ಹಾಸನ

ಅರಸೀಕೆರೆ ಅಮರಗಿರಿ ಮಾಲೇಕಲ್ ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ರಥೋತ್ಸವ
ಹಾಸನ

ಅರಸೀಕೆರೆ ಅಮರಗಿರಿ ಮಾಲೇಕಲ್ ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ರಥೋತ್ಸವ

July 25, 2018

ಅರಸೀಕೆರೆ: ತಾಲೂಕಿನ ಅಮರಗಿರಿ ಮಾಲೇಕಲ್ ತಿರುಪತಿ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ಮಹಾರಥೋತ್ಸವವು ಭಕ್ತಸಾಗರದ ನಡುವೆ ಇಂದು ವಿಜೃಂಭಣೆಯಿಂದ ಜರುಗಿತು. ರಥೋತ್ಸವದ ಅಂಗವಾಗಿ ಮುಂಜಾನೆ ಯಿಂದಲೇ ದೇಗುಲದಲ್ಲಿ ಶ್ರೀ ಲಕ್ಷ್ಮೀವೆಂಕಟ ರಮಣಸ್ವಾಮಿ ಮೂಲ ವಿಗ್ರಹಕ್ಕೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಜರುಗಿತು. ನಂತರ ದೇಗುಲ ಆವರಣದಲ್ಲಿ ಅಲಂಕೃತ ಗೊಂಡಿದ್ದ ರಥದಲ್ಲಿ ಉತ್ಸವ ಮೂರ್ತಿಯನ್ನು ಮೆರವಣಿ ಮೂಲಕ ತಂದು ಪ್ರತಿಷ್ಠಾಪಿಸ ಲಾಯಿತು. ಪೂಜೆ ಸಲ್ಲಿಸುವ ಮೂಲಕ ಶಾಸಕ ಕೆ.ಎಂ.ಶಿವಲಿಂಗೇಗೌಡ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ಅದ್ಭುತ ಕ್ಷಣಕ್ಕೆ ರಾಜ್ಯದ ವಿವಿಧ…

`ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ’
ಹಾಸನ

`ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ’

July 25, 2018

ಬೇಲೂರು: ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ’ ನಾನ್ನುಡಿ ಯಂತೆ ತಾಲೂಕಿನ ಸಮೀಪ 2 ಜಲಾಶಯಗಳಿದ್ದರೂ ಮಲೆನಾಡು ಭಾಗವಾದ ಅರೇಹಳ್ಳಿ, ಬಿಕ್ಕೋಡು ಹೋಬಳಿಯ ಹತ್ತಾರು ಗ್ರಾಮಗಳಿಗೆ ನೀರು ಪೊರೈಕೆಗೆ ಶಾಶ್ವತ ಯೋಜನೆ ರೂಪಿಸುವಲ್ಲಿ ಜನಪ್ರತಿನಿಧಿ ಗಳು, ಅಧಿಕಾರಿಗಳು ವಿಫಲರಾಗಿದ್ದಾರೆ. ಬಿಕ್ಕೋಡು ಸಮೀಪವೇ ಇರುವ ವಾಟೆಹೊಳೆ ಅಣೆಕಟ್ಟೆಯನ್ನು 1986ರಲ್ಲಿ ಡಿ.ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಿರ್ಮಿಸಲಾಗಿತ್ತು. 32 ವರ್ಷಗಳನ್ನು ಕಂಡಿರುವ ಅಣೆಕಟ್ಟೆಯು ಈವರೆಗೆ 9 ಬಾರಿ ಭರ್ತಿಯಾಗಿದ್ದು, 32 ಕಿ.ಮೀ ಉದ್ದದ ಬಲದಂಡ ನಾಲೆ, 10 ಕಿ.ಮೀ. ಉದ್ದದ…

ಉಚಿತ ಬಸ್‍ಪಾಸ್‍ಗಾಗಿ ಪ್ರತಿಭಟನೆ
ಹಾಸನ

ಉಚಿತ ಬಸ್‍ಪಾಸ್‍ಗಾಗಿ ಪ್ರತಿಭಟನೆ

July 25, 2018

ಹಾಸನ: ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರಜಾಶಕ್ತಿ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು. ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಮಾವಣೆಗೊಂಡು ಘೋಷಣೆ ಕೂಗಿದರು. ಸಮ್ಮಿಶ್ರ ಸರ್ಕಾರದ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ವಿಧಾನ ಸಭಾ ಚುನಾವಣೆ ವೇಳೆಯಲ್ಲಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್‍ಪಾಸ್ ವಿತರಣೆ ಮಾಡುವುದಾಗಿ ಆಶ್ವಾಸನೆ ನೀಡಿದ್ದರು….

