ಹಾಸನ

ಜವರಿಕೊಪ್ಪಲಿನಲ್ಲಿ ಗುಂಪು ಘರ್ಷಣೆ
ಹಾಸನ

ಜವರಿಕೊಪ್ಪಲಿನಲ್ಲಿ ಗುಂಪು ಘರ್ಷಣೆ

July 14, 2018

ಹೊಳೆನರಸೀಪುರ: ಹಳ್ಳಿ ಮೈಸೂರು ಹೋಬಳಿ, ದೊಡ್ಡಕಾಡನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜವರಿ ಕೊಪ್ಪಲು ಗ್ರಾಮದಲ್ಲಿ ಅಂಗನವಾಡಿ ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿ 2 ವರ್ಷಗಳೇ ಕಳೆದಿದ್ದರೂ, ನಿರ್ಮಾಣಕ್ಕೆ ಕಾಲ ಕೂಡಿಬಂದಿಲ್ಲ. ಇದಕ್ಕೆ ನಿಗದಿತ ಜಾಗದ ವಿಚಾರವಾಗಿ ನಡೆಯುತ್ತಿರುವ ಜಟಾ ಪಟಿಯೇ ಪ್ರಮುಖ ಕಾರಣವಾಗಿದೆ. ಇದೇ ವಿಚಾರ ಇಂದೂ ಸಹ ಗ್ರಾಮ ದಲ್ಲಿ ಎರಡು ಗುಂಪುಗಳ ನಡುವೆ ವಾಕ್ಸಮರ ನಡೆದು, ಘರ್ಷಣೆಗೂ ಕಾರಣವಾಗಿದೆ. ವಿಷಯ ತಿಳಿದು ಗ್ರಾಮಕ್ಕೆ ದೌಡಾಯಿಸಿದ ಹಳ್ಳಿಮೈಸೂರು ಠಾಣೆ ಸಬ್‍ಇನ್ಸ್‍ಪೆಕ್ಟರ್ ಶಕುಂತಲಾ ಹಾಗೂ…

ಉದ್ಘಾಟನೆಯಾಗದ ಇಂದಿರಾ ಕ್ಯಾಂಟೀನ್
ಹಾಸನ

ಉದ್ಘಾಟನೆಯಾಗದ ಇಂದಿರಾ ಕ್ಯಾಂಟೀನ್

July 13, 2018

ಬೇಲೂರು: ಕಾಂಗ್ರೆಸ್ ಸರ್ಕಾರದ ಮಹತ್ತರ ಯೋಜನೆ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಳ್ಳದೆ ಪಟ್ಟಣದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಯೋಜನೆಯಾದ ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ಇಲ್ಲಿನ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗದಲ್ಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತುರಾತುರಿಯಲ್ಲಿ ನಿರ್ಮಿಸಲಾಗಿತ್ತಾದರೂ ಇದುವರೆಗೂ ಕ್ಯಾಂಟೀನ್ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಿಲ್ಲ. ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭ ವಾಗಿ ಕಡಿಮೆ ದರದಲ್ಲಿ ಊಟ ಉಪಹಾರ ದೊರೆಯುತ್ತದೆ ಎಂಬ ಬಹು ನೀರಿಕ್ಷೆ ಯಲ್ಲಿದ್ದ ಬಡವರು, ಕೂಲಿ ಕಾರ್ಮಿಕರು,…

