ಚಾಮರಾಜನಗರ: ತಾಲೂಕಿನ ಕುದೇರು ಗ್ರಾಮದ ಕೆ.ಎನ್. ನಾಗೇಂದ್ರಸ್ವಾಮಿ (56) ಎಂಬುವರು ಕಳೆದ 10 ದಿನಗ ಳಿಂದ ಕಾಣೆಯಾಗಿ ದ್ದಾರೆ. ನಾಗೇಂದ್ರಸ್ವಾಮಿ ಅವರು ಸೆಪ್ಟೆಂ ಬರ್ 22ರಿಂದ ಗ್ರಾಮದಿಂದ ಕಾಣೆ ಯಾಗಿದ್ದಾರೆ. ಇವರನ್ನು ಪತ್ತೆ ಮಾಡಿ ಕೊಡುವಂತೆ ಕುದೇರು ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ. 56 ವರ್ಷ ವಯಸ್ಸಿನ, 5.7 ಅಡಿ ಎತ್ತರ ಇರುವ, ಕಪ್ಪು ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿರುವ, ಕನ್ನಡ ಭಾಷೆ ಮಾತನಾಡುವ ಇವರನ್ನು ನೋಡಿದರೆ ಈ ದೂರವಾಣಿ ಸಂಖ್ಯೆಗೆ ಕರೆ…
ಟೆಂಪೋ ಉರುಳಿ ಮೂವರಿಗೆ ಗಾಯ
October 3, 2018ಕಾಮಗೆರೆ: ಚಾಲಕನ ನಿಯಂತ್ರಣ ತಪ್ಪಿ ಈಚರ್ ಟೆಂಪೆÇ ಉರುಳಿಬಿದ್ದ ಪರಿಣಾಮ ಮೂವರಿಗೆ ತೀವ್ರ ಗಾಯಗಳಾಗಿರುವ ಘಟನೆ ನಡೆದಿದ್ದು, ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಮರಾಜನಗರ ಮೂಲದ ಹೆಗ್ಗವಾಡಿ ಗ್ರಾಮದ ಮಹೇಶ್ ಎಂಬುವರ ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಕೊಳ್ಳೇಗಾಲ ಮಲ್ಲರಾಜು, ಯಳಂದೂರು ಶ್ರೀನಿವಾಸ್ ಗಾಯಗೊಂಡವರು. ಪೆÇನ್ನಾಚಿ ಗ್ರಾಮ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ರೇಷನ್ ವಿತರಣೆ ಮಾಡಲು ಈಚರ್ ಟೆಂಪೆÇ ಹೋಗುತ್ತಿದ್ದಾಗ ಬೆಟ್ಟಗಳ ಪ್ರದೇಶದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು ನೂರು ಮೀಟರ್…
ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ: ಆರೋಗ್ಯ ಇಲಾಖೆ ವಿರುದ್ಧ ದೂರಿನ ಸುರಿಮಳೆ
October 2, 2018ಜಿಪಂನಿಂದ ಕಿರಿಯ ಮಹಿಳಾ ಆರೋಗ್ಯ ಸಹಾಯಕರ ನೇಮಕಕ್ಕೆ ಅಸ್ತು ಅಂಗನವಾಡಿ ಕೇಂದ್ರಗಳಿಗೆ ಮೇಲ್ವಿಚಾರಕರ ನೇಮಿಸಲು ಕ್ರಮ: ಸಿಇಓ ಚಾಮರಾಜನಗರ: ಉಪ ಆರೋಗ್ಯ ಕೇಂದ್ರಗಳಿಗೆ ಆರೋಗ್ಯ ಸಹಾಯಕರು ಬರುತ್ತಿಲ್ಲ… ಕೆಲವು ಉಪ ಆರೋಗ್ಯ ಕೇಂದ್ರಗಳು ಬಾಗಿಲನ್ನೇ ತೆರೆಯುವುದಿಲ್ಲ… ಜಿಲ್ಲೆಯ ಜನರಿಗೆ ಸಮರ್ಪಕವಾಗಿ ಆರೋಗ್ಯ ಸೇವೆ ದೊರೆಯುತ್ತಿಲ್ಲ… -ಇದು ನಗರದ ಜಿಲ್ಲಾ ಪಂಚಾಯಿತಿ ಸಂಭಾಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಆರೋಗ್ಯ ಇಲಾಖೆಯ ವಿರುದ್ಧ ಜಿಪಂ ಸದಸ್ಯರು ದೂರಿನ ಸುರಿಮಳೆಗೈದರು. ಸದಸ್ಯರಾದ ಕೆ.