ಚಾಮರಾಜನಗರ

ರಾಮಾಪುರ ಬಳಿ ಗಾಂಜಾ ವಶ; ಮೂವರ ಬಂಧನ
ಚಾಮರಾಜನಗರ

ರಾಮಾಪುರ ಬಳಿ ಗಾಂಜಾ ವಶ; ಮೂವರ ಬಂಧನ

September 6, 2018

ಹನೂರು: ಜಿಲ್ಲಾ ಅಪರಾಧ ವಿಭಾಗದ ಪೊಲೀಸರು ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಕಡೆ ದಾಳಿ ಮಾಡಿ ಗಾಂಜಾ ವಶ ಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ. ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣಾ ಸರಹದ್ದಿನ ಸುಳ್ವಾಡಿ ಗ್ರಾಮದ ಆರ್ಚಕ ದೊಡ್ಡಯ್ಯತಮ್ಮಡಿ, ಮಾಧವರಾಜ್ ಹಾಗೂ ಶೆಟ್ಟಳ್ಳಿ ಗ್ರಾಮದ ನಾರಾಯಣ್ ಅವರನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಒಣಗಿಸಿ ಪ್ಯಾಕೇಟ್ ರೂಪದಲ್ಲಿ ಸಿದ್ಧಪಡಿಸಿ ಸುಳ್ವಾಡಿ ಗ್ರಾಮದ ಸುತ್ತಮುತ್ತ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ…

ಪ್ರತಿಭಾ ಕಾರಂಜಿ ಪ್ರತಿಭೆ ಹೊರ ಸೂಸಲು ಚೈತನ್ಯದ ಚಿಲುಮೆ
ಚಾಮರಾಜನಗರ

ಪ್ರತಿಭಾ ಕಾರಂಜಿ ಪ್ರತಿಭೆ ಹೊರ ಸೂಸಲು ಚೈತನ್ಯದ ಚಿಲುಮೆ

September 6, 2018

ಚಾಮರಾಜನಗರ:  ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ವಿದ್ಯಾರ್ಥಿ ಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ಹಾಕಲು ಚೈತನ್ಯದ ಚಿಲುವೆÀುಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಶಶಿಕಲಾ ಸೋಮಲಿಂಗಪ್ಪ ಹೇಳಿದರು. ತಾಲೂಕಿನ ಯಾನಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿ ನಡೆದ ಅರಕಲವಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರವವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ಮಕ್ಕಳಲ್ಲೂ ಒಂದೊಂದು ರೀತಿಯ ಪ್ರತಿಭೆ ಹುದುಗಿರುತ್ತದೆ, ಅದನ್ನು ಹೊರ ತರುವ ಪ್ರಯತ್ನ ಮಾಡಬೇಕು, ಪ್ರತಿಭಾ ಕಾರಂಜಿ ಕಾರ್ಯಕ್ರಮ ಮಕ್ಕಳಿಗೆ ಸೂಕ್ತ ವೇದಿಕೆಯಾಗಿದೆ, ಶಿಕ್ಷಕರು ಮಕ್ಕ ಳನ್ನು…

ಅಬಕಾರಿ ಇಲಾಖೆ ಕಾರ್ಯಾಚರಣೆ: ಗಾಂಜಾ ವಶ
ಚಾಮರಾಜನಗರ

ಅಬಕಾರಿ ಇಲಾಖೆ ಕಾರ್ಯಾಚರಣೆ: ಗಾಂಜಾ ವಶ

September 6, 2018

ಚಾಮರಾಜನಗರ:  ಅಬಕಾರಿ ಇಲಾಖೆಯ ಅಧಿಕಾರಿಗಳು ಕೊಳ್ಳೇಗಾಲ ತಾಲೂಕಿನ ಕರಳಕಟ್ಟೆ ಗ್ರಾಮದ ಜಮೀನಿನಲ್ಲಿ ಹಾಗೂ ಅಲ್ಲಿದ್ದ ಮನೆಯ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಬೆಳೆದಿದ್ದ ಹಾಗೂ ದಾಸ್ತಾನು ಮಾಡಲಾಗಿದ್ದ 3 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಭಾನುವಾರ ಕೊಳ್ಳೇಗಾಲ ತಾಲೂಕಿನ ಕರಳಕಟ್ಟೆ ಗ್ರಾಮದ ಗುಂಡಾಲ ಜಲಾಶಯ ರಸ್ತೆಯ ಪಕ್ಕದ ಜಡೇಗೌಡ ಎಂಬಾತ ನಿಗೆ ಸೇರಿದ ಜಮೀನು ಹಾಗೂ ಅಲ್ಲಿಯೇ ಇದ್ದ ಮನೆಯ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಬೆಳೆದಿದ್ದ 324 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದರು. ಅಲ್ಲದೆ…

