ಚಾಮರಾಜನಗರ

ಲಾರಿ ಟೈರ್ ಸಿಡಿದು ಮಹಿಳೆ ಸಾವು
ಚಾಮರಾಜನಗರ

ಲಾರಿ ಟೈರ್ ಸಿಡಿದು ಮಹಿಳೆ ಸಾವು

August 26, 2018

ಗುಂಡ್ಲುಪೇಟೆ: ವೇಗವಾಗಿ ಚಲಿಸುತ್ತಿದ್ದ ಲಾರಿಯ ಹಿಂಬದಿಯ ಟೈರ್ ಸಿಡಿದ ಪರಿಣಾಮ ಲಾರಿ ಸಮೀಪ ಬೈಕಿನಲ್ಲಿ ಹಿಂಬದಿ ಕುಳಿತು ಪ್ರಯಾಣ ಮಾಡುತ್ತಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಪಟ್ಟಣದ ಹೊರವಲಯದಲ್ಲಿ ಶನಿವಾರ ನಡೆದಿದೆ. ಪಟ್ಟಣದ ನಿವಾಸಿ ಮಂಜುಳಾ(35) ಸಾವನ್ನಪ್ಪಿದವರು. ಘಟನೆಯ ವಿವರ: ಪಟ್ಟಣದ ನಿವಾಸಿಗಳಾದ ರೇಷ್ಮಾ ಮತ್ತು ಮಂಜುಳಾ ಅವರು ಬೈಕ್‍ನಲ್ಲಿ ಪಟ್ಟಣಕ್ಕೆ ಬರುತ್ತಿದ್ದ ವೇಳೆ, ಅವರ ಮುಂದೆ ಹೋಗುತ್ತಿದ್ದ ಸರಕು ಸಾಗಣೆ ಲಾರಿಯ ಟೈರ್ ಸಿಡಿದಿದೆ. ಇದರ ಪರಿಣಾಮ ಟೈರ್‍ನ ಚೂರು ಬೈಕ್‍ನ ಹಿಂಬದಿಯಲ್ಲಿ ಕುಳಿತಿದ್ದ ಮಂಜುಳ ಅವರಿಗೆ…

ಮರಳಿನ ದಿಬ್ಬ ಕುಸಿದು ಇಬ್ಬರ ಸಾವು ಸಂತೇಮರಹಳ್ಳಿ ಬಳಿ ದುರಂತ
ಚಾಮರಾಜನಗರ

ಮರಳಿನ ದಿಬ್ಬ ಕುಸಿದು ಇಬ್ಬರ ಸಾವು ಸಂತೇಮರಹಳ್ಳಿ ಬಳಿ ದುರಂತ

August 25, 2018

ಚಾಮರಾಜನಗರ:  ಜಮೀನಿನಲ್ಲಿ ಮರಳು ತೆಗೆಯುತ್ತಿದ್ದ ವೇಳೆ ದಿಬ್ಬ ಕುಸಿದು ಇಬ್ಬರು ಮೃತಪಟ್ಟಿರುವ ದುರಂತ ತಾಲೂಕಿನ ಸಂತೇ ಮರಹಳ್ಳಿ ಹೋಬಳಿಯ ಕೆಂಪನಪುರ ಗ್ರಾಮ ದಲ್ಲಿ ಶುಕ್ರವಾರ ಸಂಭವಿಸಿದೆ. ಗ್ರಾಮದ ನಾಗರಾಜು (33) ಹಾಗೂ ಸಿದ್ದೇಶ್(22) ಮೃತಪಟ್ಟವರು. ಘಟನೆಯ ವಿವರ: ಕೆಂಪನಪುರ ಗ್ರಾಮದಿಂದ ಸುಮಾರು ಒಂದು ಕಿ.ಮೀ. ದೂರವಿರುವ ರಮೇಶ್ ಎಂಬುವವರ ತೋಟದಲ್ಲಿ ಮರಳು ತೆಗೆಯಲಾ ಗುತ್ತಿತ್ತು. ಕಾರ್ಮಿಕರಾದ ನಾಗರಾಜು ಮತ್ತು ಸಿದ್ದೇಶ್ ಮರಳು ತೆಗೆಯಲು ತೋಟಕ್ಕೆ ತೆರಳಿದರು. ಹಳ್ಳಕ್ಕೆ ಇಳಿದು ಮರಳು ತೆಗೆಯುತ್ತಿದ್ದ ವೇಳೆ ಮರಳಿನ ದಿಬ್ಬ ಕುಸಿದಿದೆ….