ಮುಸುಕಿನ ಜೋಳ ಕೀಟ ಬಾಧೆ: ಆತಂಕದಲ್ಲಿ ಅನ್ನದಾತ
ಹಾಸನ

ಮುಸುಕಿನ ಜೋಳ ಕೀಟ ಬಾಧೆ: ಆತಂಕದಲ್ಲಿ ಅನ್ನದಾತ

July 13, 2018

ಜಿಲ್ಲೆಯಲ್ಲಿ 85,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ, ರೈತರು ಮುಂಜಾಗ್ರತೆ ವಹಿಸಲು ಸಲಹೆ – ಎಸ್.ಪ್ರತಾಪ್ ಹಾಸನ: ಜಿಲ್ಲೆಯ ಹಲವು ಗ್ರಾಮ ಗಳಲ್ಲಿ ರೈತರು ಬಿತ್ತನೆ ಮಾಡಿದ ಮುಸುಕಿನ ಜೋಳ ಬೆಳೆಗೆ ಕೀಟಗಳ ಬಾಧೆ ಹೆಚ್ಚಾಗಿದ್ದು, ರೈತರು ಆತಂಕಿತರಾಗಿದ್ದಾರೆ. ಹಾಸನ ತಾಲೂಕಿನ ಸಾಲಗಾಮೆ ಹೋಬಳಿಯ ಶಾಂತಿಗ್ರಾಮ, ಬ್ರಹ್ಮ ದೇವರಹಳ್ಳಿ, ನಿಟ್ಟೂರು ಗ್ರಾಮಗಳು ಹಾಗೂ ಅರಕಲಗೂಡು, ಬೇಲೂರು ಸೇರಿ ದಂತೆ ಜಿಲ್ಲೆಯ ವಿವಿಧೆಡೆ ಮುಸುಕಿನ ಜೋಳವನ್ನು ಬಿತ್ತನೆ ಮಾಡಲಾಗಿದ್ದು, ಪ್ರಸ್ತುತ ಕಾಂಡಕೋರಕ ಕೀಟದ ಹಾವಳಿ ಜಾಸ್ತಿಯಾಗಿದ್ದು, ಎಲೆ ಹಾಗೂ ಸುರುಳಿ…

ಮಕ್ಕಳಿಗೆ ಸ್ವಚ್ಛತೆಯ ಅರಿವು ಮೂಡಿಸುವುದು ಅವಶ್ಯ
ಹಾಸನ

ಮಕ್ಕಳಿಗೆ ಸ್ವಚ್ಛತೆಯ ಅರಿವು ಮೂಡಿಸುವುದು ಅವಶ್ಯ

July 13, 2018

ಅರಸೀಕೆರೆ:  ‘ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ, ಸ್ವಚ್ಛತೆಯೂ ಅಷ್ಟೇ ಮುಖ್ಯ. ಹಾಗಾಗಿ, ವಿದ್ಯಾರ್ಥಿ ದೆಸೆಯಿಂದಲೇ ಅವರಿಗೆ ಸ್ವಚ್ಛತೆ ಬಗ್ಗೆ ಹೆಚ್ಚು ತಿಳುವಳಿಕೆ ನೀಡುವುದು ಅವಶ್ಯಕವಾಗಿದೆ’ ಎಂದು ಬಿಎಸ್‍ಎಸ್ ಮೈಕ್ರೋ ಫೈನಾನ್ಸ್ ಹಾಸನ ವಿಭಾಗದ ಅಂತರಿಕ ಲೆಕ್ಕಾ ಪರಿ ಶೋಧಕ ವ್ಯವಸ್ಥಾಪಕ ಮೂಡ್ಲಯ್ಯ ಹೇಳಿದರು. ತಾಲೂಕಿನ ಬೆಂಡೆಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾ ಯಿತಿ, ತಾಲೂಕು ಪಂಚಾಯಿತಿ, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್, ಬಿಎಸ್‍ಎಸ್ ಮೈಕ್ರೋ ಫೈನಾನ್ಸ್, ಗ್ರಾಮ ಪಂಚಾಯಿತಿ ಬೆಂಡೆಕೆರೆ, sಸಾರ್ವಜನಿಕ ಶಿಕ್ಷಣ…

