ಚಾಮರಾಜನಗರ

4,000 ಕ್ವಿಂಟಾಲ್ ಅಕ್ಕಿ ಗೋಡೌನ್ ಸೇರಿಲ್ವಂತೆ!
ಚಾಮರಾಜನಗರ

4,000 ಕ್ವಿಂಟಾಲ್ ಅಕ್ಕಿ ಗೋಡೌನ್ ಸೇರಿಲ್ವಂತೆ!

September 23, 2018

ಕೊಳ್ಳೇಗಾಲ:  ಆಹಾರ ಇಲಾಖೆಯಿಂದ ಕೊಳ್ಳೇಗಾಲ ಟಿಎಪಿಸಿಎಂಎಸ್‍ಗೆ ಕಳುಹಿಸಲಾಗಿದ್ದ 4,000 ಕ್ವಿಂಟಾಲ್ ಅಕ್ಕಿಯು ಗೋಡೌನ್ ತಲುಪಿಲ್ಲ. ಈ ಸಂಬಂಧ ಕೊಳ್ಳೇಗಾಲ ಟಿಎಪಿಸಿಎಂಎಸ್‍ನಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದ್ದು, ಇದರಲ್ಲಿ ಹಿರಿಯ ಹಾಗೂ ಕಿರಿಯ ಅಧಿಕಾರಿ ಗಳು ಭಾಗಿಯಾಗಿದ್ದಾರೆ ಎಂಬುದು ತನಿಖಾಧಿಕಾರಿಗಳ ತನಿಖೆ ವೇಳೆಯಲ್ಲಿ ಬೆಳಕಿಗೆ ಬಂದಿದೆ. ನಾಲ್ವರು ತಹಶೀಲ್ದಾರ್‍ರು ಹಾಗೂ ಉಪವಿಭಾಗಾಧಿಕಾರಿ ಫೌಜಿಯ್ ತರನ್ನಮ್ ಅವರ ನೇತೃತ್ವದಲ್ಲಿ ಗುರುವಾರ ಕೊಳ್ಳೇಗಾಲ ಟಿಎಪಿಸಿಎಂಎಸ್‍ಗೆ ತೆರಳಿದ ತನಿಖಾಧಿಕಾರಿಗಳ ತಂಡ ಪರಿಶೀಲನೆ ನಡೆ ಸಿದಾಗ ಅವ್ಯವಹಾರ ನಡೆದಿರುವ ಬಗ್ಗೆ ತಿಳಿದು ಬಂದಿದೆ. ಚಾಮರಾಜನಗರದಿಂದ…

ಅಮೃತಭೂಮಿಯಲ್ಲಿ ಯುವ ರೈತ ಕಾರ್ಯಾಗಾರಕ್ಕೆ ಚಾಲನೆ
ಚಾಮರಾಜನಗರ

ಅಮೃತಭೂಮಿಯಲ್ಲಿ ಯುವ ರೈತ ಕಾರ್ಯಾಗಾರಕ್ಕೆ ಚಾಲನೆ

September 22, 2018

ಚಾಮರಾಜನಗರ: ತಾಲೂಕಿನ ಹೊಂಡರಬಾಳು ಗ್ರಾಮದ ಬಳಿ ಇರುವ ಅಮೃತಭೂಮಿಯಲ್ಲಿ ಯುವ ರೈತ ಕಾರ್ಯಾಗಾರಕ್ಕೆ ಚಾಲನೆ ದೊರೆಯಿತು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಆಶ್ರಯದಲ್ಲಿ ಹೊಸ ತಲೆ ಮಾರಿನ ರೈತ ಚಳವಳಿ ಕಟ್ಟುವ ಉದ್ದೇ ಶದಿಂದ ಮೂರು ದಿನಗಳ ಕಾಲ (ಸೆ.21 ರಿಂದ 23) ಯುವ ರೈತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ರೈತ ಚೇತನ ದಿ.ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಕನಸಿನ ಕೂಸು ಅಮೃತ ಭೂಮಿಯಲ್ಲಿ ಇರುವ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಮತ್ತು ದಿ.ಪ್ರತಿಮಾ ನಂಜುಂಡಸ್ವಾಮಿ ಅವರ ಸ್ಮಾರಕಕ್ಕೆ ರೈತ…

ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲು ಉಪ್ಪಾರ ಸಮಾಜಕ್ಕೆ ಸಲಹೆ
ಚಾಮರಾಜನಗರ

ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲು ಉಪ್ಪಾರ ಸಮಾಜಕ್ಕೆ ಸಲಹೆ

September 22, 2018

ಚಾಮರಾಜನಗರ: ಉಪ್ಪಾರ ಸಮಾಜವು ಶೈಕ್ಷಣಿಕವಾಗಿ, ಸಾಮಾಜಿಕ ವಾಗಿ ಹಿಂದುಳಿದಿದ್ದು, ಹೆಚ್ಚಿನ ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬರಬೇಕು. ಇಂದು ಪ್ರತಿ ಭಾವಂತ ವಿದ್ಯಾರ್ಥಿಗಳಿಗೆ ಸಮಾಜದ ವತಿ ಯಿಂದ ಪ್ರೋತ್ಸಾಹಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸಚಿವ ಸಿ.ಪುಟ್ಟ ರಂಗಶೆಟ್ಟಿ ಶ್ಲಾಘಿಸಿದರು. ಅವರು ಜಿಲ್ಲಾ ಉಪ್ಪಾರ ಸಂಘದ ವತಿ ಯಿಂದ ನಗರದ ಜೆಎಚ್.ಪಟೇಲ್ ಸಭಾಂ ಗಣದಲ್ಲಿ 2017-18ನೇ ಸಾಲಿನಲ್ಲಿ ಎಸ್‍ಎಸ್ ಎಲ್‍ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಉಪ್ಪಾರ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯ ಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ…

ಬೈಕ್‍ಗಳ ಡಿಕ್ಕಿ; ಓರ್ವನಿಗೆ ಗಾಯ
ಚಾಮರಾಜನಗರ

ಬೈಕ್‍ಗಳ ಡಿಕ್ಕಿ; ಓರ್ವನಿಗೆ ಗಾಯ

September 22, 2018

ಕಾಮಗೆರೆ:  ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಯಾಗಿ ಒಬ್ಬನಿಗೆ ಮುಖ ತಲೆಗೆ ತೀವ್ರ ಗಾಯ ವಾಗಿರುವ ಘಟನೆ ಸಮೀಪದ ಹುಲಸು ಗುಡ್ಡೆ ಬಸ್ ನಿಲ್ದಾಣದ ಹತ್ತಿರ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದ ಸುರೇಶ್ ಎಂಬುವರಿಗೆ ತೀವ್ರ ಸ್ವರೂ ಪದ ಗಾಯವಾಗಿದ್ದು, ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ಘಟನೆ: ಸುರೇಶ್ ಹಾಗೂ ಸ್ನೇಹಿತರು ಮಹದೇಶ್ವರ ಬೆಟ್ಟಕ್ಕೆ ಹೋಗಿ ಪೂಜೆ ಸಲ್ಲಿಸಿ ತಮ್ಮ ಗ್ರಾಮಕ್ಕೆ ಹಿಂತಿರುಗುತ್ತಿದ್ದರು….

