ಹಾಸನ

ಆಲೂರಿನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ
ಹಾಸನ

ಆಲೂರಿನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ

January 29, 2019

ಆಲೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಪ್ರಾಮುಖ್ಯತೆ ಅಗ್ರಗಣ್ಯವಾದದ್ದು. ಅದನ್ನು ಸೂಕ್ತ ರೀತಿ ಯಲ್ಲಿ ಚಲಾಯಿಸಬೇಕೆಂದು ಆಲೂರು ತಾಲೂಕು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಕೊಟ್ರೇಶ್ ಎಸ್.ಉಪ್ಪಾರ್ ಅಭಿಪ್ರಾಯಪಟ್ಟರು. ಆಲೂರು ತಾಲೂಕು ಟಿ.ಗುಡ್ಡೇನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಸ್ಥಳೀಯ ಸಂಸ್ಥೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತ ನಾಡಿದ ಅವರು, 1950 ಜನವರಿ 25 ರಂದು ಭಾರತದಲ್ಲಿ ಜಾರಿಗೆ ಬಂದ ಚುನಾವಣಾ ಆಯೋಗದ ದಿನವನ್ನು 2011ರಿಂದ ಈಚೆಗೆ ಪ್ರತಿಯೊಬ್ಬ ಭಾರತೀಯ…

ಗುದ್ದಲಿ ಪೂಜೆ ದಿನವೇ ಮುಕ್ತಾಯಗೊಂಡ ರಸ್ತೆ ಕಾಮಗಾರಿ
ಹಾಸನ

ಗುದ್ದಲಿ ಪೂಜೆ ದಿನವೇ ಮುಕ್ತಾಯಗೊಂಡ ರಸ್ತೆ ಕಾಮಗಾರಿ

January 29, 2019

ರಾಮನಾಥಪುರ: ಇಲ್ಲಿಯ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಪಟ್ಟಾಭಿರಾಮ ದೇವ ಸ್ಥಾನದ ಸುತ್ತದ ರಸ್ತೆ, ಶ್ರೀ ಸುಬ್ರಹ್ಮಣ್ಯ ದೇವ ಸ್ಥಾನದ ಎದುರು ರಸ್ತೆ, ಮತ್ತು ಕಾವೇರಿ ನದಿಗೆ ಹೋಗುವ ರಸ್ತೆಯೂ 30-54ರ ಟ್ಯಾಸ್ಕ್ ಪೋರ್ಸ್ ಯೋಜನೆಯಡಿ 5 ಲಕ್ಷ ರೂ ವೆಚ್ಚದಲ್ಲಿ ಡಾಂಬ ರೀಕರಣ ಗುದ್ದಲಿಪೂಜೆ ದಿನವೇ ಕಾಮಗಾರಿ ಮುಗಿದಿದೆ. ಬಹಳ ವರ್ಷಗಳಿಂದ ಈ ರಸ್ತೆಯಲ್ಲಿ ಶ್ರೀ ಪಟ್ಟಾಭಿರಾಮಸ್ವಾಮಿ ರಥೋತ್ಸವವನ್ನು ಎಳೆ ಯಲು ಬಹಳ ವರ್ಷಗಳಿಂದ ಹರಸಾಹಸ ಪಡ ಬೇಕಾಗಿತ್ತು. ಇಂದು ಡಾಂಬರೀಕರಣಕ್ಕೆ ಚಾಲನೆ ನೀಡಿ ಅಂದೇ…

ಜಿಲ್ಲಾದ್ಯಂತ ಗಣರಾಜ್ಯೋತ್ಸವದ ಸಂಭ್ರಮ
ಹಾಸನ

ಜಿಲ್ಲಾದ್ಯಂತ ಗಣರಾಜ್ಯೋತ್ಸವದ ಸಂಭ್ರಮ

January 28, 2019

ಧ್ವಜಾರೋಹಣ ನೆರವೇರಿಸಿದ ಸಚಿವ ಹೆಚ್.ಡಿ.ರೇವಣ್ಣ, ಆಕರ್ಷಕ ಪಥ ಸಂಚಲನ, ಮೇಳೈಸಿದ ವಿದ್ಯಾರ್ಥಿಗಳ ಸಾಂಸ್ಕøತಿಕ ಕಾರ್ಯಕ್ರಮ ಹಾಸನ: ಜಿಲ್ಲಾದ್ಯಂತ ಶನಿ ವಾರ 70ನೇ ಗಣರಾಜ್ಯೋತ್ಸವವನ್ನು ಜಿಲ್ಲಾ ಡಳಿತ, ತಾಲೂಕು ಆಡಳಿತ, ಗ್ರಾಮ ಪಂಚಾ ಯಿತಿ ಸೇರಿದಂತೆ ಸರ್ಕಾರಿ ಕಚೇರಿಗಳು ಹಾಗೂ ವಿವಿಧ ಸಂಸ್ಥೆಗಳಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 70ನೇ ಗಣರಾಜ್ಯೋತ್ಸವದ ಧ್ವಜಾ ರೋಹಣವನ್ನು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ನಮ್ಮ ಸಂವಿ ಧಾನವು ನಮಗೆ ಮೂಲಭೂತ ಹಕ್ಕುಗಳ ನಷ್ಟೇ…

