ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಇನ್ನೆರಡೇ ದಿನ ಬಾಕಿ…!
ಹಾಸನ

ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಇನ್ನೆರಡೇ ದಿನ ಬಾಕಿ…!

May 21, 2019

ಕ್ಷೇತ್ರದಲ್ಲಿ ಕಾಣದ ಕುತೂಹಲ, ಅಭ್ಯರ್ಥಿಗಳ ಎದೆಯಲ್ಲಿ ಢವ ಢವ, ಮತ ಎಣಿಕೆಗೆ ಜಿಲ್ಲಾಡಳಿತ ಸಜ್ಜು

– ಎಸ್.ಪ್ರತಾಪ್/ರಾಚೇನಹಳ್ಳಿ ಸೋಮೇಶ್

ಹಾಸನ: ಲೋಕಸಭೆ ಚುನಾ ವಣೆಯ ಮತದಾನ ಮುಗಿದು ತಿಂಗಳಾ ಗಿದ್ದು, ಫÀಲಿತಾಂಶ ಪ್ರಕಟಕ್ಕೆ ಇನ್ನು ಎರಡು ದಿನವಷ್ಟೇ ಬಾಕಿ ಉಳಿದಿದೆ. ಆದರೂ, ಮಂಡ್ಯ ಹಾಗೂ ತುಮಕೂರು ಸೇರಿ ದಂತೆ ಇತರೆ ಕ್ಷೇತ್ರಗಳಲ್ಲಿ ಫಲಿತಾಂಶಕ್ಕೆ ಇರುವಷ್ಟು ಕುತೂಹಲ ಹಾಸನ ಕ್ಷೇತ್ರದಲ್ಲಿ ಮಾತ್ರ ಇಲ್ಲದಂತಾಗಿದೆ.

ರಾಜಕೀಯ ಪಕ್ಷದ ಮುಖಂಡರು, ಕಾರ್ಯಕರ್ತರು ಮಾತ್ರ ಫಲಿತಾಂಶದ ಬಗ್ಗೆ ಮಾತಾಡಿಕೊಳ್ಳುತ್ತಿದ್ದಾರೆ. ಆದರೆ, ಮತದಾರರು ಫಲಿತಾಂಶದತ್ತ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಈ ವಿಷಯವಾಗಿ ಕ್ಷೇತ್ರದ ಮತದಾರರನ್ನು ಮಾತಿಗೆಳೆದರೆ ಒಬ್ಬರು ಗೆಲ್ಲುತ್ತಾರೆ, ಮತ್ತೊಬ್ಬರು ಸೋಲು ತ್ತಾರೆ. ಇನ್ನೇನು ಎಂದು ಜಾಣ್ಮೆಯ ಉತ್ತರ ನೀಡಿ ಸುಮ್ಮನಾಗುತ್ತಾರೆ.

ಹಾಸನ ಲೋಕಸಭಾ ಕ್ಷೇತ್ರಕ್ಕೆ ಒಳ ಪಡುವ ಒಟ್ಟು 8 ವಿಧಾನಸಭಾ ಕ್ಷೇತ್ರದಲ್ಲಿ ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರವನ್ನು ಹೊರತು ಪಡಿಸಿ ಉಳಿದ 6 ಕ್ಷೇತ್ರದಲ್ಲಿಯೂ ಜೆಡಿಎಸ್ ಹಿಡಿತ ಸಾಧಿಸಿದೆ. ಪಟ್ಟಣ ದಿಂದ ಗ್ರಾಮ ಮಟ್ಟದವರೆಗೂ ಪಕ್ಷದ ಸಂಘಟನೆ ಚೆನ್ನಾಗಿಯೇ ಇದೆ. ಇದ ರೊಂದಿಗೆ ಹಿಂದಿನ ವಿಧಾನಸಭೆ, ಲೋಕ ಸಭೆ ಚುನಾವಣೆಗೆ ಹೋಲಿಸಿದಲ್ಲಿ ಈ ಬಾರಿ ಸಾಕಷ್ಟು ಶ್ರಮ ವಹಿಸಿಯೇ ಚುನಾ ವಣೆ ಎದುರಿಸಿದ್ದಾರೆ.

