ಹಾಸನ

ಎತ್ತಿನಹೊಳೆ ಕಾಮಗಾರಿ ಚುರುಕುಗೊಳಿಸಿ: ಅಧಿಕಾರಿಗಳಿಗೆ ಸಚಿವ ಡಿ.ಕೆ.ಶಿವಕುಮಾರ್ ಸೂಚನೆ
ಹಾಸನ

ಎತ್ತಿನಹೊಳೆ ಕಾಮಗಾರಿ ಚುರುಕುಗೊಳಿಸಿ: ಅಧಿಕಾರಿಗಳಿಗೆ ಸಚಿವ ಡಿ.ಕೆ.ಶಿವಕುಮಾರ್ ಸೂಚನೆ

July 9, 2018

ಹಾಸನ:  ಹಾಸನ ಜಿಲ್ಲೆ ಸೇರಿದಂತೆ ಬಯಲುಸೀಮೆಯ ವಿವಿಧ ಭಾಗಗಳಿಗೆ ನೀರು ಹರಿಸುವ ಮಹತ್ವಾಕಾಂಕ್ಷಿ ಯೋಜನೆ ಎತ್ತಿನಹೊಳೆಗೆ ಇಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಕಲೇಶಪುರದ ಎತ್ತಿನಹೊಳೆಯಲ್ಲಿ ಸುರಿವ ಮಳೆಯ ನಡುವೆಯೂ ಈವರೆಗೆ ಆಗಿರುವ ಕಾಮಗಾರಿಗಳು ಹಾಗೂ ಮುಂದೆ ಆಗಬೇಕಿರುವ ಕೆಲಸಗಳ ಬಗ್ಗೆ ಅಧಿಕಾರಿಗಳಿಂದ ವಿವರ ಪಡೆದ ಸಚಿವರು, ತ್ವರಿತವಾಗಿ ಯೋಜನೆಯ ಲಾಭ ಬಯಲು ಸೀಮೆಯ ಜನರಿಗೆ ತಲುಪುವಂತೆ ಕಾಲ ಮಿತಿಯೊಳಗೆ ಕೆಲಸ ಪೂರ್ಣಗೊಳಿಸಿ ಎಂದು ನಿರ್ದೇಶನ ನೀಡಿದರು. ಪರಿಶೀಲನೆ…

ವಿದ್ಯೆ, ವಿನಯದೊಂದಿಗೆ ಬದುಕು ರೂಪಿಸಿಕೊಳ್ಳಿ
ಹಾಸನ

ವಿದ್ಯೆ, ವಿನಯದೊಂದಿಗೆ ಬದುಕು ರೂಪಿಸಿಕೊಳ್ಳಿ

July 9, 2018

ಹೊಳೆನರಸೀಪುರ: ವಿದ್ಯೆ ಮತ್ತು ವಿನಯದೊಂದಿಗೆ ಬದುಕು ರೂಪಿಸಿಕೊಳ್ಳಿ ಎಂದು ಟಿ.ಮಾಯಗೌಡನಹಳ್ಳಿಯ ರಾಜಾಪುರ ಮಠದ ಸೋಮಶೇಖರ ಶ್ರೀ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಪಟ್ಟಣದ ಬಸವ ಭವನದಲ್ಲಿ ತಾಲೂಕು ವೀರಶೈವ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಆಶೀರ್ವದಿಸಿದರು . ನಾಗಾಲೋಟದಲ್ಲಿ ಸಾಗುತ್ತಿರವ ಜಗತ್ತಿನಲ್ಲಿ ಪ್ರತಿ ಕ್ಷೇತ್ರದಲ್ಲೂ ಸ್ಪರ್ಧೆ ಕಠಿಣವಾಗಿರುತ್ತದೆ. ವಿದ್ಯಾರ್ಥಿಗಳ ಜೀವನ ಮಹತ್ವದ್ದಾಗಿದ್ದು, ಇಂತಹ ಸಮಯದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದ್ದು, ದೇಶಕ್ಕೆ ಅನುಕೂಲವಾಗುವ ಕೊಡುಗೆಯನ್ನು ನೀಡಬೇಕು ಎಂದು ಸಲಹೆ ನೀಡಿದರು….

