ಸಂಗೀತ-ಸಾಹಿತ್ಯ ಎರಡೂ ಅವಶ್ಯ: ನಿರ್ಮಲಾನಂದನಾಥ ಸ್ವಾಮೀಜಿ
ಹಾಸನ

ಸಂಗೀತ-ಸಾಹಿತ್ಯ ಎರಡೂ ಅವಶ್ಯ: ನಿರ್ಮಲಾನಂದನಾಥ ಸ್ವಾಮೀಜಿ

May 22, 2019

ರಾಮನಾಥಪುರ: ರಾಮನಾಥ ಪುರ ಹೋಬಳಿಯ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ 4 ದಿನಗಳಿಂದ ನಡೆದ 18ನೇ ವಾರ್ಷಿಕ ಸಂಗೀತೋತ್ಸವದ ಕೊನೆಯ ದಿನ ವಿದ್ವಾನ್ ಡಾ.ಎಂ.ಮಂಜು ನಾಥ್ ಹಾಗೂ ವಿದ್ವಾನ್ ಎಂ.ನಾಗರಾಜ್ ಅವರಿಗೆ 2019ನೇ ಸಾಲಿನ ನಾಚರಮ್ಮ ಪ್ರಶಸ್ತಿ ಮತ್ತು ಗಾನಕಲಾ ಸ್ಪರ್ಶಮಣಿ ಬಿರುದು ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸಂಗೀತಕ್ಕೆ ಶಕ್ತಿ ತುಂಬುವವರ ಸಂಖ್ಯೆ ಕಡಿಮೆಯಾಗಿದೆ, ಹೊರತು ನಮ್ಮ ಸಂಸ್ಕೃತಿಗೇನೂ ಧಕ್ಕೆಯಾಗಿಲ್ಲ. ಸಂಗೀತ-ಸಾಹಿತ್ಯ ಎರಡೂ ನಮಗೆ ಅವಶ್ಯ. ಪ್ರೇಕ್ಷ ಕರ ಚಪ್ಪಾಳೆಗೆ ಸಂಗೀತ ಸಾಧಕ ಕಿವುಡ ನಾಗಿರಬೇಕು. ಅವರ ಚಪ್ಪಾಳೆಗೆ ಮನ ಸೋತರೆ ದಾರಿತಪ್ಪಿ ತಪ್ಪು ನುಡಿಸುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದರು.

ಅನಾದಿ ಕಾಲದಿಂದಲೂ ಸಂಗೀತಕ್ಕೆ ಹೆಚ್ಚಿನ ಮಹತ್ವವಿದೆ. ಇಂತಹ ಸಂಗೀತ ಕಾರ್ಯ ಸತತವಾಗಿ ಮುಂದುವರೆಯಲಿ. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವ ಜೊತೆಗೆ ಭಾರತದ ಶ್ರೇಷ್ಠ ಕಲೆ ಸಂಗೀತ ವನ್ನು ಪೆÇೀಷಿಸಿ ಬೆಳೆಸುವ ಕಾರ್ಯ ಮಾಡುತ್ತಿರುವ ಆರ್.ಕೆ.ಪದ್ಮನಾಭ್ ಅವರ ಶ್ರಮ ಶ್ಲಾಘನೀಯ ಎಂದು ಹೇಳಿದರು.

ಹಿರಿಯರನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಪರಿಸರ ಸಂರಕ್ಷಣೆ ಮಾಡುವ ಜತೆಗೆ ನಾವೂ ನೀರನ್ನು ಸಂರ ಕ್ಷಣೆ ಮಾಡೋಣ ಎಂದು ಸಲಹೆ ನೀಡಿದರು.

ಪ್ರಶಸ್ತಿ ಸ್ವೀಕರಿಸಿದ ವಿದ್ವಾನ್ ಡಾ.ಎಂ. ಮಂಜುನಾಥ್ ಮಾತನಾಡಿ, ತಮ್ಮ ಸೇವೆ ಯನ್ನು ಗುರುತಿಸಿ ಪ್ರಶಸ್ತಿ ನೀಡಿ ಸಂಗೀತ ಕ್ಷೇತ್ರದ ಬಗ್ಗೆ ಇನ್ನೂ ಹೆಚ್ಚಿನ ಜವಾಬ್ದಾರಿ ಯನ್ನು ನೀಡಲಾಗಿದೆ. ರುದ್ರಪಟ್ಟಣ ದಂತಹ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಸಂಗೀತೋತ್ಸವವನ್ನು ಸಮಿ ತಿಯು 17 ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಸಂತೋಷದ ವಿಷಯ. ಇವರ ಸಂಗೀತ ಸೇವೆ ಹೀಗೆಯೇ ಮುಂದುವರೆಯಲಿ ಎಂದರು.