ಚಾಮರಾಜನಗರ ನಗರಸಭೆ: ಅಧ್ಯಕ್ಷ ಸ್ಥಾನ-ಎಸ್‍ಸಿ, ಉಪಾಧ್ಯಕ್ಷ-ಸಾಮಾನ್ಯ: ಅಧಿಕಾರಕ್ಕಾಗಿ ಬಿಜೆಪಿ, ಕಾಂಗ್ರೆಸ್, ಎಸ್‍ಡಿಪಿಐ ಕಸರತ್ತು
ಚಾಮರಾಜನಗರ

ಚಾಮರಾಜನಗರ ನಗರಸಭೆ: ಅಧ್ಯಕ್ಷ ಸ್ಥಾನ-ಎಸ್‍ಸಿ, ಉಪಾಧ್ಯಕ್ಷ-ಸಾಮಾನ್ಯ: ಅಧಿಕಾರಕ್ಕಾಗಿ ಬಿಜೆಪಿ, ಕಾಂಗ್ರೆಸ್, ಎಸ್‍ಡಿಪಿಐ ಕಸರತ್ತು

September 5, 2018

ಚಾಮರಾಜನಗರ: ಚಾಮರಾಜ ನಗರ ನಗರಸಭೆಯ ಅಧ್ಯಕ್ಷ ಸ್ಥಾನ ಪರಿ ಶಿಷ್ಟ ಜಾತಿಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿದೆ. ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೆ ‘ಅತಂತ್ರ’ವಾಗಿರುವ ನಗರಸಭೆಯ ಅಧಿಕಾರವನ್ನು ಯಾವ ಪಕ್ಷ ತನ್ನದಾಗಿಸಿಕೊಳ್ಳುತ್ತದೆ. ಅಧ್ಯಕ್ಷ ಯಾರಾಗುತ್ತಾರೆ? ಉಪಾಧ್ಯಕ್ಷರ್ಯಾರು? ಎಂಬುದು ತೀವ್ರ ಕುತೂಹಲ ಕೆರಳಿಸಿದೆ. 31 ಸದಸ್ಯರ ಬಲವುಳ್ಳ ಇಲ್ಲಿನ ನಗರ ಸಭೆಯಲ್ಲಿ ಬಿಜೆಪಿ 15 ಸ್ಥಾನಗಳನ್ನು ಗೆಲ್ಲುವ ಮೂಲಕ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಕಾಂಗ್ರೆಸ್ 8, ಎಸ್‍ಡಿಪಿಐ 6, ಬಿಎಸ್‍ಪಿ 1, ಪಕ್ಷೇತರ…

ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷರಾಗಿ ಬಿಜೆಪಿಯ ಹೊರೆಯಾಲ ಮಹೇಶ್ ಆಯ್ಕೆ
ಚಾಮರಾಜನಗರ

ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷರಾಗಿ ಬಿಜೆಪಿಯ ಹೊರೆಯಾಲ ಮಹೇಶ್ ಆಯ್ಕೆ

September 5, 2018

ಗುಂಡ್ಲುಪೇಟೆ: ತಾಲೂಕಿನ ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಹೊರೆಯಾಲ ಮಹೇಶ್ ಚುನಾಯಿತರಾಗಿದ್ದಾರೆ. ಕಳೆದ ಬಾರಿ ಅಧ್ಯಕ್ಷರಾಗಿದ್ದ ಎಸ್.ಎಂ. ಮಲ್ಲಿಕಾರ್ಜುನ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸೋಮವಾರ ಚುನಾ ವಣೆ ನಡೆಯಿತು. ಆಡಳಿತ ಮಂಡಳಿಯಲ್ಲಿ ಬಿಜೆಪಿಯ 7, ಕಾಂಗ್ರೆಸ್ 5 ಮತ್ತು 1 ನಾಮ ನಿರ್ದೇಶಿತ ನಿರ್ದೇಶಕರಿದ್ದಾರೆ. ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಹೊರೆಯಾಲ ಮಹೇಶ್ ಮತ್ತು ಕಾಂಗ್ರೆಸ್‍ನಿಂದ ಪಿ.ಬಿ.ರಾಜಶೇಖರ್ ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ಹೊರೆ…

