ಹಾಸನ ಅಸ್ಮಿತೆ ಆಲೂಗಡ್ಡೆ ಬೆಳೆ ರಕ್ಷಣೆಗೆ ಜನಾಂದೋಲನ
ಹಾಸನ

ಹಾಸನ ಅಸ್ಮಿತೆ ಆಲೂಗಡ್ಡೆ ಬೆಳೆ ರಕ್ಷಣೆಗೆ ಜನಾಂದೋಲನ

May 21, 2019

ದುಂಡುಮೇಜಿನ ಸಭೆಯಲ್ಲಿ ವಿವಿಧ ಸಂಘಟನೆಗಳಿಂದ ನಿರ್ಣಯ

ಹಾಸನ: ಹಾಸನದ ಅಸ್ಮಿತೆ ಯಾಗಿರುವ ಆಲೂಗಡ್ಡೆ ಬೆಳೆ ರಕ್ಷಣೆಗೆ ಜನಾಂದೋಲನ ಹಮ್ಮಿಕೊಳ್ಳಲು ಆಲೂ ಗಡ್ಡೆ ಬೆಳೆಗಾರರ ದುಂಡು ಮೇಜಿನ ಸಭೆ ಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಹಾಸನದ ಮಾನವ ಬಂಧುತ್ವ ವೇದಿಕೆ ಕಚೇರಿಯಲ್ಲಿ ಸೋಮವಾರ ಕರ್ನಾಟಕ ಪ್ರಾಂತ ರೈತಸಂಘ, ಆಲೂಗಡ್ಡೆ ಬೆಳೆಗಾ ರರ ಹೋರಾಟ ಸಮಿತಿ ಆಯೋಜಿಸಿದ್ದ ಆಲೂಗಡ್ಡೆ ಬೆಳೆಗಾರರ ದುಂಡು ಮೇಜಿನ ಸಭೆಯಲ್ಲಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗಡ್ಡೆ ಬೆಳೆ ಉಳಿವಿಗೆ ಅಗತ್ಯ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.

ಜಿಲ್ಲೆಯಲ್ಲಿ ಬೆಳೆಯುವ ಆಲೂಗಡ್ಡೆಯು ತನ್ನ ವಿಶಿಷ್ಟ ರುಚಿಯಿಂದಾಗಿ ಚಿಪ್ಸ್ ತಯಾ ರಿಕೆಗೆ ಹೆಸರಾಗಿದ್ದು, ಮೂರ್ನಾಲ್ಕು ದಶಕ ಗಳಿಂದ ರೈತರು ಆಲೂಗಡ್ಡೆಯನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದಾರೆ. 2001-02ರಲ್ಲಿ 25,925 ಹೆಕ್ಟೇರ್ ಪ್ರದೇಶ ದಲ್ಲಿ ಬೆಳೆಯುತ್ತಿದ್ದ ಆಲೂಗಡ್ಡೆ, 2010ರ ವೇಳೆಗೆÉ 45 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ತಲು ಪಿತ್ತು. ಪ್ರಸಕ್ತ ವರ್ಷಕ್ಕೆ ಆಲೂಗಡ್ಡೆ ಬೇಸಾಯ 13 ಸಾವಿರ ಹೆಕ್ಟೇರ್‍ಗೆ ಕುಸಿದಿದೆ.

ಅಂಗಮಾರಿ ರೋಗ, ಅತಿವೃಷ್ಟಿ, ಅನಾ ವೃಷ್ಟಿ ಸೇರಿದಂತೆ ವಿವಿಧ ಕಾರಣಗಳಿಂದ 31,866 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯುವುದನ್ನೇ ನಿಲ್ಲಿಸಿದ್ದು, 16 ಸಾವಿರ ರೈತ ಕುಟುಂಬಗಳು ಆಲೂಗಡ್ಡೆ ಬೇಸಾಯ ದಿಂದ ದೂರ ಸರಿದಿವೆ. ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ರೈತರು ಪ್ರಮುಖ ವಾಣಿಜ್ಯ ಬೆಳೆಯಿಂದ ವಿಮುಖರಾಗುತ್ತಿರುವಾಗ ಇದನ್ನು ತಡೆಯಲು ಸರ್ಕಾರ ಇದು ವರೆಗೂ ವಿಶೇಷ ಪ್ಯಾಕೇಜ್ ಘೋಷಿಸಿಲ್ಲ. ಆದ್ದರಿಂದ ಜಿಲ್ಲಾಡಳಿತ, ಜಿಲ್ಲಾ ಉಸ್ತು ವಾರಿ ಸಚಿವರು, ಅಧಿಕಾರಿಗಳು, ಆಲೂ ಗಡ್ಡೆ ಬೆಳೆ ತಜ್ಞರು, ರೈತರು, ರೈತ ಮುಖಂಡ ರನ್ನೊಳಗೊಂಡ ಸಮಗ್ರ ಸಭೆ ಕರೆ ಯುವಂತೆ ದುಂಡುಮೇಜಿನ ಸಭೆಯಲ್ಲಿ ಪ್ರಮುಖರು ಆಗ್ರಹಿಸಿದ್ದಾರೆ.