ಇಂದಿನಿಂದ ನಾಗವಳ್ಳಿ ಬಳಿ ಇರುವ ಅಮೃತ ಭೂಮಿಯಲ್ಲಿ ಯುವ ರೈತ ಕಾರ್ಯಾಗಾರ
ಚಾಮರಾಜನಗರ

ಇಂದಿನಿಂದ ನಾಗವಳ್ಳಿ ಬಳಿ ಇರುವ ಅಮೃತ ಭೂಮಿಯಲ್ಲಿ ಯುವ ರೈತ ಕಾರ್ಯಾಗಾರ

September 21, 2018

ಚಾಮರಾಜನಗರ: ಹೊಸ ತಲೆಮಾರಿನ ರೈತ ಚಳವಳಿ ಕಟ್ಟುವ ಉದ್ದೇಶದಿಂದ ಚಾಮರಾಜನಗರ ತಾಲೂಕಿನ ಹೊಂಡರಬಾಳು ಬಳಿ ಇರುವ ಅಮೃತ ಭೂಮಿಯಲ್ಲಿ ಸೆ.21 ರಿಂದ 24 ರವರೆಗೆ ‘ಯುವ ರೈತ ಕಾರ್ಯಾಗಾರ’ ಹಮ್ಮಿ ಕೊಳ್ಳಲಾಗಿದೆ. ನಗರದ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಭವನದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ಯುವ ಘಟಕದ ರಾಜ್ಯ ಸಂಚಾಲಕಿ ಕೋಲಾರದ ನಳಿನಿ ಈ ವಿಷಯ ತಿಳಿಸಿದರು. ಗ್ರಾಮೀಣ ಬದುಕನ್ನು ನೆಮ್ಮದಿಯುತ, ಸೃಜನಶೀಲ ಹಾಗೂ ಪುನರ್ ಸಂಘಟಿಸ ಬೇಕಾಗಿದೆ. ಹೋರಾಟವನ್ನೂ,…

ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ
ಚಾಮರಾಜನಗರ

ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ

September 21, 2018

ಗುಂಡ್ಲುಪೇಟೆ:  ಮಕ್ಕಳಲ್ಲಿನ ಪ್ರತಿಭೆಯನ್ನು ಅನಾವರಣ ಗೊಳಿಸಲು ಪ್ರತಿಭಾ ಕಾರಂಜಿ ಪೂರಕವಾದ ವಾತಾವರಣವನ್ನು ಕಲ್ಪಿಸಿದೆ ಎಂದು ಪುರ ಸಭೆ ಅಧ್ಯಕ್ಷ ಪಿ.ಗಿರೀಶ್ ಹೇಳಿದರು. ಪಟ್ಟಣದ ಕೆ.ಎಸ್.ನಾಗರತ್ಮಮ್ಮ ಪ್ರೌಢಶಾಲೆ ಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಕ್ಷರ ಕಲಿಕೆಯೊಂದಿಗೆ ಮಕ್ಕಳ ಪ್ರತಿ ಭೆಯನ್ನು ಗುರ್ತಿಸಿ ಬೆಳಕಿಗೆ ತರಲು ಶಿಕ್ಷಣ ಇಲಾಖೆಯು ಪ್ರತಿ ವರ್ಷವೂ ಕ್ಲಸ್ಟರ್, ಹೋಬಳಿ, ತಾಲೂಕು ಮತ್ತು ಜಿಲ್ಲಾ ಮಟ್ಟ ದಲ್ಲಿ ಪ್ರತಿಭಾ ಕಾರಂಜಿ ಆಯೋಜಿಸು ತ್ತಿದೆ….

ಸ್ಕೂಟರ್‍ನಿಂದ ಬಿದ್ದು ಅರಣ್ಯಾಧಿಕಾರಿ ಸಾವು
ಚಾಮರಾಜನಗರ

ಸ್ಕೂಟರ್‍ನಿಂದ ಬಿದ್ದು ಅರಣ್ಯಾಧಿಕಾರಿ ಸಾವು

September 21, 2018

ಚಾಮರಾಜನಗರ: ಸ್ಕೂಟರ್‍ನಿಂದ ಬಿದ್ದು ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಮೃತಪಟ್ಟಿರುವ ಘಟನೆ ತಾಲೂಕಿನ ಮರಿಯಾಲ ಗ್ರಾಮದ ಬಳಿ ಬುಧವಾರ ನಡೆದಿದೆ. ಸಾಮಾಜಿಕ ಅರಣ್ಯ ವಲಯದ ಉಪ ವಲಯ ಅರಣ್ಯಾಧಿ ಕಾರಿ ಆಗಿದ್ದ ಸೋಮರಾಜ್ ಅರಸ್ (36) ಮೃತಪಟ್ಟವರು. ಚಾಮರಾಜನಗರ ತಾಲೂಕಿನ ಬದನಗುಪ್ಪೆಯಲ್ಲಿ ಕರ್ತವ್ಯ ಮುಗಿಸಿಕೊಂಡು ಸೋಮರಾಜ್ ಅರಸ್ ಸ್ಕೂಟರ್‍ನಲ್ಲಿ ಚಾ.ನಗರಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಮರಿಯಾಲದ ಬಳಿ ಸ್ಕೂಟರ್‍ನ ಹಿಂಬದಿ ಚಕ್ರ ಸ್ಫೋಟಗೊಂಡಿತು ಎನ್ನಲಾಗಿದೆ. ಇದರಿಂದ ಆಯತಪ್ಪಿ ಕೆಳಕ್ಕೆ ಬಿದ್ದ ಸೋಮರಾಜ್ ಅರಸ್ ಅವರ ತಲೆಗೆ…

