ಮರಳಿನ ದಿಬ್ಬ ಕುಸಿದು ಇಬ್ಬರ ಸಾವು ಸಂತೇಮರಹಳ್ಳಿ ಬಳಿ ದುರಂತ
ಚಾಮರಾಜನಗರ

ಮರಳಿನ ದಿಬ್ಬ ಕುಸಿದು ಇಬ್ಬರ ಸಾವು ಸಂತೇಮರಹಳ್ಳಿ ಬಳಿ ದುರಂತ

August 25, 2018

ಚಾಮರಾಜನಗರ:  ಜಮೀನಿನಲ್ಲಿ ಮರಳು ತೆಗೆಯುತ್ತಿದ್ದ ವೇಳೆ ದಿಬ್ಬ ಕುಸಿದು ಇಬ್ಬರು ಮೃತಪಟ್ಟಿರುವ ದುರಂತ ತಾಲೂಕಿನ ಸಂತೇ ಮರಹಳ್ಳಿ ಹೋಬಳಿಯ ಕೆಂಪನಪುರ ಗ್ರಾಮ ದಲ್ಲಿ ಶುಕ್ರವಾರ ಸಂಭವಿಸಿದೆ. ಗ್ರಾಮದ ನಾಗರಾಜು (33) ಹಾಗೂ ಸಿದ್ದೇಶ್(22) ಮೃತಪಟ್ಟವರು.

ಘಟನೆಯ ವಿವರ: ಕೆಂಪನಪುರ ಗ್ರಾಮದಿಂದ ಸುಮಾರು ಒಂದು ಕಿ.ಮೀ. ದೂರವಿರುವ ರಮೇಶ್ ಎಂಬುವವರ ತೋಟದಲ್ಲಿ ಮರಳು ತೆಗೆಯಲಾ ಗುತ್ತಿತ್ತು. ಕಾರ್ಮಿಕರಾದ ನಾಗರಾಜು ಮತ್ತು ಸಿದ್ದೇಶ್ ಮರಳು ತೆಗೆಯಲು ತೋಟಕ್ಕೆ ತೆರಳಿದರು. ಹಳ್ಳಕ್ಕೆ ಇಳಿದು ಮರಳು ತೆಗೆಯುತ್ತಿದ್ದ ವೇಳೆ ಮರಳಿನ ದಿಬ್ಬ ಕುಸಿದಿದೆ. ಇದರಿಂದ ಮರಳಿನಡಿಗೆ ಸಿಲುಕಿದ ನಾಗರಾಜು ಮತ್ತು ಸಿದ್ದೇಶ್ ಜೀವಂತ ಸಮಾಧಿ ಯಾಗಿದ್ದಾರೆ. ಸುದ್ದಿ ತಿಳಿದ ಗ್ರಾಮಸ್ಥರು ತಕ್ಷಣ ಸಂತೇಮರಹಳ್ಳಿ ಠಾಣೆಗೆ ಸುದ್ದಿ ಮುಟ್ಟಿಸಿದರು. ಡಿವೈಎಸ್‍ಪಿ ಜಯಕುಮಾರ್, ವೃತ್ತ ನಿರೀಕ್ಷಕ ರಾಜೇಂದ್ರ, ಸಂತೇಮರಹಳ್ಳಿ ಠಾಣೆಯ ಪಿಎಸ್‍ಐ ಬಸವರಾಜು, ತಹಶೀಲ್ದಾರ್ ಪುರಂದರ್ ಹಾಗೂ ಇತರೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ತಕ್ಷಣವೇ ಮರಳಿನಡಿ ಹೂತುಹೋಗಿದ್ದ ಶವಗಳನ್ನು ತೆಗೆಯ ಲಾಯಿತು. ನಂತರ ಚಾಮರಾಜನಗರ ಜಿಲ್ಲಾ ಸಾರ್ವ ಜನಿಕ ಆಸ್ಪತ್ರೆಯ ಶವಗಾರದಲ್ಲಿ ದೇಹಗಳನ್ನು ಇರಿಸಲಾಗಿದೆ. ಈ ಸಂಬಂಧ ಸಂತೇಮರಹಳ್ಳಿ ಠಾಣೆ ಪಿಎಸ್‍ಐ ಬಸವರಾಜು ಪ್ರಕರಣ ದಾಖಲಿಸಿ ಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »