ಹಾಸನ: ನಗರದ ದೇವಿಗೆರೆ ಸಮೀಪದ ಭಗತ್‍ಸಿಂಗ್ ವೃತ್ತದಲ್ಲಿ ಆಟೋ ನಿಲುಗಡೆಗೆ ಅವಕಾಶ ನೀಡುವಂತೆ ಒತ್ತಾ ಯಿಸಿ ಆಟೋ ಚಾಲಕರು ಮತ್ತು ಮಾಲೀಕರು ಜಿಲ್ಲಾಧಿಕಾರಿ ಕಚೇರಿ ಎದುರಿನ ಬಿ.ಎಂ. ರಸ್ತೆಯಲ್ಲಿ ಆಟೋ ನಿಲ್ಲಿಸಿ ಪ್ರತಿಭಟಿಸಿದರು.
ಕಳೆದ ಹಲವು ವರ್ಷಗಳಿಂದ ಭಗತ್ ಸಿಂಗ್ ವೃತ್ತದ ರಸ್ತೆಬದಿ ಆಟೋ ನಿಲ್ದಾಣ ಮಾಡಿಕೊಂಡು, ಯಾರಿಗೂ ತೊಂದರೆ ಯಾಗದಂತೆ ಜೀವನ ನಡೆಸುತ್ತಿದ್ದೆವು ಆದರೆ ಇತ್ತೀಚಿಗೆ ಪೊಲೀಸ್ ಸಿಬ್ಬಂದಿ ವೃತ್ತದಲ್ಲಿ ಟ್ರಾಫಿಕ್ ಜಾಮ್ ನೆಪ ಹೇಳಿ ಆಟೋ ನಿಲ್ಲಿಸದಂತೆ ನಿಷೇಧ ಏರಿದ್ದಾರೆ. ಇದರಿಂದ ನಾವು ತೀವ್ರ ತೊಂದರೆ ಅನುಭವಿಸ ಬೇಕಾಗಿದೆ ಎಂದು ಅಳಲು ತೋಡಿಕೊಂಡರು.
ಭಗತ್‍ಸಿಂಗ್ ವೃತ್ತದ ರಸ್ತೆ ಬದಿ ಆಟೋ ನಿಲ್ಲಿಸಿದರೆ 100 ರೂ.ನಿಂದ 1,500 ರೂ.ಗಳವರೆಗೂ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ದಿನಕ್ಕೆ 500 ರೂ.ಗಳನ್ನು ದುಡಿಯಲು ಕಷ್ಟ ಇರುವಾಗ ಅಷ್ಟೊಂದು ದಂಡ ಪಾವತಿಸಲು ಸಮಸ್ಯೆ ಆಗುತ್ತದೆ. ಹಿಂದೆ ನಮ್ಮ ಆಟೋಗಳನ್ನು ನಿಲುಗಡೆ ಜಾಗದಿಂದ ಖಾಲಿ ಮಾಡಿಸಿ ಈಗ ಬೈಕ್ ಮತ್ತು ಕಾರುಗಳ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ. ಹಿಂದೆ ಟ್ರಾಫಿಕ್ ಜಾಮ್ ನೆಪ ಹೇಳಿ ಆಟೋಗಳನ್ನು ತೆರವು ಗಳಿಸಲಾಗಿತ್ತು. ಈಗ ವಾಹನ ಪಾರ್ಕಿಂಗ್ ನಿಂದಲೇ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾ ಗುತ್ತಿದೆ ಎಂದು ದೂರಿದರಲ್ಲದೆ, ಭಗತ್ ಸಿಂಗ್ ವೃತ್ತದಲ್ಲಿ ಆಟೋ ನಿಲ್ಲಿಸಲು ಅವಕಾಶ ಕೊಡುವಂತೆ ಒತ್ತಾಯಿಸಿದರು.
ಆಟೋ ಚಾಲಕರು ಸೇವೆ ಸ್ಥಗಿತಗೊಳಿಸಿ ಬಿ.ಎಂ.ರಸ್ತೆಯುದ್ದಕ್ಕೂ ತಮ್ಮ ಆಟೋವನ್ನು ನಿಲ್ಲಿಸಿದ್ದರು. ವಿಷಯ ತಿಳಿದು ಸ್ಥಳ ಕ್ಕಾಮಿಸಿದ ಪೊಲೀಸರು ಅದೇ ಸ್ಥಳದಲ್ಲಿ 5 ಆಟೋವನ್ನು ಮಾತ್ರ ನಿಲ್ಲಿಸಲು ಅವಕಾಶ ಕೊಡುವುದಾಗಿ ಭರವಸೆ ನೀಡಿದರು. ಇದೇ ವೇಳೆ ನೊಂದ ಆಟೋ ಚಾಲಕರಾದ ಎಂ.ಪ್ರಸಾದ್, ರಾಜು, ಬಂಟಿ, ಕೇಶವ, ಗಿರೀಶ್, ರವಿಕಿರಣ್, ಹರೀಶ್, ಮೋಹನ್, ರಮೇಶ್ ಇತರರಿದ್ದರು