ಪ್ರತಿಭಾ ಕಾರಂಜಿ ಪ್ರತಿಭೆ ಹೊರ ಸೂಸಲು ಚೈತನ್ಯದ ಚಿಲುಮೆ
ಚಾಮರಾಜನಗರ

ಪ್ರತಿಭಾ ಕಾರಂಜಿ ಪ್ರತಿಭೆ ಹೊರ ಸೂಸಲು ಚೈತನ್ಯದ ಚಿಲುಮೆ

September 6, 2018

ಚಾಮರಾಜನಗರ:  ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ವಿದ್ಯಾರ್ಥಿ ಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ಹಾಕಲು ಚೈತನ್ಯದ ಚಿಲುವೆÀುಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಶಶಿಕಲಾ ಸೋಮಲಿಂಗಪ್ಪ ಹೇಳಿದರು.
ತಾಲೂಕಿನ ಯಾನಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿ ನಡೆದ ಅರಕಲವಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರವವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಮಕ್ಕಳಲ್ಲೂ ಒಂದೊಂದು ರೀತಿಯ ಪ್ರತಿಭೆ ಹುದುಗಿರುತ್ತದೆ, ಅದನ್ನು ಹೊರ ತರುವ ಪ್ರಯತ್ನ ಮಾಡಬೇಕು, ಪ್ರತಿಭಾ ಕಾರಂಜಿ ಕಾರ್ಯಕ್ರಮ ಮಕ್ಕಳಿಗೆ ಸೂಕ್ತ ವೇದಿಕೆಯಾಗಿದೆ, ಶಿಕ್ಷಕರು ಮಕ್ಕ ಳನ್ನು ಪ್ರೇರೇಪಿಸಿ ಇಂತಹ ಕಾರ್ಯ ಕ್ರಮಗಲ್ಲಿ ಹೆಚ್ಚು ಭಾಗವಹಿಸುವಂತೆ ಮಾಡಬೇಕು ಎಂದರು.

ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೂ ಪೆÇೀಷಕರು ಸಹಕಾರ ನೀಡಬೇಕು, ಜೊತೆಗೆ ಮಕ್ಕಳನ್ನು ಉನ್ನತ ಶಿಕ್ಷಣ ಪಡೆ ಯುವತ್ತ ಪೆÇ್ರೀತ್ಸಾಹಿಸಬೇಕು. ಸರ್ಕಾರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕೋಟ್ಯಾಂತರ ರೂ.ಗಳನ್ನು ವೆಚ್ಚ ಮಾಡುತ್ತಿದ್ದು, ಇದನ್ನು ಪ್ರತಿಯೊಬ್ಬರು ಸದುಪಯೋಗಪಡಿಸಿ ಕೊಳ್ಳಬೇಕು ಎಂದರು.

ಅಧ್ಯಕ್ಷತೆಯನ್ನು ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ನಾಗನಾಯಕ ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸ ಲಾಯಿತು. ಕ್ಲಸ್ಟರ್ ಮಟ್ಟದ 13 ಶಾಲೆಗಳ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ತಾಪಂ ಸದಸ್ಯೆ ರತ್ಮಮ್ಮ ಶಾಲೆಗಳಿಗೆ ನೆನಪಿನ ಕಾಣಿಕೆ ನೀಡಿದರು, ಗ್ರಾಪಂ ಅಧ್ಯಕ್ಷ ಮಹ ದೇವಯ್ಯ ಹಾಗೂ ಸದಸ್ಯರು ಭಾಗವಹಿಸಿದ್ದರು.

ಮುಖ್ಯ ಶಿಕ್ಷಕ ಬಸವಾರಾಧ್ಯ ಸ್ವಾಗತಿ ಸಿದರೆ, ಸಿಆರ್‍ಪಿ ನಾಗೇಂದ್ರ ಪ್ರಾಸ್ತಾವಿಸಿ ದರು, ಶಿಕ್ಷಕರುಗಳಾದ ಕೆ.ಎಸ್.ಮಾದಪ್ಪ, ಮಹದೇವನಾಯಕ, ಸಿ.ಎಸ್.ಮಹದೇವ ಸ್ವಾಮಿ, ಸಿ.ಶಿವಸ್ವಾಮಿ, ಶಿವಪ್ರಸಾದ್, ಕೆ.ಬಿ. ಮಲ್ಲಿಕಾರ್ಜುನಸ್ವಾಮಿ ಇತರರಿದ್ದರು.

Translate »