ಮಕ್ಕಳಿಗೆ ಸ್ವಚ್ಛತೆಯ ಅರಿವು ಮೂಡಿಸುವುದು ಅವಶ್ಯ
ಹಾಸನ

ಮಕ್ಕಳಿಗೆ ಸ್ವಚ್ಛತೆಯ ಅರಿವು ಮೂಡಿಸುವುದು ಅವಶ್ಯ

July 13, 2018

ಅರಸೀಕೆರೆ:  ‘ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ, ಸ್ವಚ್ಛತೆಯೂ ಅಷ್ಟೇ ಮುಖ್ಯ. ಹಾಗಾಗಿ, ವಿದ್ಯಾರ್ಥಿ ದೆಸೆಯಿಂದಲೇ ಅವರಿಗೆ ಸ್ವಚ್ಛತೆ ಬಗ್ಗೆ ಹೆಚ್ಚು ತಿಳುವಳಿಕೆ ನೀಡುವುದು ಅವಶ್ಯಕವಾಗಿದೆ’ ಎಂದು ಬಿಎಸ್‍ಎಸ್ ಮೈಕ್ರೋ ಫೈನಾನ್ಸ್ ಹಾಸನ ವಿಭಾಗದ ಅಂತರಿಕ ಲೆಕ್ಕಾ ಪರಿ ಶೋಧಕ ವ್ಯವಸ್ಥಾಪಕ ಮೂಡ್ಲಯ್ಯ ಹೇಳಿದರು.

ತಾಲೂಕಿನ ಬೆಂಡೆಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾ ಯಿತಿ, ತಾಲೂಕು ಪಂಚಾಯಿತಿ, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್, ಬಿಎಸ್‍ಎಸ್ ಮೈಕ್ರೋ ಫೈನಾನ್ಸ್, ಗ್ರಾಮ ಪಂಚಾಯಿತಿ ಬೆಂಡೆಕೆರೆ, sಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಬೆಂಡೆಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಂಡೆಕೆರೆ ಯಿಂದ ಬಿಎಸ್‍ಎಸ್ ಮೈಕ್ರೋ ಫೈನಾನ್ಸ್ ಬೆಂಗಳೂರು ರವರ ಕಾರ್ಪೊರೇಟ್ ಸಾಮಾ ಜಿಕ ಜವಾಬ್ದಾರಿ ನಿಧಿ (ಸಿ.ಎಸ್.ಆರ್) ನೆರವಿನಿಂದ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಸಂಸ್ಥೆಯು ಬೆಂಡೆಕೆರೆ ಶಾಲಾ ಮಕ್ಕಳಿಗೆ ನಿರ್ಮಿಸಿರುವ ಶೌಚಾ ಲಯ ಮತ್ತು ವಾಷ್ ಬೇಸಿನ್ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳಲ್ಲಿ ಸಿಗುವ ಸೌಲಭ್ಯಗಳನ್ನು ಶಾಲೆಗಳು ಬಳಸಿಕೊಂಡು ಮಕ್ಕಳಿಗೆ ಮೂಲ ಸೌಲಭ್ಯ ಕಲ್ಪಿಸಿಕೊಡುವ ಮೂಲಕ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಅವಶ್ಯಕತೆ ಇದೆ. ಶೌಚಾಲಯ ನಿರ್ಮಾಣ ಮಾಡುವುದು ಎಷ್ಟು ಮುಖ್ಯವೋ ಅದರ ಬಳಕೆ ಮತ್ತು ನಿರ್ವಹಣೆ ಅಷ್ಟೇ ಮುಖ್ಯ ಎಂದು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಇ.ಸಿ.ಒ ರಂಗನಾಥ್ ಮಾತನಾಡಿ, ನಾವು ನಮ್ಮ ಶಾಲೆ ಮತ್ತು ಮನೆಯ ಪರಿಸರ ಸ್ವಚ್ಛವಾಗಿಟ್ಟುಕೊಂಡರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಯಾವುದೇ ರೋಗ ರುಜಿನಗಳು ಬರುವುದಿಲ್ಲ ಇದು ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸಲು ಸಹಕಾರಿಯಾಗುತ್ತದೆ ಎಂದ ಅವರು, ಮನುಷ್ಯ ಆರೋಗ್ಯವಂತನಾಗಿ ಬದುಕಲು ಸಹಾಯವಾಗುತ್ತದೆ. ಚಿಕ್ಕ ವಯಸ್ಸಿ ನಿಂದಲೇ ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸಬೇಕು. ಶೌಚಾಲಯ ಬಳಸಿದರೆ ಪರಿಸರ ಮಾಲಿನ್ಯವಾಗುವು ದನ್ನು ತಡೆಗಟ್ಟಬಹುದು ಎಂದರು.

ಬಿಎಸ್‍ಎಸ್ ಮೈಕ್ರೋ ಫೈನಾನ್ಸ್ ಹಾಸನ ವಲಯ ವ್ಯವಸ್ಥಾಪಕ ಕೆ.ಹೊನ್ನಪ್ಪ ಮಾತನಾಡಿ, ಸ್ವಯಂ ಸೇವಾ ಸಂಸ್ಥೆಗಳು ಶಾಲೆಗಳ ಮೇಲೆ ವಿಶ್ವಾಸವಿಟ್ಟು ಶಾಲಾ ಭಿವೃದ್ದಿಗಾಗಿ ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿಕೊಡುವ ನಿಟ್ಟಿನಲ್ಲಿ ಶಾಲೆಗಳಿಗೆ ಯಾವುದಾದರೂ ಸೌಲಭ್ಯ ನೀಡಿದರೆ ಅದನ್ನು ಸ್ವೀಕರಿಸಿ ಅದರ ಬಳಕೆ ಮತ್ತು ನಿರ್ವಹಣೆ ಕಡೆ ಹೆಚ್ಚು ಗಮನ ಹರಿಸಿದರೆ ಸಾವಿರಾರು ಮಕ್ಕಳಿಗೆ ಮುಂದಿನ ದಿನಗಳಲ್ಲಿ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಶಾಲೆಗಳು ಕಾರ್ಯನಿರ್ವ ಹಿಸುವ ಅವಶ್ಯಕತೆಯಿದೆ ಎಂದರು.

ಅರಸೀಕೆರೆ ತಾಲೂಕು ಶಿಕ್ಷಣ ಇಲಾಖೆಯ ಹಿರಿಯೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಪ್ರಮೀಳ ಮಾತನಾಡಿ, ಬಯಲಿನಲ್ಲಿ ಮಲ ಮೂತ್ರ ವಿಸರ್ಜನೆ ಮಾಡಿದರೆ ಹಲವಾರು ರೋಗಗಳು ಬರುತ್ತವೆ. ಆದ್ದರಿಂದ ಬಯಲಿ ನಲ್ಲಿ ಮಲ ಮೂತ್ರ ವಿಸರ್ಜನೆ ಮಾಡದೇ ಶೌಚಾ ಲಯ ಬಳಸಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಬೆಂಡೆಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‍ಡಿ ಎಂಸಿ ಅಧ್ಯಕ್ಷ ಚಂದ್ರಪ್ಪ ಹಾಜರಿದ್ದರು.

Translate »