ಹಾಸನ: ಬಿಜೆಪಿಗೆ ಹೋಗಲ್ಲ ಎಂದು ಹೇಳಿ, ಈಗ ಬಿಜೆಪಿಯಿಂದಲೇ ಸ್ಪರ್ಧಿಸಿರುವ ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಪಕ್ಷ ದ್ರೋಹಿ, ಕಳ್ಳೆತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು. ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಡೂರಿನಲ್ಲಿ ಗುರುವಾರ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪ್ರಚಾರ ಸಭೆಯಲ್ಲಿ ಮಾತ ನಾಡಿದ ಅವರು, ಈ ಗಿರಾಕಿ ಹಿಂದೆ ನಮ್ಮ ಜೊತೆ ಇದ್ದರು. ಸಚಿವ ಸ್ಥಾನವನ್ನೂ ನೀಡಿ ದ್ದೆವು. ಕಳ್ಳೆತ್ತು ಎಂಬುದು ಗೊತ್ತಿತ್ತು. ಬಿಜೆಪಿ ಸೇರುವುದಕ್ಕೂ ಮೂರು ದಿನ ಮುನ್ನಾ…
ಪ್ರಜ್ವಲ್ ಪರ ಗುರು-ಶಿಷ್ಯರ ಬಿರುಸಿನ ಪ್ರಚಾರ
April 12, 2019ಕಡೂರು, ಅರಸೀಕೆರೆ, ಗಂಡಸಿ, ಅರಕಲಗೂಡು, ಹೊಳೆನರಸೀಪುರದಲ್ಲಿ ಮತಬೇಟೆ ಬಿಜೆಪಿ, ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ಹಾಸನ: ಜೆಡಿಎಸ್ ಭದ್ರಕೋಟೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ಗುರು-ಶಿಷ್ಯರಾದ ಮಾಜಿ ಪ್ರಧಾನಿ ಹಾಗೂ ಸಂಸದ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಸಮ ನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಜಂಟಿ ಚುನಾವಣಾ ಪ್ರಚಾರ ನಡೆಸಿದರು. ಒಂದೇ ಹೆಲಿಕಾಪ್ಟರ್‍ನಲ್ಲಿ ಓಡಾಡುವುದರ ಜೊತೆಗೆ ಒಂದೇ ವೇದಿಕೆ ಹಂಚಿಕೊಂಡು, ಒಬ್ಬರೇ ಅಭ್ಯರ್ಥಿ ಪರ ಪ್ರಚಾರ…
ಬಾಹುಬಲಿ ಸ್ವಾಮಿಯ 1039ನೇ ಪ್ರತಿಷ್ಠಾನ ಮಹೋತ್ಸವ
April 12, 2019ಶ್ರವಣಬೆಳಗೊಳ: ವಿಂಧ್ಯ ಗಿರಿಯ ದೊಡ್ಡ ಬೆಟ್ಟದಲ್ಲಿ ಬಾಹುಬಲಿ ಸ್ವಾಮಿಯ 1039ನೇ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ವಿಜೃಂಭಣೆಯಿಂದ ಪಾದಪೂಜೆ ನೆರವೇರಿತು. ಪ್ರತಿಷ್ಠಾಪನಾ ಮಹೋತ್ಸವದ ನಿಮಿತ್ತ ಪ್ರತಿಷ್ಠಾಪಿಸಲ್ಪಟ್ಟ 9 ರಜತ ಕಲಶಗಳಿಂದ ಜಲಾಭಿಷೇಕ ನೆರವೇರಿಸಿ, ಕ್ಷೀರ, ಶ್ರೀ ಗಂಧದಿಂದ ಪಾದಪೂಜೆ, ಮೂರ್ತಿಯ ಮುಂದೆ ಪ್ರತಿಷ್ಠಾಪಿಸಲ್ಪಟ್ಟ ಬಾಹುಬಲಿ ಮೂರ್ತಿಗೆ ಮಾವಿನ ಹಣ್ಣಿನ ರಸದಿಂದ ಅಭಿಷೇಕ ನೆರವೇರಿಸಿ, ವಿವಿಧ ಪುಷ್ಪವೃಷ್ಟಿ ಮಾಡಲಾಯಿತು. ನಂತರ ಚಾರುಕೀರ್ತಿ ಶ್ರೀಗಳು ಮತ್ತು ಗಣಿನಿ ಆರ್ಯಿಕಾ…
ಭಿನ್ನಾಭಿಪ್ರಾಯ ಬಿಟ್ಟು ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ: ಎಂ.ಬಿ.ಪಾಟೀಲ್
