ಮಂಡ್ಯ, ಹಾಸನ, ತುಮಕೂರಿನಲ್ಲಿ ಜೆಡಿಎಸ್‍ಗೆ ಸೋಲು: ಬಿಎಸ್‍ವೈ
ಹಾಸನ

ಮಂಡ್ಯ, ಹಾಸನ, ತುಮಕೂರಿನಲ್ಲಿ ಜೆಡಿಎಸ್‍ಗೆ ಸೋಲು: ಬಿಎಸ್‍ವೈ

April 11, 2019

ಬೇಲೂರು: ಮಂಡ್ಯ, ಹಾಸನ, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಸೋಲನುಭವಿಸುವ ಮೂಲಕ ರಾಜ್ಯದಲ್ಲಿ ಕುಟುಂಬ ರಾಜಕಾರಣ ಅಂತ್ಯ ಗೊಳ್ಳಲಿದೆ ಎಂದು ಗೌಡರ ಕುಟುಂಬದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಪಟ್ಟಣದ ಯಗಚಿ ಸೇತುವೆ ಬಳಿ ನಡೆದ ಬಿಜೆಪಿ ಚುನಾವಣಾ ಬಹಿರಂಗ ಸಭೆ ಉದ್ಘಾ ಟಿಸಿ ಮಾತನಾಡಿದ ಅವರು, ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರ ವಿರುದ್ಧ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಷಡ್ಯಂತ್ರ ನಡೆಸುತ್ತಿದ್ದಾರೆ. ಇದು ರಾಜ್ಯದ ಜನತೆಗೆ ತಿಳಿದಿದೆ. ಜೆಡಿಎಸ್ ಅನ್ನು ಮಂಡ್ಯ, ಹಾಸನ, ತುಮಕೂರಿನ ಮತದಾರರು ಸೋಲಿ ಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ 10 ತಿಂಗಳ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿ ಹಿಂದೆಂದೂ ನಡೆಯ ದಂತಹ ಭ್ರಷ್ಟಾಚಾರ, ವರ್ಗಾವಣೆ ದಂಧೆ ನಡೆಯುತ್ತಿದ್ದು, ಯಾವುದೇ ಸಂಕೋಚ ವಿಲ್ಲದೆ ಹಣವನ್ನು ಲೂಟಿ ಮಾಡುತ್ತಿ ದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ನೀರಾವರಿ ಅಭಿವೃದ್ಧಿಗಾಗಿ ಯಾವುದೇ ಕಾಮಗಾರಿ ನಡೆಸದಿದ್ದರೂ 1,350 ಕೋಟಿ ಹಣ ಬಿಡುಗಡೆ ಮಾಡಿ ಉಸ್ತುವಾರಿ ಸಚಿವರು ಕಮಿಷನ್ ಪಡೆದಿ ದ್ದಾರೆ. ಇದನ್ನು ಯಾರು ಕೇಳುತ್ತಾರೆ ಎಂದು ಪ್ರಶ್ನಿಸಿದರು.

ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಪುಲ್ವಾಮ ದಾಳಿಯ ಬಗ್ಗೆ ನನಗೆ 2 ವರ್ಷದ ಹಿಂದೆ ಗೊತ್ತಿತ್ತು ಎಂದು ಹೇಳು ವುದು ದೇಶದ್ರೋಹದ ಹೇಳಿಕೆಯಲ್ಲವೇ, ಐಟಿ ರೇಡ್ ಮಾಡಿದಾಗ ಕಚೇರಿ ಮುಂದೆ ಹೋಗಿ ಪ್ರತಿಭಟನೆ, ಧರಣಿಯನ್ನು ನಡೆಸಿದ್ದು ಬೇಜವಾಬ್ದಾರಿತನವಲ್ಲವೇ ಎಂದು ಕಿಡಿಕಾರಿದರು.

ಬಿಜೆಪಿ ಅಭ್ಯರ್ಥಿ ಎ.ಮಂಜು ಮಾತ ನಾಡಿ, ಬಿಜೆಪಿ ಕೋಮುವಾದಿಗಳ ಪಕ್ಷ ವಲ್ಲ. ಇದು ಉಗ್ರವಾದಿ ವಿರೋಧಿಗಳ ಪಕ್ಷವಾಗಿದೆ. ಕುಮಾರಸ್ವಾಮಿ ಮೊದಲು ಮುಖ್ಯಮಂತ್ರಿ ಆಗಿದ್ದು ಯಡಿಯೂರಪ್ಪ ನವರ ಆಶೀರ್ವಾದಯಿಂದ, ನಂತರ ಆಗಿದ್ದು ಕಾಂಗ್ರೆಸ್ ಸಹಕಾರದಿಂದ, ಅವರು ಎಂದೂ ಅವರ ಸ್ವಂತ ಬಲದ ಮೇಲೆ ಮುಖ್ಯ ಮಂತ್ರಿ ಆಗಿಲ್ಲ ಎಂಬುದನ್ನು ನೆನಪಿಡಬೇಕು ಎಂದು ವ್ಯಂಗ್ಯವಾಡಿದರು.

ಬಿಜೆಪಿ ಸೇರ್ಪಡೆಗೊಂಡ ಎಚ್.ಎಂ ವಿಶ್ವನಾಥ್ ಮಾತನಾಡಿದರು. ಕಾರ್ಯ ಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಾಣೇಶ್, ಶಾಸಕರಾದ ಪ್ರೀತಂ ಜೆ.ಗೌಡ, ಕುಮಾರಸ್ವಾಮಿ, ಮುಖಂಡರಾದ ನವಿಲೆ ಅಣ್ಣಪ್ಪ, ಬೆಣ್ಣೂರು ರೇಣುಕುಮಾರ್, ಹೆಚ್.ಕೆ.ಸುರೇಶ್, ಕೊರಟಿಗೆರೆ ಪ್ರಕಾಶ್, ನಾರ್ವೆ ಸೋಮಶೇಖರ್, ಈ.ಹೆಚ್.ಲಕ್ಷ್ಮಣ್, ಶೋಭಾ, ಚಂದ್ರಕಲಾ, ಪರ್ವತಯ್ಯ, ಶೇಖರಯ್ಯ ಸೇರಿದಂತೆ ಹಲವರಿದ್ದರು.

Translate »