ಪ್ರಜ್ವಲ್ ಪರ ಗುರು-ಶಿಷ್ಯರ ಬಿರುಸಿನ ಪ್ರಚಾರ
ಹಾಸನ

ಪ್ರಜ್ವಲ್ ಪರ ಗುರು-ಶಿಷ್ಯರ ಬಿರುಸಿನ ಪ್ರಚಾರ

April 12, 2019
  • ಕಡೂರು, ಅರಸೀಕೆರೆ, ಗಂಡಸಿ, ಅರಕಲಗೂಡು, ಹೊಳೆನರಸೀಪುರದಲ್ಲಿ ಮತಬೇಟೆ
  • ಬಿಜೆಪಿ, ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಹಾಸನ: ಜೆಡಿಎಸ್ ಭದ್ರಕೋಟೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ಗುರು-ಶಿಷ್ಯರಾದ ಮಾಜಿ ಪ್ರಧಾನಿ ಹಾಗೂ ಸಂಸದ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಸಮ ನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಜಂಟಿ ಚುನಾವಣಾ ಪ್ರಚಾರ ನಡೆಸಿದರು.

ಒಂದೇ ಹೆಲಿಕಾಪ್ಟರ್‍ನಲ್ಲಿ ಓಡಾಡುವುದರ ಜೊತೆಗೆ ಒಂದೇ ವೇದಿಕೆ ಹಂಚಿಕೊಂಡು, ಒಬ್ಬರೇ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದನ್ನು ಕಂಡ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯ ಕರ್ತರು ಶಿಳ್ಳೆ ಹೊಡೆದು ಸಂಭ್ರಮಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಹಾಗೂ ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಡೂರಿನಿಂದ ಪ್ರಚಾರ ಆರಂಭಿಸಿದ ಉಭಯ ನಾಯಕರು, ಅರಸೀಕೆರೆ ತಾಲೂಕು ಬಾಣಾ ವರ, ಗಂಡಸಿ, ಅರಕಲಗೂಡು ಮತ್ತು ಹಳ್ಳಿ ಮೈಸೂರಲ್ಲಿ ಕಾರ್ಯಕರ್ತರ ಸಮಾ ವೇಶದಲ್ಲಿ ಪಾಲ್ಗೊಂಡು, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿ, ರಾಜ್ಯದ ಜನತೆ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, `ಮೋದಿ ಒಬ್ಬ ಸರ್ವಾಧಿ ಕಾರಿ, ಮಹಾನ್ ಸುಳ್ಳುಗಾರ, ಏಕ ಚಕ್ರಾ ಧಿಪತ್ಯ ನಡೆಸಲು ಹೊರಟಿದ್ದಾರೆ. ಇಂಥ ವರು ಮತ್ತೆ ಪ್ರಧಾನಿಯಾದರೆ ದೇಶ ಉಳಿ ಯಲ್ಲ. ಪ್ರಜಾತಂತ್ರ ಉಳಿಯಲ್ಲ’ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಎ.ಮಂಜು ಪಕ್ಷ ದ್ರೋಹ ಮಾಡಿ ಬಿಜೆಪಿಗೆ ಹೋಗಿದ್ದು, ಅವರಿಗೆ ನಾಡಿನ ಜನರು ಧಿಕ್ಕಾರ ಹಾಕಬೇಕು. ಯಾವುದೇ ಕಾರಣಕ್ಕೂ ಆತನಿಗೆ ಮತ ಹಾಕಬೇಡಿ ಎಂದು ಮನವಿ ಮಾಡಿದರು.

