ಅರಸೀಕೆರೆ: ಪೋಷಕರು ಎಚ್ಚೆತ್ತು ತಮ್ಮ ಮಕ್ಕಳನ್ನು ಶಾಲಾ ವಾಹನ ಗಳಲ್ಲೇ ಕಳುಹಿಸುವಲ್ಲಿ ಮುಂದಾಗಬೇಕು. ಅಪಘಾತಗಳು ಸಂಭವಿಸಿದ ಬಳಿಕ ಪಶ್ಚಾ ತ್ತಾಪ ಪಡುವುದಕ್ಕಿಂತ ಅಪಘಾತಗಳು ಸಂಭವಿಸಿದಂತೆ ಮುಂಜಾಗೃತಾ ಕ್ರಮವಹಿ ಸುವುದು ಜಾಣತನ ಎಂದು ಬಾಣಾವರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಅರುಣ್‍ಕುಮಾರ್ ಸಲಹೆ ನೀಡಿದರು. ಪಟ್ಟಣದ ಬಿಆರ್‍ಸಿ ಕಚೇರಿ ಆವರಣ ದಲ್ಲಿ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಶಾಲಾ ವಿದ್ಯಾರ್ಥಿಗಳನ್ನು ಸರಕು ಸಾಗಾಣಿಕೆ ವಾಹನದಲ್ಲಿ ಶಾಲೆಗೆ ಕರೆದೊಯ್ಯುವು ದನ್ನು ನಿಷೇಧಿಸುವ ಬಗ್ಗೆ ಶಾಲಾ ಮುಖ್ಯ ಶಿಕ್ಷಕರು ಹಾಗೂ ಪೋಷಕರ…
ಶ್ರೀ ದೊಡ್ಡಮ್ಮ, ಚಿಕ್ಕಮ್ಮದೇವಿ ಅದ್ಧೂರಿ ಕೊಂಡೋತ್ಸವ
May 22, 2019ಬೇಲೂರು: ಪಟ್ಟಣದ ಅಂಬೇಡ್ಕರ್ ನಗರದಲ್ಲಿ ರುವ ಶ್ರೀದೊಡ್ಡಮ್ಮ, ಚಿಕ್ಕಮ್ಮದೇವಿ ದೇವಸ್ಥಾನದಲ್ಲಿ ಮಂಗಳವಾರ ಮಧ್ಯಾಹ್ನ ವಿಜೃಂಭಣೆಯಿಂದ ಕೊಂಡೋತ್ಸವ ನೆರವೇರಿತು. ಬೇಲೂರು ಗ್ರಾಮ ದೇವತೆಗಳಾದ ಅಂತರ ಘಟ್ಟಮ್ಮ, ದುರ್ಗಮ್ಮ ನವರ ಕೊಂಡೋತ್ಸವ ಹಾಗೂ ಸಿಡಿ ಮಹೋತ್ಸವಗಳ ನಂತರ ಶ್ರೀ ದೊಡ್ಡಮ್ಮ ಚಿಕ್ಕಮ್ಮ ದೇವರ ಕೊಂಡೋತ್ಸವ ನಡೆಯುವುದು ವಾಡಿಕೆ. ಅದರಂತೆ ಮಂಗಳವಾರ ಬೆಳಿಗ್ಗೆಯಿಂದಲೇ ಶ್ರೀ ದೊಡ್ಡಮ್ಮ ಚಿಕ್ಕಮ್ಮ ದೇಗುಲದಲ್ಲಿ ಅರ್ಚಕ ಮಂಜುನಾಥ್ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು. ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದ ವಿವಿಧ ಪರಿ ವಾರದ ದೇವರುಗಳನ್ನು ಪಟ್ಟಣ ಸಮೀಪದ ವಿಷ್ಣು…
ವಿವಿಧ ಬೇಡಿಕೆ ಈಡೇರಿಕೆಗೆ ಸಿಐಟಿಯು ಆಗ್ರಹ
May 22, 2019ಹಾಸನ: ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶದಂತೆ ಶೇ. 6ರಷ್ಟು ಬಡ್ಡಿ ಸಹಿತ ಕನಿಷ್ಟ ಕೂಲಿ ಜಾರಿಗೆ ಕ್ರಮಕೈಗೊಳ್ಳಬೇಕು ಹಾಗೂ ಇತರೆ ಹಕ್ಕೊತ್ತಾಯ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಮಂಗಳವಾರ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಇಲ್ಲಿನ ಕಾರ್ಮಿಕ ಇಲಾಖೆ ಕಚೇರಿ ಮುಂದೆ ಸಮಾವೇಶಗೊಂಡ ಕಾರ್ಮಿಕರು ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ರಾಜ್ಯದ ಉಚ್ಛ ನ್ಯಾಯಾಲಯವು 37 ವಿವಿಧ ಶೆಡ್ಯೂಲ್ ಕೈಗಾರಿಕೆಗಳಿಗೆ ರಾಜ್ಯ ಸರ್ಕಾರ ನಿಗದಿಗೊಳಿಸಿರುವ ಕನಿಷ್ಠ ವೇತನ ಅಧಿಸೂಚನೆಯನ್ನು ಎತ್ತಿ ಹಿಡಿದಿದೆ. ಇಂತಹ ಆದೇಶದಿಂದ ಕಾರ್ಮಿಕರಿಗೆ ಅಧಿಸೂಚನೆಯ ದಿನಾಂಕದಿಂದಲೇ…
ಸಂಗೀತ-ಸಾಹಿತ್ಯ ಎರಡೂ ಅವಶ್ಯ: ನಿರ್ಮಲಾನಂದನಾಥ ಸ್ವಾಮೀಜಿ
May 22, 2019ರಾಮನಾಥಪುರ: ರಾಮನಾಥ ಪುರ ಹೋಬಳಿಯ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ 4 ದಿನಗಳಿಂದ ನಡೆದ 18ನೇ ವಾರ್ಷಿಕ ಸಂಗೀತೋತ್ಸವದ ಕೊನೆಯ ದಿನ ವಿದ್ವಾನ್ ಡಾ.ಎಂ.ಮಂಜು ನಾಥ್ ಹಾಗೂ ವಿದ್ವಾನ್ ಎಂ.ನಾಗರಾಜ್ ಅವರಿಗೆ 2019ನೇ ಸಾಲಿನ ನಾಚರಮ್ಮ ಪ್ರಶಸ್ತಿ ಮತ್ತು ಗಾನಕಲಾ ಸ್ಪರ್ಶಮಣಿ ಬಿರುದು ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸಂಗೀತಕ್ಕೆ ಶಕ್ತಿ ತುಂಬುವವರ ಸಂಖ್ಯೆ ಕಡಿಮೆಯಾಗಿದೆ, ಹೊರತು ನಮ್ಮ ಸಂಸ್ಕೃತಿಗೇನೂ ಧಕ್ಕೆಯಾಗಿಲ್ಲ. ಸಂಗೀತ-ಸಾಹಿತ್ಯ ಎರಡೂ ನಮಗೆ ಅವಶ್ಯ. ಪ್ರೇಕ್ಷ…
ತ್ಯಾಜ್ಯ ಸೇವಿಸಿ ಎರಡು ಸೀಮೆ ಹಸು ಸಾವು
May 22, 2019ಅರಸೀಕೆರೆ: ತ್ಯಾಜ್ಯ ಸೇವಿಸಿ ಎರಡು ಸಿಂಧಿ ಹಸುಗಳು ಸಾವನ್ನಪ್ಪಿರುವ ಘಟನೆ ನಗರದ ಎಪಿಎಂಸಿ ಪ್ರಾಂಗಣದಲ್ಲಿ ನಡೆದಿದೆ. ಇಲ್ಲಿನ ಬಸವೇಶ್ವರನಗರದ ನಿವಾಸಿ ಚಂದ್ರಮ್ಮ ಹಾಗೂ ಸುಭಾಷ್‍ನಗರದ ನಿವಾಸಿ ಮಂಜಣ್ಣ ಎಂಬುವರಿಗೆ ಸೇರಿದ ಎರಡು ಸೀಮೆ ಹಸುಗಳು ಸಾವನ್ನಪ್ಪಿದ್ದು, ಇದರಿಂದ ಆಕ್ರೋಶಗೊಂಡ ಜಾನುವಾರುಗಳ ಮಾಲೀಕರು ಹಾಗೂ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಮತ್ತಿತರರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ಗುತ್ತಿಗೆದಾರರು ಹಾಗೂ ಎ.ಪಿ.ಎಂ.ಸಿ. ಆಡಳಿತ ವರ್ಗದ ನಿರ್ಲಕ್ಷ್ಯದ ವಿರುದ್ಧ ಘೋಷಣೆ ಕೂಗಿದರು. ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಮಾತನಾಡಿ, ಕಳೆದ ಮೂರು ತಿಂಗಳಲ್ಲಿ…
ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಇನ್ನೆರಡೇ ದಿನ ಬಾಕಿ…!