ಆಲೂರಿನಲ್ಲಿ ಡಿಸಿಯಿಂದ ಸಾರ್ವಜನಿಕರ ಕುಂದು ಕೊರತೆ ಸ್ವೀಕಾರ
ಹಾಸನ

ಆಲೂರಿನಲ್ಲಿ ಡಿಸಿಯಿಂದ ಸಾರ್ವಜನಿಕರ ಕುಂದು ಕೊರತೆ ಸ್ವೀಕಾರ

July 8, 2018

ಆಲೂರು: ತಾಲೂಕು ಕಚೇರಿಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧ್ಯಕ್ಷತೆಯಲ್ಲಿ ನಡೆದ ಸಾರ್ವ ಜನಿಕರ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆಯಲ್ಲಿ 190ಕ್ಕೂ ಹೆಚ್ಚು ದೂರು ಸಲ್ಲಿಕೆಯಾದವು. ಬೆಳಿಗ್ಗೆಯಿಂದಲೇ ನೂರಾರು ಮಂದಿ ಹಾಜರಾಗಿ ಜಿಲ್ಲಾಧಿಕಾರಿ ಅವರ ಮುಂದೆ ತಮ್ಮ ಅಳಲು ತೋಡಿಕೊಂಡರು. ರೈತರ ಜಮೀನಿನ ಸರ್ವೇ ಕಾರ್ಯ, ಜಮೀನು ಮಂಜೂರಾತಿ, ಯೋಜನಾ ನಿರಾಶ್ರಿತರಿಗೆ ಜಮೀನು ಹಕ್ಕು ಪತ್ರ ವಿತರಣೆ ಸೇರಿದಂತೆ ವಿವಿಧ ರೀತಿಯ 190ಕ್ಕೂ ಅಧಿಕ ಅರ್ಜಿ ಗಳು ಸಲ್ಲಿಕೆಯಾದವು. ಪಟ್ಟಣದ ಎಪಿಎಂಸಿ ಮಾರುಕಟ್ಟೆ, ಅಗ್ನಿಶಾಮಕ ಠಾಣೆ, ಕೆಎಸ್‍ಆರ್‍ಟಿಸಿ…

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ಹಾಸನ

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

July 8, 2018

ಅರಸೀಕೆರೆ: ವಿವಿಧ ಬೇಡಿಕೆ ಈಡೇರಿಸುವಂತೆ ನಗರದಲ್ಲಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಎಐಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಪ್ರವಾಸಿ ಮಂದಿರದಿಂದ ಮೆರ ವಣಿಗೆ ಹೊರಟ ಪ್ರತಿಭಟನಾಕಾರರು, ಸಿಡಿಪಿಓ ಕಚೇರಿಯಲ್ಲಿ ಕೆಲಕಾಲ ಪ್ರತಿಭಟಿಸಿ ನಂತರ ತಾಲೂಕು ಕಚೇರಿಯಲ್ಲಿ ಜಮಾಯಿಸಿ ಬೇಡಿಕೆ ಈಡೇರಿಕೆ ಆಗ್ರಹಿಸಿದರು. ಎಐಟಿಯುಸಿ ರಾಜ್ಯಾಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಅಂಗನ ವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ. ಅತೀ ತುರ್ತಾಗಿ ಕಟ್ಟಡಗಳು ನಿರ್ಮಾಣ ವಾಗಬೇಕಿದೆ. ಮಿನಿ ಅಂಗನವಾಡಿ ಕೇಂದ್ರ ಗಳಿಗೆ ಸಹಾಯಕಿಯರನ್ನು ತುರ್ತಾಗಿ…

