ಎಟಿಎಂ ಕಳುವಿಗೆ ವಿಫಲ ಯತ್ನ
ಹಾಸನ

ಎಟಿಎಂ ಕಳುವಿಗೆ ವಿಫಲ ಯತ್ನ

July 19, 2018

ಹಾಸನ: ನಗರದ ಆರ್.ಸಿ. ರಸ್ತೆ, ಅರಳಿಕಟ್ಟೆ ರಸ್ತೆ ಎದುರು ವೃತ್ತದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿರುವ ಹಣ ಕಳುವು ಮಾಡಲು ವಿಫಲ ಯತ್ನ ನಡೆಸಿರುವ ಘಟನೆ ತಡರಾತ್ರಿ ನಡೆದಿದೆ.

ಎಟಿಎಂ ಒಳಗೆ ನುಗ್ಗಿರುವ ಕಳ್ಳರು ಮೊದಲು ಸಿಸಿ ಕ್ಯಾಮೆರಾವನ್ನು ಪೇಪರ್‍ನಿಂದ ಮುಚ್ಚಿದ ಬಳಿಕ ಹಣವನ್ನು ದೋಚಲು ನಾನಾ ಪ್ರಯತ್ನ ಮಾಡಿದ್ದಾರೆ. ಕಬ್ಬಿಣದ ರಾಡು ಬಳಿಸಿ ಎಟಿಎಂ ಮಷಿನ್ ಓಪನ್ ಮಾಡಲಾಗದೆ ಬೇಸತ್ತು ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ.

ವೃತ್ತ ನಿರೀಕ್ಷಕ ಸತ್ಯನಾರಾಯಣ್, ಬಡಾವಣೆ ಪೊಲೀಸ್ ಸಿಬ್ಬಂದಿ ಮತ್ತು ಶ್ವಾನದಳ ಸ್ಥಳಕ್ಕಾಗಮಿಸಿ ಪರಿಶೀಲಿಸಿ ತನಿಖೆ ಮುಂದುವರೆಸಿದ್ದಾರೆ.

Translate »