ಹಾಸನ: ಪ್ರಚಾರದ ಅಖಾಡಕ್ಕೆ ಧುಮುಕಿದ ಬಿಎಸ್‍ವೈ
ಹಾಸನ

ಹಾಸನ: ಪ್ರಚಾರದ ಅಖಾಡಕ್ಕೆ ಧುಮುಕಿದ ಬಿಎಸ್‍ವೈ

April 11, 2019

ಕಡೂರು, ಅರಸೀಕೆರೆ, ಬೇಲೂರು, ಹೊಳೆನರಸೀಪುರ, ಸಕಲೇಶಪುರದಲ್ಲಿ ಮತ ಪ್ರಚಾರ, ಏ.14ರಂದು ಅಮಿತ್ ಶಾ ರ್ಯಾಲಿ
ಹಾಸನ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ವಿಶ್ವಾಸ ದಲ್ಲಿರುವ ಬಿಜೆಪಿ ವರಿಷ್ಠರು, ಕ್ಷೇತ್ರದಲ್ಲಿ ಬಿರುಸಿನ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಬುಧವಾರ ಹಾಸನ ಲೋಕಸಭಾ ಕ್ಷೇತ್ರ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ.

ಬುಧವಾರ ಇಡೀ ದಿನ ಕ್ಷೇತ್ರ ವ್ಯಾಪ್ತಿಯ ಕಡೂರು, ಅರಸೀಕೆರೆ, ಬೇಲೂರು, ಹೊಳೆ ನರಸೀಪುರ ಹಾಗೂ ಸಕಲೇಶಪುರದಲ್ಲಿ ಆಯೋಜಿಸಿದ ಬಹಿರಂಗ ಸಭೆ, ರ್ಯಾಲಿ ಯಲ್ಲಿ ಪಾಲ್ಗೊಂಡು ಅಭ್ಯರ್ಥಿ ಎ.ಮಂಜು ಪರ ಬಿರುಸಿನ ಮತ ಪ್ರಚಾರ ನಡೆಸಿದರು.
ಬೆಳಿಗ್ಗೆ ಕಡೂರಿನ ಎಪಿಎಂಸಿ ಆವರಣ ದಲ್ಲಿ ಆಯೋಜಿಸಿದ್ದ ಪ್ರಚಾರದ ರ್ಯಾಲಿ ಯಲ್ಲಿ ಭಾಗವಹಿಸಿದರು. ಬಳಿಕ, ಅರಸೀ ಕೆರೆಯ ಬಸವರಾಜೇಂದ್ರ ಶಾಲೆ ಮೈದಾನ ದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಯಡಿಯೂ ರಪ್ಪ ಅವರು, ದೇಶದ ರೈತರ ಆದಾಯ ವನ್ನು ದ್ವಿಗುಣಗೊಳಿಸುವ ಯೋಜನೆ ಯನ್ನು ಮೋದಿ ಅವರು ಸಿದ್ಧಪಡಿಸಿಕೊಂ ಡಿದ್ದು, ಅದನ್ನು ಕಾರ್ಯಗತಗೊಳಿಸಲು ಈ ಬಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಳನ್ನು ಮತದಾರರು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ನುಡಿದಂತೆ ನಡೆಯುವ ಜೊತೆಗೆ ಭ್ರಷ್ಟಾ ಚಾರ ಮುಕ್ತ ಆಡಳಿತ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್ ಡಿಎ ಸರ್ಕಾರ ದೇಶದ ರಕ್ಷಣೆಯ ವಿಷಯ ದಲ್ಲಿ ತೆಗೆದುಕೊಂಡ ದಿಟ್ಟ ನಿಲುವುಗಳು ದೇಶದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಏಕತೆ ಹಾಗೂ ಅಖಂಡತೆಯ ಉಳಿವು ಎನ್ ಡಿಎ ಸರ್ಕಾರದಿಂದ ಮಾತ್ರ ಸಾಧ್ಯ ಎಂಬು ದನ್ನು ದೇಶದ ಜನತೆಯೂ ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಮೂಲ ನಿವಾಸಿಗಳು ಅರಿತಿದ್ದಾರೆ ಎಂದರು.

