33 ಮೊಬೈಲ್ ಕಳವು ಮಾಡಿದ್ದ ಖದೀಮನ ಬಂಧನ
ಮೈಸೂರು

33 ಮೊಬೈಲ್ ಕಳವು ಮಾಡಿದ್ದ ಖದೀಮನ ಬಂಧನ

October 6, 2018

ಮೈಸೂರು: ಪ್ರತಿಷ್ಠಿತ ಓಪೋ ಮೊಬೈಲ್ ಕಂಪನಿಯ 4.40 ಲಕ್ಷ ರೂ. ಮೌಲ್ಯದ 33 ಮೊಬೈಲ್‍ಗಳನ್ನು ಕಳವು ಮಾಡಿದ್ದ ಖದೀಮನನ್ನು ಎನ್.ಆರ್.ಠಾಣಾ ಪೊಲೀಸರು ಗುರುವಾರ ಬಂಧಿಸಿದ್ಧಾರೆ. ಎನ್.ಆರ್.ಮೊಹಲ್ಲಾದ ಎ.ಜಿ.ಬ್ಲಾಕ್‍ನ ನಿವಾಸಿ ಪುನೀತ್‍ಸಿಂಗ್(23) ಬಂಧಿತ ವ್ಯಕ್ತಿ. ಜೂನ್ 8 ರಂದು ದೀಪೇಶ್‍ಕುಮಾರ್ ಎಂಬುವವರು ಮೈಸೂರಿನ ಮೊಬೈಲ್ ಅಂಗಡಿಗಳಿಗೆ ವಿತರಣೆ ಮಾಡಲು ಪಾಂಡವಪುರದಿಂದ ಮೈಸೂರಿಗೆ ಓಪೋ ಕಂಪನಿಯ ಒಟ್ಟು 33 ಮೊಬೈಲ್‍ಗಳಿದ್ದ 2 ಬಾಕ್ಸ್‍ಗಳನ್ನು ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಕಳುಹಿಸಿದ್ದರು.

ಆದರೆ, ಪುನೀತ್‍ಸಿಂಗ್ ಈ ಬಾಕ್ಸ್‍ಗಳನ್ನು ತಮ್ಮದೆಂದು ಬಸ್ ಚಾಲಕನ ಬಳಿ ಸುಳ್ಳು ಹೇಳಿ ಪಡೆದುಕೊಂಡು ಹೋಗಿದ್ದಾನೆ. ಈ ಸಂಬಂಧ ದೀಪೇಶ್‍ಕುಮಾರ್ ಅಂದೇ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಎನ್.ಆರ್.ಠಾಣಾ ಪೊಲೀಸರು, ಪುನೀತ್‍ಸಿಂಗ್‍ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.

Translate »