ಐದು ವರ್ಷದ ಆಡಳಿತಾವಧಿಯಲ್ಲಿ ಮೋದಿ ಅವರು, ಕೊಟ್ಟ ಮಾತು ಉಳಿಸಿ ಕೊಂಡಿಲ್ಲ, ನಂಬಿಕೆ ದ್ರೋಹ ಮಾಡಿ ದ್ದಾರೆ. ಮೋದಿ ಈ ದೇಶಕಂಡ ಮಹಾನ್ ಸುಳ್ಳುಗಾರ. ಚೌಕಿದಾರ್ ಅಲ್ಲ ಭ್ರಷ್ಟಾ ಚಾರದಲ್ಲಿ ಭಾಗಿದಾರ. ದಲಿತರನ್ನು ಬೆತ್ತಲೆ ಮಾಡಿ ದೌರ್ಜನ್ಯವೆಸಗಲಾಗಿದೆ. ಅಲ್ಪ ಸಂಖ್ಯಾತರನ್ನು ಗೋ ರಕ್ಷಣೆ ಹೆಸರಲ್ಲಿ ಹತ್ಯೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಕೇಂದ್ರ ಸಚಿವ ಅನಂತ್ ಕುಮಾರ ಹೆಗಡೆ ಸಂವಿಧಾನ ಬದಲಿಸುತ್ತೇನೆ ಎಂದರೆ, ಆರ್‍ಎಸ್‍ಎಸ್ ಸಂಚಾಲಕ ಮೋಹನ್ ಭಾಗವತ್ ಮೀಸಲಾತಿ ನಿಲ್ಲಿಸಬೇಕು ಎನ್ನು ತ್ತಾರೆ. ಆರ್‍ಎಸ್‍ಎಸ್ ಪ್ರಧಾನ ಕಾರ್ಯ ದರ್ಶಿ ಅವರು ಸಂವಿಧಾನ ಬದಲಾವಣೆ ಆಗಬೇಕು ಎಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

27 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇದರಲ್ಲಿ ಅಲ್ಪಸಂಖ್ಯಾತ ರಿಗೆ ಟಿಕೆಟ್ ನೀಡಿಲ್ಲ. ಈಶ್ವರಪ್ಪ ಯೋಗ್ಯ ತೆಗೆ ಕುರುಬ ಸಮುದಾಯದ ಒಬ್ಬರಿಗೆ ಟಿಕೆಟ್ ಕೊಡಿಸಲು ಆಗಲಿಲ್ಲ ಎಂದು ಅವರನ್ನು ಏಕ ವಚನದಲ್ಲಿ ತರಾಟೆಗೆ ತೆಗೆದುಕೊಂಡರು.
ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ, ಪ್ರಜ್ವಲ್ ರೇವಣ್ಣ, ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್, ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವ ರಾಂ, ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಕಾಂಗ್ರೆಸ್ ಜಿಲ್ಲಾ ಘಟ ಕದ ಅಧ್ಯಕ್ಷ ಜಾವಗಲ್ ಮಂಜುನಾಥ್, ಮುಖಂಡ ಹನುಮಪ್ಪ ಇತರರಿದ್ದರು.