ಖಾಸಗಿ ಬಸ್ ಪಂಚರ್; ಪರದಾಡಿದ ಪ್ರಯಾಣಿಕರು
ಹಾಸನ

ಖಾಸಗಿ ಬಸ್ ಪಂಚರ್; ಪರದಾಡಿದ ಪ್ರಯಾಣಿಕರು

July 8, 2018

ಹಾಸನ: ಖಾಸಗಿ ಟ್ರಾವೆಲ್ಸ್ ಮಾಲೀಕನ ನಿರ್ಲಕ್ಷ್ಯ ಹಾಗೂ ಬಸ್ ಟೈರ್ ಸ್ಫೋಟದಿಂದ ಇಡೀ ರಾತ್ರಿ ರಸ್ತೆಯಲ್ಲಿ ಕಳೆಯ ಬೇಕಾದ ಘಟನೆ ಬೆಳ್ಳೂರು ಬಳಿ ನಡೆದಿದೆ. ಬೆಂಗಳೂರಿನಿಂದ ಹಾಸನ ಮೂಲಕ ಮಂಗಳೂರಿಗೆ ತೆರಳುತ್ತಿದ್ದ 45 ಪ್ರಯಾಣಿಕರಿದ್ದ ಎಸ್.ಎಂ.ಟ್ರಾವೆಲ್ಸ್ ಬಸ್ಸು ತಡ ರಾತ್ರಿ 1.30ರ ಸಮಯದಲ್ಲಿ ಬೆಳ್ಳೂರು ಕ್ರಾಸ್ ಬಳಿ ಎರಡು ಟೈರುಗಳು ಸ್ಫೋಟ ಗೊಂಡು ಕೆಟ್ಟು ನಿಂತಿತು. ಸ್ಟೆಪ್ನಿ ಇಲ್ಲ ದ್ದರಿಂದ ಪ್ರಯಾಣಿಕರು ಮುಂಜಾನೆವರೆಗೂ ಬಸ್‍ನಲ್ಲೇ ಕಾಲ ಕಳೆಯು ವಂತಾಯಿತು. ಬಸ್ ಕೆಟ್ಟು ನಿಂತ ವಿಷಯ ತಿಳಿಸಲು ಟ್ರಾವೆಲ್ಸ್…

ಜಿಟಿಜಿಟಿ ಮಳೆಯಲ್ಲೂ ಡಿಸಿಗೆ ಅಹವಾಲು ಸಲ್ಲಿಕೆ
ಹಾಸನ

ಜಿಟಿಜಿಟಿ ಮಳೆಯಲ್ಲೂ ಡಿಸಿಗೆ ಅಹವಾಲು ಸಲ್ಲಿಕೆ

July 7, 2018

ಬೇಲೂರು: ತಾಲೂಕು ಪ್ರವಾಸ ಮುಂದುವರೆಸಿರುವ ಡಿಸಿ ರೋಹಿಣಿ ಸಿಂಧೂರಿ ಪಟ್ಟಣದಲ್ಲಿಂದು ವಿವಿಧ ಇಲಾಖೆ ಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲು ಆಲಿಸಿದರು. ಸುರಿಯುವ ಮಳೆ ಯಲ್ಲೂ ನೂರಾರು ಮಂದಿ ಜಿಲ್ಲಾಧಿಕಾರಿ ಬಳಿ ತಮ್ಮ ಅಳಲು ತೋಡಿಕೊಂಡರು. ಬೇಲೂರು ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ರಿಂದ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆಯಲ್ಲಿ ಸುಮಾರು ನಾಲ್ಕೂವರೆ ಗಂಟೆ ಕಾಲ ಸಾರ್ವಜನಿಕರಿಂದ 345ಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಲಾಯಿತು. ಬೆಳಿಗ್ಗೆಯಿಂದಲೇ ತುಂತುರು ರೀತಿ ಆರಂಭ ವಾದ ಮಳೆ ಸಭೆಗೆ ಅಡ್ಡಿ ಪಡಿಸಿತು….

