ಹೃದಯಾಘಾತದಿಂದ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಸಾವು
ಹಾಸನ

ಹೃದಯಾಘಾತದಿಂದ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಸಾವು

July 19, 2018

ಬೇಲೂರು:  ಧರ್ಮಸ್ಥಳ-ಕೋಲಾರ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಧರ್ಮಸ್ಥಳದಿಂದ ಕೋಲಾರಕ್ಕೆ ಬೇಲೂರು ಮಾರ್ಗವಾಗಿ ತೆರಳುವ ಸಂದರ್ಭದಲ್ಲಿ ಹೃದಯಾ ಘಾತದಿಂದ ಸಾವನ್ನಪ್ಪಿದ್ದಾರೆ.

ಕೂಲಾರ ಮೂಲದ ಆದಿನಾರಾಯಣ (46) ಮೃತರು. ಬೇಲೂರು ಬಸ್ ನಿಲ್ದಾಣದಲ್ಲಿ ಕಾಫಿಗೆಂದು ತೆರಳಿದ್ದಾಗ ಆದಿನಾರಾಯಣ ಕುಸಿದು ಬಿದ್ದಿದ್ದಾರೆ. ತಕ್ಷಣ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸುವ ವೇಳೆ ಕೊನೆ ಉಸಿರೆಳೆದಿ ದ್ದಾರೆ. ವಿಷಯ ತಿಳಿದು ಚಿಕ್ಕಮಗ ಳೂರು ವಿಭಾಗೀಯ ನಿಯಂತ್ರಣ ಅಧಿಕಾರಿ ಅನಿಲ್ ಕುಮಾರ್ ಭೇಟಿ ನೀಡಿ ಮಾಹಿತಿ ಪಡೆದರು. ಮೃತ ಆದಿನಾರಾಯಣ ಮೃತದೇಹವನ್ನ ಕೋಲಾರಕ್ಕೆ ಕಳಿಸುವ ವ್ಯವಸ್ಥೆಯನ್ನು ಸಾರಿಗೆ ಡಿಸಿ ಮಾಡಿದರು.

Translate »