ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮತದಾನ ಕಡ್ಡಾಯ: ಚಂದನ್‍ಶೆಟ್ಟಿ
ಹಾಸನ

ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮತದಾನ ಕಡ್ಡಾಯ: ಚಂದನ್‍ಶೆಟ್ಟಿ

April 12, 2019

ಹಾಸನ: ದೇಶದಲ್ಲಿ ಪ್ರತಿ ಯೊಬ್ಬರ ಮತಕ್ಕೆ ಸಮಾನವಾದ ಮಹತ್ವ ಇದೆ. ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸುವುದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳುತ್ತದೆ ಎಂದು ರ್ಯಾಪ್ ಗಾಯಕ, ಜಿಲ್ಲಾ ಸ್ವೀಪ್ ಚಟುವಟಿಕೆಗಳ ರಾಯಭಾರಿ ಚಂದನ್‍ಶೆಟ್ಟಿ ಹೇಳಿದರು.

ಜಿಲ್ಲೆಯ ಸಕಲೇಶಪುರ ತಾಲೂಕಿನ ಆನೆ ಹಾವಳಿ ಪ್ರದೇಶಗಳ ಜನರು ಹಾಗೂ ಕಾಫಿ ತೋಟದ ಕಾರ್ಮಿಕರನ್ನು ಭೇಟಿ ಮಾಡಿ ಆತ್ಮವಿಶ್ವಾಸ ತುಂಬುವ ಚಟುವಟಿಕೆಗಳಲ್ಲಿ ಪಾಲ್ಗೊಂಡು ಚಿಕ್ಕ ಸತ್ತಿಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತದಾನ ಎಂದರೆ ರಾಷ್ಟ್ರ ನಿರ್ಮಾಣದಲ್ಲಿ ಕೈ ಜೋಡಿಸಿದಂತೆ ಎಂಬುದನ್ನು ಎಲ್ಲರೂ ಅರಿಯಬೇಕು ಎಂದರು.

ಏ. 18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತ ಹಾಕು ತ್ತೇವೆ ಎಂದು ಸಂಕಲ್ಪ ಮಾಡೋಣ ಇತರರಿಗೂ ಮತದಾನದ ಮಹತ್ವ ನೈತಿಕ ಮತದಾನದ ಬಗ್ಗೆ ಅರಿವು ಮೂಡಿ ಸೋಣ ಎಂದು ಕರೆ ನೀಡಿದರು.ಈ ವೇಳೆ ತಮ್ಮ ಊರಿನ ಸುತ್ತ-ಮುತ್ತಲ ಸುಂದರ ಪ್ರಕೃತಿ ಸೌಂದರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಕೆ.ಎನ್.ವಿಜಯ ಪ್ರಕಾಶ್ ಮಾತನಾಡಿ, ಸುಭದ್ರ ಪ್ರಜಾ ಪ್ರಭುತ್ವಕ್ಕೆ ಸರ್ವರು ಪಾಲ್ಗೊಳ್ಳುವಿಕೆ ಅತೀ ಮುಖ್ಯ. ಮತದಾನ ಒಂದು ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.

ಚುನಾವಣಾ ಆಯೋಗ ನಿಷÀ್ಪಕ್ಷಪಾತ ಚುನಾವಣೆ ನಡೆಸಲು ನೀಡುವಷ್ಟು ಗಮನ ವನ್ನು ಮತದಾರರ ಜಾಗೃತಿಗೂ ನೀಡು ತ್ತಿದೆ. ಇದರ ಮಹತ್ವ ಅರಿತು ಎಲ್ಲರೂ ಮತ ಹಾಕಬೇಕು ಎಂದರು.

ಡಿವೈಎಸ್‍ಪಿ ಶಶಿಧರ್ ಮಾತನಾಡಿ, ಶಾಂತಿಯುತ ಮತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಎಲ್ಲಾ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಎಲ್ಲಾರ ಅಭಿಪ್ರಾಯಕ್ಕೆ, ಅಭಿವ್ಯಕ್ತ ಸ್ವಾತಂತ್ರಕ್ಕೆ ಮನ್ನಣೆ ನೀಡಲಾಗಿದ್ದು, ಎಲ್ಲರೂ ಮತ ದಾನ ಮಾಡಿದಾಗ ಅದು ಸಾರ್ಥಕ ವಾಗುತ್ತದೆ ಎಂದರು.

ಅರಣ್ಯ ಇಲಾಖೆ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾ ಧಿಕಾರಿ ವೆಂಕಟೇಶಪ್ಪ ಮಾತನಾಡಿ, ಆನೆ ಹಾವಳಿ ಪೀಡಿತ ಪ್ರದೇಶಗಳಲ್ಲಿ ಮತ ದಾರರ ನೆರವಿಗೆ ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜಿಸಲಾಗಿದ್ದು, ಎಲ್ಲರು ಯಾವುದೇ ಆತಂಕಕ್ಕೆ ಒಳಗಾಗದೆ ಮತ ಚಲಾಯಿಸ ಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ವಾರ್ತಾಧಿಕಾರಿ ವಿನೋದ್‍ಚಂದ್ರ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿ ಕಾರಿ ಪುನೀತ್, ಜಿಲ್ಲಾ ಪಂಚಾಯಿತಿ ಸಹಾ ಯಕ ಕಾರ್ಯದರ್ಶಿಗಳಾದ ಲಕ್ಷ್ಮಿ, ಜಾಫರ್ ಷರೀಫ್, ಸಹಾಯಕ ಕೃಷಿ ನಿರ್ದೇಶಕ ಭಾನುಪ್ರಕಾಶ್ ಮತ್ತಿತರರು ಹಾಜರಿದ್ದರು.

Translate »