ಹಿರಿಯ ಭೂ ವಿಜ್ಞಾನಿ ವಿರುದ್ಧ ಕ್ರಮವಹಿಸಲು ಸರ್ಕಾರಕ್ಕೆ ಡಿಸಿ ಪತ್ರ
ಹಾಸನ

ಹಿರಿಯ ಭೂ ವಿಜ್ಞಾನಿ ವಿರುದ್ಧ ಕ್ರಮವಹಿಸಲು ಸರ್ಕಾರಕ್ಕೆ ಡಿಸಿ ಪತ್ರ

July 13, 2018

ಹಾಸನ: ಅಕ್ರಮ ಗಣಿಗಾರಿಕೆ ನಡೆಸಿದವರಿಗೆ ಸಹಕಾರ ನೀಡಿದ ಆರೋಪದಡಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿ ವ್ಯವಸ್ಥಾಪಕ ಜಗದೀಶ್ ಅವರನ್ನು ಅಮಾನತುಗೊಳಿಸಿರುವ ಡಿಸಿ ರೋಹಿಣಿ ಸಿಂಧೂರಿ, ಹಿರಿಯ ಭೂ ವಿಜ್ಞಾನಿ ಪದ್ಮಜಾ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ತಾಲ್ಲೂಕಿನ ಶಾಂತಿಗ್ರಾಮ ಹೋಬಳಿ ಚಿಗಳ್ಳಿ ಗ್ರಾಮ ವ್ಯಾಪ್ತಿಯ ಸರ್ಕಾರಿ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರು ಬಂದಿತ್ತು. ಹಾಗಾಗಿ, ಜಿಲ್ಲಾಧಿಕಾರಿ ರೋಹಿಣಿ ನೇತೃತ್ವದಲ್ಲಿ ಜ. 29ರಂದು ಸರ್ಕಾರಿ ಜಮೀನು ಸರ್ವೆ…

ದಲಿತ ಕುಟುಂಬಗಳಿಗೆ ನ್ಯಾಯ ನೀಡಲು ಒತ್ತಾಯ
ಹಾಸನ

ದಲಿತ ಕುಟುಂಬಗಳಿಗೆ ನ್ಯಾಯ ನೀಡಲು ಒತ್ತಾಯ

July 13, 2018

ಹಾಸನ:  ಅಂಬೇಡ್ಕರ್ ಸಮುದಾಯ ಭವನದಲ್ಲಿ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿರುವ ಕುಟುಂಬಗಳಿಗೆ ವಾರದಲ್ಲಿ ನ್ಯಾಯ ಸಿಗದಿದ್ದರೇ ಪಾದಯಾತ್ರೆ ಮೂಲಕ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ದಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಪೂರ್ಣಿಮಾ ಅವರಿಗೆ ಮನವಿ ಸಲ್ಲಿಸಲಾಯಿತು. ಸಕಲೇಶಪುರ ತಾಲೂಕು ಯಸಳೂರು ಹೋಬಳಿ ಹೊಸೂರು ಗ್ರಾಮದ ಸರ್ವೇ ನಂ. 22 ರಲ್ಲಿ ಕಳೆದ 10 ವರ್ಷದಿಂದ ಕುಟುಂಬಗಳು ವಾಸಿಸುತ್ತಿದ್ದು, ಇಲ್ಲಿ ಜಿಪಂ, ತಾಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಅನುದಾನದಲ್ಲಿ ಸಮುದಾಯ…

ಜನಸಂಖ್ಯಾ ನಿಯಂತ್ರಣಕ್ಕೆ ಜಾಗೃತಿ ಅಗತ್ಯ
ಹಾಸನ

ಜನಸಂಖ್ಯಾ ನಿಯಂತ್ರಣಕ್ಕೆ ಜಾಗೃತಿ ಅಗತ್ಯ

July 13, 2018

ಹಾಸನ: ‘ಜನಸಂಖ್ಯಾ ನಿಯಂತ್ರಣಕ್ಕೆ ಜನರಲ್ಲಿ ಜಾಗೃತಿ ಮೂಡಿ ಸುವುದು ಅಗತ್ಯ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸತೀಶ್‍ಕುಮಾರ್ ತಿಳಿಸಿದರು. ನಗರದ ಡಾ.ಬಿ.ಸಿ.ರಾಯ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಸರ್ಕಾರಿ ಗೃಹ ವಿಜ್ಞಾನ ಕಾಲೇಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಜನಸಂಖ್ಯಾ ಸ್ಫೋಟದಿಂದ ಸಮಾಜ ದಲ್ಲಿ ಉಂಟಾಗುವ ನಿರುದ್ಯೋಗ, ವಸತಿ…

ಖಾಸಗಿ ಬಸ್, ಲಾರಿ ಮುಖಾಮುಖಿ ಡಿಕ್ಕಿ
ಹಾಸನ

ಖಾಸಗಿ ಬಸ್, ಲಾರಿ ಮುಖಾಮುಖಿ ಡಿಕ್ಕಿ

July 13, 2018

ಹಾಸನ: ಖಾಸಗಿ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದ ಹೊರವಲಯದ ನುಗ್ಗೇಹಳ್ಳಿ ಕ್ರಾಸ್ ಬಳಿ ಗುರುವಾರ ನಡೆದಿದೆ. ವಿಆರ್‍ಎಲ್ ಮತ್ತು ದುರ್ಗಾಂಬಾ ಟ್ರಾವೆಲ್ಸ್ ಎಂಬ ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ. ಕೆಲವರಿಗೆ ಸಣ್ಣಪುಟ್ಟ ಗಾಯವಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತೀವೇಗವಾಗಿ ವಾಹನವನ್ನು ಚಲಾಯಿಸಿದ್ದೇ ಘಟನೆಗೆ ಕಾರಣ ಎಂದು ತಿಳಿದು ಬಂದಿದ್ದು, ಎರಡು ವಾಹನಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಈ…