April 12, 2019ಅರಸೀಕೆರೆ: ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ತಮ್ಮ ಭಿನ್ನಾ ಭಿಪ್ರಾಯವನ್ನು ಬದಿಗಿಟ್ಟು ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಕರೆ ನೀಡಿದರು. ತಾಲೂಕಿನ ದೊಡ್ಡಮೇಟಿ ಕುರ್ಕೆ ಗ್ರಾಮ ದಲ್ಲಿ ಬುಧವಾರ ರಾತ್ರಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನಪರ ಕಾಳಜಿ ಸ್ವಂತ ವರ್ಚಸ್ಸಿನಿಂದ ಬಿಜೆಪಿ ಅಭ್ಯರ್ಥಿಗಳು ಮತ ಕೇಳು ತ್ತಿಲ್ಲ. ಬದಲಿಗೆ ನರೇಂದ್ರ ಮೋದಿಯವರ ಹೆಸರು ಹೇಳಿಕೊಂಡು ಮತ ಕೇಳುತ್ತಿರುವುದು ವಿಪರ್ಯಾಸವಾಗಿದೆ…
ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮತದಾನ ಕಡ್ಡಾಯ: ಚಂದನ್‍ಶೆಟ್ಟಿ
April 12, 2019ಹಾಸನ: ದೇಶದಲ್ಲಿ ಪ್ರತಿ ಯೊಬ್ಬರ ಮತಕ್ಕೆ ಸಮಾನವಾದ ಮಹತ್ವ ಇದೆ. ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸುವುದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳುತ್ತದೆ ಎಂದು ರ್ಯಾಪ್ ಗಾಯಕ, ಜಿಲ್ಲಾ ಸ್ವೀಪ್ ಚಟುವಟಿಕೆಗಳ ರಾಯಭಾರಿ ಚಂದನ್‍ಶೆಟ್ಟಿ ಹೇಳಿದರು. ಜಿಲ್ಲೆಯ ಸಕಲೇಶಪುರ ತಾಲೂಕಿನ ಆನೆ ಹಾವಳಿ ಪ್ರದೇಶಗಳ ಜನರು ಹಾಗೂ ಕಾಫಿ ತೋಟದ ಕಾರ್ಮಿಕರನ್ನು ಭೇಟಿ ಮಾಡಿ ಆತ್ಮವಿಶ್ವಾಸ ತುಂಬುವ ಚಟುವಟಿಕೆಗಳಲ್ಲಿ ಪಾಲ್ಗೊಂಡು ಚಿಕ್ಕ ಸತ್ತಿಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತದಾನ ಎಂದರೆ ರಾಷ್ಟ್ರ ನಿರ್ಮಾಣದಲ್ಲಿ ಕೈ ಜೋಡಿಸಿದಂತೆ ಎಂಬುದನ್ನು ಎಲ್ಲರೂ…
ಪ್ರಜ್ವಲ್ ಸೋಲಿಸಲು ಕಾಂಗ್ರೆಸ್‍ನಿಂದಲೇ ಪ್ಲಾನ್…!
April 11, 2019ಬೇಲೂರು: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸರ್ಧಿಸಿರುವ ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸಲು ಹಾಸನ ಕಾಂಗ್ರೆಸ್‍ನಿಂದಲೇ ಪ್ಲಾನ್ ರೂಪಿಸಲಾಗಿದೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಹೆಚ್.ಎಂ.ವಿಶ್ವನಾಥ್ ಹೇಳಿದರು. ಪಟ್ಟಣದಲ್ಲಿ ಬುಧವಾರ ನಡೆದ ಬಿಜೆಪಿ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಬಿಜೆಪಿ ಸೇರ್ಪಡೆಗೊಂಡ ನಂತರ ಅವರು ಮಾತ ನಾಡಿದರು. ಕಾಂಗ್ರೆಸ್‍ನಲ್ಲಿ ಎರಡು ಗುಂಪುಗಳಾಗಿ ನಾವು ವಿಭಜನೆ ಆಗಿದ್ದೆವು. ಮೊದಲ ಗುಂಪು ಸೂಸೈಡ್ ತಂಡವಾಗಿದ್ದು, ಕಾಂಗ್ರೆಸ್ ಬಿಟ್ಟು ಬಿಜೆಪಿಗೆ…
ಹಾಸನ: ಪ್ರಚಾರದ ಅಖಾಡಕ್ಕೆ ಧುಮುಕಿದ ಬಿಎಸ್‍ವೈ
April 11, 2019ಕಡೂರು, ಅರಸೀಕೆರೆ, ಬೇಲೂರು, ಹೊಳೆನರಸೀಪುರ, ಸಕಲೇಶಪುರದಲ್ಲಿ ಮತ ಪ್ರಚಾರ, ಏ.14ರಂದು ಅಮಿತ್ ಶಾ ರ್ಯಾಲಿ ಹಾಸನ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ವಿಶ್ವಾಸ ದಲ್ಲಿರುವ ಬಿಜೆಪಿ ವರಿಷ್ಠರು, ಕ್ಷೇತ್ರದಲ್ಲಿ ಬಿರುಸಿನ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಬುಧವಾರ ಹಾಸನ ಲೋಕಸಭಾ ಕ್ಷೇತ್ರ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. ಬುಧವಾರ ಇಡೀ ದಿನ ಕ್ಷೇತ್ರ ವ್ಯಾಪ್ತಿಯ ಕಡೂರು, ಅರಸೀಕೆರೆ, ಬೇಲೂರು, ಹೊಳೆ ನರಸೀಪುರ ಹಾಗೂ…