ಆಲೂಗಡ್ಡೆ ಅಲ್ಪಾವಧಿಯಲ್ಲಿ ಬೆಳೆ ಯುವ ಹಾಸನ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, 31 ಸಾವಿರ ಹೆಕ್ಟೇರ್ ಭೂ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆ ಕುಸಿತವಾಗಿದೆ. ಇದು ಜಿಲ್ಲೆಯ ಆರ್ಥಿಕ ಚಟುವಟಿಕೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹಾಗಾಗಿ, ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಇದುವರೆಗೂ ದೊಡ್ಡ ಕೊಡುಗೆ ನೀಡುತ್ತಾ ಬಂದಿರುವ ಆಲೂ ಗಡ್ಡೆ ಬೆಳೆಗಾರರ ಸಮಸ್ಯೆಗಳನ್ನು ಸರ್ಕಾರ ಕೂಡಲೇ ಗಮನಿಸಿ ಸೂಕ್ತ ಪರಿಹಾರ ಕ್ರಮ ಕೈಗೊಂಡು ರೈತರನ್ನು ಉಳಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ, ಆಲೂಗಡ್ಡೆ ಬೆಳೆಗಾರರ ಹೋರಾಟ ಸಮಿತಿ ಒತ್ತಾಯಿಸಿವೆ.

ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್. ಆರ್.ನವೀನ್‍ಕುಮಾರ್ ವಹಿಸಿದ್ದರು. ರೈತ ಮುಖಂಡರಾದ ಕೊಟ್ಟೂರು ಶ್ರೀನಿ ವಾಸ್, ಪತ್ರಕರ್ತರಾದ ಆರ್.ಪಿ.ವೆಂಕಟೇಶ್ ಮೂರ್ತಿ, ಚಲಂ ಹಾಡ್ಲಹಳ್ಳಿ, ಕಾರ್ಮಿಕ ಮುಖಂಡರಾದ ಧರ್ಮೇಶ್, ಮಾದಿಗ ದಂಡೋರ ಸಮಿತಿಯ ವಿಜಯ್ ಕುಮಾರ್, ಮಹಾಂತಪ್ಪ, ಕೆಪಿಆರ್‍ಎಸ್ ಮುಖಂಡರಾದ ದೇವರಾಜು, ಪ್ರಕಾಶ್, ಗಿಡ್ಡೇಗೌಡ, ಲಕ್ಷ್ಮಣಗೌಡ, ಪರಮೇಶ್, ಮಂಜು, ನಂಜೇಗೌಡ, ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಪೃಥ್ವಿ ಮತ್ತಿತರರು ಸಭೆಯಲ್ಲಿದ್ದರು.

ಸಭೆಯ ಹಕ್ಕೊತ್ತಾಯಗಳು

  • ಜಿಲ್ಲೆಗೆ ಅಗತ್ಯವಿರುವಷ್ಟು ಉಚಿತ ದೃಢೀಕೃತ ಬಿತ್ತನೆ ಆಲೂಗಡ್ಡೆಯನ್ನು ಸರ್ಕಾರವೇ ವಿತರಿಸಬೇಕು.
  • ಬೆಳೆಗೆ ತಗುಲುವ ರೋಗಗಳನ್ನು ತಜ್ಞರಿಂದ ಪತ್ತೆ ಹಚ್ಚಿ ಅಗತ್ಯ ಕ್ರಿಮಿನಾಶಕ ವಿತರಿಸಬೇಕು.
  • ಬೆಳೆಯ ಗುಣಮಟ್ಟ, ಉತ್ತಮ ಇಳುವರಿಗೆ ಪೂರಕ ಆಲೂಗಡ್ಡೆ ಬೀಜ ಸಂಶೋಧಿಸಬೇಕು.
  • ಸಬ್ಸಿಡಿ ದರದಲ್ಲಿ ಆಲೂಗಡ್ಡೆ ಬೇಸಾಯಕ್ಕೆ ಅಗತ್ಯ ರಸಗೊಬ್ಬರ ವಿತರಿಸಬೇಕು.
  • ಅತಿವೃಷ್ಟಿ, ಅನಾವೃಷ್ಟಿ, ರೋಗ ಬಾಧೆಯಿಂದಾದ ಬೆಳೆ ನಷ್ಟವನ್ನು ಸರ್ಕಾರವೇ ಭರಿಸಬೇಕು.
  • ಆಲೂಗಡ್ಡೆ ಬೆಳೆ ವಿಮೆಯ ಪ್ರೀಮಿಯಂ ಹಣವನ್ನು ಸರ್ಕಾರವೇ ಭರಿಸಬೇಕು.
  • ಬೆಳೆದ ಆಲೂಗಡ್ಡೆ ಮಾರಾಟಕ್ಕೆ ಎಪಿಎಂಸಿಯಲ್ಲಿ ಸರ್ಕಾರವೇ ಖರೀದಿ ಕೇಂದ್ರ ಸ್ಥಾಪಿಸಬೇಕು.
  • ಕೃಷಿ ತಜ್ಞ ಡಾ.ಸ್ವಾಮಿನಾಥನ್ ಶಿಫಾರಸ್ಸಿನಂತೆ ಉತ್ಪಾದÀನಾ ವೆಚ್ಚಕ್ಕೆ ಶೇ. 50 ಲಾಭಾಂಶ ಸೇರಿ ಬೆಲೆ ನಿಗದಿ ಮಾಡಬೇಕು.
  • ಆಲೂಗಡ್ಡೆ ಮೌಲ್ಯವರ್ಧನೆಗೆ ಜಿಲ್ಲೆಯಲ್ಲಿ ಆಲೂಗಡ್ಡೆ ಉತ್ಪನ್ನಗಳ ತಯಾರಿಕಾ ಕಾರ್ಖಾನೆ ಸ್ಥಾಪಿಸಬೇಕು.

Translate »