ಬಾಹುಬಲಿ ಸ್ವಾಮಿಯ 1039ನೇ ಪ್ರತಿಷ್ಠಾನ ಮಹೋತ್ಸವ
ಹಾಸನ

ಬಾಹುಬಲಿ ಸ್ವಾಮಿಯ 1039ನೇ ಪ್ರತಿಷ್ಠಾನ ಮಹೋತ್ಸವ

April 12, 2019

ಶ್ರವಣಬೆಳಗೊಳ: ವಿಂಧ್ಯ ಗಿರಿಯ ದೊಡ್ಡ ಬೆಟ್ಟದಲ್ಲಿ ಬಾಹುಬಲಿ ಸ್ವಾಮಿಯ 1039ನೇ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ವಿಜೃಂಭಣೆಯಿಂದ ಪಾದಪೂಜೆ ನೆರವೇರಿತು.

ಪ್ರತಿಷ್ಠಾಪನಾ ಮಹೋತ್ಸವದ ನಿಮಿತ್ತ ಪ್ರತಿಷ್ಠಾಪಿಸಲ್ಪಟ್ಟ 9 ರಜತ ಕಲಶಗಳಿಂದ ಜಲಾಭಿಷೇಕ ನೆರವೇರಿಸಿ, ಕ್ಷೀರ, ಶ್ರೀ ಗಂಧದಿಂದ ಪಾದಪೂಜೆ, ಮೂರ್ತಿಯ ಮುಂದೆ ಪ್ರತಿಷ್ಠಾಪಿಸಲ್ಪಟ್ಟ ಬಾಹುಬಲಿ ಮೂರ್ತಿಗೆ ಮಾವಿನ ಹಣ್ಣಿನ ರಸದಿಂದ ಅಭಿಷೇಕ ನೆರವೇರಿಸಿ, ವಿವಿಧ ಪುಷ್ಪವೃಷ್ಟಿ ಮಾಡಲಾಯಿತು.

ನಂತರ ಚಾರುಕೀರ್ತಿ ಶ್ರೀಗಳು ಮತ್ತು ಗಣಿನಿ ಆರ್ಯಿಕಾ ವಿಶಾಶ್ರೀ ಮಾತಾಜಿ ಮತ್ತು ಸಂಘಸ್ಥ ತ್ಯಾಗಿಗಳು ಲವಂಗ ಮತ್ತು ನವರತ್ನಗಳನ್ನು ಬಾಹುಬಲಿಯ ಪಾದಕ್ಕೆ ಅರ್ಪಿಸಿ ಭಕ್ತಿ ಸಮರ್ಪಿಸಿದರು. ಸರ್ವ ಲೋಕಕ್ಕೂ ಶಾಂತಿ ಬಯಸುವ ಶಾಂತಿಧಾರೆಯನ್ನು ನೆರವೇರಿಸಲಾಯಿತು.

ಬಾಹುಬಲಿ ಸ್ವಾಮಿಗೆ ಅಷ್ಟವಿಧಾರ್ಚನೆ ಯೊಂದಿಗೆ 108 ವಿವಿಧ ಅರ್ಘ್ಯಗಳನ್ನು, ದಶ ದಿಕ್ಪಾಲಕರಿಗೆ 16 ಅರ್ಘ್ಯಗಳನ್ನು ಅರ್ಪಿಸಿದ ನಂತರ ಮಹಾಮಂಗಳಾರತಿ ನೆರವೇರಿತು.

ಒದೆಗಲ್ ಬಸದಿಯಲ್ಲಿ ಪ್ರಥಮ ತೀರ್ಥಂ ಕರ ಆದಿನಾಥ ಸ್ವಾಮಿಗೆ ನವ ಕಲಶಾಭಿ ಷೇಕ ಪೂಜೆಯೊಂದಿಗೆ ಭಕ್ತಾಮರ ಆರಾ ಧನೆ, ಬ್ರಹ್ಮಯಕ್ಷ ಮತ್ತು ಯಕ್ಷಿಶ್ರೀ ಕೂಷ್ಮಾಂಡಿನಿ ಅಮ್ಮನವರಿಗೆ ಷೋಡ ಶೋಪಚಾರ ಪೂಜೆ ನೆರವೇರಿತು.