ಆಲೂರು ಗ್ರಾಮದಲ್ಲಿ ಮಾತೃಪೂರ್ಣ ಮಾಸಾಚರಣೆ
ಚಾಮರಾಜನಗರ

ಆಲೂರು ಗ್ರಾಮದಲ್ಲಿ ಮಾತೃಪೂರ್ಣ ಮಾಸಾಚರಣೆ

September 21, 2018

ಚಾಮರಾಜನಗರ: ತಾಲೂಕಿನ ಆಲೂರು ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆದ ಪೌಷ್ಟಿಕ ಕರ್ನಾಟಕ ಮಾತೃಪೂರ್ಣ ಮತ್ತು ಮಾತೃ ವಂದನಾ ಮಾಸಾಚರಣೆ ಕಾರ್ಯಕ್ರಮವನ್ನು ಡಾ.ಅಭಯ್‍ಕುಮಾರ್ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ಸರ್ಕಾರವು ಸದೃಢ ಹಾಗೂ ಆರೋಗ್ಯವಂತ ಸಮಾಜ ನಿರ್ಮಿಸಲು ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮಾತೃಪೂರ್ಣ ಯೋಜನೆಯನ್ನು ಜಾರಿಗೊಳಿಸಿ ಅವರಿಗೆ ಪ್ರತಿದಿನ ಮಧ್ಯಾಹ್ನದ ಸಮಯ ಬೇಳೆ ಸಾರು, ಅನ್ನ, ತರಕಾರಿ, ಸೊಪ್ಪಿನ ಪಲ್ಯ, ಮೊಟ್ಟೆ, ಪೌಷ್ಠಿಕ ಆಹಾರ ನೀಡುತ್ತಿದೆ. ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಈ…

ಮನಸಿನ ಉಲ್ಲಾಸಕ್ಕೆ ಸಂಗೀತ ಸಹಕಾರಿ
ಚಾಮರಾಜನಗರ

ಮನಸಿನ ಉಲ್ಲಾಸಕ್ಕೆ ಸಂಗೀತ ಸಹಕಾರಿ

September 21, 2018

ಚಾಮರಾಜನಗರ:  ನಿತ್ಯಜೀವ ನದ ಜಂಜಾಟದಿಂದ ಹೊರಬರಲು, ದಣಿದ ದೇಹಕ್ಕೆ ಹೊಸ ಹುಮ್ಮಸನ್ನು ನೀಡಲು, ಪ್ರಕ್ಷುಬ್ಧಗೊಂಡಿರುವ ಮನಸ್ಸನ್ನು ಉಲ್ಲ ಸಿತಗೊಳಿಸಲು ಸಂಗೀತ ಪ್ರಯೋಜನ ಕಾರಿಯಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಬಸವರಾಜ ಅಭಿಪ್ರಾಯಪಟ್ಟರು. ನಗರದ ಜಿಲ್ಲಾ ನ್ಯಾಯಾಲಯದ ಆವ ರಣದಲ್ಲಿ ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ನ್ಯಾಯಾಂಗ ಇಲಾಖೆ ನೌಕರರ ಸಂಘ ಗಣಪತಿ ಪೂಜಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಸಂಗೀತ ರಸ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿ ಶರಣರು ರಚಿಸಿದ…

ನಾಳೆ ಚಾಮರಾಜನಗರದಲ್ಲಿ ವಿಶ್ವಕರ್ಮ ಜಯಂತಿ
ಚಾಮರಾಜನಗರ

ನಾಳೆ ಚಾಮರಾಜನಗರದಲ್ಲಿ ವಿಶ್ವಕರ್ಮ ಜಯಂತಿ

September 21, 2018

ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸೆ.22ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಉದ್ಘಾಟನೆ ನೆರವೇರಿಸುವರು. ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟ ರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ ಉಪಸ್ಥಿತಿ ವಹಿಸುವರು. ಸಂಸದ ಆರ್. ಧ್ರುವನಾರಾಯಣ…

1 76 77 78 79 80 141
Translate »