ಪ್ರಶಸ್ತಿಗಳು ಬಂದಿವೆ, ಬರುತ್ತಿವೆ, ಆದರೆ ಇವು ಹೊಟ್ಟೆ ತುಂಬಿಸುವುದಿಲ್ಲ ಪದ್ಮಶ್ರೀ ಪುರಸ್ಕøತೆ ಸಾಲುಮರದ ತಿಮ್ಮಕ್ಕ ಅಳಲು
ಹಾಸನ

ಪ್ರಶಸ್ತಿಗಳು ಬಂದಿವೆ, ಬರುತ್ತಿವೆ, ಆದರೆ ಇವು ಹೊಟ್ಟೆ ತುಂಬಿಸುವುದಿಲ್ಲ ಪದ್ಮಶ್ರೀ ಪುರಸ್ಕøತೆ ಸಾಲುಮರದ ತಿಮ್ಮಕ್ಕ ಅಳಲು

January 28, 2019

ಬೇಲೂರು: ನನಗೆ ಪ್ರಶಸ್ತಿಗಳು ಬರುತ್ತಿವೆ. ಇದುವರೆಗೆ ಅನೇಕ ಪ್ರಶಸ್ತಿಗಳು ಬಂದಿವೆ. ಆದರೆ ಇದಾವುದು ನನ್ನ ಹೊಟ್ಟೆ ಯನ್ನು ತುಂಬಿಸುವುದಿಲ್ಲ. ನನಗೀಗ ಬೇಕಿ ರುವುದು ಸರ್ಕಾರದಿಂದ ನೆರವು. ಹೀಗೆಂದವರು ವೃಕ್ಷಮಾತೆ, ಪರಿಸರ ಪ್ರೇಮಿ, ನಾಡೋಜ ಪ್ರಶಸ್ತಿ ಪುರಸ್ಕøತೆ ಸಾಲು ಮರದ ತಿಮ್ಮಕ್ಕ ಅವರು. ಕೇಂದ್ರ ಸರಕಾರ ಕೊಡಮಾಡುವ ಪದ್ಮಶ್ರೀ ಪ್ರಶಸ್ತಿ ಲಭಿಸಿರು ವುದಕ್ಕೆ ಸುದ್ದಿಗಾರರೊಂದಿಗೆ ತಮ್ಮ ಮನ ದಾಳದ ಅಭಿಪ್ರಾಯವನ್ನು ಹಂಚಿಕೊಂಡ ಅವರು, ಮಕ್ಕಳಿಲ್ಲದ ನಾನು ಮದುವೆ ಯಾಗಿ 25 ವರ್ಷದ ನಂತರ ಮರಗಿಡ ಗಳೇ ನಮ್ಮ ಮಕ್ಕಳು…

ನೋಡುಗರನ್ನು ಕೈ ಬೀಸಿ ಕರೆಯುತ್ತಿದೆ ‘ಫಲಪುಷ್ಪ ಪ್ರದರ್ಶನ’
ಹಾಸನ

ನೋಡುಗರನ್ನು ಕೈ ಬೀಸಿ ಕರೆಯುತ್ತಿದೆ ‘ಫಲಪುಷ್ಪ ಪ್ರದರ್ಶನ’

January 28, 2019

ಹಾಸನ: ನೂರಾರು ಬಗೆಯ ಹೂವುಗಳು ನೋಡುಗರ ಆಕರ್ಷಿಸು ತ್ತಿವೆ… ಹೂಗಳಿಂದ ನಿರ್ಮಿತವಾದ ಹೇಮಾ ವತಿ ಅಣೆಕಟ್ಟು, ವಾಗ್ ಬಾರ್ಡರ್, ವಿವಿಧ ಹೂಗಳಿಂದ ಕಂಗೊಳಿಸುತ್ತಿವೆ… ಅಲ್ಲದೆ ಆಧುನಿಕ ಮಾದರಿಯ ಫ್ಲೈ ಓವರ್, ರೈತರ ಪರಿವಾರದ ದೃಶ್ಯಾವಳಿ ಸೇರಿದಂತೆ ಹುಲ್ಲಿ ನಿಂದ ತಯಾರಿಸಿರುವ ಯುದ್ಧ ನೌಕೆಗಳು ಜನರ ಗಮನ ಸೆಳೆಯುತ್ತಿವೆ. ಇದು ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿ ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನ ದಲ್ಲಿ ಕಂಡುಬಂದ ದೃಶ್ಯ. ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ, ಜಿಲ್ಲಾ ಧಿಕಾರಿ…

