ಚುನಾವಣೋತ್ತರ ಸಮೀಕ್ಷೆ: ಎನ್‍ಡಿಎ ಮೈತ್ರಿ ಕೂಟವೇ ಮುಂಚೂಣಿ
ಮೈಸೂರು

ಚುನಾವಣೋತ್ತರ ಸಮೀಕ್ಷೆ: ಎನ್‍ಡಿಎ ಮೈತ್ರಿ ಕೂಟವೇ ಮುಂಚೂಣಿ

May 20, 2019

ನವದೆಹಲಿ: ಲೋಕಸಭಾ ಚುನಾವಣೆಯ ಕೊನೆಯ ಹಂತದ ಚುನಾವಣೆ ಇಂದು ಸಂಜೆ ಅಂತ್ಯವಾಗುತ್ತಿ ದ್ದಂತೆಯೇ ದೇಶಾದ್ಯಂತ ಹಲವು ಸಂಸ್ಥೆಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆ ಗಳನ್ನು ಪ್ರಕಟಿಸಿದ್ದು, ಒಂದನ್ನು ಹೊರತು ಪಡಿಸಿ ಉಳಿದೆಲ್ಲಾ ಸಮೀಕ್ಷೆಗಳಲ್ಲೂ ಎನ್‍ಡಿಎ ಮೈತ್ರಿ ಕೂಟವೇ ಮುಂಚೂಣಿಯಲ್ಲಿದೆ.

ದೇಶದ ಒಟ್ಟು 543 ಲೋಕಸಭಾ ಕ್ಷೇತ್ರಗಳ ಪೈಕಿ ತಮಿಳುನಾಡಿನ ವೆಲ್ಲೂರು ಕ್ಷೇತ್ರದ ಚುನಾವಣೆಯನ್ನು ಮುಂದೂ ಡಲಾಗಿದ್ದು, ಉಳಿದ 542 ಕ್ಷೇತ್ರಗಳಿಗೆ 7 ಹಂತಗಳಲ್ಲಿ ಚುನಾವಣೆ ನಡೆದಿದೆ. ಸರ್ಕಾರ ರಚಿಸಲು ಮ್ಯಾಜಿಕ್ ನಂಬರ್ 272 ಅವಶ್ಯಕತೆ ಇದ್ದು, ಸಮೀಕ್ಷೆ ನಡೆಸಿ ರುವ ಸಂಸ್ಥೆಗಳನ್ನು ನ್ಯೂಸ್ ನೇತಾ ಹೊರತು ಪಡಿಸಿ ಉಳಿದ 9 ಸಂಸ್ಥೆಗಳು ನಡೆಸಿರುವ ಸಮೀಕ್ಷೆಯಂತೆ ಎನ್‍ಡಿಎ ಮೈತ್ರಿ ಕೂಟ ಕೇಂದ್ರದಲ್ಲಿ ಅಧಿಕಾರ ಹಿಡಿಯಲಿದೆ.

ನ್ಯೂಸ್ ನೇತಾ ಸಮೀಕ್ಷೆಯಲ್ಲಿ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ಬರಲಿದ್ದು, ಎನ್‍ಡಿಎ ಮೈತ್ರಿ ಕೂಟಕ್ಕೆ 242, ಯುಪಿಎಗೆ 165 ಹಾಗೂ ಇತರರಿಗೆ 136 ಕ್ಷೇತ್ರಗಳಲ್ಲಿ ಜಯ ದೊರೆಯಲಿದೆ. ಇನ್ನುಳಿದಂತೆ ಸಿ-ವೋಟರ್ಸ್ ಸಮೀಕ್ಷೆಯಲ್ಲಿ ಎನ್‍ಡಿಎ 287, ಯುಪಿಎ 128, ಇತರರು 87 ಸ್ಥಾನ,`ಜನ್ ಕೀ ಬಾತ್’ – ಎನ್‍ಡಿಎ 305, ಯುಪಿಎ 124, ಇತರರು 113. ಚಾಣಕ್ಯ -ಎನ್‍ಡಿಎ 340, ಯುಪಿಎ 70, ಇತರರು 133. ಟೈಮ್ಸ್ ನೌ – ಎನ್‍ಡಿಎ 306, ಯುಪಿಎ 132, ಇತರರು 104. ರಿಪಬ್ಲಿಕನ್ ಟಿವಿ-ಎನ್‍ಡಿಎ 305, ಯುಪಿಎ 124, ಇತರರು 113. ನ್ಯೂಸ್ ನ್ಯಾಷನ್ – ಎನ್‍ಡಿಎ 290, ಯುಪಿಎ 126, ಇತರರು 138. ಎಬಿಪಿ – ಎನ್‍ಡಿಎ 336, ಯುಪಿಎ 55, ಇತರರು 148. ಜಿûೀ ನ್ಯೂಸ್ – ಎನ್‍ಡಿಎ 300, ಯುಪಿಎ 128, ಇತರರು 144. ನ್ಯೂಸ್ ಎಕ್ಸ್ – ಎನ್‍ಡಿಎ 198, ಯುಪಿಎ 118, ಇತರರು 126 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ.

