ಶಿಸ್ತು, ಸಹನೆಯಿಂದ ಗುರಿ ಸಾಧನೆ ಸುಲಭ: ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯ
ಹಾಸನ

ಶಿಸ್ತು, ಸಹನೆಯಿಂದ ಗುರಿ ಸಾಧನೆ ಸುಲಭ: ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯ

July 6, 2018

ಅರಸೀಕೆರೆ: ವಿದ್ಯಾರ್ಥಿಗಳು ಶಿಸ್ತು, ಸಹನೆ ಮತ್ತು ಆತ್ಮವಿಶ್ವಾಸವನ್ನು ಮೈ ಗೂಡಿಸಿಕೊಂಡಾಗ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ನಗರದ ವೆಂಕಟೇಶ್ವರ ಕಲಾಭವನದಲ್ಲಿ ಆದಿಚುಂಚನಗಿರಿ ಶಾಲೆ ವತಿಯಿಂದ ಹಮ್ಮಿ ಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾಭ್ಯಾಸ ಎನ್ನುವುದು ಪ್ರತಿ ವ್ಯಕ್ತಿಯ ಜೀವನದಲ್ಲಿ ಬರುವ ಅತ್ಯ ಮೂಲ್ಯ ಕ್ಷಣಗಳು. ಇದರಲ್ಲಿ ಸಾಧನೆಗೈದು ಗುರಿ ಮುಟ್ಟಿದಲ್ಲಿ ಇಡೀ ಸಮಾಜವೇ ಗುರು ತಿಸುತ್ತದೆ. ಹಾಗಾಗಿ, ಜೀವನದಲ್ಲಿ ಪ್ರತಿ ವಿದ್ಯಾರ್ಥಿಗಳು ಆತ್ಮಸ್ಥೈರ್ಯವನ್ನಿಟ್ಟು ಕೊಂಡು ವಿದ್ಯಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.

ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗುವುದ ರಲ್ಲಿ ಯಾವುದೇ ಸಂಶಯವಿಲ್ಲ. ಪ್ರತಿ ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಶ್ರಮ ವಹಿಸಿ ದುಡಿಯುತ್ತಾರೆ. ಈ ಬಗ್ಗೆ ವಿದ್ಯಾರ್ಥಿ ಗಳು ಅರಿವು ಪಡೆದು ಸನ್ಮಾರ್ಗದಲ್ಲಿ ನಡೆಯುವ ಮೂಲಕ ಪೋಷಕರ ಗೌರವ ಕಾಪಾಡಬೇಕು. ಪೋಷಕರು ತಮ್ಮ ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿ ಮಾಡಬೇಕು ಎಂದರು.

ವಿದ್ಯಾರ್ಥಿಗಳು ತಮ್ಮ ಬಾಲ್ಯಾವಸ್ಥೆ ಯಿಂದ ಹಿಡಿದು 25 ವರ್ಷಗಳನ್ನು ಸರಿ ಯಾಗಿ ನಿರ್ವಹಣೆ ಮಾಡಿಕೊಂಡರೇ ಇಡೀ ಜೀವನವು ಸುಖಕರವಾಗಿರುತ್ತದೆ. ಓದಿನ ಸಮಯದಲ್ಲಿ ಉತ್ತಮವಾದದ್ದನ್ನು, ಒಳ್ಳೆಯ ಗೆಳೆಯರ ಆಯ್ಕೆಯನ್ನು ಮಾಡಿ ಕೊಳ್ಳಬೇಕು. ಓದಿನ ಸಮಯದಲ್ಲಿ ಗೊಂದಲಕ್ಕೆ ಸಿಲುಕಿದಾಗ ಶಿಕ್ಷಕರನ್ನು ನೇರ ಪ್ರಶ್ನಿಸಿ ಉತ್ತರ ಪಡೆಯಬೇಕು. ಪ್ರತಿ ಮಕ್ಕಳಿಗೆ ಪೋಷಕರು ಎಷ್ಟೇ ಕಷ್ಟಗಳು ಇದ್ದರೂ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಾರೆ. ಆದರೆ ವಿದ್ಯಾರ್ಥಿಗಳು ಸಮಾಜದಲ್ಲಿ ಎತ್ತರಕ್ಕೆ ಬೆಳೆದು, ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡುವ ಪ್ರವೃತ್ತಿಯನ್ನು ಬೆಳೆಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಾಸನದ ಆದಿಚುಂಚನಗಿರಿ ಶಾಖಾ ಮಠದ ಶ್ರೀಶಂಭುನಾಥ ಸ್ವಾಮೀಜಿ ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳು ಜೀವನ ಕಟ್ಟಲು ಓದು ಎಂಬ ತಳಪಾಯವನ್ನು ಮೊದಲು ಸುಭದ್ರವಾಗಿ ಕಟ್ಟಬೇಕು. ವಿದ್ಯೆ ಎಂಬುದು ಬೆಲೆ ಕಟ್ಟಲಾಗದ ಮತ್ತು ಕದಿಯ ಲಾಗದ ಆಸ್ತಿ. ಓದಿನ ಸಮಯವನ್ನು ವ್ಯರ್ಥ ಮಾಡದೇ ಶಿಕ್ಷಣದ ಕಡೆ ಹೆಚ್ಚು ಗಮನ ಹರಿಸಬೇಕು. ನಮ್ಮ ವಿದ್ಯಾಸಂಸ್ಥೆ ಗಳು ಎಲ್ಲರನ್ನು ಒಂದೇ ರೀತಿ ಕಾಣಲಿದ್ದು ಇಲ್ಲಿ ಭೇದ ಭಾವವನ್ನು ತೋರುವುದಿಲ್ಲ. ಇಲ್ಲಿ ನಾವು ಜ್ಞಾನದ ಮಾರ್ಗವನ್ನು ತೋರಿಸುತ್ತಿದ್ದೇವೆ. ಇದನ್ನು ಸಮರ್ಪಕವಾಗಿ ಎಲ್ಲಾ ವಿದ್ಯಾರ್ಥಿ ಗಳು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ವಿದ್ಯಾರ್ಥಿಯ ಪೋಷಕರನ್ನು ಗೌರವಿಸಲಾಯಿತು. ಆದಿಹಳ್ಳಿ ಶಾಖಾಮಠದ ಶಿವಪುತ್ರ ಸ್ವಾಮೀಜಿ, ಒಕ್ಕಲಿಗ ಸಂಘ ಅಧ್ಯಕ್ಷ ಅನಂತ್‍ಕುಮಾರ್, ಆದಿ ಚುಂಚನಗಿರಿ ಪದವಿಪೂರ್ವ ಕಾಲೇಜಿನ ಪ್ರಾಂಶು ಪಾಲ ಲಿಂಗರಾಜು, ನಾಗೇಶ್ ಹಾಜರಿದ್ದರು.

Translate »