ಚಾಮರಾಜನಗರ ನಗರಸಭೆ ಚುನಾವಣೆ ವಿಶೇಷತೆಗಳು ಪತಿ ಬದಲು ಪತ್ನಿ, ತಾಯಿ ಬದಲು ಮಗ ಸ್ಪರ್ಧೆ, ಕಾಂಗ್ರೆಸ್-ಬಿಜೆಪಿಗೆ ಬಂಡಾಯ, ಅನ್ಯ ಪಕ್ಷದಿಂದ ಸ್ಪರ್ಧೆ
ಚಾಮರಾಜನಗರ

ಚಾಮರಾಜನಗರ ನಗರಸಭೆ ಚುನಾವಣೆ ವಿಶೇಷತೆಗಳು ಪತಿ ಬದಲು ಪತ್ನಿ, ತಾಯಿ ಬದಲು ಮಗ ಸ್ಪರ್ಧೆ, ಕಾಂಗ್ರೆಸ್-ಬಿಜೆಪಿಗೆ ಬಂಡಾಯ, ಅನ್ಯ ಪಕ್ಷದಿಂದ ಸ್ಪರ್ಧೆ

August 25, 2018

ಚಾಮರಾಜನಗರ:  ಜಿಲ್ಲಾ ಕೇಂದ್ರವಾದ ಚಾಮರಾಜನಗರದ ನಗರ ಸಭೆಯ ಈ ಚುನಾವಣೆ ಹಲವು ವಿಶೇ ಷತೆಗಳಿಗೆ ನಾಂದಿ ಹಾಡಿದೆ.ಹಾಲಿ 31 ಸದಸ್ಯರ ಪೈಕಿ ಮರು ಆಯ್ಕೆ ಬಯಸಿ 11 ಸದಸ್ಯರು ಸ್ಪರ್ಧಿಸಿ ದ್ದಾರೆ. ಇಬ್ಬರು ಮಾಜಿ ಸದಸ್ಯರು ಸ್ಪರ್ಧಿ ಸುವ ಮೂಲಕ ಮತ್ತೊಮ್ಮೆ ಸದಸ್ಯ ರಾಗುವ ಹಂಬಲ ಹೊಂದಿದ್ದಾರೆ. ಬಿಜೆಪಿಗೆ 4 ವಾರ್ಡ್‍ನಲ್ಲಿ, ಕಾಂಗ್ರೆಸ್‍ಗೆ 3 ವಾರ್ಡ್‍ನಲ್ಲಿ ಬಂಡಾಯ ಎದುರಾಗಿದೆ. ಇಬ್ಬರು ಹಾಲಿ ಸದಸ್ಯರು ತಾವು ಈ ಹಿಂದೆ ಗೆದ್ದಿದ್ದ ವಾರ್ಡ್‍ನಿಂದಲೇ ಸ್ಪರ್ಧಿಸುವ ಮೂಲಕ ಗಮನ ಸೆಳೆದಿದ್ದಾರೆ. ಕೆಲವರು…