ಭಗತ್‍ಸಿಂಗ್ ವೃತ್ತದಲ್ಲಿ ಆಟೋ ನಿಲುಗಡೆಗೆ ಒತ್ತಾಯ
ಹಾಸನ

ಭಗತ್‍ಸಿಂಗ್ ವೃತ್ತದಲ್ಲಿ ಆಟೋ ನಿಲುಗಡೆಗೆ ಒತ್ತಾಯ

July 7, 2018

ಹಾಸನ: ನಗರದ ದೇವಿಗೆರೆ ಸಮೀಪದ ಭಗತ್‍ಸಿಂಗ್ ವೃತ್ತದಲ್ಲಿ ಆಟೋ ನಿಲುಗಡೆಗೆ ಅವಕಾಶ ನೀಡುವಂತೆ ಒತ್ತಾ ಯಿಸಿ ಆಟೋ ಚಾಲಕರು ಮತ್ತು ಮಾಲೀಕರು ಜಿಲ್ಲಾಧಿಕಾರಿ ಕಚೇರಿ ಎದುರಿನ ಬಿ.ಎಂ. ರಸ್ತೆಯಲ್ಲಿ ಆಟೋ ನಿಲ್ಲಿಸಿ ಪ್ರತಿಭಟಿಸಿದರು. ಕಳೆದ ಹಲವು ವರ್ಷಗಳಿಂದ ಭಗತ್ ಸಿಂಗ್ ವೃತ್ತದ ರಸ್ತೆಬದಿ ಆಟೋ ನಿಲ್ದಾಣ ಮಾಡಿಕೊಂಡು, ಯಾರಿಗೂ ತೊಂದರೆ ಯಾಗದಂತೆ ಜೀವನ ನಡೆಸುತ್ತಿದ್ದೆವು ಆದರೆ ಇತ್ತೀಚಿಗೆ ಪೊಲೀಸ್ ಸಿಬ್ಬಂದಿ ವೃತ್ತದಲ್ಲಿ ಟ್ರಾಫಿಕ್ ಜಾಮ್ ನೆಪ ಹೇಳಿ ಆಟೋ ನಿಲ್ಲಿಸದಂತೆ ನಿಷೇಧ ಏರಿದ್ದಾರೆ. ಇದರಿಂದ ನಾವು ತೀವ್ರ…

ಪೆಟ್ಟಿಗೆ ಅಂಗಡಿಗೆ ಕಿಡಿಗೇಡಿಗಳು ಬೆಂಕಿ
ಹಾಸನ

ಪೆಟ್ಟಿಗೆ ಅಂಗಡಿಗೆ ಕಿಡಿಗೇಡಿಗಳು ಬೆಂಕಿ

July 7, 2018

ಹೊಳೆನರಸೀಪುರ: ಪಟ್ಟಣದ ತಾಲೂಕು ಕಚೇರಿ ಸಮೀಪದ ಪೆಟ್ಟಿಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಇಂದು ಮುಂಜಾನೆ ಸಂಭವಿಸಿದ್ದು, ಅಂದಾಜು 25 ಸಾವಿರ ರೂ. ನಷ್ಟ ಸಂಭವಿಸಿದೆ. ಪಟ್ಟಣದ ಕಿಕ್ಕೇರಮ್ಮನ ಕೊತ್ತಲು ನಿವಾಸಿಗಳಾದ ಭಾಗ್ಯ, ಶಿವಣ್ಣ ದಂಪತಿ ತಾಲೂಕು ಕಚೇರಿ ಮುಂಭಾಗದಲ್ಲಿ ಹತ್ತಾರು ವರ್ಷದಿಂದ ಪೆಟ್ಟಿಅಂಗಡಿ ಇಟ್ಟು ಕೊಂಡು ಕಾಫಿ-ಟೀ ಮಾರಿಕೊಂಡು ಜೀವನ ಸಾಗಿಸುತ್ತಿದ್ದರು. ಈ ವ್ಯವಹಾರವೇ ಜೀವನದ ಆದಾಯದ ಮೂಲವಾಗಿತ್ತು. ಇಂದು ಮುಂಜಾನೆ ಈ ಪೆಟ್ಟಿಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದು, ಅಂಗಡಿ ಸುಟ್ಟು ಕರಕಲಾಗಿದೆ. ವ್ಯಾಪಾರದ…

