ವಿವಿಧ ಬೇಡಿಕೆ ಈಡೇರಿಕೆಗೆ ಸಿಐಟಿಯು ಆಗ್ರಹ
ಹಾಸನ

ವಿವಿಧ ಬೇಡಿಕೆ ಈಡೇರಿಕೆಗೆ ಸಿಐಟಿಯು ಆಗ್ರಹ

May 22, 2019

ಹಾಸನ: ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶದಂತೆ ಶೇ. 6ರಷ್ಟು ಬಡ್ಡಿ ಸಹಿತ ಕನಿಷ್ಟ ಕೂಲಿ ಜಾರಿಗೆ ಕ್ರಮಕೈಗೊಳ್ಳಬೇಕು ಹಾಗೂ ಇತರೆ ಹಕ್ಕೊತ್ತಾಯ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಮಂಗಳವಾರ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಇಲ್ಲಿನ ಕಾರ್ಮಿಕ ಇಲಾಖೆ ಕಚೇರಿ ಮುಂದೆ ಸಮಾವೇಶಗೊಂಡ ಕಾರ್ಮಿಕರು ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು.

ರಾಜ್ಯದ ಉಚ್ಛ ನ್ಯಾಯಾಲಯವು 37 ವಿವಿಧ ಶೆಡ್ಯೂಲ್ ಕೈಗಾರಿಕೆಗಳಿಗೆ ರಾಜ್ಯ ಸರ್ಕಾರ ನಿಗದಿಗೊಳಿಸಿರುವ ಕನಿಷ್ಠ ವೇತನ ಅಧಿಸೂಚನೆಯನ್ನು ಎತ್ತಿ ಹಿಡಿದಿದೆ. ಇಂತಹ ಆದೇಶದಿಂದ ಕಾರ್ಮಿಕರಿಗೆ ಅಧಿಸೂಚನೆಯ ದಿನಾಂಕದಿಂದಲೇ ಶೇ. 6ರಷ್ಟು ಬಡ್ಡಿಯೊಂ ದಿಗೆ ಬಾಕಿಯನ್ನು 8 ವಾರದೊಳಗೆ ಸಂದಾಯ ಮಾಡಲು ಆದೇಶಿಸಿದೆ ಎಂದರು.
37 ವಿವಿಧ ಕೆಲಸಗಳಲ್ಲಿ ತೊಡಗಿರುವ ಕಾರ್ಮಿಕರು ಮೂಲ ವೇತನ ಹೆಚ್ಚಳವಾ ಗಿದೆ. ಕನಿಷ್ಠ ವೇತನ ಅಧಿಸೂಚನೆಯಂತೆ ಕಡಿಮೆ ಕೂಲಿ ನೀಡುತ್ತಿರುವ ಆಡಳಿತ ಮಂಡಳಿಗಳ ಮಾಲೀಕರು ತಕ್ಷಣ ಬಾಕಿ ಸಮೇತ ಕನಿಷ್ಠ ಕೂಲಿಯನ್ನು ನೀಡಬೇಕು. ಇದಕ್ಕೆ ಪೂರಕವಾಗಿ ಸರ್ಕಾರ, ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖೆ ಶೀಘ್ರ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

2016-17ನೇ ಸಾಲಿನಿಂದ ಕರ್ನಾಟಕ ರಾಜ್ಯ ಸರ್ಕಾರ ಕನಿಷ್ಠ ವೇತನ ಪರಿಷ್ಕರಿ ಸಲು ಮಾಲೀಕರು, ಕಾರ್ಮಿಕರು, ಸರ್ಕಾರದ ಪ್ರತಿನಿಧಿಗಳನ್ನು ಒಳಗೊಂಡ ಕನಿಷ್ಟ ವೇತನ ಸಲಹಾ ಮಂಡಳಿಯಲ್ಲಿ ಚರ್ಚಿ ಸಿದ ನಂತರ ಸರ್ಕಾರಕ್ಕೆ ಶಿಫಾರಸ್ಸು ಮಾಡ ಲಾಗಿತ್ತು. ಈ ಆಧಾರದಲ್ಲಿ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಗಳನ್ನು ಸ್ವೀಕರಿಸಿ ನಂತರ ಅಂತಿಮ ಆದೇಶ ಹೊರಡಿಸಿರುವುದಾಗಿ ಹೇಳಿದರು. ಬೆಲೆ ಏರಿಕೆ ಸೂಚ್ಯಂಕದಲ್ಲಿ ಆಗಿರುವ ಮೋಸ ದಾಟವನ್ನು ಸರಿಪಡಿಸಿ, ಕನಿಷ್ಠ ಕೂಲಿ ಯನ್ನು ಲೆಕ್ಕ ಹಾಕುವಾಗ ಸರ್ಕಾರ ಅನು ಸರಿಸುತ್ತಿರುವ ಮೂರು ಘಟಕಗಳ ಪದ್ಧತಿಗೆ ಬದಲಾಗಿ ತಂದೆ-ತಾಯಿಯರ ಪಾಲನೆ ಪೋಷಣೆಯನ್ನು ಮಕ್ಕಳ ಮೇಲೆ ಕಡ್ಡಾಯ ವಾಗಿ ಕಾನೂನಿನ ಹಿನೆÀ್ನಲೆಯಲ್ಲಿ ಐದು ಘಟಕಗಳ ಆಧಾರದಲ್ಲಿ ಕನಿಷ್ಠ ಕೂಲಿಯನ್ನು ನಿಗದಿಗೊಳಿಸಬೇಕು. ಸ್ಕೀಂ ನೌಕರರಾದ ಅಂಗನವಾಡಿ, ಬಿಸಿಯೂಟ, ಆಶಾ ಇತರೆ ನೌಕರರನ್ನು ಕನಿಷ್ಠ ವೇತನ ಕಾಯ್ದೆಯಡಿ ತರಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಧ್ಯಕ್ಷ ಧರ್ಮೇಶ್, ಉಪಾಧ್ಯಕ್ಷ ಇಂದಿರಮ್ಮ, ಉಪಾಧ್ಯಕ್ಷ ಪ್ರಕಾಶ್, ಪ್ರಧಾನ ಕಾರ್ಯ ದರ್ಶಿ ಡಿ.ಎಲ್. ರಾಘವೇಂದ್ರ, ಜಿಲ್ಲಾ ಕಾರ್ಯ ದರ್ಶಿ ಅರವಿಂದ, ಪೃಥ್ವಿ ಇತರರಿದ್ದರು.

Translate »