ಜೂಜುಕೋರರ ಬಂಧನ: 22,300ರೂ. ನಗದು ವಶ
ಹಾಸನ

ಜೂಜುಕೋರರ ಬಂಧನ: 22,300ರೂ. ನಗದು ವಶ

July 13, 2018

ಹಾಸನ: ತಾಲೂಕಿನ ಬಿಟ್ಟ ಗೌಡನಹಳ್ಳಿಯ ಎಚ್‍ಪಿ ಪೆಟ್ರೋಲ್ ಬಂಕ್ ಹಿಂಭಾಗದ ಜಿಲ್ಲಾ ಅಂಗವಿಕಲರ ಚೇತನ ಕ್ಲಬ್‍ನಲ್ಲಿ ಜೂಜಾಡುತ್ತಿದ್ದ 18 ಮಂದಿ ಯನ್ನು ಪೊಲೀಸರು ಬಂಧಿಸಿ, 22,300ರೂ ನಗದನ್ನು ವಶಪಡಿಸಿಕೊಂಡಿದ್ದಾರೆ. ವಿಷ್ಣುವರ್ಧನ ಬಿನ್ ವೆಂಕಟ ರಮಾನುಜಯ್ಯ (35), ಸ್ವಾಮಿ ಬಿನ್ ದೇವರಾಜೇಗೌಡ (33), ಜಯರಾಂ ಬಿನ್ ರಾಮೇಗೌಡ (36), ಪರ್ವೀಜ್ ಬಿನ್ ಬಾಬಾಸಾಬ್ (41), ಆಲೂರು ಶಿವಣ್ಣ ಬಿನ್ ರಂಗಸ್ವಾಮಿ (32), ಹರೀಶ್ ಬಿನ್ ಪದ್ಮರಾಜ್ (36), ಮಧು ಬಿನ್ ಮಂಜೇಗೌಡ (31), ರಾಜು ಬಿನ್ ಅಮರ್ ಶೇಖರ್…

ಆಟೋಗೆ ಬಸ್ ಡಿಕ್ಕಿ: ಮೂವರಿಗೆ ಗಾಯ
ಹಾಸನ

ಆಟೋಗೆ ಬಸ್ ಡಿಕ್ಕಿ: ಮೂವರಿಗೆ ಗಾಯ

July 13, 2018

ಹಾಸನ:  ಕೆಎಸ್ ಆರ್‍ಟಿಸಿ ಬಸ್‍ವೊಂದು ಪ್ರಯಾಣಿಕರ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ನಗರದ ಸಮೀಪ ವರ್ತುಲ ರಸ್ತೆಯ ರಾಜೀವ್ ಕಾಲೇಜಿನ ಸಮೀಪ ಗುರು ವಾರ ನಡೆದಿದೆ. ಹಾಸನ-ಅರಸೀಕೆರೆ ನಾಮ ಫಲಕವುಳ್ಳ ಬಸ್ಸೊಂದು ವರ್ತುಲ ರಸ್ತೆಯಲ್ಲಿ ಹೋಗುತ್ತಿದ್ದಾಗ ಆಟೋ ನಡುವೆ ಮುಖಮುಖಿಯಾಗಿ ಅಪಘಾತ ಸಂಭವಿಸಿದೆ. ಈ ಸಂದರ್ಭದಲ್ಲಿ ಆಟೋದಲ್ಲಿದ್ದ ಮೂವರಿಗೆ ಹೆಚ್ಚಿನ ಗಾಯಗಳಾಗಿದ್ದು, ತಕ್ಷಣ ತುರ್ತು ವಾಹನದಲ್ಲಿ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ. ಈ ಸಂಬಂಧ ಬಡಾವಣೆಯ ಪೊಲೀಸ್ ಠಾಣೆಯಲ್ಲಿ…

1 110 111 112 113 114 133
Translate »