May 21, 2019ಕ್ಷೇತ್ರದಲ್ಲಿ ಕಾಣದ ಕುತೂಹಲ, ಅಭ್ಯರ್ಥಿಗಳ ಎದೆಯಲ್ಲಿ ಢವ ಢವ, ಮತ ಎಣಿಕೆಗೆ ಜಿಲ್ಲಾಡಳಿತ ಸಜ್ಜು – ಎಸ್.ಪ್ರತಾಪ್/ರಾಚೇನಹಳ್ಳಿ ಸೋಮೇಶ್ ಹಾಸನ: ಲೋಕಸಭೆ ಚುನಾ ವಣೆಯ ಮತದಾನ ಮುಗಿದು ತಿಂಗಳಾ ಗಿದ್ದು, ಫÀಲಿತಾಂಶ ಪ್ರಕಟಕ್ಕೆ ಇನ್ನು ಎರಡು ದಿನವಷ್ಟೇ ಬಾಕಿ ಉಳಿದಿದೆ. ಆದರೂ, ಮಂಡ್ಯ ಹಾಗೂ ತುಮಕೂರು ಸೇರಿ ದಂತೆ ಇತರೆ ಕ್ಷೇತ್ರಗಳಲ್ಲಿ ಫಲಿತಾಂಶಕ್ಕೆ ಇರುವಷ್ಟು ಕುತೂಹಲ ಹಾಸನ ಕ್ಷೇತ್ರದಲ್ಲಿ ಮಾತ್ರ ಇಲ್ಲದಂತಾಗಿದೆ. ರಾಜಕೀಯ ಪಕ್ಷದ ಮುಖಂಡರು, ಕಾರ್ಯಕರ್ತರು ಮಾತ್ರ ಫಲಿತಾಂಶದ ಬಗ್ಗೆ ಮಾತಾಡಿಕೊಳ್ಳುತ್ತಿದ್ದಾರೆ. ಆದರೆ, ಮತದಾರರು ಫಲಿತಾಂಶದತ್ತ…
ಮತ ಎಣಿಕೆಯನ್ನು ಜಾಗ್ರತೆಯಿಂದ ನಿರ್ವಹಿಸಲು ಜಿಲ್ಲಾಧಿಕಾರಿ ಸೂಚನೆ
May 21, 2019ಹಾಸನ: ಮತ ಎಣಿಕೆ ವೇಳೆ ಅಧಿಕಾರಿ ಗಳು ಯಾವುದೇ ಗೊಂದಲ, ಆತುರಗಳಿಲ್ಲದೆ ಸಮಾ ಧಾನದಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚನೆ ನೀಡಿದರು. ನಗರದ ಹಾಸನಾಂಬ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಲೋಕಸಭಾ ಚುನಾವಣೆ ಮತ ಎಣಿಕೆಗೆ ನಿಯೋಜನೆಗೊಂಡಿರುವ ಎಲ್ಲಾ ಸಹಾ ಯಕ ಚುನಾವಣಾಧಿಕಾರಿಗಳು, ತಹಸೀಲ್ದಾರರು, ಮತ ಎಣಿಕೆ ಮೇಲ್ವಿಚಾರಕರು ಹಾಗೂ ಎಣಿಕೆ ಸಿಬ್ಬಂದಿಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾ ವಣಾ ಆಯೋಗದ ಮಾರ್ಗಸೂಚಿಗಳನ್ನು ಸರಿಯಾಗಿ ಅರಿತು…
ನಗರಸಭೆ ಸೌಲಭ್ಯ ದುರ್ಬಳಕೆ: ತಪ್ಪಿತಸ್ಥರ ವಿರುದ್ಧ ಕ್ರಮ
May 21, 2019ಅರಸೀಕೆರೆ: ನಗರಸಭೆ ವ್ಯಾಪ್ತಿ ಯಲ್ಲಿ ಪ್ರಭಾವಿ ವ್ಯಕ್ತಿಗಳ ಹಿಂಬಾಲಕರ ಹೆಸರಿನಲ್ಲಿ ನಿರ್ಮಾಣ ಮಾಡಿರುವ ಖಾಸಗಿ ವಸತಿ ನಿವೇಶನಗಳ ಲೇಔಟ್‍ಗಳಲ್ಲಿ ನಗರ ಸಭೆಯ ನಾಗರಿಕ ಮೂಲ ಸೌಲಭ್ಯಗ ಳಾದ ರಸ್ತೆ, ಒಳಚರಂಡಿ ಮತ್ತು ಕುಡಿ ಯುವ ನೀರು ಯೋಜನೆಗಳನ್ನು ದುರು ಪಯೋಗ ಮಾಡಿಕೊಳ್ಳಲಾಗಿದ್ದು, ಇದರ ಹಿಂದೆ ಶಾಮೀಲಾಗಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ವರದಿ ಸಲ್ಲಿಸ ಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು. ಅರಸೀಕೆರೆ ನಗರಸಭೆ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳ ಸಭೆ…