ಎಸ್.ಮಹೇಶ್, ಕೆರೆಹಳ್ಳಿ ನವೀನ್, ಇಶ್ರತ್‍ಬಾನು, ಚೆನ್ನಪ್ಪ ಅವರು…
ವನ್ಯಜೀವಿ ಉಳಿವಿನಿಂದ ಮಾತ್ರ ಮನುಷ್ಯನಿಗೆ ನೆಲೆ
October 2, 2018ಗುಂಡ್ಲುಪೇಟೆ: ‘ಪರಿಸರ ಮತ್ತು ವನ್ಯಜೀವಿಗಳ ಉಳಿವಿನಿಂದ ಮಾತ್ರ ಮನುಷ್ಯನಿಗೆ ನೆಲೆ’ ಎಂದು ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಅಂಬಾಡಿ ಮಾಧವ್ ಹೇಳಿದರು. ವನ್ಯಜೀವಿ ಸಪ್ತಾಹದ ಅಂಗವಾಗಿ ಹಂಗಳ ಗ್ರಾಮದಲ್ಲಿ ಸೋಮವಾರ ಅರಣ್ಯ ಇಲಾಖೆಯಿಂದ ಏರ್ಪಡಿಸಿದ್ದ ಮ್ಯಾರಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿ ವರ್ಷದಂತೆ ಈ ಬಾರಿಯೂ ಸಹ ವನ್ಯಜೀವಿ ಸಪ್ತಾಹದ ಅಂಗವಾಗಿ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿನ ಹಂಗಳ ಗ್ರಾಮದ ನಾಡ ಕಚೇರಿಯಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನವರೆಗೆ ಸ್ವಯಂ ಸೇವಕರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ…
ಇಸ್ಪಿಟ್ ಅಡ್ಡೆಯ ಮೇಲೆ ದಾಳಿ: ಐವರ ಬಂಧನ
October 2, 2018ಹನೂರು: ಇಸ್ಪಿಟ್ ಅಡ್ಡೆಯ ಮೇಲೆ ಹನೂರು ಪೊಲೀಸರ ದಾಳಿ ನಡೆಸಿ ಐವರನ್ನು ಬಂಧಿಸಿ, ನಗದು ವಶಪಡಿಸಿಕೊಂಡಿರುವ ಘಟನೆ ಸಮೀಪದ ಮಂಗಲ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೋಣಮಾರಮ್ಮನ ದೇವಸ್ಥಾನದ ಬಳಿಯಿರುವ ಓವರ್‍ಹೆಡ್ ಟ್ಯಾಂಕ್‍ನ ಕೆಳಗಡೆ ಇಸ್ಪಿಟ್ ಆಡುತ್ತಿದ್ದ ಐವರನ್ನು ವಶಕ್ಕೆ ಪಡೆದ ಪೊಲೀಸರು ಪಣಕ್ಕಿಟ್ಟಿದ್ದ 3600 ರೂ. ನಗದು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸ್‍ಐ ನಾಗೇಶ್, ಕಾನ್‍ಸ್ಟೇಬಲ್ ಸಿದ್ದೇಶ್, ಚಂದ್ರು, ವೀರಭದ್ರ ಪಾಲ್ಗೊಂಡಿದ್ದರು. ಈಸಂಬಂಧ ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುತ್ತೂರು ಏತ ನೀರಾವರಿ ಯೋಜನೆ ಕಾಮಗಾರಿ ಸ್ಥಗಿತ: ಆರೋಪ