ಟೈಮ್ಸ್ ನೌ ಸಂಸ್ಥೆಯು ಪಕ್ಷಗಳವಾರು ಕ್ಷೇತ್ರಗಳ ವಿವರ ನೀಡಿದ್ದು, ಅದರಂತೆ ಬಿಜೆಪಿ 262, ಬಿಜೆಪಿ ಮೈತ್ರಿ ಪಕ್ಷಗಳು 44, ಕಾಂಗ್ರೆಸ್ 78, ಕಾಂಗ್ರೆಸ್ ಮೈತ್ರಿ ಪಕ್ಷಗಳು 54, ಇತರರು 104 ಸ್ಥಾನಗಳನ್ನು ಪಡೆಯಲಿದ್ದಾರೆ. ಅಂಡಮಾನ್ ನಿಕೋಬಾರ್, ಚಂಡೀಘರ್, ದಾದರ್ ಹವೇಲಿ, ಡಾಮನ್ ಡಿಯು ರಾಜ್ಯಗಳಲ್ಲಿರುವ ತಲಾ ಒಂದು ಲೋಕ ಸಭಾ ಕ್ಷೇತ್ರ ಬಿಜೆಪಿ ವಶವಾಗಲಿದೆ. ಲಕ್ಷದ್ವೀಪ ಮತ್ತು ನಾಗಾಲ್ಯಾಂಡ್‍ನಲ್ಲಿರುವ ತಲಾ ಒಂದು ಕ್ಷೇತ್ರವನ್ನು ಕಾಂಗ್ರೆಸ್ ಮೈತ್ರಿ ಪಕ್ಷ ಗೆಲುವು ಸಾಧಿಸಲಿದೆ.ಸಿಕ್ಕಿಂನ ಏಕೈಕ ಕ್ಷೇತ್ರ ಇತರರ ಪಾಲಾಗಲಿದೆ.

ತೆಲಂಗಾಣದ 17 ಕ್ಷೇತ್ರಗಳ ಪೈಕಿ ಒಂದರಲ್ಲಿ ಬಿಜೆಪಿ, ಎರಡರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ, 14 ಕ್ಷೇತ್ರಗಳು ಇತರರ ಪಾಲಾ ಗಲಿವೆ. ಆಂಧ್ರಪ್ರದೇಶದ ಎಲ್ಲಾ 25 ಕ್ಷೇತ್ರಗಳು ಇತರರ ಪಾಲಾಗಲಿದ್ದು, ಅರುಣಾಚಲ ಪ್ರದೇಶದ ಎರಡೂ ಕ್ಷೇತ್ರಗಳು ಬಿಜೆಪಿಗೆ ಒಲಿಯಲಿದೆ. ಅಸ್ಸಾಂನ 14 ಕ್ಷೇತ್ರಗಳ ಪೈಕಿ 6ರಲ್ಲಿ ಬಿಜೆಪಿ, 5ರಲ್ಲಿ ಕಾಂಗ್ರೆಸ್, ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೈತ್ರಿ ಕೂಟ ಹಾಗೂ ಒಂದು ಕ್ಷೇತ್ರದಲ್ಲಿ ಇತರರು ಗೆಲುವು ಸಾಧಿಸಲಿದ್ದಾರೆ.