ಪೋಸ್ಟ್‍ಮ್ಯಾನ್ ನಡೆ ಖಂಡಿಸಿ ಕರ್ನಾಟಕ ವೀರಕನ್ನಡಿಗರ ಸೇನೆ ಪ್ರತಿಭಟನೆ
ಹಾಸನ

ಪೋಸ್ಟ್‍ಮ್ಯಾನ್ ನಡೆ ಖಂಡಿಸಿ ಕರ್ನಾಟಕ ವೀರಕನ್ನಡಿಗರ ಸೇನೆ ಪ್ರತಿಭಟನೆ

July 25, 2018

ಹಾಸನ:  ನಗರದ ತಣ್ಣೀರುಹಳ್ಳದ ಪೋಸ್ಟ್‍ಮ್ಯಾನ್ ನಡೆ ಖಂಡಿಸಿ ಹಳೆಬಸ್‍ನಿಲ್ದಾಣ ಬಳಿಯ ಮುಖ್ಯ ಅಂಚೆ ಕಚೇರಿ ಎದುರು ಕರ್ನಾಟಕ ವೀರಕನ್ನಡಿಗರ ಸೇನೆಯಿಂದ ಪ್ರತಿಭಟಿಸಲಾಯಿತು. ತಣ್ಣೀರುಹಳ್ಳದ ಅಂಚೆ ಕಚೇರಿ ಪೋಸ್ಟ್‍ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿರುವ ಮೋಹನ್ ಎಂಬಾತ ವಿಧವಾ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ದಂತಹ ಸರ್ಕಾರದಿಂದ ಬರುವ ಇತರೆ ಯೋಜನೆಯ ಹಣ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ತಲುಪಿಸದೆ ಫಲಾನುಭವಿಗಳು ತೊಂದರೆ ಅನುಭವಿ ಸುವಂತಾಗಿದೆ ಎಂದು ದೂರಿದರು. ಸರ್ಕಾರ ನೀಡುತ್ತಿರುವ ಪಿಂಚಿಣಿ ಹಣವನ್ನೇ ಫಲಾನು ಭವಿಗಳು ನಂಬಿ ಜೀವನ ನಡೆಸುತ್ತಿದ್ದು,…

ಕಾಫಿ ತೋಟಕ್ಕೆ ಕಾಡಾನೆ ಹಿಂಡು ಲಗ್ಗೆ: ಬೆಳೆ ನಾಶ
ಹಾಸನ

ಕಾಫಿ ತೋಟಕ್ಕೆ ಕಾಡಾನೆ ಹಿಂಡು ಲಗ್ಗೆ: ಬೆಳೆ ನಾಶ

July 25, 2018

ಸಕಲೇಶಪುರ:  ಕಾಡಾನೆ ಹಿಂಡು, ಇಂದು ಬೆಳ್ಳಂಬೆಳಿಗ್ಗೆಯೇ ತಾಲೂಕಿನ ಹಾನುಬಾಳು ಹೋಬಳಿಯಲ್ಲಿ ಕಾಫಿ ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ. ಕಾಡಾನೆಗಳ ದಾಳಿಯಿಂದ ತಾಲೂಕಿನ ಹಾನುಬಾಳು ಹೋಬಳಿ ವ್ಯಾಪ್ತಿಯ ಅಚ್ಚನ ಹಳ್ಳಿ, ಬಿಳಿಸಾರೆ, ಅಗನಿ ಗ್ರಾಮಗಳಲ್ಲಿ ಕಾಫಿ, ಬಾಳೆ ತೋಟ ಹಾಗೂ ಆಸ್ತಿಪಾಸ್ತಿ ಹಾನಿಯಾಗಿದೆ. ಅಚ್ಚನಹಳ್ಳಿಯಲ್ಲಿ ಕಾಫಿ ತೋಟದಲ್ಲಿ ಬಗಾನೆ ಮರವನ್ನ ಆನೆಗಳು ಉರುಳಿಸಿವೆ. ಆನೆಗಳು ತೋಟದಲ್ಲಿ ಅಡ್ಡಾದಿಡ್ಡಿ ಓಡಾಟಕ್ಕೆ ನೂರಾರು ಕಾಫಿ ಗಿಡಗಳು ನೆಲಸಮವಾಗಿವೆ. ಸ್ಪ್ರೇ ಮಾಡಲು ಇಟ್ಟಿದ್ದ ಪ್ಲಾಸ್ಟಿಕ್ ಬ್ಯಾರಲ್ ಗಳು ಆನೆ…