ಶಿಸ್ತು, ಸಹನೆಯಿಂದ ಗುರಿ ಸಾಧನೆ ಸುಲಭ: ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯ
ಹಾಸನ

ಶಿಸ್ತು, ಸಹನೆಯಿಂದ ಗುರಿ ಸಾಧನೆ ಸುಲಭ: ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯ

July 6, 2018

ಅರಸೀಕೆರೆ: ವಿದ್ಯಾರ್ಥಿಗಳು ಶಿಸ್ತು, ಸಹನೆ ಮತ್ತು ಆತ್ಮವಿಶ್ವಾಸವನ್ನು ಮೈ ಗೂಡಿಸಿಕೊಂಡಾಗ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ನಗರದ ವೆಂಕಟೇಶ್ವರ ಕಲಾಭವನದಲ್ಲಿ ಆದಿಚುಂಚನಗಿರಿ ಶಾಲೆ ವತಿಯಿಂದ ಹಮ್ಮಿ ಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾಭ್ಯಾಸ ಎನ್ನುವುದು ಪ್ರತಿ ವ್ಯಕ್ತಿಯ ಜೀವನದಲ್ಲಿ ಬರುವ ಅತ್ಯ ಮೂಲ್ಯ ಕ್ಷಣಗಳು. ಇದರಲ್ಲಿ ಸಾಧನೆಗೈದು ಗುರಿ ಮುಟ್ಟಿದಲ್ಲಿ ಇಡೀ ಸಮಾಜವೇ ಗುರು ತಿಸುತ್ತದೆ. ಹಾಗಾಗಿ, ಜೀವನದಲ್ಲಿ ಪ್ರತಿ ವಿದ್ಯಾರ್ಥಿಗಳು ಆತ್ಮಸ್ಥೈರ್ಯವನ್ನಿಟ್ಟು…

ಭತ್ತದ ಖರೀದಿ ಕೇಂದ್ರ ತೆರೆಯಲು ಡಿಸಿ ಸೂಚನೆ
ಹಾಸನ

ಭತ್ತದ ಖರೀದಿ ಕೇಂದ್ರ ತೆರೆಯಲು ಡಿಸಿ ಸೂಚನೆ

July 6, 2018

ಹಾಸನ: ‘ರಾಜ್ಯ ಸರ್ಕಾರದ ಸೂಚನೆಯಂತೆ ಕೂಡಲೇ ಕನಿಷ್ಠ ಬೆಂಬಲ ಬೆಲೆಯೊಂದಿಗೆ ಭತ್ತ ಖರೀದಿಗೆ ಅಗತ್ಯವಿರುವ ಕಡೆಗಳಲ್ಲಿ ಖರೀದಿ ಕೇಂದ್ರ ತೆರೆಯಲು ಅಧಿಕಾರಿಗಳು ಕ್ರಮಕೈಗೊಳ್ಳ ಬೇಕು’ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಭತ್ತ ಖರೀದಿ ಕೇಂದ್ರ ತೆರೆಯುವ ಕುರಿ ತಂತೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಹೊಳೆನರಸೀಪುರದಲ್ಲಿ ಈ ಬಾರಿ ಹೆಚ್ಚಾಗಿ ಹಿಂಗಾರು ಋತುವಿನಲ್ಲಿ (ಬೇಸಿಗೆ ಬೆಳೆ) ಭತ್ತ…

1 112 113 114 115 116 133
Translate »