ಜಿಟಿಜಿಟಿ ಮಳೆಯಲ್ಲೂ ಡಿಸಿಗೆ ಅಹವಾಲು ಸಲ್ಲಿಕೆ
ಹಾಸನ

ಜಿಟಿಜಿಟಿ ಮಳೆಯಲ್ಲೂ ಡಿಸಿಗೆ ಅಹವಾಲು ಸಲ್ಲಿಕೆ

July 7, 2018

ಬೇಲೂರು: ತಾಲೂಕು ಪ್ರವಾಸ ಮುಂದುವರೆಸಿರುವ ಡಿಸಿ ರೋಹಿಣಿ ಸಿಂಧೂರಿ ಪಟ್ಟಣದಲ್ಲಿಂದು ವಿವಿಧ ಇಲಾಖೆ ಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲು ಆಲಿಸಿದರು. ಸುರಿಯುವ ಮಳೆ ಯಲ್ಲೂ ನೂರಾರು ಮಂದಿ ಜಿಲ್ಲಾಧಿಕಾರಿ ಬಳಿ ತಮ್ಮ ಅಳಲು ತೋಡಿಕೊಂಡರು.

ಬೇಲೂರು ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ರಿಂದ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆಯಲ್ಲಿ ಸುಮಾರು ನಾಲ್ಕೂವರೆ ಗಂಟೆ ಕಾಲ ಸಾರ್ವಜನಿಕರಿಂದ 345ಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಲಾಯಿತು. ಬೆಳಿಗ್ಗೆಯಿಂದಲೇ ತುಂತುರು ರೀತಿ ಆರಂಭ ವಾದ ಮಳೆ ಸಭೆಗೆ ಅಡ್ಡಿ ಪಡಿಸಿತು. ಆದರೆ ಸಾರ್ವಜನಿಕರು ಮಳೆಯನ್ನೂ ಲೆಕ್ಕಿಸಿದೆ ಜಿಲ್ಲಾಧಿಕಾರಿಗಳ ಬಳಿ ಆಗಮಿಸಿ ತಮ್ಮ ಅಹ ವಾಲು ಸಲ್ಲಿಸಿದರು. ತಾಲೂಕು ಕಚೇರಿ ಆವರಣದಲ್ಲಿ ಪೆಂಡಾಲ್ ಹಾಕಿದ್ದರಿಂದ ಸಾರ್ವ ಜನಿಕರಿಗೆ ಅಷ್ಟೇನು ತೊಂದರೆಯಾ ಗದಿದ್ದರೂ ಸಭೆಗೆ ಆಗಮಿಸುವಾಗ. ಕೊಡೆ ಹಿಡಿದುಕೊಂಡು ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಜಮೀನು ಸರ್ವೇ ಸಮಸ್ಯೆ, ಬಗರ್ ಹುಕುಂ ಮಂಜೂರಾತಿ, ಯೋಜನಾ ನಿರಾಶ್ರಿತರ ಭೂ ಮಂಜೂರಾತಿ, ಗ್ರಾಮ ಠಾಣಾ ದುರಸ್ತಿ, ಅಕ್ರಮ ಒತ್ತುವರಿ ತೆರವು ಸೇರಿದಂತೆ ಸ್ಥಳೀಯ ಗ್ರಾಪಂ ಹಂತದ ಸಮಸ್ಯೆಗಳ ಕುರಿತು ಹೆಚ್ಚು ಮನವಿಗಳು ಸಲ್ಲಿಕೆಯಾದವು. ಹಲವು ವರ್ಷಗಳಿಂದ ಜಮೀನಿನ ಹಕ್ಕು ಪತ್ರ ಸಿಕ್ಕಿಲ್ಲ, ಖಾತೆ ವರ್ಗಾವಣೆಯಾಗಿಲ್ಲ ಎಂದು ಹಲವರು ಮನವಿ ಮಾಡಿದರು. ದೀರ್ಘ ಕಾಲದಿಂದಲೂ ಬಾಕಿ ಇರುವ ತಕರಾರು ಇಲ್ಲದ ಪ್ರಕರಣಗಳನ್ನು ಆದ್ಯತೆ ಮೇಲೆ ಪರಿಹರಿಸುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಪಟ್ಟಣದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಮೂಲ ಸೌಕರ್ಯಾಭಿವೃದ್ಧಿ, ರಸ್ತೆ ವಿಸ್ತರಣೆ, ಚನ್ನಕೇಶವ ದೇವಾಲಯದ ಅಭಿವೃದ್ಧಿ ಕುರಿತು ಸಹ ಹಲವರು ಮನವಿ ಸಲ್ಲಿಸಿದರು. ಪ್ರತಿಯೊಂದು ಅರ್ಜಿಗಳ ಕುರಿತು ಸಮಾಧಾನದಿಂದ ಆಲಿಸಿದ ಡಿಸಿ ರೋಹಿಣಿ ಸಿಂಧೂರಿ, ನ್ಯಾಯ ಸಮ್ಮತ ಮನವಿಗಳನ್ನು ಕಾಲಮಿತಿಯೊಳಗೆ ಇತ್ಯರ್ಥ ಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ಸರ್ವೇ, ಪೋಡು ಕಾರ್ಯಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸುವಂತೆ ಭೂದಾಖಲೆಗಳ ಇಲಾಖೆಗೆ ನಿರ್ದೇಶನ ನೀಡಿದರು. ಬೇಲೂರಿನಂತೆ ಹಳೆಬೀಡು ಕೂಡ ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಅಲ್ಲೂ ಮೂಲ ಸೌಕರ್ಯ ಅಭಿವೃದ್ಧಿಯಾಗಬೇಕು, ತಾಲೂಕಿನಲ್ಲಿ ರಸ್ತೆಗಳ ಅಭಿವೃದ್ಧಿ ಹಾಗೂ ಗ್ರಾಮೀಣ ಭಾಗಕ್ಕೆ ಕುಡಿಯುವ ನೀರು ಸರಬರಾಜು ಮಾಡಬೇಕು. ಅಕ್ರಮ ಮದ್ಯ ಮಾರಾಟ ಸ್ಥಗಿತಗೊಳಿಸಬೇಕು. ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿ, ಹೊರ ಗುತ್ತಿಗೆ ನೌಕರರನ್ನು ಖಾಯಂ ಗೊಳಿಸು ವಂತೆ ಜನತೆ ಒತ್ತಾಯಿಸಿದರು. ಯಗಚಿ ಹಿನ್ನೀರಿನಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಮೀನುಗಾರರು ಮನವಿ ಮಾಡಿದರು.

