ಹಾಸನ

ಪುರಸಭೆ ವಿರುದ್ಧ ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆ
ಹಾಸನ

ಪುರಸಭೆ ವಿರುದ್ಧ ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆ

July 20, 2018

ಚನ್ನರಾಯಪಟ್ಟಣ: ರಸ್ತೆ ಬದಿ ವ್ಯಾಪಾರಸ್ಥರಿಗೆ ಕಾಲಾವಕಾಶ ನೀಡದೆ ಪುರಸಭೆ ಆಡಳಿತ ಮಂಡಳಿ ಏಕಾಏಕಿ ಗೂಡಂಗಡಿ ತೆರವುಗೊಳಿಸಿದನ್ನು ವಿರೋಧಿಸಿ ಬೀದಿಬದಿ ವ್ಯಾಪಾರಿಗಳು ಪಟ್ಟಣ ದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಮಿನಿ ವಿಧಾನ ಸೌಧದ ಮುಂಭಾಗ ಸಮಾವೇಶಗೊಂಡ ಬೀದಿ ಬದಿ ವ್ಯಾಪಾರಿಗಳು ಪುರಸಭೆಯ ಕ್ರಮಕ್ಕೆ ಆಕ್ಷೇಪ ವ್ಯಕ್ತ ಪಡಿಸಿದರು. ಪುರಸಭೆ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಬೀದಿಬದಿ ವ್ಯಾಪಾರಸ್ಥರಿಗೆ ತಿಳಿವಳಿಕೆ ಪತ್ರ ನೀಡಿಲ್ಲ. ಸಭೆ ನಡೆಸಿ ಗೂಡಂಗಡಿ ತೆರವು ಮಾಡಲು ಕಾಲಾವಕಾಶವನ್ನು ನೀಡಿಲ್ಲ. ಏಕಾಏಕಿ ತೆರವು ಕಾರ್ಯಾಚರಣೆ ಮಾಡಿದ್ದರಿಂದ ನಮಗೆ…

ವಿದ್ಯಾರ್ಥಿ ಸ್ನೇಹಿ ಗ್ರಂಥಾಲಯ ನಿರ್ಮಿಸಲು ಡಿಸಿ ಸೂಚನೆ
ಹಾಸನ

ವಿದ್ಯಾರ್ಥಿ ಸ್ನೇಹಿ ಗ್ರಂಥಾಲಯ ನಿರ್ಮಿಸಲು ಡಿಸಿ ಸೂಚನೆ

July 20, 2018

ಹಾಸನ: ‘ಜಿಲ್ಲೆಯಲ್ಲಿನ ಗ್ರಂಥಾಲಯಗಳು ಸಾರ್ವಜನಿಕರಿಗೆ ಇನ್ನಷ್ಟು ಅನುಕೂಲಕಾರಿಯಾಗುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಪುಸ್ತಕಾಭಿರುಚಿ ಬೆಳೆಸುವ ಕೇಂದ್ರವಾಗಿ ಪರಿವರ್ತನೆ ಯಾಗಬೇಕು’ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸಭೆ ನಡೆಸಿದ ಅವರು, ನಗರ ಹಾಗೂ ಗ್ರಾಮೀಣ ಮಟ್ಟ ದಲ್ಲಿ ಗ್ರಂಥಾಲಯ ಜ್ಞಾನ ಭಂಡಾರ ಗಳಾಗುವ ಜೊತೆಗೆ, ವಿದ್ಯಾರ್ಥಿ ಸ್ನೇಹಿ ಯಾಗಿರಬೇಕು. ಅದಕ್ಕೆ ಅಧಿಕಾರಿಗಳು ಅಗತ್ಯವಾದ ಪೂರಕ ವಾತಾವರಣ ಕಲ್ಪಿಸಿ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಮಟ್ಟದ ಬಹು ತೇಕ…

