ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರರಿಬ್ಬರ ದುರ್ಮರಣ
ಚಾಮರಾಜನಗರ

ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರರಿಬ್ಬರ ದುರ್ಮರಣ

October 6, 2018

ಚಾಮರಾಜನಗರ: ಅಪರಿಚಿತ ವಾಹನವೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿ ಬ್ಬರು ದಾರುಣವಾಗಿ ಸ್ಥಳದಲ್ಲೇ ಸಾವನ್ನ ಪ್ಪಿದ ಘಟನೆ ಇಂದು ರಾತ್ರಿ ತಾಲೂಕಿನ ಬೆಂಡರವಾಡಿ ಗ್ರಾಮದ ಬಳಿ ನಡೆದಿದೆ.

ಚಾಮರಾಜನಗರ ಪಟ್ಟಣ ಅಂಬೇ ಡ್ಕರ್ ಬಡಾವಣೆ ನಿವಾಸಿಗಳಾದ ರಾಜೇಂದ್ರ (28) ಹಾಗೂ ಇದೇ ಬಡಾವಣೆಯ ನಿವಾಸಿಯಾಗಿದ್ದು, ಹಾಲಿ ವೆಂಕಟಯ್ಯನ ಛತ್ರ ಗ್ರಾಮದಲ್ಲಿ ವಾಸವಿದ್ದ ಪುನೀತ್ (27) ಮೃತಪಟ್ಟ ಬೈಕ್ ಸವಾರರು.

ಪುನೀತ್ ಹಾಗೂ ರಾಜೇಂದ್ರ ಅವರು ಇಂದು ಬೆಳಿಗ್ಗೆ ತಮ್ಮ ಪಲ್ಸರ್ ಬೈಕ್ (ಕೆಎ.10 ಎಕ್ಸ್.8629)ನಲ್ಲಿ ಮೈಸೂರಿಗೆ ತೆರಳಿದ್ದರು. ಮೈಸೂರಿನಲ್ಲಿ ಇಂದು ಇದ್ದ ರೈಲ್ವೇ ಪರೀಕ್ಷೆ ಬರೆದು, ರಾತ್ರಿ ಚಾಮರಾಜನಗರಕ್ಕೆ ಹಿಂದಿರುಗುತ್ತಿದ್ದರು. ಈ ವೇಳೆ ಸುಮಾರು ರಾತ್ರಿ 7.30ರಲ್ಲಿ ತಾಲೂಕಿನ ಬೆಂಡರವಾಡಿ ಗ್ರಾಮದ ಕೆರೆ ಏರಿ ಮೇಲೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150(ಎ)ಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಡಿಕ್ಕಿ ಹೊಡೆದಿರುವ ರಭಸಕ್ಕೆ ಬೈಕ್ ಸವಾರರ ದೇಹಗಳು ಛಿದ್ರಗೊಂಡು ಅಪಘಾತದ ಭೀಕರತೆಯನ್ನು ಬಿಂಬಿಸುತ್ತಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ ಚಾಮ ರಾಜನಗರ ಸಂಚಾರ ಠಾಣೆ ಸಬ್ ಇನ್ಸ್‍ಪೆಕ್ಟರ್ ದೀಪಕ್ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದರು. ನಂತರ ಆಂಬುಲೆನ್ಸ್ ಮೂಲಕ ಶವಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಜಿಲ್ಲಾಸ್ಪತ್ರೆ ಆವರಣದಲ್ಲಿ ಸಾವಿರಾರು ಮಂದಿ ಸಂಬಂಧಿಕರು ಹಾಗೂ ಮಿತ್ರರು ಜಮಾಯಿಸಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ದೇಹಗಳು ಡಿಕ್ಕಿಯ ರಭಸಕ್ಕೆ ಛಿದ್ರಗೊಂಡಿರುವುದನ್ನು ಗಮನಿಸಿದರೆ ಭಾರೀ ವಾಹನವೇ ಡಿಕ್ಕಿ ಹೊಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾಹನ ಪತ್ತೆಗೆ ಕ್ರಮಕೈಗೊಂಡಿದ್ದಾರೆ.

Translate »