎಂದು ಕುಮಾರ್ ಹೇಳುವಾಗ ಆತನಲ್ಲಿ ದುಗುಡ ಇತ್ತು. ನನ್ನ ಕುಟುಂಬಕ್ಕೆ ಈಗ ನ್ಯಾಯ ಬೇಕಾಗಿದೆ. ಯಾರಿಂದಲೂ ನಮಗೆ ಬೆದರಿಕೆ ಬರಬಾರದು. ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಜಮೀನನ್ನು ಯಥಾ ಪ್ರಕಾರ ಸಾಗುವಳಿ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಆತ ಕೋರಿದನು. ಸ್ಥಳಕ್ಕೆ ತಹಶೀಲ್ದಾರ್ ಪುರಂದರ ಆಗಮಿಸಿ ಅಹವಾಲು ಸ್ವೀಕ ರಿಸಿ ಭರವಸೆ ನೀಡಿದರು.

Translate »