ಜೆಡಿಎಸ್‍ಗೆ ಪ್ರತಿಷ್ಠೆ ಕಣ: ಮಾಜಿ ಪ್ರಧಾನಿ ಹಾಗೂ ಸಂಸದ ಹೆಚ್.ಡಿ.ದೇವೇಗೌಡ ಅವರು ತಮ್ಮ ತವರು ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣನಿಗೆ ಬಿಟ್ಟುಕೊಟ್ಟು ತುಮ ಕೂರು ಕ್ಷೇತ್ರದಿಂದ ಸ್ಪರ್ಧೆಗೆ ಇಳಿದ ಬಳಿಕ ಹಾಸನ ಕ್ಷೇತ್ರ ಜೆಡಿಎಸ್ ಪಾಲಿಗೆ ಪ್ರತಿಷ್ಠೆಯ ಕ್ಷೇತ್ರವಾಗಿ ಪರಿಣಮಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ತಮ್ಮ ಪುತ್ರನನ್ನು ಪಾರ್ಲಿಮೆಂಟ್ ಮೆಟ್ಟಿಲು ಹತ್ತಿಸಲೇಬೇಕು ಎಂದು ಕಾಂಗ್ರೆಸ್ ವರಿಷ್ಠರೊಂದಿಗೆ ಸೇರಿ ತನ್ನೆಲ್ಲ ತಂತ್ರಗಾರಿಕೆ ಯನ್ನು ಪ್ರಯೋಗಿಸಿದ್ದಾರೆ. ಇತ್ತ ಬಿಜೆಪಿ ಕೂಡ ಮಾಜಿ ಸಚಿವ ಎ.ಮಂಜು ಅವರನ್ನು ಕಣಕ್ಕಿಳಿಸಿ ಸ್ಪರ್ಧೆಯೊಡ್ಡಿತು. ಜೆಡಿಎಸ್ ವಿರುದ್ಧ ಮುನಿಸಿಕೊಂಡವರು, ಕಾಂಗ್ರೆಸ್‍ನ ವಿರೋಧಿಗಳು, ಹೀಗೆ ಎಲ್ಲಾ ಮುಖಂ ಡರು, ಕಾರ್ಯಕರ್ತರ ಮನೆಗಳಿಗೆ ತೆರಳಿ ಮನವೊಲಿಸುವ ಮೂಲಕ ತನ್ನ ಶಕ್ತಿ ವೃದ್ಧಿಸಿಕೊಳ್ಳುವ ಪ್ರಯತ್ನವನ್ನು ಕಡೆಹಂತ ದವರೆಗೂ ನಡೆಸಿತು. ಹಾಗಾಗಿ, ಆರಂಭ ದಿಂದ ಎರಡು ಪಕ್ಷಗಳು ಜಿದ್ದಾಜಿದ್ದಿಗೆ ಬಿದ್ದಂತೆ ಸೆಣಸಾಡಿದ್ದರಿಂದ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.