ಸುಲಭವಾಗಿ ಆಗಬಹುದಾದ ಕೆಲಸ ಗಳಿಗೆ ಸಾರ್ವಜನಿಕರನ್ನು ಅಲೆದಾಡಿಸದೆ ಆದಷ್ಟು ಶೀಘ್ರವಾಗಿ ಸೇವೆ ಒದಗಿಸುವಂತೆ ಕಂದಾಯ ಮತ್ತು ಇತರ ಇಲಾಖಾಧಿ ಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಅರ್ಜಿ ಗಳನ್ನು ಇಲಾಖಾವಾರು ವರ್ಗೀಕರಿಸಿ ವಿಲೇ ವಾರಿ ಮಾಡುವಂತೆ ನಿರ್ದೇಶನ ನೀಡಿದರು.

ಪಪಂ ಸ್ವಚ್ಛತೆ, ಮೂಲಸೌಕರ್ಯದ ಬಗ್ಗೆ ಗಮನ ಹರಿಸುವಂತೆ ಪ್ರವಾಸೋದ್ಯಮ ಇಲಾಖೆಗೆ ತಿಳಿಸಿದರು. ಸಭೆಯಲ್ಲಿ ಎಸಿ ಲಕ್ಷ್ಮೀಕಾಂತ ರೆಡ್ಡಿ, ತಹಶೀಲ್ದಾರ್ ಉಮೇಶ್, ತಾಪಂ ಇಓ ಮಲ್ಲೇಶ್, ಪಪಂ ಮುಖ್ಯಾ ಧಿಕಾರಿ ಮಂಜುನಾಥ್ ಮತ್ತಿತರರಿದ್ದರು.

Translate »