ಅಭಿವೃದ್ಧಿ ಮರೆತು ವರ್ಗಾವಣೆಯಲ್ಲಿ ನಿರತರಾಗಿರುವ ಶಾಸಕ
ಚಾಮರಾಜನಗರ

ಅಭಿವೃದ್ಧಿ ಮರೆತು ವರ್ಗಾವಣೆಯಲ್ಲಿ ನಿರತರಾಗಿರುವ ಶಾಸಕ

August 25, 2018

ಗುಂಡ್ಲುಪೇಟೆ: ಕೇವಲ ಸನ್ಮಾನ ಸ್ವೀಕರಿಸುವುದು ಮತ್ತು ವರ್ಗಾವಣೆ ದಂಧೆಯನ್ನು ನಡೆಸುವುದರ ಲ್ಲಿಯೇ ಶಾಸಕ ಸಿ.ಎಸ್.ನಿರಂಜನಕುಮಾರ್ ಕಾಲ ಕಳೆಯುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು. ಪಟ್ಟಣದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿ ಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡರು ನೂತನ ಶಾಸಕ ಸಿ.ಎಸ್.ನಿರಂಜನಕುಮಾರ್ ನಿಷ್ಟ್ರೀಯತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಸಿ.ಎಸ್.ನಿರಂಜನಕುಮಾರ್ 100 ದಿನಗಳಾ ದರೂ ಸನ್ಮಾನ ಸ್ವೀಕರಿಸುತ್ತಲೇ ಕಾಲ ಕಳೆಯು ತ್ತಿದ್ದಾರೆ. ಕೇವಲ ಅಧಿಕಾರಿಗಳ ವರ್ಗಾ ವಣೆ ಬಿಟ್ಟರೆ ಬೇರಾವುದೇ ಕಾರ್ಯಗಳೂ ಆಗುತ್ತಿಲ್ಲ…

ಆ.27, ಚಾಮರಾಜನಗರದಲ್ಲಿ ಕೃಷಿ ಕಾಲೇಜು ಆರಂಭ
ಚಾಮರಾಜನಗರ

ಆ.27, ಚಾಮರಾಜನಗರದಲ್ಲಿ ಕೃಷಿ ಕಾಲೇಜು ಆರಂಭ

August 25, 2018

ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ತಾತ್ಕಾಲಿಕವಾಗಿ ತರಗತಿ ಜಿಲ್ಲೆಯ ಅಭಿವೃದ್ಧಿಗೆ ಇದು ಪೂರಕ ಕೃಷಿ ಸಚಿವ ಶಿವಶಂಕರ ರೆಡ್ಡಿ ಭಾಗಿ ಚಾಮರಾಜನಗರ: ಚಾಮರಾಜನಗರದ ನೂತನ ಕೃಷಿ ಮಹಾವಿದ್ಯಾಲಯದ ಪ್ರಾರಂಭೋತ್ಸವವು ಇದೇ ತಿಂಗಳ 27ರಂದು ನೆರವೇರಲಿದೆ ಎಂದು ಸಂಸದ ಆರ್.ಧ್ರುವನಾರಾಯಣ್ ತಿಳಿಸಿದರು.ತಾಲೂಕಿನ ಹರದನಹಳ್ಳಿ ಗ್ರಾಮದ ಬಳಿ ಇರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಕರೆದಿದ್ದ ಸುದ್ಧಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ತಾತ್ಕಾಲಿಕವಾಗಿ ತರಗತಿಗಳು ಆರಂಭ ವಾಗಲಿದೆ. ಅಂದು ಬೆಳಿಗ್ಗೆ 11 ಗಂಟೆಗೆ…

ಕಾಡುಮೊಲ ಬೇಟೆ; ಓರ್ವನ ಬಂಧನ
ಚಾಮರಾಜನಗರ

ಕಾಡುಮೊಲ ಬೇಟೆ; ಓರ್ವನ ಬಂಧನ

August 25, 2018

ಹನೂರು:  ಅರಣ್ಯದೊಳಗೆ ಅತಿಕ್ರಮ ಪ್ರವೇಶ ಮಾಡಿ ಕಾಡುಮೊಲ ಬೇಟೆಯಾಡಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಗೋಪಿನಾಥಂ ಗ್ರಾಮದ ಶಂಕರನ್ ಬಂಧಿತ ಆರೋಪಿ. ಗೋಪಿನಾಥಂ ವನ್ಯಜೀವಿ ವಲಯದಲ್ಲಿ ಎನ್ಸಿಎಫ್ ತಂಡ ಚಿರತೆ ಅಧ್ಯಯನಕ್ಕಾಗಿ ಅಳವಡಿಸಿದ್ದ ಕ್ಯಾಮರಾದಲ್ಲಿ ವ್ಯಕ್ತಿಗಳಿಬ್ಬರು ಎರಡು ಬೇಟೆನಾಯಿಗಳ ಜತೆ ಕಾಡುಮೊಲ ಬೇಟೆಯಾಡಿ ಕೊಂಡೊಯ್ಯುತ್ತಿರುವ ದೃಶ್ಯ ಸೆರೆಯಾಗಿದೆ. ಕೂಡಲೇ ಕಾರ್ಯಾಚರಣೆ ಆರಂಭಿಸಿದ ವಲಯ ಅರಣ್ಯಾಧಿಕಾರಿ ಶಂಕರ್ ಅಂತರಗಟ್ಟಿ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಯಾಮರಾದಲ್ಲಿ ಸೆರೆಯಾಗಿರುವ ವ್ಯಕ್ತಿಗಳು ಗೋಪಿನಾಥಂ…