ವಿದ್ಯಾರ್ಥಿ ನೇಣಿಗೆ ಶರಣು
ಹಾಸನ

ವಿದ್ಯಾರ್ಥಿ ನೇಣಿಗೆ ಶರಣು

July 25, 2018

ಚನ್ನರಾಯಪಟ್ಟಣ: ವಿದ್ಯಾರ್ಥಿವೋರ್ವ ನೇಣಿಗೆ ಶರಣಾಗಿರುವ ಪ್ರಕರಣ ತಾಲೂಕಿನ ಕಾರೇಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ. ತಾಲೂಕಿನ ನುಗ್ಗೇಹಳ್ಳಿ ಸಮೀಪದ ತಾವರೆಕೆರೆಯ ಪೃಥ್ವಿರಾಜ್ (13) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಈತ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದ. ಇಂದು ಬೆಳಿಗ್ಗೆ ಎಲ್ಲಾ ವಿದ್ಯಾರ್ಥಿಗಳು ಪ್ರಾರ್ಥನೆಗೆ ತೆರಳಿದ್ದ ವೇಳೆ ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಚನ್ನ ರಾಯಪಟ್ಟಣ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದುಕೊಂಡು ವ್ಯಕ್ತಿ ಸಾವು
ಹಾಸನ

ನೇಣು ಬಿಗಿದುಕೊಂಡು ವ್ಯಕ್ತಿ ಸಾವು

July 25, 2018

ಹೊಳೆನರಸೀಪುರ:  ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಶರಣಾಗಿರುವ ಘಟನೆ ಹಾಸನ-ಮೈಸೂರು ಹೆದ್ದಾರಿಯ ಆಲದಹಳ್ಳಿ ರಸ್ತೆಯ ಬಳಿ ನಡೆದಿದೆ. ಮೃತನು ಚನ್ನೇಶ(40) ಮೃತ ವ್ಯಕ್ತಿ ಬಿಸಲೆಹಳ್ಳಿಯ ಕಡೂರು ನಿವಾಸಿ ಎಂದು ಗುರುತಿಸಲಾಗಿದ್ದು, ಬೆಂಗಳೂರಿನಲ್ಲಿ ಟ್ಯಾಕ್ಸಿ ಚಾಲಕನಾಗಿದ್ದ ಎಂದು ತಿಳಿದು ಬಂದಿದೆ. ವಿಷಯ ತಿಳಿದ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ರವಿ ಶಂಕರ್, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತನ ಜೇಬಿನಲ್ಲಿ ಆಧಾರ್ ಕಾರ್ಡ್ ಇದ್ದ ಕಾರಣ ಆತನ ಸಂಬಂಧಿಕರಿಗೆ ವಿಷಯ ಮುಟ್ಟಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ…

ಅಪರಿಚಿತ ಮಹಿಳೆ ಶವ ಪತ್ತೆ: ಕೊಲೆ ಶಂಕೆ
ಹಾಸನ

ಅಪರಿಚಿತ ಮಹಿಳೆ ಶವ ಪತ್ತೆ: ಕೊಲೆ ಶಂಕೆ

July 25, 2018

ಹೊಳೆನರಸೀಪುರ: ಅಪರಿಚಿತ ಮಹಿಳೆ ಶವ ಜಕ್ಕವಳ್ಳಿಕೊಪ್ಪಲು ಗ್ರಾಮದ ಜಮೀನೊಂದರಲ್ಲಿ ಪತ್ತೆಯಾಗಿದೆ. ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಮಹಿಳೆಯ ಮೇಲೆ ಹಸಿರು ಸೀರೆ, ಕೈಯಲ್ಲಿ ಹಚ್ಚೆ ಗುರುತುಗಳಿವೆ. ದುಷ್ಕರ್ಮಿಗಳು ಮಹಿಳೆಯನ್ನು ಬೇರೆಡೆ ಕೊಲೆಗೈದು ರಸ್ತೆ ಪಕ್ಕದ ಜಮೀನನಲ್ಲಿ ಬೀಸಾಡಿ ಹೋಗಿರಬುದು ಎನ್ನಲಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹಾಸನದಲ್ಲಿ 7 ಅಂತಸ್ತಿನ ಅಕ್ರಮ ಕಟ್ಟಡ ತೆರವಿಗೆ ಡಿಸಿ ಸೂಚನೆ
ಹಾಸನ