ಉಂಡ ಮನೆಗೆ ಎರಡು ಬಗೆದ ಮಂಜು: ಸಿದ್ದರಾಮಯ್ಯ ಆಕ್ರೋಶ
ಅರಸೀಕೆರೆ: ಉಂಡ ಮನೆಗೆ ಎರಡು ಬಗೆಯುವ ಕೆಲಸವನ್ನು ಬಿಜೆಪಿ ಅಭ್ಯರ್ಥಿ ಎ.ಮಂಜು ಮಾಡಿದ್ದಾನೆ. ಕಾಂಗ್ರೆಸ್‍ನಲ್ಲಿ ಉನ್ನತ ಸ್ಥಾನ ಹೊಂದಿ ಈಗ ನಂಬಿಕೆ ದ್ರೋಹಿ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡಲು ಹೊರಟಿದ್ದಾನೆ ಎಂದು ಎ.ಮಂಜು ವಿರುದ್ಧ ಕಾಂಗ್ರೆಸ್‍ನ ರಾಜ್ಯ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಅರಸೀಕೆರೆ ತಾಲೂಕಿನ ಬಾಣಾವರದಲ್ಲಿ ಗುರುವಾರ ನಡೆದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನಿಂದ ಶಾಸಕ ನಾಗಿದ್ದ ಎ.ಮಂಜುನನ್ನು ಸಚಿವನನ್ನಾಗಿ ಮಾಡಿದ್ದು, ನಮ್ಮ ವರಿಷ್ಠರಾದ ರಾಹುಲ್ ಗಾಂಧಿ ಅವರು ಹಾಗೂ ನಾನು. ಆದರೆ, ಈಗ ನಮಗೆ ಆತ ಸೆಡ್ಡು ಹೊಡೆದು ಮೋದಿಯನ್ನು ಪ್ರಧಾನಿ ಮಾಡಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಅಹಿಂದ ವರ್ಗದವರಿಗೆ ಒಬ್ಬರಿಗೆ ಕೂಡ ಟಿಕೆಟ್ ನೀಡದ ಬಿಜೆಪಿ ಅವರು ಇನ್ನೆಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ. ಬಿಜೆಪಿ ಜಾತ್ಯಾತೀತ ಪಕ್ಷವಲ್ಲ. ಅದೊಂದು ಕೋಮುವಾದಿ ಪಕ್ಷ. ಜೆಡಿಎಸ್ ಭದ್ರಕೋಟೆ ಅರಸೀಕೆರೆಯಲ್ಲಿ ಮೈತ್ರಿ ಪಕ್ಷದ ನಾಯಕರುಗಳ ನೇತೃತ್ವದಲ್ಲಿ ಬಿಜೆಪಿಗೆ ಒಂದೇ ಒಂದು ಮತ ಹೋಗದಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.

ಬಿಜೆಪಿ ಶಕ್ತಿ ಕುಗ್ಗಿಸಲು ಶಪಥ: ಹೆಚ್‍ಡಿಡಿ
ಗಂಡಸಿ: ದೇಶದಲ್ಲಿ ಬಿಜೆಪಿ ಶಕ್ತಿಯನ್ನು ಕುಗ್ಗಿಸಲು ವಿವಿಧ ಪಕ್ಷಗಳ ವರಿಷ್ಠರು, ಮುಖಂಡರು ಒಂದಾಗಿ ಶಪಥ ಮಾಡಿದ್ದೇವೆ ಎಂದು ಮಾಜಿ ಪ್ರಧಾನಿ ಹಾಗೂ ಸಂಸದ ಹೆಚ್.ಡಿ. ದೇವೇಗೌಡ ಹೇಳಿದರು.

ಇಂದಿಲ್ಲಿ ಗುರುವಾರ ನಡೆದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಚುನಾ ವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ನಮ್ಮಲ್ಲಿ ಏನೇ ಭಿನ್ನಾಭಿಪ್ರಾಯ ಇದ್ದರೂ ದೇಶ, ಪ್ರಜಾ ಪ್ರಭುತ್ವ, ರೈತರ ಉಳಿವಿಗಾಗಿ ಏಕ ಚಕ್ರಾಧಿ ಪತ್ಯ ಸ್ಥಾಪಿಸಲು ಹೊರಟಿರುವ ಮೋದಿ ಹಾಗೂ ಬಿಜೆಪಿ ಶಕ್ತಿ ಕುಗ್ಗಿಸಲು ಎಲ್ಲರೂ ಒಂದಾಗಿದ್ದೇವೆ ಎಂದು ತಿಳಿಸಿದರು.

ಗಂಡಸಿಯನ್ನು ತಾಲೂಕು ಮಾಡಬೇಕೆ ನ್ನುವ ಬೇಡಿಕೆ ಇದೆ. ಇದನ್ನು ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗಮನಕ್ಕೆ ತರಲಾಗುವುದು. ತುಮಕೂರು ಜಿಲ್ಲೆಯ ಜನರ ನೀರಿನ ಸಮಸ್ಯೆ ಬಗ್ಗೆಯೂ ಅರಿವು ಇದೆ. ಎಲ್ಲ ಸಮಸ್ಯೆಗೂ ಪರಿಹಾರಗೊಳಿ ಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Translate »