ಬಿಹಾರ್‍ನ 40 ಕ್ಷೇತ್ರಗಳ ಪೈಕಿ ಬಿಜೆಪಿ 16, ಅದರ ಮೈತ್ರಿ ಕೂಟ 14, ಕಾಂಗ್ರೆಸ್ 3, ಅದರ ಮೈತ್ರಿ ಕೂಟ 7 ಸ್ಥಾನಗಳಲ್ಲಿ ಜಯ ಸಾಧಿಸಲಿದೆ. ಛತ್ತೀಸ್‍ಘಡದ 11 ಕ್ಷೇತ್ರಗಳ ಪೈಕಿ ಬಿಜೆಪಿ 7 ಹಾಗೂ ಕಾಂಗ್ರೆಸ್ 4 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ. ದೆಹಲಿಯ 7 ಕ್ಷೇತ್ರಗಳ ಪೈಕಿ 6 ಬಿಜೆಪಿಗೆ ಬಂದರೆ, ಒಂದು ಕ್ಷೇತ್ರ ಕಾಂಗ್ರೆಸ್ ಪಾಲಾಗಲಿದೆ. ಗೋವಾದ 2 ಕ್ಷೇತ್ರಗಳ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಒಂದು ಕ್ಷೇತ್ರವನ್ನು ಪಡೆಯಲಿದೆ. ಗುಜರಾತ್‍ನ 26 ಕ್ಷೇತ್ರಗಳ ಪೈಕಿ 23ರಲ್ಲಿ ಬಿಜೆಪಿ ಹಾಗೂ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಹರ್ಯಾಣದ 10 ಕ್ಷೇತ್ರಗಳ ಪೈಕಿ 8ರಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ, ಎರಡು ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಲಿವೆ. ಹಿಮಾಚಲ ಪ್ರದೇಶದ 4 ಕ್ಷೇತ್ರಗಳ ಪೈಕಿ 3ರಲ್ಲಿ ಬಿಜೆಪಿ ಜಯಭೇರಿ ಬಾರಿಸಿದರೆ, ಒಂದು ಕ್ಷೇತ್ರ ಕಾಂಗ್ರೆಸ್ ಪಾಲಾಗಲಿದೆ.

ಜಮ್ಮು-ಕಾಶ್ಮೀರದ 6 ಕ್ಷೇತ್ರಗಳ ಪೈಕಿ ಎರಡರಲ್ಲಿ ಬಿಜೆಪಿ ಗೆದ್ದರೆ, 4 ಸ್ಥಾನಗಳನ್ನು ಕಾಂಗ್ರೆಸ್ ಪಡೆಯಲಿದೆ. ಜಾರ್ಖಂಡ್‍ನ 14 ಕ್ಷೇತ್ರಗಳ ಪೈಕಿ 8ರಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ, ತಲಾ ಮೂರು ಕ್ಷೇತ್ರಗಳು ಕಾಂಗ್ರೆಸ್ ಮತ್ತು ಅದರ ಮೈತ್ರಿ ಕೂಟದ ಪಾಲಾಗಲಿವೆ. ಕರ್ನಾಟಕದ 28 ಕ್ಷೇತ್ರಗಳ ಪೈಕಿ 20ರಲ್ಲಿ ಬಿಜೆಪಿ, ಒಂದು ಅದರ ಮೈತ್ರಿ ಕೂಟ, 6ರಲ್ಲಿ ಕಾಂಗ್ರೆಸ್ ಮತ್ತು ಒಂದು ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ. ಕೇರಳದ 20 ಕ್ಷೇತ್ರಗಳ ಪೈಕಿ ಒಂದರಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಲಿದ್ದು, 11 ಕ್ಷೇತ್ರಗಳು ಕಾಂಗ್ರೆಸ್‍ಗೆ ಹಾಗೂ 4 ಕ್ಷೇತ್ರಗಳು ಅದರ ಮೈತ್ರಿ ಕೂಟಕ್ಕೆ ಲಭಿಸಿದರೆ, ಉಳಿದ 4 ಕ್ಷೇತ್ರಗಳಲ್ಲಿ ಇತರರು ಜಯಭೇರಿ ಬಾರಿಸಲಿದ್ದಾರೆ. ಮಧ್ಯಪ್ರದೇಶದ 29 ಕ್ಷೇತ್ರಗಳ ಪೈಕಿ 24ರಲ್ಲಿ ಬಿಜೆಪಿ ಗೆದ್ದರೆ, 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ.