ಮುಂದಿನ ಐದು ವರ್ಷಗಳಲ್ಲಿ ಕಾಶ್ಮೀ ರಕ್ಕೆ ವಿಶೇಷವಾಗಿ ನೀಡಿರುವ 370 ಕಾಯ್ದೆ ನಿಷೇಧ ಸೇರಿದಂತೆ ರೈತರ ಆದಾಯ ವನ್ನು ಎರಡು ಪಟ್ಟು ಹೆಚ್ಚಿಸುವುದು, ಲೋಕ ಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ, ಗಂಗಾ-ಕಾವೇ ರಿಯ ನದಿ ಜೋಡಣೆÉ ಮೂಲಕ ದೇಶದ ರೈತರ ಕೃಷಿ ಭೂಮಿಗೆ ನೀರು ಪೂರೈಸು ವಂತಹ ಐತಿಹಾಸಿಕ ನಿರ್ಣಯಗಳನ್ನು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಿದೆ. ಈ ಎಲ್ಲವು ಅನುಷ್ಠಾನಗೊಳ್ಳಬೇಕಾದರೆ ನಿಮ್ಮ ಮತ ಬಿಜೆಪಿ ಅಭ್ಯರ್ಥಿಗೆ ನೀಡ ಬೇಕು ಎಂದು ಮನವಿ ಮಾಡಿದರು.

ನಂತರ ಬೇಲೂರು, ಹೊಳೆನರಸೀ ಪುರ, ಸಕಲೇಶಪುರದಲ್ಲಿ ನಡೆದ ಬಹಿ ರಂಗ ಸಭೆಯಲ್ಲಿ ಪಾಲ್ಗೊಂಡರು. ಬೇಲೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‍ನ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಹೆಚ್.ಎಂ.ವಿಶ್ಚನಾಥ್ ಅವರು ನೂರಾರು ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾದರು.

ಬಿಜೆಪಿಯಿಂದ ಭರ್ಜರಿ ಸಿದ್ಧತೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪ್ರಚಾರದ ಹಿನ್ನೆಲೆಯಲ್ಲಿ ಜಿಲ್ಲೆಯ ಬಿಜೆಪಿ ನಾಯಕರು ಭರ್ಜರಿ ಸಿದ್ಧತೆ ಕೈ ಗೊಂಡಿದ್ದರು. ಯಡಿಯೂರಪ್ಪ ಅವರು, ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಯಕರ್ತರು, ಸಾರ್ವ ಜನಿಕರನ್ನು ಸೇರಿಸಿ ಪ್ರಚಾರದ ಅಂಗಳ ದಲ್ಲಿ ಅಲೆ ಎಬ್ಬಿಸಿದ್ದರು.

ಏ. 14ರಂದು ಅಮಿತ್ ಶಾ ರ್ಯಾಲಿ: ಬಿಜೆಪಿ ಅಭ್ಯರ್ಥಿ ಎ.ಮಂಜು ಪರವಾಗಿ ಮತ ಯಾಚಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಏ. 14ರಂದು ನಗರಕ್ಕೆ ಭೇಟಿ ನೀಡಲಿದ್ದಾರೆ.

ಜೆಡಿಎಸ್ ಭದ್ರಕೋಟೆಯಾಗಿರುವ ಹಾಸನ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಬೇಕು ಎನ್ನುವ ಗುರಿಯೊಂದಿಗೆ ನಗರದಲ್ಲಿ ಆಯೋ ಜಿಸಿರುವ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರೊಂದಿಗೆ ರಾಜ್ಯ ಬಿಜೆಪಿಯ ವರಿ ಷ್ಠರು, ಮುಖಂಡರು ಭಾಗವಹಿಸಲಿದ್ದು, ಎ.ಮಂಜು ಪರವಾಗಿ ಮತ ಪ್ರಚಾರ ನಡೆಸಲಿದ್ದಾರೆ ಎಂದು ಬಿಜೆಪಿ ಸ್ಥಳೀಯ ಮುಖಂಡರು ತಿಳಿಸಿದ್ದಾರೆ.