ಯಾರಿಗೆ ಗೆಲುವು?: ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಎರಡು ಪಕ್ಷಗಳು ಗೆಲುವಿನ ಲೆಕ್ಕಾಚಾರ ಹಾಕುತ್ತಿದೆ. ಬಿಜೆಪಿ ತನಗೆ ಒಲವಿರುವ ಹಾಗೂ ಮೋದಿ ಅಲೆ ಕೈಹಿಡಿಯುವ ಜಿಲ್ಲೆಯ ಸಕಲೇಶಪುರ, ಬೇಲೂರು, ಹಾಸನ, ಅರಸೀಕೆರೆ, ಚನ್ನ ರಾಯಪಟ್ಟಣ, ಕಡೂರು, ಅರಕಲಗೂಡು ಕ್ಷೇತ್ರದಲ್ಲಿ ಹೆಚ್ಚು ಪ್ರಚಾರ ನಡೆಸಿ ಮತ ದಾರರನ್ನು ತನ್ನತ್ತ ಸೆಳೆಯಲು ಕಸರತ್ತು ಮಾಡಿದೆ. ಈ ಹಿನ್ನೆಲೆಯಲ್ಲಿ ಕಮಲ ಪಾಳಯಕ್ಕೆ ಗೆಲುವಿನ ವಿಶ್ವಾಸದಲ್ಲಿದೆ.

ಆದರೆ, ಜೆಡಿಎಸ್ ಹೊಳೆನರಸೀಪುರ, ಚನ್ನರಾಯಪಟ್ಟಣದಲ್ಲಿ ತಾವು ಪಡೆ ಯುವ ಲೀಡ್ ಜತೆಗೆ ಉಳಿದ ವಿಧಾನ ಸಭೆ ಕ್ಷೇತ್ರದ ಮತಗಳಲ್ಲೂ ಹೆಚ್ಚು ಮತ ಬಂದಿರುವ ಸಾಧ್ಯತೆಯಿದ್ದು, ಗೆಲುವು ಶತಸಿದ್ಧ ಎಂಬ ದೃಢ ವಿಶ್ವಾಸದಲ್ಲಿದೆ.

ಬೆಟ್ಟಿಂಗ್: ರಾಜಕೀಯ ಮುಖಂಡರು, ಕಾರ್ಯಕರ್ತರು ಮತದಾನದ ಬಳಿಕ ಚರ್ಚೆಯೊಂದಿಗೆ ಬೆಟ್ಟಿಂಗ್‍ನತ್ತ ಜಾರಿ ದ್ದಾರೆ. ಆದರೆ, ದಿನಕಳೆದಂತೆ ಅದರ ಧ್ವನಿಯೇ ಇಲ್ಲದಂತಾಗಿದೆ. ಯಾರೇ ಗೆದ್ದರೂ ಹತ್ತಾರು ಸಾವಿರ ಮತಗಳ ಅಂತರವಿರ ಲಿದೆ. ಇನ್ನು 60-40 ಅನ್ವಯ ಸೋಲು-ಗೆಲುವಿನ ಲೆಕ್ಕಾಚಾರ ಆರಂಭದಲ್ಲಿ ನಡೆ ದಿದ್ದು, ಬಿಟ್ಟರೆ ಈಗ ಅಂತಹ ಕುತೂಹಲ ಉಳಿದೇ ಇಲ್ಲ. ಕೆಲವರು ಮಾತ್ರ ತಮ್ಮದೇ ಆದ ಲೆಕ್ಕದಲ್ಲಿ ಸಣ್ಣ ಪ್ರಮಾಣದಲ್ಲಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ ಎನ್ನಲಾಗಿದೆ.

ದೇಗುಲ ಸುತ್ತಿದ ಅಭ್ಯರ್ಥಿಗಳು: ಮೇ 23ರಂದು ಫಲಿತಾಂಶ ಪ್ರಕಟಗೊಳ್ಳುತ್ತಿ ರುವ ಹಿನ್ನೆಲೆಯಲ್ಲಿ ಕ್ಷೇತ್ರ ಅಭ್ಯರ್ಥಿಗಳ ಎದೆಯಲ್ಲಿ ಢವ… ಢವ… ಶುರುವಾಗಿದೆ. ಮತದಾನದ ಬಳಿಕ ಅಭ್ಯರ್ಥಿಗಳು ನಾನಾ ದೇಗುಲಗಳನ್ನು ಸುತ್ತಿ ಗೆಲುವಿಗಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಆದರೆ, ಕ್ಷೇತ್ರದಲ್ಲಿ ಮಾತ್ರ ಯಾರೇ ಗೆದ್ದರೂ, 50ರಿಂದ 60 ಸಾವಿರ ಅಂತರದಲ್ಲಿ ಎಂಬ ಲೆಕ್ಕಾಚಾರವಿದೆ.