5 ಹಾಲಿ ಸದಸ್ಯರಿಗೆ ಗೆಲುವು, ಪತ್ನಿಗೆ ಗೆಲುವು, ಗೆದ್ದ-ಸೋತ ಪ್ರಮುಖರು
ಚಾಮರಾಜನಗರ

5 ಹಾಲಿ ಸದಸ್ಯರಿಗೆ ಗೆಲುವು, ಪತ್ನಿಗೆ ಗೆಲುವು, ಗೆದ್ದ-ಸೋತ ಪ್ರಮುಖರು

September 5, 2018

ಚಾಮರಾಜನಗರ:  ಚಾಮರಾಜನಗರ ನಗರಸಭೆಯ ಹಾಲಿ 11 ಮಂದಿ ಸದಸ್ಯರು ಮರು ಆಯ್ಕೆ ಬಯಸಿ ಸ್ಪರ್ಧಿಸಿದ್ದರು. ಇವರ ಪೈಕಿ ಐವರು ಜಯ ಗಳಿಸಿ ದ್ದಾರೆ. ಉಳಿದ 6 ಮಂದಿ ಸೋಲಿನ ರುಚಿ ಕಂಡಿದ್ದಾರೆ. ಆರ್.ಎಂ.ರಾಜಪ್ಪ, ಎಂ.ಕಲಾವತಿ. ಆರ್.ಪಿ.ನಂಜುಂಡಸ್ವಾಮಿ, ಎಂ.ಮಹೇಶ್, ಮಹದೇವಯ್ಯ, ಗೆಲುವು ಸಾಧಿಸಿದ ಹಾಲಿ ಸದಸ್ಯರು, ಶೋಭಾ ಪುಟ್ಟಸ್ವಾಮಿ, ಎಸ್.ನಂಜುಂಡಸ್ವಾಮಿ, ಪಿ.ಚಿನ್ನಸ್ವಾಮಿ, ಶ್ರೀಕಾಂತ್, ಚಂಗುಮಣಿ, ನಾರಾಯಣಸ್ವಾಮಿ ಸೋಲುಂಡ ಹಾಲಿ ಸದಸ್ಯರು. ಒಬ್ಬರಿಗೆ ಮಾತ್ರ ಗೆಲುವು: ಆಯ್ಕೆ ಬಯಸಿ ಮೂವರು ನಗರ ಸಭೆಯ ಮಾಜಿ ಅಧ್ಯಕ್ಷರಾದ ಎಸ್.ನಂಜುಂಡಸ್ವಾಮಿ, ಶೋಭಾ ಪುಟ್ಟಸ್ವಾಮಿ,…

ಇಂದು ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ
ಚಾಮರಾಜನಗರ

ಇಂದು ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ

September 5, 2018

ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭವು ಸೆ.5ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಚಾಮರಾಜನಗರ ತಾಲೂಕು: ಎಂ. ಡಿ. ಮಹದೇವಯ್ಯ, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಯಡಪುರ, ಗುಂಡ್ಲುಪೇಟೆ ತಾಲೂಕು: ಜಯರಾಮು, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮುಂಟಿಪುರ,…

ರಾಮಸಮುದ್ರದಲ್ಲಿ ಅರಳಿದ ‘ಕಮಲ’
ಚಾಮರಾಜನಗರ

ರಾಮಸಮುದ್ರದಲ್ಲಿ ಅರಳಿದ ‘ಕಮಲ’