ಹೆಚ್‍ಡಿಕೆ ವಿರುದ್ಧ ಬಿಎಸ್‍ವೈ ಆಕ್ರೋಶ
ಅರಸೀಕೆರೆ: ನಾನು ಮುಖ್ಯಮಂತ್ರಿಯಾದರೆ ರೈತರು ಮಾಡಿರುವ 46 ಸಾವಿರ ಕೋಟಿ ಸಾಲ ಮನ್ನಾ ಮಾಡುವು ದಾಗಿ ಹೇಳಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಅಧಿಕಾರ ಬಂದು ಹತ್ತು ತಿಂಗಳು ಕಳೆದರೂ ಕೇವಲ ನಾಲ್ಕುವರೆ ಸಾವಿರ ಕೋಟಿ ಮಾತ್ರ ಸಾಲ ಮನ್ನಾ ಮಾಡಿದ್ದಾರೆ. ಉಳಿದ ರೈತರ ಗತಿ ಏನು? ಎಂದು ಹೆಚ್‍ಡಿಕೆ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಪಟ್ಟಣದ ಬಸವರಾಜೇಂದ್ರ ಶಾಲೆ ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇವೇಗೌಡ ಮತ್ತು ಕಂಪನಿಯ ನಾಟಕ ಈ ಲೋಕಸಭೆ ಚುನಾ ವಣೆ ಮೂಲಕ ಕೊನೆಗೊಳ್ಳಲಿದೆ. ಹಾಸನ ಲೋಕಸಭೆ ಕ್ಷೇತ್ರ ಸೇರಿ ದಂತೆ ರಾಜ್ಯದಲ್ಲಿ 22 ಹಾಗೂ ದೇಶದಲ್ಲಿ 300ಕ್ಕೂ ಹೆಚ್ಚು ಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಮಾಧುಸ್ವಾಮಿ ಮಾತನಾಡಿ, ನೆಹರು ಮನೆತನದ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಲೇ ರಾಜಕೀಯ ಕ್ಷೇತ್ರದಲ್ಲಿ ಸ್ವಂತ ನೆಲೆ ಕಂಡುಕೊಂಡು ದೇವೇಗೌಡರು ತಮ್ಮ ಸ್ವಾರ್ಥ ಸಾಧನೆಗೆ ಕುಟುಂಬ ವ್ಯಾಮೋಹಕ್ಕಾಗಿ ಮಕ್ಕಳು-ಸೊಸೆ ಯಂದಿರು ಅಷ್ಟೇ ಅಲ್ಲದೆ ಮೊಮ್ಮಕ್ಕಳನ್ನು ರಾಜಕೀಯಕ್ಕೆ ತಂದು ತಮ್ಮ ಮೂಲ ಸಿದ್ಧಾಂತವನ್ನೇ ಮರೆತರಷ್ಟೇ ಅಲ್ಲದೆ ಜಾತಿ ಹಾಗೂ ಧರ್ಮಗಳನ್ನು ಒಡೆದು ರಾಜಕಾರಣ ಮಾಡುವು ದರಲ್ಲಿ ನಿಸ್ಸೀಮರಾಗಿದ್ದಾರೆ ಎಂದು ಟೀಕಿಸಿದರು.

ಅಭ್ಯರ್ಥಿ ಎ.ಮಂಜು ಮಾತನಾಡಿ, ದೇವೇಗೌಡರ ಕುಟುಂಬದ ಸ್ವಾರ್ಥ ರಾಜಕಾರಣದಿಂದ ಬೇಸತ್ತಿರುವ ಜಿಲ್ಲೆಯ ಶೇ.70 ರಷ್ಟು ಮತದಾರರು ಪಕ್ಷಾತೀತವಾಗಿ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಹಾಗಾಗಿ, ಎರಡರಿಂದ ಮೂರು ಲಕ್ಷ ಮತಗಳ ಅಂತರದಲ್ಲಿ ನಾನು ಗೆಲ್ಲುವುದರಲ್ಲಿ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಸೇರ್ಪಡೆ: ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಬಿ.ಎನ್. ರವಿ ಸೇರಿದಂತೆ ರಾಜ್ಯ ಕನ್ನಡ ಪಡೇ ಅಧ್ಯಕ್ಷ ಬೋರೆಹಳ್ಳಿ ವೆಂಕ ಟೇಶ್, ನಟರಾಜ್, ಅಜ್ಜಪ್ಪ ಸೇರಿದಂತೆ ಮತ್ತಿತರ ಮುಖಂಡರು ಜೆಡಿಎಸ್ ಹಾಗೂ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದÀರು.

ಸಮಾರಂಭದಲ್ಲಿ ಶಾಸಕರಾದ ಪ್ರೀತಂ ಜೆ.ಗೌಡ, ಬೆಳ್ಳಿ ಪ್ರಕಾಶ್, ಮಾಜಿ ಶಾಸಕರಾದ ಕೆ.ಪಿ.ಪ್ರಭುಕುಮಾರ್, ಎ.ಎಸ್.ಬಸವರಾಜು, ಬಿಜೆಪಿ ಜಿಲ್ಲಾಧ್ಯಕ್ಷ ನವಿಲೇ ಅಣ್ಣಪ್ಪ, ತಾಲೂಕು ಗ್ರಾಮೀಣ ಮಂಡಲದ ಅಧ್ಯಕ್ಷ ಜಿ.ವಿ.ಟಿ.ಬಸವರಾಜು, ನಗರಾಧ್ಯಕ್ಷ ಜಿ.ಎನ್.ಮನೋಜ್ ಕುಮಾರ್, ಮುಖಂಡರಾದ ಎನ್.ಡಿ.ಪ್ರಸಾದ್‍ಕುಮಾರ್, ಪ್ರಸನ್ನ ಕುಮಾರ್, ಗಂಗಾಧರ್, ವಿಜಯ್‍ಕುಮಾರ್ ಮತ್ತಿತರರಿದ್ದರು.

Translate »