ದೇಶ ಸೇವೆಯಷ್ಟೇ ಶಿಕ್ಷಕ ವೃತ್ತಿ ಪ್ರಾಮುಖ್ಯ
ಚಾಮರಾಜನಗರ

ದೇಶ ಸೇವೆಯಷ್ಟೇ ಶಿಕ್ಷಕ ವೃತ್ತಿ ಪ್ರಾಮುಖ್ಯ

September 5, 2018

ಗುಂಡ್ಲುಪೇಟೆ: ಭವಿಷ್ಯದ ಮುಂದಿನ ಪೀಳಿಗೆಯನ್ನು ಉತ್ತಮ ವಾಗಿ ರೂಪಿಸುವ ಹೊಣೆ ಹೊತ್ತ ಶಿಕ್ಷಕ ವೃತ್ತಿ ಪವಿತ್ರವಾಗಿದ್ದು, ದೇಶ ಸೇವೆಯಷ್ಟೇ ಪ್ರಾಮುಖ್ಯತೆಯನ್ನು ಶಿಕ್ಷಕ ವೃತ್ತಿ ಪಡೆದಿದೆ ಎಂದು ಶಾಸಕ ಸಿ.ಎಸ್.ನಿರಂಜನ ಕುಮಾರ್ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಸಾರ್ವ ಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋ ಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾಮಾನ್ಯ ಶಿಕ್ಷಕರಾಗಿದ್ದ ಡಾ.ರಾಧಾಕೃಷ್ಣನ್ ದೇಶದ ಅತ್ಯುನ್ನತ ರಾಷ್ಟ್ರಪತಿ ಸ್ಥಾನಕ್ಕೇ ರಲು ನಮ್ಮ ದೇಶದ ಸಂಸ್ಕೃತಿಯೇ ಕಾರಣ ವಾಗಿತ್ತು. ಭವಿಷ್ಯದ ಮುಂದಿನ ಪೀಳಿಗೆ ಯನ್ನು ರೂಪಿಸುವಲ್ಲಿ ಹಾಗೂ ದೇಶದ ಅಭಿ ವೃದ್ಧಿಯಲ್ಲಿ ಶಿಕ್ಷಕರ ಹೊಣೆ ದೊಡ್ಡದಾಗಿದೆ.

ಹೆಚ್ಚಿನ ಜ್ಞಾನಾರ್ಜನೆ ಮಾಡುವ ಮೂಲಕ ಶಿಕ್ಷಕರು ವಿದ್ಯಾರ್ಥಿಗಳಿಗೆ ದಾರಿದೀಪವಾಗ ಬೇಕು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಅರ್ಹ ಶಿಕ್ಷಕರಿದ್ದರೂ ಸಹ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿದ್ದು ಇದು ತಪ್ಪಬೇಕು ಎಂದು ಪೆÇೀಷಕರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಪಂ ಅಧ್ಯಕ್ಷ ಜಗದೀಶಮೂರ್ತಿ ಮಾತನಾಡಿ, ಬಾಲ್ಯದಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಮಾತು ಗಳನ್ನೇ ಕೇಳುವುದರಿಂದ ಶಿಕ್ಷಕರು ತಮ್ಮ ಉತ್ತಮ ನಡವಳಿಕೆಗಳ ಮೂಲಕ ಮಾದರಿ ಯಾಗಬೇಕು. ಎಲ್ಲಾ ಮಹನೀಯರ ಜಯಂತಿಗಳು ಅವರ ಹೆಸರಿನಲ್ಲಿಯೇ ಆಚ ರಿಸಿದರೂ ಡಾ.ರಾಧಾಕೃಷ್ಣನ್ ಮಾತ್ರ ಶಿಕ್ಷಕರ ದಿನಾಚರಣೆ ಮಾಡುವ ಮೂಲಕ ತಮ್ಮ ವೃತ್ತಿಗೆ ಗೌರವ ನೀಡಿದ್ದಾರೆ. ಆದ್ದರಿಂದ ಬೇರೆ ಹುದ್ದೆಗಳಿಗೆ ಹೋಲಿಕೆ ಮಾಡಿಕೊಂಡು ಕೀಳರಿಮೆಯಿಂದ ಕುಗ್ಗದೆ ತಮ್ಮ ವೃತ್ತಿಗೆ ಇನ್ನೂ ಹೆಚ್ಚಿನ ಗೌರವ ದೊರಕುವಂತೆ ಮಾಡಬೇಕು ಎಂದರು.