ಸರಕು ಸಾಗಾಣಿಕೆ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯುವುದು ಶಿಕ್ಷಾರ್ಹ ಅಪರಾಧ
May 21, 2019ಹಾಸನ: ಶಾಲಾ ವಿದ್ಯಾರ್ಥಿಗಳನ್ನು ಸರಕು ಸಾಗಾಣಿಕೆ ವಾಹನಗಳಲ್ಲಿ ಕರೆದೊಯ್ಯುವುದು ಶಿಕ್ಷಾರ್ಹ ಅಪರಾಧ ಹಾಗೂ ಈ ಸಂಬಂಧ ಎಲ್ಲಾ ಶಾಲೆಗಳು ಸೂಕ್ತ ಕ್ರಮವಹಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ತಿಳಿಸಿದ್ದಾರೆ. ನಗರದ ಗುರುಭವನದಲ್ಲಿ ಸೋಮವಾರ ಕ್ಯಾರಿ ಯಿಂಗ್ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಸಾಗಿಸು ವುದು ನಿಷೇಧ ಕುರಿತಂತೆ ಎಲ್ಲಾ ಶಾಲೆಯ ಮುಖ್ಯೋ ಪಾಧ್ಯಾಯರುಗಳೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುವ ನಿಟ್ಟಿನಲ್ಲಿ ಅಗತ್ಯ ಸಂಸ್ಥೆ ವತಿಯಿಂದಲೇ ಸಾರಿಗೆ ವಾಹನ ನಿಯೋಜಿಸಬೇಕು. ಇತರ ಸಣ್ಣ ಪುಟ್ಟ ವಾಹನಗಳಲ್ಲಿ ಅತಿ ಹೆಚ್ಚು ಮಕ್ಕಳನ್ನು…
ಹಾಸನ ಅಸ್ಮಿತೆ ಆಲೂಗಡ್ಡೆ ಬೆಳೆ ರಕ್ಷಣೆಗೆ ಜನಾಂದೋಲನ
May 21, 2019ದುಂಡುಮೇಜಿನ ಸಭೆಯಲ್ಲಿ ವಿವಿಧ ಸಂಘಟನೆಗಳಿಂದ ನಿರ್ಣಯ ಹಾಸನ: ಹಾಸನದ ಅಸ್ಮಿತೆ ಯಾಗಿರುವ ಆಲೂಗಡ್ಡೆ ಬೆಳೆ ರಕ್ಷಣೆಗೆ ಜನಾಂದೋಲನ ಹಮ್ಮಿಕೊಳ್ಳಲು ಆಲೂ ಗಡ್ಡೆ ಬೆಳೆಗಾರರ ದುಂಡು ಮೇಜಿನ ಸಭೆ ಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಹಾಸನದ ಮಾನವ ಬಂಧುತ್ವ ವೇದಿಕೆ ಕಚೇರಿಯಲ್ಲಿ ಸೋಮವಾರ ಕರ್ನಾಟಕ ಪ್ರಾಂತ ರೈತಸಂಘ, ಆಲೂಗಡ್ಡೆ ಬೆಳೆಗಾ ರರ ಹೋರಾಟ ಸಮಿತಿ ಆಯೋಜಿಸಿದ್ದ ಆಲೂಗಡ್ಡೆ ಬೆಳೆಗಾರರ ದುಂಡು ಮೇಜಿನ ಸಭೆಯಲ್ಲಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗಡ್ಡೆ ಬೆಳೆ ಉಳಿವಿಗೆ ಅಗತ್ಯ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ಜಿಲ್ಲೆಯಲ್ಲಿ…