ಜಿಲ್ಲಾದ್ಯಂತ ಗಣರಾಜ್ಯೋತ್ಸವದ ಸಂಭ್ರಮ
ಹಾಸನ

ಜಿಲ್ಲಾದ್ಯಂತ ಗಣರಾಜ್ಯೋತ್ಸವದ ಸಂಭ್ರಮ

January 28, 2019

ಧ್ವಜಾರೋಹಣ ನೆರವೇರಿಸಿದ ಸಚಿವ ಹೆಚ್.ಡಿ.ರೇವಣ್ಣ, ಆಕರ್ಷಕ ಪಥ ಸಂಚಲನ, ಮೇಳೈಸಿದ ವಿದ್ಯಾರ್ಥಿಗಳ ಸಾಂಸ್ಕøತಿಕ ಕಾರ್ಯಕ್ರಮ
ಹಾಸನ: ಜಿಲ್ಲಾದ್ಯಂತ ಶನಿ ವಾರ 70ನೇ ಗಣರಾಜ್ಯೋತ್ಸವವನ್ನು ಜಿಲ್ಲಾ ಡಳಿತ, ತಾಲೂಕು ಆಡಳಿತ, ಗ್ರಾಮ ಪಂಚಾ ಯಿತಿ ಸೇರಿದಂತೆ ಸರ್ಕಾರಿ ಕಚೇರಿಗಳು ಹಾಗೂ ವಿವಿಧ ಸಂಸ್ಥೆಗಳಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 70ನೇ ಗಣರಾಜ್ಯೋತ್ಸವದ ಧ್ವಜಾ ರೋಹಣವನ್ನು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ನೆರವೇರಿಸಿದರು.

ನಂತರ ಮಾತನಾಡಿದ ಅವರು, ನಮ್ಮ ಸಂವಿ ಧಾನವು ನಮಗೆ ಮೂಲಭೂತ ಹಕ್ಕುಗಳ ನಷ್ಟೇ ಅಲ್ಲದೇ, ಕರ್ತವ್ಯಗಳನ್ನೂ ನಿಗದಿ ಪಡಿಸಿದೆ. ನಾವು ನಮ್ಮ ಹಕ್ಕುಗಳಿಗಷ್ಟೇ ಗಮನ ಹರಿಸದೇ, ದೇಶಕ್ಕಾಗಿ ನಾವು ಮಾಡ ಬೇಕಾದ ಕರ್ತವ್ಯಗಳನ್ನೂ ಸಹ ನಿಷ್ಠೆಯಿಂದ ಮಾಡಲು ಕಟಿಬದ್ಧವಾಗಿರಬೇಕು. ಬ್ರಿಟಿಷರ ದಾಸ್ಯದಿಂದ ಬಳಲಿದ್ದ ನಮ್ಮ ದೇಶವು ಮಹಾತ್ಮ ಗಾಂಧೀಜಿ, ಜವಹರ್‍ಲಾಲ್ ನೆಹರು, ಸರ್ದಾರ್ ವಲ್ಲಭ ಬಾಯಿ ಪಟೇಲರಂತಹ ನೂರಾರು ಸ್ವಾತಂತ್ರ್ಯ ಸೇನಾನಿಗಳ ನಿರಂತರ ಹೋರಾಟದ ಫಲವಾಗಿ ಸ್ವಾತಂತ್ರ್ಯದ ಹೊಸ ಶಖೆಗೆ ಕಾಲಿಟ್ಟಿರುತ್ತದೆ. ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‍ರವರ ದೂರದೃಷ್ಟಿ, ಪರಿಶ್ರಮದಿಂದ ರಚಿತವಾದ ಸಮಗ್ರ ಸಂವಿಧಾನವು 1950ನೇ ಜ.26 ರಿಂದ ಅಧಿಕೃತವಾಗಿ ಜಾರಿಗೆ ಬಂದಿರುತ್ತದೆ. ಈ ದಿನವನ್ನು ಪ್ರತಿ ವರ್ಷದಂತೆ ಇಂದು ಗಣರಾಜ್ಯೋತ್ಸವ ದಿನವಾಗಿ ಸಂಭ್ರಮದಿಂದ ಆಚರಿಸುತ್ತಿದ್ದೇವೆ ಎಂದರು.

