ಸೋತು-ಗೆದ್ದ ಕಾಂಗ್ರೆಸ್ ಅಭ್ಯರ್ಥಿ!
ಚಾಮರಾಜನಗರ

ಸೋತು-ಗೆದ್ದ ಕಾಂಗ್ರೆಸ್ ಅಭ್ಯರ್ಥಿ!

September 5, 2018

ಚಾಮರಾಜನಗರ: 15ನೇ ವಾರ್ಡ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಪಿ.ನಂಜುಂಡಸ್ವಾಮಿ ಸೋತು-ಗೆದ್ದ ಪ್ರಸಂಗ ನಡೆಯಿತು.
ಮತ ಎಣಿಕೆ ನಡೆದು ಪಕ್ಷೇತರ ಅಭ್ಯರ್ಥಿ ಕೆ.ಜಗದೀಶ್ ಹೆಚ್ಚಿನ ಮತ ಗಳಿಸಿದ್ದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಎಂ.ಹೇಮಂತ ಕುಮಾರ್ ಮರು ಎಣಿಕೆ ಮಾಡುವಂತೆ ಕೋರಿದರು. ನಿಯ ಮಾವಳಿಯಂತೆ ಮರು ಎಣಿಕೆ ಮಾಡಿದಾಗ ಕಾಂಗ್ರೆಸ್ ಅಭ್ಯರ್ಥಿ ಆರ್.ಪಿ.ನಂಜುಂಡಸ್ವಾಮಿ 334 ಮತಗಳನ್ನು ಪಡೆದು ಪ್ರಥಮ ಸ್ಥಾನದಲ್ಲಿದ್ದರು.

ನಂತರ ಪರಿಶೀಲಿಸಿದಾಗ ಮತ ಎಣಿಕೆ ನಡೆಯುವಾಗ ಅಭ್ಯರ್ಥಿ ಗಳ ಹೆಸರಿನ ಮುಂದೆ ಆ ಅಭ್ಯರ್ಥಿ ಪಡೆದ ಮತಗಳನ್ನು ದಾಖ ಲಿಸಿಕೊಳ್ಳಲು ಮತ ಎಣಿಕಾ ಅಧಿಕಾರಿಗೆ ಪ್ರಿಂಟ್ ಹಾಕಿರುವ (ಕಾಗದ) ನೀಡಲಾಗುತ್ತದೆ. ಈ ಶೀಟ್‍ನಲ್ಲಿ ಅಭ್ಯರ್ಥಿಗಳ ಹೆಸರಿನ ಕ್ರಮ ಸಂಖ್ಯೆಯಲ್ಲಿ ಅದಲು- ಬದಲು ಆಗಿರುವುದು ಬೆಳಕಿಗೆ ಬಂತು. ನಂತರ ಆರ್.ಪಿ. ನಂಜುಂಡಸ್ವಾಮಿ ವಿಜಯ ಶಾಲಿ ಎಂದು ಘೋಷಿಸಲಾಯಿತು.

ಈ ಗೊಂದಲದಿಂದ ಮೊದಲು ಸೋತ ಅಭ್ಯರ್ಥಿ ನಂತರ ಗೆದ್ದಂತಾಯಿತು. ಒಂದು ವೇಳೆ ಬಿಜೆಪಿ ಅಭ್ಯರ್ಥಿ ಹೇಮಂತ Àುಮಾರ್ ಮರು ಎಣಿಕೆಗೆ ಮನವಿ ಮಾಡದಿದ್ದರೆ ಪಕ್ಷೇತರ ಅಭ್ಯರ್ಥಿ ಕೆ.ಜಗದೀಶ್ ಗೆದ್ದಾಯಿತು ಎಂದು ಘೋಷಿಸಲಾಗು ತ್ತಿತ್ತು. ಆರ್.ಪಿ.ನಂಜುಂಡಸ್ವಾಮಿ ಗೆಲುವಿಗೆ ಬಿಜೆಪಿ ಅಭ್ಯರ್ಥಿ ಹೇಮಂತ್‍ಕುಮಾರ್ ಪರೋಕ್ಷವಾಗಿ ಕಾರಣವಾದರು.

Translate »