ಅಬಕಾರಿ ಇಲಾಖೆ ಕಾರ್ಯಾಚರಣೆ: ಗಾಂಜಾ ವಶ
ಚಾಮರಾಜನಗರ

ಅಬಕಾರಿ ಇಲಾಖೆ ಕಾರ್ಯಾಚರಣೆ: ಗಾಂಜಾ ವಶ

September 6, 2018

ಚಾಮರಾಜನಗರ:  ಅಬಕಾರಿ ಇಲಾಖೆಯ ಅಧಿಕಾರಿಗಳು ಕೊಳ್ಳೇಗಾಲ ತಾಲೂಕಿನ ಕರಳಕಟ್ಟೆ ಗ್ರಾಮದ ಜಮೀನಿನಲ್ಲಿ ಹಾಗೂ ಅಲ್ಲಿದ್ದ ಮನೆಯ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಬೆಳೆದಿದ್ದ ಹಾಗೂ ದಾಸ್ತಾನು ಮಾಡಲಾಗಿದ್ದ 3 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಭಾನುವಾರ ಕೊಳ್ಳೇಗಾಲ ತಾಲೂಕಿನ ಕರಳಕಟ್ಟೆ ಗ್ರಾಮದ ಗುಂಡಾಲ ಜಲಾಶಯ ರಸ್ತೆಯ ಪಕ್ಕದ ಜಡೇಗೌಡ ಎಂಬಾತ ನಿಗೆ ಸೇರಿದ ಜಮೀನು ಹಾಗೂ ಅಲ್ಲಿಯೇ ಇದ್ದ ಮನೆಯ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಬೆಳೆದಿದ್ದ 324 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದರು. ಅಲ್ಲದೆ ಮಾರಾಟಕ್ಕೆ ಸಿದ್ದಪಡಿಸಿದ್ದ 1.6ಕೆ.ಜಿ ಒಣಗಿದ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಡೇಗೌಡನನ್ನು ಬಂಧಿಸಿದ್ದು, ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎನ್‍ಡಿಪಿಎಸ್ ಕಾಯ್ದೆ ಯಡಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆದಿದೆ.

ಅಬಕಾರಿ ಉಪ ಅಧೀಕ್ಷಕ ಗಂಗಾಂಧರ ಹೆಚ್.ಮುದೆಣ್ಣ ವರ್, ನಿರೀಕ್ಷಕ ಎ.ಎ.ಮುಜಾವರ್, ಕೆ.ವಿ.ಲೋಹಿತ್, ಎಂ.ಬಿ.ಉಮಾಶಂಕರ್, ಅರಣ್ಯಾಧಿಕಾರಿಗಳಾದ ಮಹೇಶ್, ನವೀನ್, ಅಬಕಾರಿ ಸಿಬ್ಬಂದಿ ರವಿಕುಮಾರ್, ಕೃಷ್ಣಮೂರ್ತಿ, ರಮೇಶ, ಪ್ರದೀಪ್, ಜಯಪ್ರಕಾಶ್, ಸುಂದ್ರಪ್ಪ, ಸಿದ್ದಯ್ಯ, ವೀರತಪ್ಪ, ಮಂಜುನಾಥ, ಸಂತೋಷ್‍ಕುಮಾರ್, ಮಹೇಶ ಆನಂದ, ಹೇಮಂತ್, ಮೋಹನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Translate »