September 5, 2018

ಚಾಮರಾಜನಗರ: ಸ್ಥಳೀಯ ನಗರಸಭಾ ವ್ಯಾಪ್ತಿಗೆ ಚಾಮರಾಜನಗರ, ರಾಮಸಮುದ್ರ, ಸೋಮವಾರ ಪೇಟೆ, ಕರಿನಂಜನಪುರ, ಮೂಡ್ಲುಪುರ ಬಡಾವಣೆಗಳು ಸೇರಿವೆ. ಈ ಪೈಕಿ 5 ವಾರ್ಡ್ ಹೊಂದಿರುವ ರಾಮಸಮುದ್ರ ದಲ್ಲಿ ಬಿಜೆಪಿಯ ‘ಕಮಲ’ 3 ವಾರ್ಡ್‍ನಲ್ಲಿ ಅರಳಿದೆ. ರಾಮಸಮುದ್ರ ಬಡಾವಣೆ 27ರಿಂದ 31ನೇ ವಾರ್ಡ್ (5 ವಾರ್ಡ್‍ಗಳು) ಹೊಂದಿದೆ. ಇದರಲ್ಲಿ ಬಿಜೆಪಿ 28, 29, 30ನೇ ವಾರ್ಡ್‍ನಲ್ಲಿ ಗೆಲುವು ಸಾಧಿಸಿದೆ. ಉಳಿದ 27ನೇ ವಾರ್ಡ್ ನಲ್ಲಿ ಬಿಎಸ್‍ಪಿ, 31ನೇ ವಾರ್ಡ್‍ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಕಳೆದ ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಎಸ್‍ಪಿ,…

ಇಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ

ಇಂದು ವಿದ್ಯುತ್ ವ್ಯತ್ಯಯ

September 5, 2018

ಚಾಮರಾಜನಗರ:  ಚಾಮುಂಡೇ ಶ್ವರಿ ವಿದ್ಯುತ್ ಸರಬರಾಜು ನಿಗಮವು ಸೆ.5ರಂದು ಸಂತೇಮರಹಳ್ಳಿ ಉಪ ವಿಭಾ ಗದ ಕಾಗಲವಾಡಿ ಶಾಖೆಯ ಹಿರಿಕೆರೆ ಫೀಡರ್ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮ ಗಳಲ್ಲಿರುವ ಪರಿವರ್ತಕಗಳಿಗೆ ಮೀಟರ್ ಅಳವಡಿಸುತ್ತಿರುವುದರಿಂದ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಸಂಬಂಧ ಪಟ್ಟ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲವೆಂದು ಸೆಸ್ಕ್ ಸಂತೇಮರಹಳ್ಳಿ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.

ದೇಶ ಸೇವೆಯಷ್ಟೇ ಶಿಕ್ಷಕ ವೃತ್ತಿ ಪ್ರಾಮುಖ್ಯ
ಚಾಮರಾಜನಗರ

ದೇಶ ಸೇವೆಯಷ್ಟೇ ಶಿಕ್ಷಕ ವೃತ್ತಿ ಪ್ರಾಮುಖ್ಯ

September 5, 2018

ಗುಂಡ್ಲುಪೇಟೆ: ಭವಿಷ್ಯದ ಮುಂದಿನ ಪೀಳಿಗೆಯನ್ನು ಉತ್ತಮ ವಾಗಿ ರೂಪಿಸುವ ಹೊಣೆ ಹೊತ್ತ ಶಿಕ್ಷಕ ವೃತ್ತಿ ಪವಿತ್ರವಾಗಿದ್ದು, ದೇಶ ಸೇವೆಯಷ್ಟೇ ಪ್ರಾಮುಖ್ಯತೆಯನ್ನು ಶಿಕ್ಷಕ ವೃತ್ತಿ ಪಡೆದಿದೆ ಎಂದು ಶಾಸಕ ಸಿ.ಎಸ್.ನಿರಂಜನ ಕುಮಾರ್ ಹೇಳಿದರು. ಪಟ್ಟಣದ ಗುರುಭವನದಲ್ಲಿ ಸಾರ್ವ ಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋ ಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾಮಾನ್ಯ ಶಿಕ್ಷಕರಾಗಿದ್ದ ಡಾ.ರಾಧಾಕೃಷ್ಣನ್ ದೇಶದ ಅತ್ಯುನ್ನತ ರಾಷ್ಟ್ರಪತಿ ಸ್ಥಾನಕ್ಕೇ ರಲು ನಮ್ಮ ದೇಶದ ಸಂಸ್ಕೃತಿಯೇ ಕಾರಣ ವಾಗಿತ್ತು. ಭವಿಷ್ಯದ ಮುಂದಿನ ಪೀಳಿಗೆ…

1 84 85 86 87 88 141
Translate »