ಚಾಮರಾಜನಗರ, ಕೊಳ್ಳೇಗಾಲ ನಗರಸಭಾ ಚುನಾವಣೆ: ನಾಮಪತ್ರ ವಾಪಸ್‍ಗೆ ಇಂದು ಕೊನೇ ದಿನ
ಚಾಮರಾಜನಗರ

ಚಾಮರಾಜನಗರ, ಕೊಳ್ಳೇಗಾಲ ನಗರಸಭಾ ಚುನಾವಣೆ: ನಾಮಪತ್ರ ವಾಪಸ್‍ಗೆ ಇಂದು ಕೊನೇ ದಿನ

August 23, 2018

ಚಾಮರಾಜನಗರ:  ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭಾ ಸದಸ್ಯ ಸ್ಥಾನಗಳಿಗೆ ಇದೇ ತಿಂಗಳ 31ರಂದು ಮತದಾನ ನಡೆ ಯಲಿದೆ. ಸಲ್ಲಿಕೆ ಆಗಿರುವ ಉಮೇದು ವಾರಿಕೆಯನ್ನು ಹಿಂಪಡೆಯಲು ನಾಳೆ (ಆ.23) ಕೊನೆಯ ದಿನವಾಗಿದೆ. ಚುನಾ ವಣೆಗೆ ಇನ್ನೂ ಕೇವಲ 8 ದಿನಗಳಷ್ಟೇ ಬಾಕಿ ಉಳಿದಿದ್ದು, ಪ್ರಚಾರ ಬಿರುಸಾಗಿದೆ. ಚಾಮರಾಜನಗರ ನಗರಸಭೆಯ ಎಲ್ಲಾ 31 ವಾರ್ಡ್‍ಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿ ಯನ್ನು ಕಣಕ್ಕೆ ಇಳಿಸಿದೆ. ಬಿಜೆಪಿ 30 ವಾರ್ಡ್ ಗಳಿಗೆ ಅಭ್ಯರ್ಥಿಯನ್ನು ಹಾಕಿದೆ. ಸ್ಥಳೀಯ ಸಂಸ್ಥೆಯ ಈ ಚುನಾವಣೆಯನ್ನು ಗಂಭೀರ…

ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಬಕ್ರೀದ್ ಆಚರಣೆ
ಚಾಮರಾಜನಗರ

ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಬಕ್ರೀದ್ ಆಚರಣೆ

August 23, 2018

ಚಾಮರಾಜನಗರ/ಗುಂಡ್ಲುಪೇಟೆ:  ತ್ಯಾಗ ಬಲಿದಾನ ಸಂಕೇತವಾದ ಬಕ್ರೀದ್ ಹಬ್ಬವನ್ನು ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಸಡಗರ, ಸಂಭ್ರಮದಿಂದ ಆಚರಿಸಿದರು.ಬೆಳಿಗ್ಗೆಯೇ ಹೊಸ ಬಟ್ಟೆ ತೊಟ್ಟು, ಹಿರಿಯರು, ಕಿರಿಯರು ಎಂಬ ಬೇಧಭಾವ ಇಲ್ಲದೇ ಮಸೀದಿ, ಈದ್ಗಾ ಮೈದಾನಕ್ಕೆ ತೆರಳಿದ ಮುಸ್ಲಿಂರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ನಂತರ ಒಬ್ಬರಿಗೊಬ್ಬರು ಅಪ್ಪಿ ಕೊಳ್ಳುವ ಮೂಲಕ ಕೈ-ಕೈ ಕುಲುಕಿಕೊಳ್ಳುವ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೋಂಡರು. ಚಾಮರಾಜನಗರ: ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲಿ ಸಹ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಅದ್ಧೂರಿ ಯಾಗಿ ಆಚರಿಸಿದರು. ನಗರದ ಕ್ರೀಡಾಂ ಗಣ…