ಇತ್ತೀಚಿನ ವರ್ಷಗಳಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಮುಂಚೂಣಿ ರಾಷ್ಟ್ರ ಗಳ ಸಾಲಿನಲ್ಲಿದೆ. ಇಡೀ ವಿಶ್ವವೇ ಭಾರತವು ಆರ್ಥಿಕ, ಔದ್ಯೋಗಿಕ, ಸಾಮಾಜಿಕ, ವೈಜ್ಞಾ ನಿಕ ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿ ಯನ್ನು ಬೆರಗುಗಣ್ಣಿನಿಂದ ನೋಡುತ್ತಿವೆ. ನಮ್ಮ ಭಾರತ ದೇಶವು ಬಾಹ್ಯಾಕಾಶ ಕ್ಷೇತ್ರ ದಲ್ಲಿ ಸಾಧಿಸಿರುವ ಪ್ರಗತಿಯನ್ನು ಅಮೆರಿಕಾ, ರಷ್ಯಾ, ಬ್ರಿಟನ್‍ನಂಥಾ ರಾಷ್ಟ್ರಗಳು ಪ್ರಶಂಸಾ ದೃಷ್ಟಿಯಿಂದ ನೋಡುತ್ತಿದ್ದು, ಇದು ನಾವು ಹೆಮ್ಮೆಪಡುವ ವಿಷಯವಾಗಿದೆ ಎಂದು ಅವರು ಹೇಳಿದರು. ಉತ್ತಮ ಶಿಕ್ಷಣವು ರಾಷ್ಟ್ರದ ಪ್ರಗತಿಯ ಅಡಿಗಲ್ಲಾಗಿದೆ. ಈ ದೃಷ್ಟಿ ಯಿಂದ, ಜಿಲ್ಲೆಯಲ್ಲಿ, ಅಗತ್ಯವಿರುವೆಡೆ ಗಳಲ್ಲಿ ಹೊಸದಾಗಿ ಶಾಲಾ-ಕಾಲೇಜು ಗಳನ್ನು ಪ್ರಾರಂಭಿಸಲು, ಹಾಲಿ ಇರುವ ಶಾಲಾ-ಕಾಲೇಜುಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿ ಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಗ್ರಾಮಾಂತರ ಪ್ರದೇಶದ, ಅದರಲ್ಲೂ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಅಗತ್ಯವಿರುವ ಎಲ್ಲಾ ಪೂರಕ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯು ಇನ್ನಿತರೇ ಕ್ಷೇತ್ರಗಳಲ್ಲಿಯಂತೆ, ಶಿಕ್ಷಣ ಕ್ಷೇತ್ರದಲ್ಲಿಯೂ ಸಹ ಇನ್ನೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಆಕರ್ಷಕ ಪಥ ಸಂಚಲನ: ಧ್ವಜಾರೋ ಹಣದ ನಂತರ ಪೊಲೀಸ್ ಇಲಾಖೆ ಹಾಗೂ ವಿವಿಧ ಶಾಲಾ ಮಕ್ಕಳ ಪಥ ಸಂಚಲನ ನೋಡುಗರ ಮನ ಸೆಳೆಯಿತು. ವೇದಿಕೆ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿ ಗಳು ಸಾಂಸ್ಕøತಿಕ ಕಾರ್ಯಕ್ರಮ ಜರು ಗಿತು. ಅಲ್ಲದೆ ಜಿಲ್ಲೆಯ ಸಾಧಕರಿಗೆ ಜಿಲ್ಲಾಡಳಿತ ಸನ್ಮಾನಿಸಿತು.

ವೇದಿಕೆಯಲ್ಲಿ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ, ಎಂಎಲ್‍ಸಿ ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಎಸ್ಪಿ ಪ್ರಕಾಶ್‍ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಸಿ. ಪುಟ್ಟಸ್ವಾಮಿ, ಉಪವಿಭಾಗಾಧಿಕಾರಿ ಹೆಚ್. ಎಲ್. ನಾಗರಾಜು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತ ದೇವರಾಜು, ತಾಪಂ ಅಧ್ಯಕ್ಷ ಬಿ.ಟಿ. ಸತೀಶ್, ನಗರಸಭೆ ಆಯುಕ್ತ ಪರ ಮೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎಂ. ಶ್ರೀನಿವಾಸ್, ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಅಂಬೇಡ್ಕರ್ ಸಂವಿಧಾನ ವಿಶ್ವಕ್ಕೆ ಮಾದರಿ
ಅರಸೀಕೆರೆ: ಗಣರಾಜ್ಯೋತ್ಸವದ ಪ್ರಯುಕ್ತ ನಡೆಸಿದ ಶಾಲಾ ಮಕ್ಕಳ, ಎನ್ ಸಿಸಿ ವಿಭಾಗ ಜೊತೆಗೆ ಪೊಲೀಸ್ ಇಲಾ ಖೆಯ ಪೆರೇಡ್, ಶಾಲಾ ಮಕ್ಕಳ ಸಾಂಸ್ಕø ತಿಕ ಕಾರ್ಯಕ್ರಮಗಳು ಅರಸೀಕೆರೆಯ ಜನತೆಯ ಮನಸೂರೆಗೊಂಡಿತು.