ಹಾಸನದಲ್ಲಿ 7 ಅಂತಸ್ತಿನ ಅಕ್ರಮ ಕಟ್ಟಡ ತೆರವಿಗೆ ಡಿಸಿ ಸೂಚನೆ

July 24, 2018

ಹಾಸನ:  ನಗರ ಹೃದಯ ಭಾಗದ ಎನ್‍ಡಿಆರ್‍ಕೆ ಆಸ್ಪತ್ರೆ ಸಮೀಪ ಅಕ್ರಮವಾಗಿ ನಿರ್ಮಾಣವಾಗುತ್ತಿದ್ದ ಬೃಹತ್ ವಾಣಿಜ್ಯ ಕಟ್ಟಡ ತೆರವುಗೊಳಿಸಿ, ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ನಿರ್ದೇಶಿಸಿದ್ದು, ಅದರಂತೆ ನಗರಸಭೆ ಆಯುಕ್ತ ಪರಮೇಶ್ ಅವರಿಂದು ಆದೇಶ ಹೊರಡಿಸಿದ್ದಾರೆ. ನಗರದ ವಾರ್ಡ್ ನಂ.1ರ ಆಸ್ತಿ ಸಂಖ್ಯೆ 104ರಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಕಟ್ಟಡ(9859 ಚ.ಅಡಿ) ಎನ್.ಲೀಲಾಕುಮಾರ್ ಎಂಬುವವರಿಗೆ ಸೇರಿದ್ದು, ನಗರಸಭೆಯ ನಿಯಮಗಳ ಉಲ್ಲಂಘನೆ ಹಾಗೂ ಸ್ಥಳ ಒತ್ತುವರಿ ಮಾಡಿರುವ ಕುರಿತು ಸಾರ್ವಜನಿಕರು ದೂರಿದ್ದರು. ಮಾಹಿತಿ ಆಧರಿಸಿ ಜಿಲ್ಲಾಧಿಕಾರಿ…

ಕಲುಷಿತ ನೀರು ಪೂರೈಕೆ: ಪುರಸಭೆ ವಿರುದ್ಧ ಆಕ್ರೋಶ
ಹಾಸನ

ಕಲುಷಿತ ನೀರು ಪೂರೈಕೆ: ಪುರಸಭೆ ವಿರುದ್ಧ ಆಕ್ರೋಶ

July 24, 2018

ಬೇಲೂರು: ಪಟ್ಟಣದ ವಿವಿಧ ಬಡಾವಣೆಯ ಕೊಳಾಯಿಯಲ್ಲಿ ಮಣ್ಣು ಮಿಶ್ರಿತ ಕೆಂಪು ನೀರು ಬರುತ್ತಿದ್ದು, ಆತಂಕಗೊಂಡ ನಿವಾಸಿಗಳು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿಶ್ವವಿಖ್ಯಾತ ಬೇಲೂರು ಶ್ರೀ ಚೆನ್ನಕೇಶವ ಸ್ವಾಮಿ ಕೋಟೆ, ಕೆರೆ ಬೀದಿ, ಚನ್ನನಾಯಕ ಗಲ್ಲಿ, ಕೊಟ್ನಿಕೆರೆ ಬೀದಿಯ ಸಾರ್ವಜನಿಕ ಹಾಗೂ ಮನೆಗಳಲ್ಲಿ ಅಳವಡಿಸಿರುವ ಕೊಳಾಯಿ ಯಲ್ಲಿ ಕೆಂಪು ಮಿಶ್ರಿತ ಗಲೀಜು ನೀರು ಬರುತ್ತಿದೆ. ವಾರದಿಂದ ಎಲ್ಲಾ ನಿವಾಸಿಗಳು ಈ ನೀರನ್ನೇ ಕುಡಿಯುವಂತಾಗಿದ್ದು, ಮಾರಕ ರೋಗಗಳು ಬರಬಹುದೆಂಬ ಚಿಂತೆಯಲ್ಲಿದ್ದಾರೆ. ನಲ್ಲಿಗೆ ಬಟ್ಟೆ ಕಟ್ಟಿ ನೀರನ್ನು ಸೋಸಿ ಹಿಡಿದರೂ…

1 106 107 108 109 110 133
Translate »