3 ತಿಂಗಳಿಂದ ಪಡಿತರ ಇಲ್ಲದೆ ಗ್ರಾಮಸ್ಥರ ಬವಣೆ
ಚಾಮರಾಜನಗರ

3 ತಿಂಗಳಿಂದ ಪಡಿತರ ಇಲ್ಲದೆ ಗ್ರಾಮಸ್ಥರ ಬವಣೆ

August 23, 2018

ಕೊಳ್ಳೇಗಾಲ:  ಬಡವರಿಗೆ ತಲುಪಬೇಕಾದ ಸಾವಿರಾರು ಕ್ವಿಂಟಾಲ್ ಅನ್ನ ಭಾಗ್ಯ ಪಡಿತರ ಸಮ ರ್ಪಕ ರೀತಿಯಲ್ಲಿ ದೊರಕದೆ ಎಂಟು ಸಾವಿರಕ್ಕೂ ಹೆಚ್ಚು ಗ್ರಾಹಕರು ಬವಣೆ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಲೊಕ್ಕನಹಳ್ಳಿ ಹೋಬಳಿಯ ಲೊಕ್ಕನಹಳ್ಳಿ, ಹುತ್ತೂರು, ಹೊಸದೊಡ್ಡಿ, ಪಿ.ಜಿ.ಪಾಳ್ಯ, ಹುಯಿಲುನತ್ತ ಒಳಗೊಂಡಂತೆ 13 ಕ್ಕೂ ಹೆಚ್ಚು ನ್ಯಾಯ ಬೆಲೆ ಅಂಗಡಿಗಳಿದ್ದು, ಹುತ್ತೂರಿನಲ್ಲಿ ಮಾತ್ರ ಪತ್ತಿನ ಸಹಕಾರಿ ಸಂಘದ ಮೂಲಕ ಪಡಿತರ ವಿತರಿಸಲಾಗುತ್ತಿದೆ. ಉಳಿದಂತೆ 12 ಅಂಗಡಿಗಳಲ್ಲಿ ನ್ಯಾಯ ಬೆಲೆ ಅಂಗಡಿ ಮೂಲಕವೇ ಅನ್ನ ಭಾಗ್ಯದ ಪಡಿತರ ವಿತರಿಸಲಾಗುತ್ತಿದೆ. ಆದರೆ ಈ…

ಸಂತೇಮರಹಳ್ಳಿಯಲ್ಲಿ ಹೋಟೆಲ್‍ಗೆ ಬೆಂಕಿ
ಚಾಮರಾಜನಗರ

ಸಂತೇಮರಹಳ್ಳಿಯಲ್ಲಿ ಹೋಟೆಲ್‍ಗೆ ಬೆಂಕಿ

August 23, 2018

ಸಂತೇಮರಹಳ್ಳಿ:  ಇಲ್ಲಿನ ಚಾಮರಾಜನಗರ ರಸ್ತೆಯಲ್ಲಿ ಇರುವ ಸಹನ ಪಲ್ಲವಿ ದರ್ಶಿನಿ ಹೋಟೆಲ್‍ನಲ್ಲಿ ಇಂದು ಆಕಸ್ಮಿಕವಾಗಿ ಬೆಂಕಿ ತಗಲಿ ಹೋಟೆಲ್ ನಲ್ಲಿದ್ದ ವಸ್ತು, ಪದಾರ್ಥಗಳು ಭಸ್ಮವಾಗಿವೆ. ಸಂತೇಮರಹಳ್ಳಿ ಗ್ರಾಮದ ನಿವಾಸಿ ನಾಗಣ್ಣ ಎಂಬುವರು ಈ ಹೋಟೆಲ್ ಮಾಲೀಕರಾಗಿದ್ದು ಮಂಗಳವಾರ ಮಧ್ಯಾಹ್ನ ಇದ್ದಕ್ಕಿದ್ದ ಹಾಗೇ ಹೋಟೆಲ್‍ಗೆ ಬೆಂಕಿ ಬಿದ್ದಿದೆ. ಹೋಟೆಲ್‍ನಲ್ಲಿದ್ದ ಸಣ್ಣಪುಟ್ಟ ವಸ್ತುಗಳು ಬೆಂಕಿಗೆ ಹಾನಿಗೊಳಗಾಗಿದೆ. ಇದರಿಂದ ಸುಮಾರು 50 ಸಾವಿರ ರೂ.ನಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

1 89 90 91 92 93 141
Translate »