ಪುರಸಭೆ ಅಧ್ಯಕ್ಷ ಪಿ.ಗಿರೀಶ್ ಮಾತನಾಡಿ, ಮಕ್ಕಳು ಮನೆಗಳಿಗಿಂತ ಹೆಚ್ಚಿನ ಸಮಯ ಶಾಲೆಯಲ್ಲಿಯೇ ಇರುವುದರಿಂದ ಇವರ ಮೇಲೆ ಶಿಕ್ಷಕರ ಪ್ರಭಾವ ಹೆಚ್ಚಾಗಿರುತ್ತದೆ. ಎಲ್ಲರನ್ನೂ ತಮ್ಮ ಮಕ್ಕಳು ಎಂಬಂತೆ ಭಾವಿಸಿ ವಿದ್ಯೆಯೊಡನೆ ವಿನಯವನ್ನೂ ಕಲಿಸಿದರೆ ಮಾತ್ರ ಉತ್ತಮ ಪ್ರಜೆಯಾಗಲು ಸಾಧ್ಯವಾಗುತ್ತದೆ. ಮಕ್ಕಳ ಕಲಿಕೆಗೆ ಶಿಕ್ಷಕರು ನೀಡುವ ಸಣ್ಣಪುಟ್ಟ ಶಿಕ್ಷೆಗಳಿಗೂ ಪಾಲ ಕರು ಅಡ್ಡಿಪಡಿಸಿದರೆ ಶಿಕ್ಷಕರು ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸ ಬೇಕಾಗಿದೆ. ಇದನ್ನು ಪೆÇೀಷಕರು ಅರಿತು ಶಿಕ್ಷಕರಿಗೂ ಸ್ವಾತಂತ್ರ್ಯ ನೀಡಿ ತಮ್ಮ ಮಕ್ಕಳ ಮೇಲೆ ಹಿಡಿತವನ್ನು ಪಡೆಯಲಿ. ಆಗ ಉತ್ತಮವಾಗಿ ಪ್ರಾಥಮಿಕ ಹಂತವನ್ನು ಪೂರ್ಣಗೊಳಿಸುತ್ತಾರೆ ಎಂದರು.

ಮುಖ್ಯ ಭಾಷಣ ಮಾಡಿದ ಮೈಸೂರಿನ ಜೆಎಸ್‍ಎಸ್ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ನಂದೀಶ್ ಹಂಚೆ ಮಾತ ನಾಡಿ, ಯಾವುದೇ ಕೆಲಸವನ್ನೂ ಶ್ರದ್ಧೆ ಹಾಗೂ ನಿಷ್ಠೆಯಿಂದ ಮಾಡಿದರೆ ಉನ್ನತ ಹುದ್ದೆಗೇರಬಹುದು ಎಂಬುದಕ್ಕೆ ಡಾ.ರಾಧಾ ಕೃಷ್ಣನ್ ಉತ್ತಮ ನಿದರ್ಶನ, ಶಿಕ್ಷಣಕ್ಕೆ ತರ್ಕ ಶಾಸ್ತ್ರ ಅಡಿಪಾಯ ಹಾಕಿದರೆ ಮಾತ್ರ ಯಶಸ್ಸು ಸಾಧ್ಯವೆಂದು ನಿರೂಪಿಸಿದರು. ವಿದ್ಯಾರ್ಥಿ ದೆಸೆಯಿಂದಲೇ ಸಮಾಜ ಸೇವೆಗೆ ತೊಡಗಿಸಬೇಕು ಎಂಬ ಉದ್ದೇಶದಿಂದ ಕಾಲೇಜು ಮಟ್ಟದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಪ್ರಾರಂಭಿಸಿದರು ಎಂದರು.

ಮೆರವಣಿಗೆ: ಇದಕ್ಕೂ ಮೊದಲು ಪಟ್ಟ ಣದ ಪ್ರವಾಸಿ ಮಂದಿರದಲ್ಲಿ ಡಾ.ರಾಧಾ ಕೃಷ್ಣನ್ ಅವರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸಂಗೀತ ಶಿಕ್ಷಕ ಸಿದ್ದನಗೌಡ ಪಾಟೀಲ್, ಸೋಮು ಹಾಗೂ ತಂಡದವರಿಂದ ನಾಡಗೀತೆ ಹಾಗೂ ಸುಗಮ ಸಂಗೀತ ಗಾಯನ ಆಯೋಜಿಸ ಲಾಗಿತ್ತು. ವಿವಿಧ ಕ್ರೀಡೆ, ಕಲೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ಶಿಕ್ಷಕರಿಗೆ ಬಹುಮಾನ ವಿತರಣೆ ಮಾಡಲಾಯಿತು. ಚಿತ್ರಕಲಾ ಶಿಕ್ಷಕರು, ಸೇವೆಯಿಂದ ನಿವೃತ್ತ ರಾದ ಹಾಗೂ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಗಳಿಸಿದ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾ ಯಿತಿ ಸದಸ್ಯರಾದ ಕೆ.ಎಸ್.ಮಹೇಶ್, ಬಿ.ಕೆ.ಬೊಮ್ಮಯ್ಯ, ಪಿ.ಚನ್ನಪ್ಪ, ರತ್ನಮ್ಮ ಶ್ರೀಕಂಠಪ್ಪ, ಅಶ್ವಿನಿ ವಿಶ್ವನಾಥ್, ತಾಲೂಕು ಪಂಚಾಯಿತಿ ಸದಸ್ಯರಾದ ರೇವಣ್ಣ, ಪ್ರಭಾಕರ್, ಬಿಇಒ ಮೋಹನ್, ಬಿಆರ್‍ಸಿ ನಂದೀಶ್, ಬಿಜೆಪಿ ಅಧ್ಯಕ್ಷ ಎನ್. ಮಲ್ಲೇಶ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್. ನಂಜಪ್ಪ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹೊರೆಯಾಲ ಮಹೇಶ್, ಮುಖಂಡ ರಾದ ಮಹದೇವ ಪ್ರಸಾದ್, ಮಂಜು ನಾಥ್, ಮಲ್ಲಿಕಾರ್ಜುನ್, ಪ್ರಣಯ್, ನಂದೀಶ್ ಸೇರಿದಂತೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕ, ಶಿಕ್ಷಕಿಯರು ಹಾಜರಿದ್ದರು.

Translate »