ಮಹಾರಾಷ್ಟ್ರದ 48 ಕ್ಷೇತ್ರಗಳ ಪೈಕಿ 22ರಲ್ಲಿ ಬಿಜೆಪಿ, 16 ಕ್ಷೇತ್ರಗಳಲ್ಲಿ ಅದರ ಮೈತ್ರಿ ಕೂಟ, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು 8 ಕ್ಷೇತ್ರಗಳಲ್ಲಿ ಅದರ ಮೈತ್ರಿ ಕೂಟ ಗೆಲುವು ಸಾಧಿಸಲಿದೆ. ಮಣಿಪುರದ 2 ಕ್ಷೇತ್ರಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಒಂದರಂತೆ ಹಂಚಿಕೊಳ್ಳಲಿದೆ. ಮೇಘಾಲಯದ 2 ಕ್ಷೇತ್ರಗಳ ಪೈಕಿ ಒಂದರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ, ಮತ್ತೊಂದು ಇತರರ ಪಾಲಾಗಲಿದೆ. ಒಡಿಸ್ಸಾದ 21 ಕ್ಷೇತ್ರಗಳ ಪೈಕಿ 12ರಲ್ಲಿ ಬಿಜೆಪಿ, ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ, 8 ಕ್ಷೇತ್ರಗಳು ಇತರರ ಪಾಲಾಗಲಿವೆ. ಪಂಜಾಬ್‍ಗೆ 13 ಕ್ಷೇತ್ರಗಳ ಪೈಕಿ 10ರಲ್ಲಿ ಕಾಂಗ್ರೆಸ್, ಒಂದು ಕ್ಷೇತ್ರದಲ್ಲಿ ಬಿಜೆಪಿ ಹಾಗೂ 2 ಕ್ಷೇತ್ರಗಳಲ್ಲಿ ಅದರ ಮೈತ್ರಿ ಕೂಟ ಗೆಲುವು ಸಾಧಿಸಲಿದೆ. ರಾಜಾಸ್ಥಾನದ 25 ಕ್ಷೇತ್ರಗಳ ಪೈಕಿ 20ರಲ್ಲಿ ಬಿಜೆಪಿ, ಒಂದರಲ್ಲಿ ಅದರ ಮೈತ್ರಿ ಕೂಟ ಹಾಗೂ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಪುದುಚೇರಿಯ ಒಂದು ಕ್ಷೇತ್ರ ಬಿಜೆಪಿ ಮೈತ್ರಿ ಕೂಟಕ್ಕೆ ಲಭಿಸಲಿದ್ದು, ತಮಿಳುನಾಡಿನ 38 ಕ್ಷೇತ್ರಗಳ ಪೈಕಿ ಬಿಜೆಪಿ 2, ಅದರ ಮೈತ್ರಿ ಕೂಟ 7, ಕಾಂಗ್ರೆಸ್ 6 ಹಾಗೂ ಅದರ ಮೈತ್ರಿ ಕೂಟ 23 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ತ್ರಿಪುರಾದ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ. ಉತ್ತರಪ್ರದೇಶದ 80 ಕ್ಷೇತ್ರಗಳ ಪೈಕಿ 56 ಬಿಜೆಪಿಗೆ ಹಾಗೂ 2 ಕ್ಷೇತ್ರಗಳು ಅದರ ಮೈತ್ರಿ ಕೂಟಕ್ಕೆ ಲಭಿಸಿದರೆ, ಕಾಂಗ್ರೆಸ್‍ಗೆ 2 ಮತ್ತು ಇತರರಿಗೆ 20 ಸ್ಥಾನಗಳು ದೊರೆಯಲಿದೆ. ಉತ್ತರಾಖಂಡದ 5 ಕ್ಷೇತ್ರಗಳ ಪೈಕಿ ಬಿಜೆಪಿ 4 ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಪಡೆಯಲಿದೆ. ಪಶ್ಚಿಮಬಂಗಾಳದ 42 ಕ್ಷೇತ್ರಗಳ ಪೈಕಿ 11ರಲ್ಲಿ ಬಿಜೆಪಿ, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ 29 ಕ್ಷೇತ್ರಗಳಲ್ಲಿ ಇತರರು ಗೆಲುವು ಸಾಧಿಸಲಿದ್ದಾರೆ.

ಮೇ 24ರಂದು ಯುಪಿಎ ನಾಯಕ ಆಯ್ಕೆ

ಲೋಕಸಭೆ ಚುನಾವಣೆಗಳು ಇಂದು ಅಂತ್ಯಗೊಂಡಿದ್ದು, ಫಲಿತಾಂಶ ಪ್ರಕಟ ವಾಗುವ ಮೇ 23ಕ್ಕೆ ಮರು ದಿನ ಯುಪಿಎ ನಾಯಕನನ್ನು ಆಯ್ಕೆ ಮಾಡಲು ಯುಪಿಎ ಮುಖಂಡರು ನಿರ್ಧರಿಸಿದ್ದಾರೆ. ಅಂತಿಮ ಹಂತದ ಚುನಾವಣೆ ದಿನವಾದ ಇಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಸಮ್ಮುಖದಲ್ಲಿ ಆಂಧ್ರ ಮುಖ್ಯಮಂತ್ರಿ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು, ತಮಿಳುನಾಡಿನ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಸೇರಿದಂತೆ ಯುಪಿಎ ಮುಖಂಡರು ಸಭೆ ಸೇರಿ ಈ ನಿರ್ಧಾರ ಕೈಗೊಂಡರು. ಮೇ 23ರಂದು ಫಲಿತಾಂಶ ಹೊರ ಬೀಳಲಿದ್ದು, ಮೇ 24ರಂದು ಈ ಮುಖಂಡರೆಲ್ಲಾ ಸಭೆ ಸೇರಿ ಚರ್ಚಿಸಿ, ಯುಪಿಎ ನಾಯಕನನ್ನು ಆಯ್ಕೆ ಮಾಡಲು ತೀರ್ಮಾನಿಸಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿಗೆ ಅಧಿಕ ಸ್ಥಾನ