ಟೆಂಡರ್ ಗುತ್ತಿಗೆ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಭಾರೀ ಅನ್ಯಾಯ  ಮಾಜಿ ಸಚಿವ ಗಂಡಸಿ ಶಿವರಾಂ ಆರೋಪ
ಹಾಸನ

ಟೆಂಡರ್ ಗುತ್ತಿಗೆ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಭಾರೀ ಅನ್ಯಾಯ ಮಾಜಿ ಸಚಿವ ಗಂಡಸಿ ಶಿವರಾಂ ಆರೋಪ

January 25, 2019

ಹಾಸನ: ಟೆಂಡರ್ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ತೀವ್ರ ಅನ್ಯಾಯ ಎಸಗುವುದರ ಮೂಲಕ ನಿಯಮಾವಳಿಯನ್ನು ಗಾಳಿಗೆ ತೂರಲಾಗಿದೆ ಎಂದು ಮಾಜಿ ಸಚಿವ ಗಂಡಸಿ ಶಿವರಾಂ ಅವರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ಡಿ.ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಅವರು ಮಾತನಾಡಿ, ಅಂದು ಸಿಎಂ ಆಗಿದ್ದ ಸಿದ್ದರಾ ಮಯ್ಯ ಅವರು, ತಮ್ಮ 2014-15ನೇ ಬಜೆಟ್‍ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಟೆಂಡರ್‍ನಲ್ಲಿ ಮೀಸಲಾತಿ ಕಲ್ಪಿಸುವ ದೃಷ್ಟಿಯಿಂದ 50 ಲಕ್ಷಕ್ಕಿಂತ ಒಳಗಿನ ಕಾಮಗಾರಿಗಳನ್ನು ನಡೆಸಲು ಅವಕಾಶ ಮಾಡಿಕೊಡಬೇಕು…

ನಾಳೆಯಿಂದ ಫಲಪುಷ್ಪ ಪ್ರದರ್ಶನ
ಹಾಸನ

ನಾಳೆಯಿಂದ ಫಲಪುಷ್ಪ ಪ್ರದರ್ಶನ

January 25, 2019

ಹಾಸನ: ತೋಟಗಾರಿಕೆ ಇಲಾಖೆ, ಹೇಮಾವತಿ ತೋಟಗಾರಿಕೆ ಸಂಘ ಹಾಗೂ ಆತ್ಮ ಯೋಜನೆ ಇವರುಗಳ ಸಂಯುಕ್ತಾಶ್ರಯದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಫಲಪುಷ್ಪ ಪ್ರದರ್ಶನವನ್ನು ಜ.26 ರಿಂದ 28ರವರೆಗೆ ನಗರದ ಸಿಲ್ವರ್ ಜ್ಯೂಬ್ಲಿ ಪಾರ್ಕ್‍ನಲ್ಲಿ ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಫಲಪುಷ್ಪ ಪ್ರದರ್ಶನದ ಉದ್ಘಾಟನೆ ನೆರವೇರಿಸಲಿದ್ದು, ಮಾಜಿ ಪ್ರಧಾನ ಮಂತ್ರಿ ಹಾಗೂ ಹಾಲಿ ಲೋಕಸಭಾ ಸದಸ್ಯ ಹೆಚ್.ಡಿ.ದೇವೇಗೌಡ ಅವರು ಗೌರವಾ ನ್ವಿತ ಉಪಸ್ಥಿತಿ ವಹಿಸಲಿರುವರು. ಶಾಸಕ ಪ್ರೀತಮ್ ಜೆ.ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಪುಷ್ಪ ಕಲಾಕೃತಿಗಳ ಹಾಗೂ ಪ್ರದರ್ಶನ ಮಳಿಗೆಗಳನ್ನು…

ಸರ್ಕಾರಿ ಕಾಮಗಾರಿಗಳ ಖನಿಜ ಬಳಕೆಗೆ ರಾಜಧನ ಕಡಿತ ಕಡ್ಡಾಯ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ.
ಹಾಸನ

ಸರ್ಕಾರಿ ಕಾಮಗಾರಿಗಳ ಖನಿಜ ಬಳಕೆಗೆ ರಾಜಧನ ಕಡಿತ ಕಡ್ಡಾಯ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ.