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ವಿಶ್ವಕ್ಕೆ ಬಾಹುಬಲಿಯ ಅಹಿಂಸೆ ಮತ್ತು ತ್ಯಾಗ ಸಂದೇಶಗಳಾದ ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ, ಮೈತ್ರಿಯಿಂದ ಪ್ರಗತಿ, ಧ್ಯಾನದಿಂದ ಸಿದ್ಧಿ ಸಂದೇಶ ಇಂದಿಗೂ ಪ್ರಸ್ತುತವಾಗಿದೆ ಎಂದರು.

ಬಾಹುಬಲಿ ಸ್ವಾಮಿಯ ಪಾದಗಳ ಸುರ ಕ್ಷತೆಯ ಮತ್ತು ಸಂರಕ್ಷಣೆಯ ದೃಷ್ಟಿಯಿಂದ ಪ್ರತಿ ಭಾನುವಾರ ಮತ್ತು ವಿಶೇಷ ದಿನ ಗಳಲ್ಲಿ ಮಾತ್ರ ಪಂಚಾಮೃತ ಅಭಿಷೇಕ ವನ್ನು ನೆರವೇರಿಸಲಾಗುತ್ತದೆ. ಪ್ರತಿದಿನ ಜಲಾಭಿಷೇಕ ಮಾತ್ರ ನೆರವೇರಿಸಲಾಗು ವುದು ಎಂದು ಹೇಳಿದರು.

ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಅನೇಕ ದ್ರವ್ಯಗಳಿಂದ ಪೂಜೆ ನೆರವೇರಿ ಸಿದ್ದು, ಭಾರತೀಯ ಪುರಾತತ್ವ ಸರ್ವೇ ಕ್ಷಣಾಲಯವು ಸ್ವಚ್ಛತೆಯನ್ನು ಕೈಗೊಂಡು ಮೂರ್ತಿ ಮತ್ತೆ ಸುಂದರವಾಗಿ ಕಾಣು ವಂತೆ ಮಾಡಿದ್ದಾರೆ ಎಂದು ಇಲಾಖೆಯ ಸೇವೆಯನ್ನು ಶ್ಲಾಘಿಸಿದರು.

ಪೂಜೆಯ ನೇತೃತ್ವವನ್ನು ಪ್ರತಿಷ್ಠಾಚಾ ರ್ಯರಾದ ಎಸ್.ಪಿ.ಉದಯಕುಮಾರ್, ಎಸ್.ಡಿ.ನಂದಕುಮಾರ್ ತಂಡ ನೆರವೇ ರಿಸಿದರು. ಸ್ಯಾಕ್ಸೊಫೋನ್ ಸಂಗೀತ ಸೇವೆ ಯನ್ನು ಎಸ್.ಎ.ಗುರುಮೂರ್ತಿ ತಂಡ ನೆರವೇರಿಸಿದರು. ವಿಂಧ್ಯಗಿರಿಯ ಬೆಟ್ಟ ವನ್ನು ಮಾವಿನ ತೋರಣ, ಬಾಳೆದಿಂಡು, ಕಬ್ಬಿನಜಲ್ಲೆ, ಹೂಗಳಿಂದ ಧರ್ಮಧ್ವಜಗ ಳಿಂದ ಅಲಂಕರಿಸಲಾಗಿತ್ತು. ಆಗಮಿಸಿದ್ದ ಭಕ್ತರಿಗೆ ಕ್ಷೇತ್ರದ ವತಿಯಿಂದ ಕಬ್ಬಿನ ಹಾಲು ವಿತರಿಸಲಾಯಿತು.

Translate »