ಮುಸುಕಿನ ಜೋಳ ಕೀಟ ಬಾಧೆ: ಆತಂಕದಲ್ಲಿ ಅನ್ನದಾತ
ಹಾಸನ

ಮುಸುಕಿನ ಜೋಳ ಕೀಟ ಬಾಧೆ: ಆತಂಕದಲ್ಲಿ ಅನ್ನದಾತ

July 13, 2018
  • ಜಿಲ್ಲೆಯಲ್ಲಿ 85,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ, ರೈತರು ಮುಂಜಾಗ್ರತೆ ವಹಿಸಲು ಸಲಹೆ

– ಎಸ್.ಪ್ರತಾಪ್

ಹಾಸನ: ಜಿಲ್ಲೆಯ ಹಲವು ಗ್ರಾಮ ಗಳಲ್ಲಿ ರೈತರು ಬಿತ್ತನೆ ಮಾಡಿದ ಮುಸುಕಿನ ಜೋಳ ಬೆಳೆಗೆ ಕೀಟಗಳ ಬಾಧೆ ಹೆಚ್ಚಾಗಿದ್ದು, ರೈತರು ಆತಂಕಿತರಾಗಿದ್ದಾರೆ.

ಹಾಸನ ತಾಲೂಕಿನ ಸಾಲಗಾಮೆ ಹೋಬಳಿಯ ಶಾಂತಿಗ್ರಾಮ, ಬ್ರಹ್ಮ ದೇವರಹಳ್ಳಿ, ನಿಟ್ಟೂರು ಗ್ರಾಮಗಳು ಹಾಗೂ ಅರಕಲಗೂಡು, ಬೇಲೂರು ಸೇರಿ ದಂತೆ ಜಿಲ್ಲೆಯ ವಿವಿಧೆಡೆ ಮುಸುಕಿನ ಜೋಳವನ್ನು ಬಿತ್ತನೆ ಮಾಡಲಾಗಿದ್ದು, ಪ್ರಸ್ತುತ ಕಾಂಡಕೋರಕ ಕೀಟದ ಹಾವಳಿ ಜಾಸ್ತಿಯಾಗಿದ್ದು, ಎಲೆ ಹಾಗೂ ಸುರುಳಿ ಯನ್ನು ಒಂದೇ ಸಮನೆ ತಿಂದು ಹಾಕು ತ್ತಿದ್ದು, ರೈತರು ಚಿಂತಾಕ್ರಾಂತರಾಗಿದ್ದಾರೆ.

ಕೀಟಬಾಧೆಗೆ ಕಾರಣವೇನು?: ‘ಜಿಲ್ಲೆ ಯಲ್ಲಿ ಪ್ರಸಕ್ತ ವರ್ಷ ಹೆಚ್ಚಿನ ಪ್ರಮಾಣ ದಲ್ಲಿ ಮಳೆಯಾಗಿರುವುದರಿಂದ ಜಿಲ್ಲೆಯ ವಿವಿಧೆಡೆ ಮುಸುಕಿನ ಜೋಳ ಬೆಳೆಗೆ ಕೀಟಬಾಧೆ ಕಾಣಿಸಿಕೊಂಡಿದೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ: ಹಾಸನ ತಾಲೂಕಿನಲ್ಲಿ ಒಟ್ಟು 22,000 ಹೆಕ್ಟೇರ್ ಪ್ರದೇಶ ದಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡ ಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 85,000 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳದ ಬಿತ್ತನೆ ಮಾಡಲಾಗಿದ್ದು, ಹಾಸನ, ಅರಕಲ ಗೂಡು, ಬೇಲೂರು ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಾಂಡಕೋರಕ ಕೀಟದ ಬಾಧೆ ಕಾಣಿಸಿಕೊಂಡಿದೆ. ‘ಕೀಟಬಾಧೆಯು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿಲ್ಲ. ಅದು ಹೆಚ್ಚಿನ ಬಿತ್ತನೆಯಾಗಿರುವ ಪ್ರದೇಶದಲ್ಲಿ ಶೇ. 5ರಿಂದ 10ರಷ್ಟು ಮಾತ್ರ ಕಾಣಿಸಿಕೊಂಡಿದೆ. ಇದರ ನಿಯಂತ್ರಣಕ್ಕೆ ಕೃಷಿ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದು ಹಾಸನ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಡಾ.ಯು.ಎಚ್.ಭಾನುಪ್ರಕಾಶ್ ‘ಮೈಸೂರು ಮಿತ್ರ’ನೊಂದಿಗೆ ತಿಳಿಸಿದರು.