ಅನುದಾನ ತಾರತಮ್ಯ: ಆರೋಪ-ಪ್ರತ್ಯಾರೋಪ
ಹಾಸನ

ಅನುದಾನ ತಾರತಮ್ಯ: ಆರೋಪ-ಪ್ರತ್ಯಾರೋಪ

July 19, 2018

ಬೇಲೂರು: ಪುರಸಭೆ ಅನುದಾನವನ್ನು ವಾರ್ಡ್ಗಳಿಗೆ ಮೀಸಲಿಡುವಾಗ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಕಾಮಗಾರಿಗಳ ಗುಣಮಟ್ಟ ಕ್ಷೀಣಿಸುತ್ತಿದೆ. ಪುರಸಭೆಯಲ್ಲಿ ಹಣವಿದ್ದರೆ ಮಾತ್ರ ಕೆಲಸ ಎಂಬಂತಾಗಿದೆ ಎಂಬ ಸದಸ್ಯರೊಬ್ಬರ ಆರೋಪ ಇಂದು ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಸದಸ್ಯರ ನಡುವೆ ಆಕ್ರೋಶಭರಿತ ಮಾತುಗಳಿಗೆ ಕಾರಣವಾಯಿತು. ಶಾಸಕ ಕೆ.ಎಸ್.ಲಿಂಗೇಶ್ ಉಪಸ್ಥಿತಿ ಹಾಗೂ ಪುರಸಭಾ ಅಧ್ಯಕ್ಷೆ ಭಾರತಿ ಅರುಣಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಜುಬೇರ್ ಅಹ್ಮದ್, ಪುರಸಭೆಯಲ್ಲಿ ಸಾರ್ವಜನಿಕರ ಕೆಲಸಗಳು ತೀವ್ರ ವಿಳಂಬವಾಗುತ್ತಿದೆ. ಹಣವಿದ್ದರೆ ಮಾತ್ರ ಕೆಲಸ ಮಾಡುವ…

ಎಟಿಎಂ ಕಳುವಿಗೆ ವಿಫಲ ಯತ್ನ
ಹಾಸನ

ಎಟಿಎಂ ಕಳುವಿಗೆ ವಿಫಲ ಯತ್ನ

July 19, 2018

ಹಾಸನ: ನಗರದ ಆರ್.ಸಿ. ರಸ್ತೆ, ಅರಳಿಕಟ್ಟೆ ರಸ್ತೆ ಎದುರು ವೃತ್ತದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿರುವ ಹಣ ಕಳುವು ಮಾಡಲು ವಿಫಲ ಯತ್ನ ನಡೆಸಿರುವ ಘಟನೆ ತಡರಾತ್ರಿ ನಡೆದಿದೆ. ಎಟಿಎಂ ಒಳಗೆ ನುಗ್ಗಿರುವ ಕಳ್ಳರು ಮೊದಲು ಸಿಸಿ ಕ್ಯಾಮೆರಾವನ್ನು ಪೇಪರ್‍ನಿಂದ ಮುಚ್ಚಿದ ಬಳಿಕ ಹಣವನ್ನು ದೋಚಲು ನಾನಾ ಪ್ರಯತ್ನ ಮಾಡಿದ್ದಾರೆ. ಕಬ್ಬಿಣದ ರಾಡು ಬಳಿಸಿ ಎಟಿಎಂ ಮಷಿನ್ ಓಪನ್ ಮಾಡಲಾಗದೆ ಬೇಸತ್ತು ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ. ವೃತ್ತ ನಿರೀಕ್ಷಕ ಸತ್ಯನಾರಾಯಣ್, ಬಡಾವಣೆ ಪೊಲೀಸ್ ಸಿಬ್ಬಂದಿ ಮತ್ತು ಶ್ವಾನದಳ…

ಮಾನಸಿಕ, ಶಾರೀರಿಕ ಆರೋಗ್ಯಕ್ಕೆ ಕ್ರೀಡೆ ಮುಖ್ಯ
ಹಾಸನ

ಮಾನಸಿಕ, ಶಾರೀರಿಕ ಆರೋಗ್ಯಕ್ಕೆ ಕ್ರೀಡೆ ಮುಖ್ಯ

July 19, 2018

ಹಾಸನ:  ಕೆಲಸದ ಒತ್ತಡದಲ್ಲಿರುವ ಪತ್ರಕರ್ತರಿಗೆ ಮಾನಸಿಕ ಮತ್ತು ಶಾರೀರಿಕ ಆರೋಗ್ಯವನ್ನು ಉತ್ತಮವಾಗಿಟ್ಟು ಕೊಳ್ಳಲು ಕ್ರೀಡೆ ಬಹಳ ಮುಖ್ಯ ಎಂದು ಮಲೆನಾಡು ತಾಂತ್ರಿಕ ಕಾಲೇಜು ಪ್ರಾಂಶು ಪಾಲ ಕೆ.ಎಸ್.ಜಯಂತ್ ತಿಳಿಸಿದರು. ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಜಿಲ್ಲಾ ಸಂಘ ದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿ ಕೊಂಡಿದ್ದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾ ವಳಿ ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಕರ್ತರು ಯಾವಾಗಲು ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಇಂತಹ ಕ್ರೀಡೆ ಯಲ್ಲ್ಲಿ ಆಗಾಗ್ಗೆ ಭಾಗವಹಿಸುವ ಮೂಲಕ ತಮ್ಮ ದೈಹಿಕ, ಮಾನಸಿಕ…