ವಿದ್ವಾನ್ ಆರ್.ಕೆ.ಪದ್ಮನಾಭ್ ಮಾತ ನಾಡಿ, ನಮ್ಮ ಸಂಸ್ಕೃತಿಯ ಸಂಕೇತವಾದ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಅಗತ್ಯ ವಿರುವುದರಿಂದ ರುದ್ರಪಟ್ಟಣದಲ್ಲಿ 17 ವರ್ಷ ಗಳಿಂದ ರಾಜ್ಯಮಟ್ಟದ ಸಂಗೀತ ಕಾರ್ಯ ಕ್ರಮವನ್ನು ಆಯೋಜಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಈ ಗ್ರಾಮಕ್ಕೊಂದು ಸಂಗೀತ ವಿವಿ ಕೊಟ್ಟರೆ ಯಾವುದೇ ಪ್ರತಿ ಫಲಾಪೇಕ್ಷೆಯಿಲ್ಲದೇ ಎಲ್ಲರಿಗೂ ಸಂಗೀತ ಶಿಕ್ಷಣ ನೀಡಲಾಗುವುದು ಎಂದರು.

ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ರುದ್ರಪಟ್ಟಣ ಗ್ರಾಮದಲ್ಲಿ ವರ್ಷದಿಂದ ವರ್ಷಕ್ಕೆ ಅತ್ಯಂತ ಪ್ರಜ್ವಲಿತವಾಗಿ ಸಂಗೀ ತೋತ್ಸವ ನಡೆಯುತ್ತಿದೆ. ಸಪ್ತಸ್ವರ ದೇವತಾ ಮಂದಿರ ನಿರ್ಮಾಣವಾಗಿರು ವುದು ಹಾಗೂ ಈ ಬಾರಿ 50 ಲಕ್ಷ ರೂ. ವೆಚ್ಚದಲ್ಲಿ ದ್ವಾದಶ ಸ್ವರಸ್ಥಂಬ ಮಂಟಪ ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಿ ರುವುದು ರುದ್ರಪಟ್ಟಣ ಗ್ರಾಮಕ್ಕಷ್ಟೆಯಲ್ಲ ಅರಕಲಗೂಡು ತಾಲೂಕು ಹಾಗೂ ಹಾಸನ ಜಿಲ್ಲೆಗೆ ಬಹಳ ದೊಡ್ಡ ಕೊಡುಗೆ ಯಾಗಿದೆ ಎಂದು ಹೇಳಿದರು.

ನಿರ್ಮಲಾನಂದನಾಥಶ್ರೀ, ನಾಚರಮ್ಮ ಹಾಗೂ ಗಾನಕಲಾ ಸ್ಪರ್ಶಮಣಿ ಬಿರುದು ಪಡೆದ ವಿ.ಡಾ.ಎಂ.ಮಂಜುನಾಥ್ ಹಾಗೂ ವಿ.ಎಂ.ನಾಗರಾಜ್ ಅವರನ್ನು ಸಾರೋಟಿ ನಲ್ಲಿ ಮೆರವಣಿಗೆಯಲ್ಲಿ ಕಾವೇರಿ ನದಿ ತೀರಕ್ಕೆ ಕರೆತರಲಾಯಿತು. ಕಾವೇರಿ ನದಿ ತಟದಲ್ಲಿ ತೆಪ್ಪೋತ್ಸವ ಹಾಗೂ ಸಾಧಕರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹಾಸನ ಶಾಖಾ ಮಠದ ಶಂಭುನಾಥಸ್ವಾಮೀಜಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಂಗಸ್ವಾಮಿ, ವಿದ್ವಾಂಸರಾದ ಕೃಪಾ, ಭಾಸ್ಕರ್ ಅವ ಧಾನಿ, ಆರ್.ಕೆ.ಶ್ರೀನಿವಾಸ್ ಅಯ್ಯಂಗಾರ್, ಶ್ರೀರಾಮ ಸೇವಾ ಸಮಿತಿ ಕಾರ್ಯದರ್ಶಿ ಆರ್.ಆರ್.ಶ್ರೀನಿವಾಸ್, ಮಾರ್ಕಂ ಡೇಯ, ಕೃಷ್ಣಪ್ರಸಾದ್, ದೀಪಕ್, ಮೇಘ, ಮನೋರಮಾ, ರೇಣುಕಾ ಪ್ರಸಾದ್, ಪ್ರಾಂಶುಪಾಲ ಅರಕಲಗೂಡು ಮಹೇಶ್, ಸಮಾಜ ಸೇವಕ ಪತ್ತಿಶ್ರೀಧರ್ ಮುಂತಾ ದವರು ಭಾಗವಹಿಸಿದ್ದರು.

Translate »