ಹುಳು ನಿಯಂತ್ರಣಕ್ಕೆ ಮನವಿ: ಈ ಭಾಗದಲ್ಲಿ ಜೋಳದ ಬೆಳೆಯಲ್ಲಿ ಹುಳು ಗಳ ಕಾಟ ಕಾಣಿಸಿಕೊಂಡಿದೆ. ಈ ಬೆಳೆಗೆ ರಸಗೊಬ್ಬರ ಹೊರತುಪಡಿಸಿ ಯಾವುದೇ ಕ್ರಿಮಿನಾಶಕವನ್ನು ರೈತರು ಸಿಂಪಡಿಸಿಲ್ಲ. ಆದರೆ, ಕ್ರಿಮಿನಾಶಕವನ್ನು ಸಿಂಪಡಿಸ ಬೇಕಾಗಿರುವುದು ರೈತರಲ್ಲಿ ನೋವುಂಟು ಮಾಡಿದೆ. ಕೃಷಿ ಅಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮಕೈಗೊಂಡು ಮುಸುಕಿನ ಜೋಳದ ಬೆಳೆಯ ರಕ್ಷಣೆಗೆ ರೈತರಿಗೆ ಸೂಕ್ತ ಸಲಹೆ ನೀಡಬೇಕು ಎನ್ನುವುದು ರೈತ ಮುಖಂಡರು ಮನವಿ.

ಕೃಷಿ ಅಧಿಕಾರಿಗಳ ಭೇಟಿ: ಮುಸುಕಿನ ಜೋಳಕ್ಕೆ ಕಾಂಡ ಕೊರಕ ಕಾಟವಿರುವ ಹಾಸನ ತಾಲೂಕಿನ ಸಾಲಗಾಮೆ ಹೋಬಳಿಯ, ಬ್ರಹ್ಮದೇವರಹಳ್ಳಿ, ನಿಟ್ಟೂರು ಗ್ರಾಮದ ಹಲವು ರೈತರ ಜಮೀನು ಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕೆ.ವಿ.ಕೆ. ಕೃಷಿ ವಿಜ್ಞಾನಿ ಶಿವಶಂಕರ್ ಅವರು ಭೇಟಿ ನೀಡಿ ಕೀಟದಿಂದ ಬೆಳೆಗಳು ಹಾನಿ ಮಾಡುತ್ತಿರುವುದನ್ನು ಕಂಡುಕೊಂಡು ಹುಳು ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ರೈತರಿಗೆ ಉಪಯುಕ್ತ ಮಾಹಿತಿ ನೀಡಿದ್ದಾರೆ.

ಕೀಟ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮ

ಮುಸುಕಿನ ಜೋಳದ ಎಲ್ಲ ಗಿಡಗಳಲ್ಲಿಯೂ ಈ ಕಾಂಡ ಕೊರಕ ಕೀಟ ಬಾಧೆ ಕಂಡುಬರು ವುದಿಲ್ಲ. ಇದು ಮಧ್ಯ-ಮಧ್ಯ ಒಂದೊಂದು ಗಿಡಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಇದರ ನಿಯಂತ್ರಣಕ್ಕೆ ರೈತರು ಅಗತ್ಯವಾಗಿ ಎಕರೆಗೆ 5 ರಿಂದ 6 ಕೆ.ಜಿ. ಫೋರೆಟ್ ಹರಳನ್ನು ಬೆಳಗಿನ ವೇಳೆ ಮುಸುಕಿನ ಜೋಳದ ಬಾಧಿತ ಸುರಳಿಗೆ 4-5 ಹರಳು ಹಾಕಬೇಕು. ಫಾಸ್ಪೋಮಿಡಾನ್ 85% Sಐ 1ಮಿ.ಲೀ., ಮಾನೋಕ್ರೋಟೋಫಾಸ್ 36% Sಐ 2 ಮಿ.ಲೀ., ಕಾರ್ಬೊಸಲ್ಫಾನ್ 25% ಇಅ 1ಮಿ.ಲೀ., ಕ್ವಿನಾಲ್‍ಫಾಸ್ 25% ಇಅ 2.5ಮಿ.ಲೀ., ಕ್ಲೋರೋಫೈರಿಫಾಸ್ 20% ಇಅ 2.5 ಮಿ.ಲೀ., ಲ್ಯಾಮ್ಡಾ ಸೈಹ್ಯಾಲೋಥ್ರಿನ್ 5% ಇಅ 1 ಮಿ.ಲೀ., ಪ್ರತಿ ಲೀಟರ್ ನೀರಿಗೆ ಬೆರೆಸಿ ದ್ರಾವಣವನ್ನು ಸಿಂಪಡÀಣೆ ಮಾಡಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಕೀಟ ನಿಯಂತ್ರಣಕ್ಕೆ ಕೃಷಿ ಇಲಾಖೆಯಿಂದ ಕೀಟನಾಶಕ ಔಷಧಿಗಳನ್ನು ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದ್ದು, ರೈತರಿಗೆ ಶೇ. 50ರಷ್ಟು ಸಹಾಯಧನದಡಿ ವಿತರಣೆ ಮಾಡಲಾಗುತ್ತಿದೆ. ರೈತರು ಮಾಹಿತಿಗೆ ಹೋಬಳಿ ಕೇಂದ್ರದಲ್ಲಿರುವ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬೇಕು. –ಡಾ.ಯು.ಎಚ್.ಭಾನುಪ್ರಕಾಶ್,  ಸಹಾಯಕ ಕೃಷಿ ನಿರ್ದೇಶಕ, ಹಾಸನ ತಾಲೂಕು

Translate »