ಇಸ್ಪಿಟ್ ಅಡ್ಡೆಯ ಮೇಲೆ ದಾಳಿ: ಐವರ ಬಂಧನ
ಚಾಮರಾಜನಗರ

ಇಸ್ಪಿಟ್ ಅಡ್ಡೆಯ ಮೇಲೆ ದಾಳಿ: ಐವರ ಬಂಧನ

October 2, 2018

ಹನೂರು: ಇಸ್ಪಿಟ್ ಅಡ್ಡೆಯ ಮೇಲೆ ಹನೂರು ಪೊಲೀಸರ ದಾಳಿ ನಡೆಸಿ ಐವರನ್ನು ಬಂಧಿಸಿ, ನಗದು ವಶಪಡಿಸಿಕೊಂಡಿರುವ ಘಟನೆ ಸಮೀಪದ ಮಂಗಲ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕೋಣಮಾರಮ್ಮನ ದೇವಸ್ಥಾನದ ಬಳಿಯಿರುವ ಓವರ್‍ಹೆಡ್ ಟ್ಯಾಂಕ್‍ನ ಕೆಳಗಡೆ ಇಸ್ಪಿಟ್ ಆಡುತ್ತಿದ್ದ ಐವರನ್ನು ವಶಕ್ಕೆ ಪಡೆದ ಪೊಲೀಸರು ಪಣಕ್ಕಿಟ್ಟಿದ್ದ 3600 ರೂ. ನಗದು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಪಿಎಸ್‍ಐ ನಾಗೇಶ್, ಕಾನ್‍ಸ್ಟೇಬಲ್ ಸಿದ್ದೇಶ್, ಚಂದ್ರು, ವೀರಭದ್ರ ಪಾಲ್ಗೊಂಡಿದ್ದರು. ಈಸಂಬಂಧ ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »