7ರಲ್ಲಿ 6 ಗೆದ್ದ ಎಸ್‍ಡಿಪಿಐ
ಚಾಮರಾಜನಗರ

7ರಲ್ಲಿ 6 ಗೆದ್ದ ಎಸ್‍ಡಿಪಿಐ

September 5, 2018

ಚಾಮರಾಜನಗರ:  ಸ್ಥಳೀಯ ನಗರಸಭಾ ಚುನಾವಣೆಯಲ್ಲಿ 31 ವಾರ್ಡ್‍ಗಳ ಪೈಕಿ ಕೇವಲ 7 ವಾರ್ಡ್‍ನಲ್ಲಿ ಮಾತ್ರ ಎಸ್‍ಡಿಪಿಐ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು. ಈ ಪೈಕಿ 6 ವಾರ್ಡ್‍ಗಳಲ್ಲಿ ಗೆಲುವು ಸಾಧಿಸಿ ಗಮನ ಸೆಳೆದಿದೆ. ಕಳೆದ ಚುನಾವಣೆಯಲ್ಲಿ 4 ವಾರ್ಡ್‍ಗಳಲ್ಲಿ ಗೆಲುವು ಸಾಧಿಸಿದ್ದ ಎಸ್‍ಡಿಪಿಐ ಈ ಬಾರಿ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಪಕ್ಷದ ಸಂಘಟನೆ ಹೇಗಿದೆ ಎಂಬುದನ್ನು ಸಾಬೀತು ಪಡಿಸಿದೆ.

ವಾರ್ಡ್ ನಂಬರ್ 3, 4, 5, 6, 9 ಮತ್ತು 12ರಲ್ಲಿ ಎಸ್‍ಡಿ ಪಿಐ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇವರಲ್ಲಿ ಎಂ. ಮಹೇಶ್ ಪುನರಾಯ್ಕೆ ಆಗಿದ್ದಾರೆ. ಪಕ್ಷದ ಜಿಲ್ಲಾ ಅಧ್ಯಕ್ಷ ಅಬ್ರಾರ್ ಅಹಮದ್ ಸ್ಪರ್ಧಿಸಿದ ಪ್ರಥಮ ಚುನಾವಣೆ ಯಲ್ಲಿಯೇ ಗೆಲುವು ಸಾಧಿಸಿದ್ದಾರೆ.

Translate »