ಉದ್ಘಾಟನೆಯಾಗದ ಇಂದಿರಾ ಕ್ಯಾಂಟೀನ್
ಹಾಸನ

ಉದ್ಘಾಟನೆಯಾಗದ ಇಂದಿರಾ ಕ್ಯಾಂಟೀನ್

July 13, 2018

ಬೇಲೂರು: ಕಾಂಗ್ರೆಸ್ ಸರ್ಕಾರದ ಮಹತ್ತರ ಯೋಜನೆ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಳ್ಳದೆ ಪಟ್ಟಣದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಯೋಜನೆಯಾದ ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ಇಲ್ಲಿನ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗದಲ್ಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತುರಾತುರಿಯಲ್ಲಿ ನಿರ್ಮಿಸಲಾಗಿತ್ತಾದರೂ ಇದುವರೆಗೂ ಕ್ಯಾಂಟೀನ್ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಿಲ್ಲ. ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭ ವಾಗಿ ಕಡಿಮೆ ದರದಲ್ಲಿ ಊಟ ಉಪಹಾರ ದೊರೆಯುತ್ತದೆ ಎಂಬ ಬಹು ನೀರಿಕ್ಷೆ ಯಲ್ಲಿದ್ದ ಬಡವರು, ಕೂಲಿ ಕಾರ್ಮಿಕರು, ಚಾಲಕರು ಸೇರಿ ಇನ್ನಿತರರು ಈ ಯೋಜನೆ ಇನ್ನು ಪೂರ್ಣಗೊಂಡು ಉದ್ಘಾಟನೆಯಾಗ ದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಬಡವರ ಬಗ್ಗೆ ಕಾಳಜಿ ವಹಿಸಿ ರಿಯಾಯಿತಿ ದರದಲ್ಲಿ ಉಪಹಾರ ನೀಡುವ ಯೋಜನೆ ರೂಪಿಸಿ ಯಾರೂ ಸಹ ಹಸಿವಿನಲ್ಲಿ ಇರಬಾರದು ಎಂಬ ಉದ್ದೇಶದಿಂದ ಕ್ಯಾಂಟೀನ್ ವ್ಯವಸ್ಥೆ ಮಾಡಿದೆ. ಅದರೆ ಅಧಿಕಾರಿ ವರ್ಗ ಈ ಯೋಜನೆಯನ್ನು ತ್ವರಿತವಾಗಿ ಜಾರಿಗೆ ತರುವಲ್ಲಿ ನಿರ್ಲಕ್ಷ್ಯ ವಹಿಸಿದೆ. ಜಿಲ್ಲಾಕಾರಿ ಗಳು ಈ ಬಗ್ಗೆ ಚಿಂತಿಸಿ ಕ್ಯಾಂಟೀನ್ ಆರಂಭಕ್ಕೆ ಮುಂದಾಗಬೇಕಿದ್ದು, ಸರ್ಕಾರ ದ ಯೋಜನೆಯನ್ನು ಸಾರ್ವಜನಿಕರಿಗೆ ತಲುಪಿಸಲು ಸ್ಥಳೀಯ ಶಾಸಕ ಕೆ.ಎಸ್. ಲಿಂಗೇಶ್, ಸಚಿವ ಹೆಚ್.ಡಿ.ರೇವಣ್ಣ ಇತ್ತ ಗಮನಹರಿಸಿ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡುವುದು ಅಗತ್ಯವಾಗಿದೆ.

Translate »