ಭಾರೀ ಮಳೆಗೆ ಕುಸಿದ ಬ್ಯಾರನ್
ಹಾಸನ

ಭಾರೀ ಮಳೆಗೆ ಕುಸಿದ ಬ್ಯಾರನ್

July 19, 2018

ಅರಕಲಗೂಡು: ತಾಲೂಕಿ ನಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹೊಗೆಸೊಪ್ಪಿನ ಬ್ಯಾರನ್, ವಾಸದ ಮನೆ ಕುಸಿದಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ತಾಲೂಕಿನ ಹಂಡ್ರಂಗಿ ಗ್ರಾಪಂ ವ್ಯಾಪ್ತಿಯ ಮಾಳೆನಹಳ್ಳಿಯ ಸ್ವಾಮಿ ಅವರಿಗೆ ಸೇರಿದ ಹೊಗೆಸೊಪ್ಪಿನ ಬ್ಯಾರನ್ ಸಂಪೂರ್ಣ ಕುಸಿದ ಪರಿಣಾಮ ಪಕ್ಕದಲ್ಲಿದ್ದ ವಾಸದ ಮನೆಯ ಗೋಡೆಗಳು ಸಹ ಕುಸಿದಿದೆ. ಪರಿಣಾಮ ಮನೆಯಲ್ಲಿದ್ದ ಅನೇಕ ವಸ್ತುಗಳಿಗೆ ಹಾನಿಯಾಗಿದೆ.

ಹೃದಯಾಘಾತದಿಂದ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಸಾವು
ಹಾಸನ

ಹೃದಯಾಘಾತದಿಂದ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಸಾವು

July 19, 2018

ಬೇಲೂರು:  ಧರ್ಮಸ್ಥಳ-ಕೋಲಾರ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಧರ್ಮಸ್ಥಳದಿಂದ ಕೋಲಾರಕ್ಕೆ ಬೇಲೂರು ಮಾರ್ಗವಾಗಿ ತೆರಳುವ ಸಂದರ್ಭದಲ್ಲಿ ಹೃದಯಾ ಘಾತದಿಂದ ಸಾವನ್ನಪ್ಪಿದ್ದಾರೆ. ಕೂಲಾರ ಮೂಲದ ಆದಿನಾರಾಯಣ (46) ಮೃತರು. ಬೇಲೂರು ಬಸ್ ನಿಲ್ದಾಣದಲ್ಲಿ ಕಾಫಿಗೆಂದು ತೆರಳಿದ್ದಾಗ ಆದಿನಾರಾಯಣ ಕುಸಿದು ಬಿದ್ದಿದ್ದಾರೆ. ತಕ್ಷಣ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸುವ ವೇಳೆ ಕೊನೆ ಉಸಿರೆಳೆದಿ ದ್ದಾರೆ. ವಿಷಯ ತಿಳಿದು ಚಿಕ್ಕಮಗ ಳೂರು ವಿಭಾಗೀಯ ನಿಯಂತ್ರಣ ಅಧಿಕಾರಿ ಅನಿಲ್ ಕುಮಾರ್ ಭೇಟಿ ನೀಡಿ ಮಾಹಿತಿ ಪಡೆದರು. ಮೃತ ಆದಿನಾರಾಯಣ ಮೃತದೇಹವನ್ನ ಕೋಲಾರಕ್ಕೆ ಕಳಿಸುವ ವ್ಯವಸ್ಥೆಯನ್ನು…

ಸಚಿವ ಹೆಚ್.ಡಿ.ರೇವಣ್ಣ ಪುತ್ರನ ವಿರುದ್ಧ ದೂರು ದಾಖಲಿಸಿದ್ದ ಸರ್ಕಲ್ ಇನ್ಸ್‍ಪೆಕ್ಟರ್ ಎತ್ತಂಗಡಿ
ಹಾಸನ

ಸಚಿವ ಹೆಚ್.ಡಿ.ರೇವಣ್ಣ ಪುತ್ರನ ವಿರುದ್ಧ ದೂರು ದಾಖಲಿಸಿದ್ದ ಸರ್ಕಲ್ ಇನ್ಸ್‍ಪೆಕ್ಟರ್ ಎತ್ತಂಗಡಿ

July 18, 2018

ಚನ್ನರಾಯಪಟ್ಟಣ: ಚುನಾವಣಾ ಸಮಯದಲ್ಲಿ ಸಚಿವ ರೇವಣ್ಣ ಪುತ್ರನ ವಿರುದ್ಧ ದೂರು ದಾಖಲಿಸಿದ್ದ ಹಿನ್ನೆಲೆ ತಮ್ಮ ಪ್ರಭಾವ ಬಳಸಿ ಪಟ್ಟಣದ ಗ್ರಾಮೀಣ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ರನ್ನು ಎತ್ತಂಗಡಿ ಮಾಡಿಸಿದ್ದಾರೆ ಎಂದು ಜಿಪಂ ಸದಸ್ಯ ಶ್ರೇಯಸ್ ಎಂ.ಪಾಟೀಲ್ ಆರೋಪಿಸಿದ್ದಾರೆ. ಪಟ್ಟಣದ ಗ್ರಾಮೀಣ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ಹರೀಶ್‍ರನ್ನು ನಿನ್ನೆ ಒಒಡಿ ಮೂಲಕ ಎತ್ತಂಗಡಿ ಮಾಡಿ, ಕೋಲಾರದ ಜಿಲ್ಲಾ ಸ್ಪೆಷಲ್ ಬ್ರಾಂಚ್‍ಗೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೇಯಸ್ ಎಂ.ಪಾಟೀಲ್, ಚುನಾವಣಾ ಸಮಯದಲ್ಲಿ ರೇವಣ್ಣ…