January 25, 2019

ಹಾಸನ: ಸರ್ಕಾರಿ ಕಾಮ ಗಾರಿಗಳಿಗೆ ಬಳಸುವ ಮರಳು ಮತ್ತು ಉಪ ಖನಿಜಗಳಿಗೆ ನಿಯಮಾನುಸಾರ ರಾಜಧನ ಮತ್ತು ಜಿಲ್ಲಾ ಖನಿಜ ನಿಧಿ ತೆರಿಗೆಯನ್ನು ಕಡ್ಡಾಯವಾಗಿ ಕಡಿತಗೊಳಿಸಿ ಪಾವತಿಸು ವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿಂದು ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮ ಗಾರಿಗಳು ಹಾಗೂ ಇತರೆ ಸರ್ಕಾರಿ ಕಾಮ ಗಾರಿಗೆ ಅನುಗುಣವಾಗಿ ರಾಜಧನ, ಡಿ.ಎಂ.ಎಫ್ ಹಾಗೂ ಇತರೆ ತೆರಿಗೆಗಳನ್ನು ಕಟಾಯಿಸುತ್ತಿರುವ ಕುರಿತು ನಡೆದ ಸಭೆಯಲ್ಲಿ ಈ ವಿಷಯ ತಿಳಿಸಿದರು. ಸರ್ಕಾರಿ ಕಾಮಗಾರಿಗಳಲ್ಲಿ ಹೆಚ್ಚಾಗಿ…

ಕಾಡಾನೆ ಹಾವಳಿ ನಿಯಂತ್ರಿಸಲು ಆಗ್ರಹ
ಹಾಸನ

ಕಾಡಾನೆ ಹಾವಳಿ ನಿಯಂತ್ರಿಸಲು ಆಗ್ರಹ

January 24, 2019

ಹಾಸನ: ರೈತರ ಬೆಳೆ ಹಾನಿಗೆ ಕಾರಣವಾಗಿರುವ ಕಾಡಾನೆ ಹಾವಳಿ ನಿಯಂತ್ರಿ ಸುವಂತೆ ಆಗ್ರಹಿಸಿ ಕರ್ನಾಟಕ ವೀರ ಸಮರ ಸೇನೆಯಿಂದ ಜಿಲ್ಲಾಡಳಿತ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು. ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ನಡೆಸಿದ ಅವರು, ಎನ್.ಆರ್. ವೃತ್ತ, ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದರು. ಜಿಲ್ಲೆಯ ಆಲೂರು ತಾಲೂಕು ಸೇರಿದಂತೆ ಇತರೆ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ದಿನೇದಿನೆ ಹೆಚ್ಚಾಗಿ ಕಾಫಿ ಬೆಳೆಗಾರರು, ಕಬ್ಬು, ಮೆಣಸು ಬೆಳೆದ ರೈತರು ಬೆಳೆ ಹಾನಿ ಸಂಭವಿಸಿ…

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಪೋಷಕರ ಕರ್ತವ್ಯ  ಶಾಸಕ ಡಾ.ಎ.ಟಿ.ರಾಮಸ್ವಾಮಿ ಅಭಿಮತ
ಹಾಸನ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಪೋಷಕರ ಕರ್ತವ್ಯ ಶಾಸಕ ಡಾ.ಎ.ಟಿ.ರಾಮಸ್ವಾಮಿ ಅಭಿಮತ

January 24, 2019

ರಾಮನಾಥಪುರ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದು ಶಿಕ್ಷಕರ ಜೊತೆಗೆ ಪೋಷಕರ ಕರ್ತವ್ಯ ವಾಗಿದೆ. ಪೋಷಕರು ತಮ್ಮ ಮಕ್ಕಳಲ್ಲಿ ಶಿಸ್ತು, ಸನ್ನಡತೆ, ಸಹನೆ ಮುಂತಾದ ಗುಣಗಳನ್ನು ಬೆಳೆಸುವುದು ಅಗತ್ಯವಾಗಿದೆ ಎಂದು ಶಾಸಕ ಡಾ.ಎ.ಟಿ.ರಾಮಸ್ವಾಮಿ ಕಿವಿಮಾತು ಹೇಳಿದರು. ಇಲ್ಲಿಯ ಬಸವೇಶ್ವರ ವೃತ್ತದಲ್ಲಿರುವ ಶ್ರೀ ವೆಂಕಟೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶಾರದ ಪೂಜೆ ಮತ್ತು 24ನೇ ವರ್ಷದ ಶಾಲಾ ವಾರ್ಷಿ ಕೋತ್ಸವ ಕಾರ್ಯಕ್ರಮದಲ್ಲಿ ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳಿಗೆ ಶ್ರದ್ಧಾಂ ಜಲಿ ಸಲ್ಲಿಸಿದ ನಂತರ ಕಾರ್ಯಕ್ರಮ ಉದ್ಘಾಟನೆ ಮಾಡಿ…

1 52 53 54 55 56 133
Translate »