ಮಂಡ್ಯ, ಹಾಸನ, ತುಮಕೂರಿನಲ್ಲಿ ಜೆಡಿಎಸ್‍ಗೆ ಸೋಲು: ಬಿಎಸ್‍ವೈ
April 11, 2019ಬೇಲೂರು: ಮಂಡ್ಯ, ಹಾಸನ, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಸೋಲನುಭವಿಸುವ ಮೂಲಕ ರಾಜ್ಯದಲ್ಲಿ ಕುಟುಂಬ ರಾಜಕಾರಣ ಅಂತ್ಯ ಗೊಳ್ಳಲಿದೆ ಎಂದು ಗೌಡರ ಕುಟುಂಬದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದರು. ಪಟ್ಟಣದ ಯಗಚಿ ಸೇತುವೆ ಬಳಿ ನಡೆದ ಬಿಜೆಪಿ ಚುನಾವಣಾ ಬಹಿರಂಗ ಸಭೆ ಉದ್ಘಾ ಟಿಸಿ ಮಾತನಾಡಿದ ಅವರು, ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರ ವಿರುದ್ಧ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಷಡ್ಯಂತ್ರ ನಡೆಸುತ್ತಿದ್ದಾರೆ. ಇದು ರಾಜ್ಯದ ಜನತೆಗೆ ತಿಳಿದಿದೆ. ಜೆಡಿಎಸ್ ಅನ್ನು ಮಂಡ್ಯ, ಹಾಸನ, ತುಮಕೂರಿನ…
ಮತದಾನದಿಂದ ದೇಶದ ಭವಿಷ್ಯ ರೂಪಿಸೋಣ: ಚಂದನ್‍ಶೆಟ್ಟಿ
April 11, 2019ಹಾಸನ: ಯುವ ಸಮುದಾಯದಿಂದ ಅತ್ಯುತ್ತಮ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯ. ನಾವೆಲ್ಲರೂ ತಪ್ಪದೇ ಮತ ಚಲಾಯಿಸುವ ಮೂಲಕ ಉತ್ತಮ ದೇಶದ ಭವಿಷ್ಯ ರೂಪಿಸಲು ಕೈ ಜೋಡಿಸೋಣ ಎಂದು ಬಿಗ್ ಬಾಸ್ ಖ್ಯಾತಿಯ ಹಾಗೂ ರ್ಯಾಪ್ ಗಾಯಕ ಚಂದನ್‍ಶೆಟ್ಟಿ ಹೇಳಿದರು. ಲೋಕಸಭಾ ಚುನಾವಣೆ ಮತದಾರರ ಜಾಗೃತಿ ರಾಯಭಾರಿಯಾಗಿ ಜಿಲ್ಲೆಗೆ ಆಗಮಿಸಿದ ಅವರು, ನಗರದ ಮಲ್ನಾಡ್ ಎಂಜಿನಿಯರಿಂಗ್ ಕಾಲೇಜು ಸಭಾಂಗಣ ದಲ್ಲಿ ಬುಧವಾರ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಏ. 18ರಂದು ಪ್ರತಿಯೊಬ್ಬ ನಾಗರಿಕನೂ ತಪ್ಪದೇ ಕಡ್ಡಾಯವಾಗಿ…
ವಿಕಲಚೇತನರ ತ್ರಿಚಕ್ರ ವಾಹನ ಜಾಥಾ
April 11, 2019ಹಾಸನ: ನಗರದ ಸಾಹಿತ್ಯ ಪರಿಷತ್ ಆವರಣದಲ್ಲಿ ಬುಧವಾರ ಆಯೋಜಿ ಸಿದ್ದ ವಿಶೇಷ ಚೇತನರ ಮತದಾರರ ಜಾಗೃತಿ ಜಾಥಾ ಎಲ್ಲರ ಗಮನ ಸೆಳೆಯಿತು. ಲೋಕಸಭಾ ಚುನಾವಣೆ-2019ರ ಜಿಲ್ಲಾ ರಾಯಭಾರಿಯಾಗಿ ಪ್ರಖ್ಯಾತ ರ್ಯಾಪ್ ಕಲಾವಿದರಾದ ಎಸ್.ಪಿ.ಚಂದನ್‍ಶೆಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹೆಚ್.ಸಿ.ಪುಟ್ಟಸ್ವಾಮಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶಿವಣ್ಣ, ವಿಕಲಚೇತನ ಸಂಘದ ಅಧ್ಯಕ್ಷ ಚಂದ್ರ ರಾಜ್ ಅರಸ್ ಹಾಗೂ ಅಧಿಕಾರಿಗಳು ಹಾಜರಿದ್ದರು. ಜಾಥಾವು…