ವಿಮಾನ ನಿಲ್ದಾಣ ನಿರ್ಮಾಣ ಭೂ-ಸ್ವಾಧೀನ ಸಭೆ ವಿಫಲ
ಹಾಸನ

ವಿಮಾನ ನಿಲ್ದಾಣ ನಿರ್ಮಾಣ ಭೂ-ಸ್ವಾಧೀನ ಸಭೆ ವಿಫಲ

July 18, 2018

ಹಾಸನ: ವಿಮಾನ ನಿಲ್ದಾಣ ನಿರ್ಮಾಣ ಹಿನ್ನೆಲೆ ಭೂ-ಸ್ವಾಧೀನಕ್ಕಾಗಿ ಕಳೆದ ಎರಡು ದಿನಗಳಿಂದ ರೈತರೊಂದಿಗೆ ನಡೆಯುತ್ತಿರುದ ಸಭೆ ವಿಫಲವಾಗಿ ಜಿಲ್ಲಾಡಳಿತ ನಿಗದಿ ಪಡಿಸಿದ್ದ ಪರಿಹಾರ ದರ ಒಪ್ಪದೆ ರೈತರು ಅಸಮಾಧಾನದಿಂದ ಹೊರ ನಡೆದ ಘಟನೆ ಮಂಗಳವಾರ ನಡೆಯಿತು. ನಗರದ ಅಂಬೇಡ್ಕರ್ ಭವನದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಭೂ-ಸ್ವಾಧೀನದ ಹಿನ್ನೆಲೆ ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಅಧ್ಯಕ್ಷತೆಯಲ್ಲಿ ಎರಡನೇ ದಿನ ಕರೆದಿದ್ದ ಪರಿಹಾರ ದರ ನಿಗದಿ ಕುರಿತ ಸಭೆಯಲ್ಲಿ ಅಧಿಕಾರಿಗಳು ಸಾಕಷ್ಟು ಸಮಯ ರೈತರೊಂದಿಗೆ ಚರ್ಚಿಸಿದರು. ಆದರೂ ಪಟ್ಟುಬಿಡದ ರೈತರು ಎಕರೆಗೆ…

ಜಡಿ ಮಳೆಗೆ ತಲೆಕೆಳಕಾದ ರೈತರ ಲೆಕ್ಕಾಚಾರ
ಹಾಸನ

ಜಡಿ ಮಳೆಗೆ ತಲೆಕೆಳಕಾದ ರೈತರ ಲೆಕ್ಕಾಚಾರ

July 18, 2018

ರಾಮನಾಥಪುರ: ಈ ಬಾರಿಯ ಮುಂಗಾರಿನಿಂದ ವಾಣಿಜ್ಯ ಬೆಳೆ ಬೆಳೆದು, ಉತ್ತಮ ಬೆಲೆ ಪಡೆಯುವ ನಿರೀಕ್ಷೆಯಲ್ಲಿದ್ದ ರೈತರ ಲೆಕ್ಕಾಚಾರ ತಿಂಗಳಿಂದ ಸುರಿಯುತ್ತಿ ರುವ ಜಡಿ ಮಳೆಯಿಂದ ತಲೆಕೆಳಕಾಗಿದೆ. ಇಲ್ಲಿಯ ತಂಬಾಕು ಹರಾಜು ಮಾರು ಕಟ್ಟೆಯ ವ್ಯಾಪ್ತಿಯಲ್ಲಿ ಹಲವು ವರ್ಷಗಳ ನಂತರ ವಾಡಿಕೆಗಿಂತ ಹೆಚ್ಚಿನ ಮಳೆಯಾಗು ತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿರುವು ದರ ಜೊತೆಗೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಹೊಗೆಸೊಪ್ಪು, ಶುಂಠಿ, ಅಲೂಗೆಡ್ಡೆ, ನೆಲಗಡಲೆ, ಹಲಸಂದೆ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ. ಜೂನ್ ಕೊನೆಯವಾರದಿಂದ ಸುರಿ ಯುತ್ತಿರುವ ಅತಿಯಾದ ಜಡಿ ಮಳೆ…

1 108 109 110 111 112 133
Translate »