ಅಭ್ಯರ್ಥಿಗಳ ಕುತೂಹಲ ಏನೇ ಇರಲಿ, ಮತಯಂತ್ರಗಳು ಮಾತ್ರ ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪೆÇಲೀಸ್ ಕಣ್ಗಾವಲಿನಲ್ಲಿದೆ. ಮೂರು ಹಂತದಲ್ಲಿ ಭದ್ರತೆಯನ್ನು ಪಾಳಿ ಅನ್ವಯ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.

ಮತ ಎಣಿಕೆ ಸಿದ್ಧತೆ: ಮೇ 23ರ ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿ ಕೊಂಡಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ, ಅಗತ್ಯ ಸಲಹೆ-ಸೂಚನೆ ನೀಡಿದ್ದು, ಅಂದು ಬೆಳಿಗ್ಗೆ 10 ರಿಂದ 11 ಗಂಟೆ ಒಳಗೆ ಮತ ಎಣಿಕೆ ಮುಗಿದು ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.

ಸಿ-ವೋಟರ್ಸ್ ಸಮೀಕ್ಷೆ: ಬಿಜೆಪಿಗೆ ಸೋಲು, ಜೆಡಿಎಸ್‍ಗೆ ಗೆಲುವು?

ಹಾಸನ: ಲೋಕಸಭಾ ಚುನಾವಣೆಯ ಎಲ್ಲಾ 7 ಹಂತದ ಮತದಾನ ಪ್ರಕ್ರಿಯೆ ಅಂತ್ಯಗೊಂಡಿದ್ದು, ದೇಶಾದ್ಯಂತ ಹಲವು ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಗಳನ್ನು ನಡೆಸಿ, ಪ್ರಕಟಿಸಿದೆ. ಇವುಗಳ ಪೈಕಿ ಸಿ-ವೋಟರ್ಸ್ ಸಂಸ್ಥೆಯು ಹಾಸನ ಲೋಕಸಭಾ ಕ್ಷೇತ್ರದ ಫಲಿತಾಂಶದ ಸಮೀಕ್ಷೆ ನಡೆಸಿದ್ದು, ಇದರಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರಿಗೆ ಸೋಲು ಮತ್ತು ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದೆ.

ಮೇ 23ರಂದು ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ರಜೆ

ಹಾಸನ: ಹಾಸನ ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಸಂಬಂಧ ಮೇ 23ರಂದು ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಮತ ಎಣಿಕೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗದಂತೆ ಹಾಗೂ ಮತ ಎಣಿಕೆ ಕಾರ್ಯವು ಸುಗಮವಾಗಿ ನಡೆಸಲು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಾಗಿರುವುದರಿಂದ ಹಾಸನ ಜಿಲ್ಲೆಯಾದ್ಯಂತ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35 ರಡಿ ನಿಷೇಧಾಜ್ಞೆ ಘೋಷಿಸಿದ್ದು ಎಣಿಕೆ ಕೇಂದ್ರಕ್ಕೆ ಅನುಮತಿ ಇಲ್ಲದ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ.

ಈ ಸಂಬಂಧವಾಗಿ ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ಜರುಗಲಿದ್ದು ಮತ ಎಣಿಕೆಗೆ ಯಾವುದೇ ಅಡ್ಡಿ ಆಗದಂತೆ ಕ್ರಮ ವಹಿಸ ಬೇಕಾಗಿರುವುದರಿಂದ ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಮೇ 23ರಂದು ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆದೇಶಿಸಿದ್ದಾರೆ.

Translate »