October 1, 2018ಚಾಮರಾಜನಗರ: ಕುಡಿಯುವ ನೀರಿನ ಉದ್ದೇಶಕ್ಕಾಗಿ ಚಾಮರಾಜನಗರ, ಯಳಂದೂರು ತಾಲೂಕಿನ 22 ಕೆರೆಗಳು ಮತ್ತು ನಂಜನಗೂಡು ತಾಲೂಕಿನ 3 ಕೆರೆ ಸೇರಿದಂತೆ ಒಟ್ಟು 24 ಕೆರೆಗಳಿಗೆ ಕಬಿನಿ ನದಿಯಿಂದ ನೀರು ತುಂಬಿಸುವ ಸುತ್ತೂರು ಏತ ನೀರಾವರಿ ಯೋಜನೆ ಕಾಮಗಾರಿಯು ಕಳೆದ 3 ತಿಂಗಳಿನಿಂದ ಸ್ಥಗಿತವಾಗಿದೆ ಎಂದು ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿ ಗಂಭೀರ ಆರೋಪ ಮಾಡಿದೆ. ನಗರದ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಭವನದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಸಮಿತಿಯ ಅಧ್ಯಕ್ಷ ಕೆ.ವೀರಭದ್ರಸ್ವಾಮಿ ಮಾತನಾಡಿದರು. ಕಾಮಗಾರಿಗೆ 2017 ಜುಲೈ…
ಉಪ್ಪಾರ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಲು ಸಲಹೆ
October 1, 2018ಯಳಂದೂರು: ಉಪ್ಪಾರ ಸಮುದಾಯ ರಾಜಕೀಯ, ಆರ್ಥಿಕ, ಶೈಕ್ಷ ಣಿಕವಾಗಿ ಗುರುತಿಸಿಕೊಳ್ಳಬೇಕಾದರೆ ಮೊದಲು ಉಪ್ಪಾರ ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟ ರಂಗಶೆಟ್ಟಿ ತಿಳಿಸಿದರು. ಪಟ್ಟಣ ದಿವಾನ್ ಪೂರ್ಣಯ್ಯನವರ ಪ್ರಾಚ್ಯವಸ್ತು ಸಂಗ್ರಹಾಲಯದ ಅವರಣ ದಲ್ಲಿ ಯಳಂದೂರು ತಾಲೂಕು ಉಪ್ಪಾರ ಸಮಾಜದ ಗಡಿಮನೆ, ಕಟ್ಟೆಮನೆ, ಕೂಟ ಗಳ ಒಕ್ಕೂಟದಿಂದ ಉಪ್ಪಾರ ಸಮು ದಾಯದ ಚುನಾಯಿತ ಮುಖಂಡರು ಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈಗಾಗಲೇ ಸಮುದಾಯವನ್ನು ಎಸ್‍ಸಿ, ಎಸ್‍ಟಿ ಮೀಸಲಿಗೆ…
ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹ ಚಾಮರಾಜನಗರದಲ್ಲಿ ಪ್ರೌಢ ಶಾಲಾ ಶಿಕ್ಷಕರ ಪ್ರತಿಭಟನೆ