ನಗರದ ಜೇನುಕಲ್ಲು ನಗರದಲ್ಲಿರುವ ತಾಲ್ಲೂಕು ಕ್ರಿಡಾಂಗಣದಲ್ಲಿ ಶಾಸಕ ಕೆ.ಎಂ ಶಿವಲಿಂಗೇಗೌಡ ಅಧ್ಯಕ್ಷತೆಯಲ್ಲಿ ನಡೆದ 70ನೆಯ ಗಣರಾಜ್ಯೋತ್ಸವ ಕಾರ್ಯ ಕ್ರಮ ತಹಸೀಲ್ದಾರ್ ನಟೇಶ್ ಧ್ವಜಾರೋ ಹಣ ಮಾಡುವುದರೊಂದಿಗೆ ಕಾರ್ಯ ಕ್ರಮ
ಪ್ರಾರಂಭವಾಯಿತು.

ಪೊಲೀಸ್ ಇಲಾಖೆ, ಸ್ಕೌಟ್ ಅಂಡ್ ಗೈಡ್ಸ್. ಎನ್‍ಸಿಸಿ, ಸೇವಾದಳ ವಿವಿಧ ಶಾಲೆ ಗಳ ಪೆರೇಡ್, ಆದಿಚುಂಚನಗಿರಿ ಶಾಲೆಯ ಮಕ್ಕಳಿಂದ ನಾಡಗೀತೆ, ರೈತಗೀತೆ, ವಿವಿಧ ಶಾಲೆಗಳ ಮಕ್ಕಳು ನಡೆಸಿಕೊಟ್ಟ ದೇಶಭಕ್ತಿಯ ಸಾಂಸ್ಕøತಿಕ ಕಾರ್ಯ ಕ್ರಮಗಳು ನೆರದಿದ್ದವರ ಮನಸೂರೆ ಗೊಂಡವು, ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರ ಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಶುಭಾಷಯ ಸಂದೇಶ ತಿಳಿಸಿದ ಅವರು ಭಾರತದ ಸಂವಿಧಾನವನ್ನು ಪ್ರಜಾಪ್ರಭು ತ್ವದ ಭಗವದ್ಗೀತೆ ಎಂದು ಕರೆಯಲಾಗು ತ್ತದೆ ಅಂಬೇಡ್ಕರ್ ರಚಿಸಿದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ, ಸಂವಿ ಧಾನ ಎಂಬುದು ಪ್ರಜಾಪ್ರಭುತ್ವದ ಆತ್ಮ, ಸಂವಿ ಧಾನ ಇಲ್ಲದ ಪ್ರಜಾಪ್ರಭುತ್ವ ಆತ್ಮ ಇಲ್ಲದ ದೇಹ ವಿದ್ದಂತೆ ಎಂದು ಅರಸೀಕೆರೆ ತಹಸೀ ಲ್ದಾರ್ ನಟೇಶ್ ಅಭಿ ಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಒಂದು ನಿಮಿಷ ಗಳ ಕಾಲ ಮೌನ ಆಚರಿಸುವ ಮೂಲಕ ಶ್ರೀ ಶಿವಕುಮಾರ ಸ್ವಾಮಿಯವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು, ವೇದಿಕೆ ಯಲ್ಲಿ ನಗರಸಭೆ ಆಯುಕ್ತ ಪರಮೇಶ್, ಡಿಎಸ್ಪಿ ಸದಾನಂದ ಅ.ತಿಪ್ಪಣ್ಣವರ, ತಾಪಂ, ಜಿಪಂ ಚುನಾಯಿತ ಜನಪ್ರತಿ ನಿಧಿಗಳು, ವಿವಿಧ ಇಲಾಖೆ ಅಧಿಕಾರಿ ಗಳು ಉಪಸ್ಥಿತರಿದ್ದರು.

Translate »