ವನ್ಯಜೀವಿ ಉಳಿವಿನಿಂದ ಮಾತ್ರ ಮನುಷ್ಯನಿಗೆ ನೆಲೆ
ಚಾಮರಾಜನಗರ

ವನ್ಯಜೀವಿ ಉಳಿವಿನಿಂದ ಮಾತ್ರ ಮನುಷ್ಯನಿಗೆ ನೆಲೆ

October 2, 2018

ಗುಂಡ್ಲುಪೇಟೆ: ‘ಪರಿಸರ ಮತ್ತು ವನ್ಯಜೀವಿಗಳ ಉಳಿವಿನಿಂದ ಮಾತ್ರ ಮನುಷ್ಯನಿಗೆ ನೆಲೆ’ ಎಂದು ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಅಂಬಾಡಿ ಮಾಧವ್ ಹೇಳಿದರು.

ವನ್ಯಜೀವಿ ಸಪ್ತಾಹದ ಅಂಗವಾಗಿ ಹಂಗಳ ಗ್ರಾಮದಲ್ಲಿ ಸೋಮವಾರ ಅರಣ್ಯ ಇಲಾಖೆಯಿಂದ ಏರ್ಪಡಿಸಿದ್ದ ಮ್ಯಾರಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿ ವರ್ಷದಂತೆ ಈ ಬಾರಿಯೂ ಸಹ ವನ್ಯಜೀವಿ ಸಪ್ತಾಹದ ಅಂಗವಾಗಿ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿನ ಹಂಗಳ ಗ್ರಾಮದ ನಾಡ ಕಚೇರಿಯಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನವರೆಗೆ ಸ್ವಯಂ ಸೇವಕರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಮ್ಯಾರಥಾನ್ ಆಯೋಜಿಸಲಾಗಿದೆ. ಈ ಮೂಲಕ ಸಾರ್ವಜನಿಕರಲ್ಲಿ ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ವನ್ಯಜೀವಿ ಸಪ್ತಾಹದ ಅಂಗವಾಗಿ ಒಂದು ವಾರಗಳ ಕಾಲ ವಿವಿಧ ಶಾಲೆಗಳಲ್ಲಿ ಚರ್ಚಾ ಸ್ಪರ್ಧೆ, ಚಿತ್ರಕಲೆ, ಪ್ರಬಂಧ, ಛಾಯಾಚಿತ್ರ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಿವೈಎಸ್‍ಪಿ ಸಿ.ಟಿ.ಜಯಕುಮಾರ್ ಮಾತನಾಡಿ, ಮಾನವರಷ್ಟೇ ವನ್ಯಜೀವಿಗಳಿಗೂ ಬದುಕುವ ಹಕ್ಕಿದ್ದರೂ ಸಹ ಅವುಗಳಿಗೆ ಹವಲು ತೊಂದರೆಗೊಳು ಎದುರಾಗುತ್ತಿದೆ. ಅರಣ್ಯ ಇದ್ದರೆ ಮಾತ್ರ ಮಾನವ ಬದುಕಲು ಸಾಧ್ಯ. ಅರಣ್ಯದ ಉಳಿಗೆ ವನ್ಯಜೀವಿಗಳು ಅತ್ಯಗತ್ಯವಾಗಿದ್ದು, ಮಾನವ ವನ್ಯಜೀವಿಗಳ ಉಳಿವಿಗೆ ನೆರವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸಿಎಸ್ ಕೆ.ಪರಮೇಶ್, ಸಿಬ್ಬಂದಿ ನಟರಾಜು, ರವಿಕುಮಾರ್, ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಇದ್ದರು.

Translate »