ನವದೆಹಲಿ: ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ನಡೆದ ಚುನಾವಣೆಯ ಬಹುತೇಕ ಸಮೀಕ್ಷೆಗಳಲ್ಲಿ ಬಿಜೆಪಿ ಮುಂದಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಗೆಲುವು ಸಾಧಿಸಲಿದ್ದಾರೆ. ತುಮಕೂರಿನಲ್ಲಿ ಸ್ಪರ್ಧಿಸಿರುವ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡ ಹಾಗೂ ಹಾಸನದಲ್ಲಿ ಸ್ಪರ್ಧಿಸಿರುವ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ಪೈಕಿ ಒಬ್ಬರು ಮಾತ್ರ ಗೆಲುವು ಸಾಧಿಸಲಿದ್ದು, ಗೆಲ್ಲುವವರು ಯಾರು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

ಚಾಣಕ್ಯ ಸಮೀಕ್ಷೆಯಂತೆ ಬಿಜೆಪಿ 23 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷ 5 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಜನ್ ಕೀ ಬಾತ್ ಸಮೀಕ್ಷೆಯಂತೆ 18ರಿಂದ 20 ಕ್ಷೇತ್ರ ಗಳಲ್ಲಿ ಬಿಜೆಪಿ, 7ರಿಂದ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ, 0 ಯಿಂದ ಒಂದು ಕ್ಷೇತ್ರದಲ್ಲಿ ಪಕ್ಷೇತ ರರು ಗೆಲ್ಲಲಿದ್ದಾರೆ. ಸಿಎನ್‍ಎನ್- ಐಬಿಎನ್ ಸಮೀಕ್ಷೆ ಯಂತೆ 21ರಿಂದ 23 ಸ್ಥಾನಗಳು ಬಿಜೆಪಿಗೆ ಹಾಗೂ 5ರಿಂದ 7 ಸ್ಥಾನ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ದೊರೆಯಲಿದೆ. ಇಂಡಿಯಾ ಟುಡೆ ಸಮೀಕ್ಷೆಯಂತೆ 21ರಿಂದ 25 ಸ್ಥಾನಗಳು ಬಿಜೆಪಿಗೆ, 3ರಿಂದ 6 ಸ್ಥಾನಗಳು ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಹಾಗೂ 0 ಯಿಂದ ಒಂದು ಸ್ಥಾನ ಪಕ್ಷೇತರರಿಗೆ ಲಭಿಸಲಿದೆ.

ಎಬಿಪಿ ಸಮೀಕ್ಷೆಯಂತೆ 15 ಸ್ಥಾನ ಬಿಜೆಪಿಗೆ, 13 ಸ್ಥಾನಗಳು ಕಾಂಗ್ರೆಸ್-ಜೆಡಿಎಸ್

ಮೈತ್ರಿಗೆ, ಸಿ-ವೋಟರ್ಸ್ ಸಮೀಕ್ಷೆಯಂತೆ ಬಿಜೆಪಿಗೆ 18 ಸ್ಥಾನ, ಕಾಂಗ್ರೆಸ್‍ಗೆ 3 ಹಾಗೂ ಪಕ್ಷೇತರರಿಗೆ ಒಂದು ಸ್ಥಾನ ದೊರೆಯಲಿದೆ. ಟೈಮ್ಸ್ ನೌ ಸಮೀಕ್ಷೆಯಂತೆ ಬಿಜೆಪಿಗೆ 20, ಕಾಂಗ್ರೆಸ್‍ಗೆ 6, ಜೆಡಿಎಸ್‍ಗೆ ಒಂದು ಸ್ಥಾನ ಲಭಿಸಿದರೆ, ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅಂಬರೀಷ್ ಗೆಲುವಿನ ನಗೆ ಬೀರಲಿದ್ದಾರೆ. ನ್ಯೂಸ್ ಎಕ್ಸ್ ಸಮೀಕ್ಷೆಯಂತೆ ಬಿಜೆಪಿಗೆ 17 ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ 11 ಸ್ಥಾನ ದೊರೆಯಲಿದೆ.

Translate »