October 1, 2018ಚಾಮರಾಜನಗರ: ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರೌಢ ಶಾಲಾ ಶಿಕ್ಷಕರು ನಗರದ ಜಿಲ್ಲಾಡಳಿತ ಭವನದ ಮುಂಭಾಗ ಶನಿ ವಾರ ಪ್ರತಿಭಟನೆ ನಡೆಸಿದರು. ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಭವನದ ಮುಂಭಾಗ ಜಮಾಯಿಸಿದ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ಸ್ವಲ್ಪ ಸಮಯ ಧರಣಿ ನಡೆಸಿದರು. ನಂತರ ಜಿಲ್ಲಾ ಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಪ್ರೌಢ ಶಾಲಾ ಶಿಕ್ಷಕರ ವೇತನ ತಾರ ತಮ್ಯದ ಹಿನ್ನೆಲೆಯಲ್ಲಿ ರಚಿಸಲಾಗಿದ್ದ ಕುಮಾರ್‍ನಾಯಕರವರ ವರದಿಯನ್ವಯ 2016 ಜೂನ್…
ಮೂಲಭೂತ ಸೌಲಭ್ಯ ವಂಚಿತ ಹನೂರು ಬಸ್ ನಿಲ್ದಾಣ ರಾಗಿಪೈರು ನಾಟಿ ಮಾಡಿ ಪ್ರತಿಭಟನೆ
October 1, 2018ಹನೂರು: ಕಾಮ ಗಾರಿಗಳು ಮುಗಿವುವ ಮುನ್ನವೇ ತರಾ ತುರಿಯಲ್ಲಿ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಲೋಕಾ ರ್ಪಣೆಗೊಂಡ ಪಟ್ಟಣದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಯಿಂದಾಗಿ ಪ್ರಯಾಣಿಕರು ಪರದಾಡುವಂತಾ ಗಿದ್ದು ಮಳೆ ಬಂದರೆ ನಿಲ್ದಾಣ ಕೆಸರು ಮಾಯಾವಾಗಿ ತೊಂದರೆ ಅನುಭವಿಸವಂತಾ ಗಿದೆ ಎಂದು ಕರವೇ ಸ್ವಾಭಿಮಾನಿ ಬಣದ ಸಂಘಟನೆ ವತಿಯಿಂದ ಕೆಸರಿನಲ್ಲಿ ರಾಗಿ ಪೈರು ನಾಟಿ ಮಾಡುವ ಮೂಲಕ ವಿನೂತನ ವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಕರವೇ ಸ್ವಾಭಿಮಾನಿ ಬಣದ ಅಧ್ಯಕ್ಷ…
ಮೆಟ್ಟಿಲವಾಡಿ ಗ್ರಾಮದ ತೋಟದಲ್ಲಿ ಹುಲಿ ಪ್ರತ್ಯಕ್ಷ
October 1, 2018ಚಾಮರಾಜನಗರ: ತಮಿಳುನಾಡಿನ ತಾಳವಾಡಿ ತಾಲೂಕಿಗೆ ಸೇರಿದ ಗಡಿ ಗ್ರಾಮವಾದ ಮೆಟ್ಟಿಲವಾಡಿ ಗ್ರಾಮದ ತೋಟದಲ್ಲಿ ಹುಲಿಯೊಂದು ಕಾಣಿಸಿಕೊಂಡಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಮೆಟ್ಟಿಲವಾಡಿ ಹಾಗೂ ಬಿಸಲವಾಡಿ ಗ್ರಾಮಗಳ ನಡುವೆ ಇರುವ ಮೆಟ್ಟಿಲವಾಡಿ ಗ್ರಾಮದ ರೈತ ನಂಜುಂಡಸ್ವಾಮಿ ಎಂಬುವರ ತೋಟದಲ್ಲಿ ಶನಿವಾರ ಸಂಜೆ ಹುಲಿ ಪ್ರತ್ಯಕ್ಷವಾಗಿದೆ. ಇದನ್ನು ನೋಡಿದ ರೈತರು ಭಯಭೀತರಾಗಿದ್ದಾರೆ. ತೋಟದಲ್ಲಿ ಹುಲಿ ಕಾಣಿಸಿಕೊಂಡಿರುವುದನ್ನು ರೈತರು ತಮಿಳುನಾಡಿನ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಹುಲಿಯನ್ನು ಕಾಡಿಗೆ ಅಟ್ಟಲು ಎಲ್ಲಾ ರೀತಿಯ…